• Home
  • »
  • News
  • »
  • national-international
  • »
  • ಅಮೆರಿಕ ರಾಯಭಾರಿ ಕಚೇರಿ ಬಳಿ ಅಪ್ಪಳಿಸಿದ​​ 3 ರಾಕೆಟ್​ಗಳು; ಇರಾನ್ ಪ್ರತೀಕಾರ?

ಅಮೆರಿಕ ರಾಯಭಾರಿ ಕಚೇರಿ ಬಳಿ ಅಪ್ಪಳಿಸಿದ​​ 3 ರಾಕೆಟ್​ಗಳು; ಇರಾನ್ ಪ್ರತೀಕಾರ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಬಾಗ್ದಾದ್​​​ನ  ಅಮೆರಿಕ ರಾಯಭಾರಿ ಕಚೇರಿಯ ಗ್ರೀನ್​ ಜೋನ್​ಅನ್ನು ಗುರಿಯಾಗಿಸಿಕೊಂಡು ರಾಕೆಟ್​​ ದಾಳಿ ನಡೆಸಲಾಗಿದೆ. ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ ಎನ್ನಲಾಗಿದೆ.

  • Share this:

    ಬಾಗ್ದಾದ್​(ಜ.21): ಇರಾಕ್​ ರಾಜಧಾನಿ ಬಾಗ್ದಾದ್​​ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಬಳಿ ಇಂದು ಬೆಳಗ್ಗೆ ಮೂರು ರಾಕೆಟ್​​ಗಳು ಬಂದು ಅಪ್ಪಳಿಸಿವೆ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಎಂದು ಭದ್ರತಾ ಮೂಲಗಳು ತಿಳಿಸಿವೆ.


    ಬಾಗ್ದಾದ್​​​ನ  ಅಮೆರಿಕ ರಾಯಭಾರಿ ಕಚೇರಿಯ ಗ್ರೀನ್​ ಜೋನ್​ಅನ್ನು ಗುರಿಯಾಗಿಸಿಕೊಂಡು ರಾಕೆಟ್​​ ದಾಳಿ ನಡೆಸಲಾಗಿದೆ. ರಾಕೆಟ್​​ಗಳು ಅಪ್ಪಳಿಸಿದ ಕೂಡಲೇ ಗ್ರೀನ್​ ಜೋನ್​ನಲ್ಲಿ ಸೈರನ್​ ಕೂಗಲು ಆರಂಭಿಸಿತ್ತು. ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ ಎನ್ನಲಾಗಿದೆ.


    ಇತಿಹಾಸ ಪುಟ ಸೇರಿದೆ ಬೆಂಗಳೂರಿನ ಜಯದೇವ ಫ್ಲೈಓವರ್; ತಡರಾತ್ರಿಯಿಂದಲೇ ತೆರವು ಕಾರ್ಯ ಆರಂಭ


    ಇತ್ತೀಚೆಗೆ ಅಮೆರಿಕ ರಾಯಭಾರಿ ಕಚೇರಿಯ ಗ್ರೀನ್​ ಜೋನ್​ ಮೇಲೆ ಇರಾನ್​ ಬೆಂಬಲಿತ ಪ್ಯಾರಾ ಮಿಲಿಟರಿ ಪಡೆಯು ಇದೇ ರೀತಿ ದಾಳಿ ನಡೆಸಿತ್ತು ಎಂದು ಯುಎಸ್​ ಆರೋಪಿಸಿದೆ. ಆದರೆ ಇನ್ನೂ ಸಹ ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.


    ಇರಾನ್​​ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿಯನ್ನು ಅಮೆರಿಕ ಹತ್ಯೆ ಮಾಡಿದ ಬಳಿಕ ಎರಡು ರಾಷ್ಟ್ರಗಳ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಇರಾನ್​ ಅಮೆರಿಕ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು.


    ಅಮೆರಿಕ ರಾಯಭಾರಿ ಕಚೇರಿ ಬಳಿ ಅಪ್ಪಳಿಸಿದ​​ 3 ರಾಕೆಟ್​ಗಳು; ಇರಾನ್ ಪ್ರತೀಕಾರ?

    Published by:Latha CG
    First published: