Viral Photo: ಭಾರತ-ಪಾಕಿಸ್ತಾನ ವಿಭಜನೆಯಲ್ಲಿ ಕಳೆದು ಹೋಗಿದ್ದ ತಂಗಿ ಮರಳಿ ಸಿಕ್ಕಳು! ಪಟಿಯಾಲ ಬ್ರದರ್ಸ್ ಖುಷ್

ಪಂಜಾಬಿನ ಪಟಿಯಾಲದ ಶುತ್ರಾನ ಎಂಬ ಹಳ್ಳಿಯ ಮೂವರು ಸಹೋದರರಿಗೆ, ಭಾರತ -ಪಾಕಿಸ್ತಾನ ವಿಭಜನೆಯ ಸಂದರ್ಭಲ್ಲಿ ಕಳೆದು ಹೋಗಿದ್ದ ತಮ್ಮ ಸಹೋದರಿಯನ್ನು ಬದುಕಿರುವುದು ಇತ್ತೀಚೆಗೆ ತಿಳಿದು ಬಂದಿದ್ದು, ಅವರು ಆಕೆಯನ್ನು ಭೇಟಿಯಾಗಿದ್ದಾರೆ.

ಸಹೋದರಿಯನ್ನು ಭೇಟಿಯಾದ ಪಟಿಯಾಲ ಸಹೋದರರು

ಸಹೋದರಿಯನ್ನು ಭೇಟಿಯಾದ ಪಟಿಯಾಲ ಸಹೋದರರು

  • Share this:
ಭಾರತ - ಪಾಕಿಸ್ತಾನ (India- Pakistan) ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಗಳ ಬಗ್ಗೆ ಈಗಲೂ ಕೇಳಿದರೂ, ಓದಿದರೂ ಮೈ ಜುಮ್ಮೆನ್ನುತ್ತದೆ. ಲಕ್ಷಾಂತರ ಮಂದಿ ತಮ್ಮ ಪ್ರಾಣ ಕಳೆದುಕೊಂಡ ಇತಿಹಾಸದ (History) ಘೋರ ಘಟನೆಯದು. ತಮ್ಮವರನ್ನು ಕಳೆದುಕೊಂಡವರು ಮತ್ತು ತಾವು ಹುಟ್ಟಿ ಬೆಳೆದು ದೇಶವನ್ನು (Country) ತೊರೆದು ಬಂದವರಲ್ಲಿ ತಮ್ಮ ದಾರುಣ ಅನುಭವಗಳ ದಾಖಲೆಗಳನ್ನು ಪುಸ್ತಕ ರೂಪದಲ್ಲಿ ಬಿಟ್ಟು ಹೋಗಿರುವುದುಂಟು. ಇನ್ನು ಕೆಲವರು ಇಂದಿಗೂ ನಮ್ಮ ನಡುವೆ ಬದುಕಿದ್ದಾರೆ. ಹೌದು, ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ದಿನಗಳ ಹತ್ಯಾಕಾಂಡವನ್ನು ಕಣ್ಣಾರೆ ಕಂಡು, ಇಂದಿಗೂ ಬದುಕಿರುವ ಹಿರಿಯ ಜೀವಗಳಿವೆ. ಅಂತದ್ದೇ ನಾಲ್ಕು ಒಡಹುಟ್ಟಿದ ಜೀವಗಳ ಮಿಲನದ ಕಥೆ ಇಲ್ಲಿದೆ.

ಮೂವರು ಸಹೋದರರ ಸಹೋದರಿ
ಪಂಜಾಬಿನ ಪಟಿಯಾಲದ ಶುತ್ರಾನ ಎಂಬ ಹಳ್ಳಿಯ ಮೂವರು ಸಹೋದರರಿಗೆ, ಭಾರತ -ಪಾಕಿಸ್ತಾನ ವಿಭಜನೆಯ ಸಂದರ್ಭಲ್ಲಿ ಕಳೆದು ಹೋಗಿದ್ದ ತಮ್ಮ ಸಹೋದರಿಯನ್ನು ಬದುಕಿರುವುದು ಇತ್ತೀಚೆಗೆ ತಿಳಿದು ಬಂದಿದ್ದು, ಅವರು ಆಕೆಯನ್ನು ಭೇಟಿಯಾಗಿದ್ದಾರೆ. ವಿಭಜನೆಯ ಸಂದರ್ಭದಲ್ಲಿ ಕಳೆದು ಹೋಗಿದ್ದ ಅವರ ಸಹೋದರಿಯ ಹೆಸರು ತೇಜ್ ಕೌರ್, ವಯಸ್ಸೀಗ 75 ವರ್ಷ. ಮೂರು ಮಂದಿ ಸಹೋದರರು ಆಕೆಯನ್ನು ಏಪ್ರಿಲ್ 24 ರಂದು ಕರ್ತಾರ್‍ಪುರದ ಗುರುದ್ವಾರ ದರ್ಬಾರ್ ಸಾಹಿಬ್‍ನಲ್ಲಿ ಭೇಟಿಯಾಗಿದ್ದಾರೆ.

ತೇಜ್ ಕೌರ್ ಅಲಿಯಾಸ್ ಮಮ್ತಾಜ್ ಹೆತ್ತವರಿಂದ ದೂರವಾದ ಕಥೆ ಹೀಗಿದೆ
ವಿಭಜನೆಯ ಸಂದರ್ಭದಲ್ಲಿ ಆಕೆ ತಂದೆ ಪಾಲಾ ಸಿಂಗ್ ಮತ್ತು ತಾಯಿಯಿಂದ ಪ್ರತ್ಯೇಕವಾದರು. ಆಕೆಯನ್ನು ಮುಸ್ಲಿಂ ಕುಟುಂಬವೊಂದು ಸಾಕಿ ಬೆಳೆಸಿತು. ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಪಾಲಾ ಸಿಂಗ್ ಅವರ ಪತ್ನಿ ಹತ್ಯೆಯಾಗಿತ್ತು. ಪಾಲಾ ಸಿಂಗ್ ಶುತ್ರಾನಕ್ಕೆ ಬಂದು ನೆಲೆಸಿದರು. ಅವರಿಗೆ ತಮ್ಮ ಮಡದಿಯ ಹತ್ಯೆಯ ಬಗ್ಗೆ ತಿಳಿದು ಬಂದಾಗ, ದಾಳಿಕೋರರು ಮಗಳನ್ನು ಕೂಡ ಹತ್ಯೆ ಮಾಡಿರಬಹುದು ಎಂದು ಊಹಿಸಿದರು. ಆದಾದ ಬಳಿಕ, ಆ ದಿನಗಳಲ್ಲಿ ಇದ್ದ ಪದ್ಧತಿಯ ಪ್ರಕಾರ, ಪಾಲಾ ಸಿಂಗ್ ತಮ್ಮ ನಾದಿನಿಯನ್ನು ಮದುವೆಯಾದರು.

ತನ್ನ ಸಹೋದರನನ್ನು ಭೇಟಿಯಾಗಿದ್ದು ಹೇಗೆ ಗೊತ್ತಾ?
ಪಾಲಾ ಅವರು ಮೂವರು ಗಂಡು ಮಕ್ಕಳಾದ – ಗುರುಮುಖ್ ಸಿಂಗ್, ಬಲ್‍ದೇವ್ ಸಿಂಗ್ ಮತ್ತು ರಘ್‍ಬೀರ್ ಸಿಂಗ್ ಅವರಿಗೆ ತಮ್ಮ ಮಲ ಸಹೋದರಿ ಬದುಕಿರುವ ವಿಷಯ ತಿಳಿದು ಬಂತು. ಅವರು ಸಾಮಾಜಿಕ ಮಾಧ್ಯಮದ ಸಹಾಯದಿಂದ, ಪಾಕಿಸ್ತಾನದಲ್ಲಿರುವ ತಮ್ಮ ಪೂರ್ವಜರ ಹಳ್ಳಿಯಲ್ಲಿ ಇರುವ ಒಬ್ಬ ಅಂಗಡಿ ಮಾಲೀಕನನ್ನು ಸಂಪರ್ಕಿಸಿದರು. ಆತ, ಈ ವಿಷಯವನ್ನು ಮಮ್ತಾಜ್‍ಗೆ ತಲುಪಿಸಿದ. ಕೊನೆಗೆ ಮಮ್ತಾಜ್ ತನ್ನ ಸಹೋದರರನ್ನು ಕರ್ತಾರ್‍ಪುರದ ಗುರುದ್ವಾರ ದರ್ಬಾರ್ ಸಾಹಿಬ್‍ನಲ್ಲಿ ಭೇಟಿಯಾದರು.

ಇದನ್ನೂ ಓದಿ: Train: ಪ್ರಯಾಣಿಕರೇ ಗಮನಿಸಿ, ಛತ್ತೀಸ್‌ಗಢದಿಂದ ಹೊರಟ ರೈಲು ಒಂದು ವರ್ಷದ ಬಳಿಕ ಜಾರ್ಖಂಡ್ ತಲುಪಿದೆ!

ದೇಶದ ವಿಭಜನೆ ಇಡೀ ದೇಶದ ಮೇಲೆ ಪರಿಣಾಮ
ನಮ್ಮ ದೇಶದ ವಿಭಜನೆ ಇಡೀ ದೇಶದ ಮೇಲೆ ಪರಿಣಾಮ ಬೀರಿದ್ದರೂ, ಪಂಜಾಬಿನ ಜನರ ಮೇಲೆ ಕೊಂಚ ಹೆಚ್ಚೇ ಪರಿಣಾಮ ಬೀರಿತ್ತು ಎನ್ನಬಹುದು. ಏಕೆಂದರೆ, ಈ ವಿಭಜನೆ ಕೇವಲ ದೇಶದ ವಿಭಜನೆ ಮಾತ್ರವಲ್ಲ, ಪಂಜಾಬಿನ ವಿಭಜನೆ ಕೂಡ. ಅಂದಿನ ಪಂಜಾಬ್‍ನ ಒಂದು ಭಾಗ ಭಾರತದಲ್ಲಿ ಇದ್ದರೆ, ಇನ್ನೊಂದು ಭಾಗ ಪಾಕಿಸ್ತಾನದಲ್ಲಿದೆ.

ಪಂಜಾಬಿಗಳ ಬಹಳಷ್ಟು ಧಾರ್ಮಿಕ ಕ್ಷೇತ್ರಗಳು ಪಾಕಿಸ್ತಾನದಲ್ಲಿ ಸೇರಿ ಹೋಗಿವೆ. ಅಂತದ್ದೇ ಒಂದು ಸಿಖ್ಖರ ಧಾರ್ಮಿಕ ಸ್ಥಳ ಕರ್ತಾರ್‍ಪುರ ಕಾರಿಡಾರ್‍ನಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್. ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್ ಅವರ ಅಂತಿಮ ವಿಶ್ರಾಂತಿಯ ಸ್ಥಳವದು. ಅಲ್ಲಿಂದ, ಭಾರತದ ಪಂಜಾಬ್‍ನ ಗುರುದಾಸ್ ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇವಾಲಯವನ್ನು ಸಂರ್ಕಿಸುವ 4.7 ಕಿಮೀ ಉದ್ದದ ಕಾರಿಡಾರ್ ಅನ್ನು ನಿರ್ಮಿಸಲಾಗಿದೆ. ಅಲ್ಲಿಗೆ ಭಾರತೀಯ ಸಿಖ್ ಮತ್ತು ಇತರ ಭಾರತೀಯ ಪ್ರಜೆಗಳಿಗೆ, ಯಾತ್ರಿಗಳಿಗೆ ವೀಸಾ ಮುಕ್ತ ಪ್ರವೇಶವಿದೆ. ಇಲ್ಲಿಗೆ ಹೋಗಲು ಅಧಿಕೃತ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಬುಕಿಂಗ್ ಮಾಡಬೇಕು ಮತ್ತು ಪಾಸ್‍ಪೋರ್ಟ್ ಕಡ್ಡಾಯ.

ಇದನ್ನೂ ಓದಿ: MISSING: ಸೋಲೋ ಟ್ರಿಪ್ ಹೋದ ಯುವಕ ನಾಪತ್ತೆ, ಸಹಾಯಕ್ಕಾಗಿ ಸಹೋದರನ ಭಾವನಾತ್ಮಕ ಮನವಿ

ಕರ್ತಾರ್‍ಪುರ ಕಾರಿಡಾರ್, ಇತ್ತೀಚಿನ ದಿನಗಳಲ್ಲಿ ವಿಭಜನೆಯ ಸಂದರ್ಭದಲ್ಲಿ ತಮ್ಮ ಆತ್ಮೀಯರಿಂದ ಅಗಲಿದ್ದ, ಭಾರತ-ಪಾಕಿಸ್ತಾನದ ನಾಗರೀಕರಿಗೆ ಪುನರ್ ಮಿಲನದ ಸೇತುವೆಯಾಗಿ ಕೆಲಸ ಮಾಡುತ್ತಿದೆ.
Published by:Ashwini Prabhu
First published: