ಕಾಞಂಗಾಡು(ಮಾ.31): ಪ್ರಾಣಿಗಳ ಮೇಲೆ ಅತ್ಯಾಚಾರ (Rape) ನಡೆಯುವ ಘಟನೆ ಇದೇ ಮೊದಲಲ್ಲ. ಇಂಥಹ ಘಟನೆಗಳು ಹಲವು ಬಾರಿ ಈ ಮೊದಲೇ ವರದಿಯಾಗಿವೆ. ಉತ್ತರ ಭಾರತದಲ್ಲಿ ರಸ್ತೆಯ ಮಧ್ಯೆ ಮಲಗಿದ್ದ ಆಡಿನ ಮೇಲೆ ದುರುಳರು ಅತ್ಯಾಚಾರ ಮಾಡಿದ್ದು, ಅದರ ಕೈಕಾಲನ್ನು ಬಲವಂತವಾಗಿ ಹಿಡಿದು ಮತ್ತಿಬ್ಬರು ನೆರವಾಗಿದ್ದು ಇಂಥಹ ಅಮಾನವೀಯ ಘಟನೆ ನಡೆಯುತ್ತಲೇ ಇವೆ. ಇದೀಗ ಕೇರಳದಲ್ಲಿ ಇಂಥಹದ್ದೇ ಒಂದು ಘಟನೆ ವರದಿಯಾಗಿದೆ. ಆಡಿನ ಮೇಲೆ ದುರುಳರು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ತುಂಬು ಗರ್ಭಿಣಿಯಾಗಿದ್ದ (Pregnant Goat) ಆಡು ತನ್ನ ಮರಿಯ ನಿರೀಕ್ಷೆಯಲ್ಲಿತ್ತು. ಆದರೆ ಅದರ ಮೇಲೆ ಅತ್ಯಾಚಾರ ಮಾಡಿದ ಕ್ರೂರಿಗಳು ಅದನ್ನು ಕೊಂದೇಬಿಟ್ಟಿದ್ದಾರೆ.
ಕಾಞಂಗಾಡು ಪೇಟೆಯಲ್ಲಿ ಮೂವರು ಪುರುಷರು ತುಂಬು ಗರ್ಭಿಣಿ ಮೇಕೆಯನ್ನು ಲೈಂಗಿಕ ದೌರ್ಜನ್ಯ ನಡೆಸಿ ಕೊಂದು ಹಾಕಿದ್ದಾರೆ ಎಂದು ಹೊಸದುರ್ಗ (Hosadurga) ಪೊಲೀಸರು ತಿಳಿಸಿದ್ದಾರೆ. ಕೊಟ್ಟಚೇರಿಯ ಎಲೈಟ್ ಹೋಟೆಲ್ ಗೆ (Elite Hotel) ಸೇರಿದ ಮೇಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಇನ್ನೊಂದು ತಿಂಗಳಲ್ಲಿ ಜನ್ಮ ನೀಡಲಿತ್ತು.
ಹೊಟೇಲ್ನ ಉದ್ಯೋಗಿ ಸೆಂಥಿಲ್ ಬಂಧನ
ಈ ಸಂಬಂಧ ಹೊಟೇಲ್ನ ಉದ್ಯೋಗಿ ಸೆಂಥಿಲ್ ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಇತರ ಇಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ ಬೆಳಗಿನ ಜಾವ 1.30ರ ಸುಮಾರಿಗೆ ಹೊಟೇಲ್ನ ನೌಕರರು ಹಿತ್ತಲಲ್ಲಿ ಗಲಾಟೆ ಕೇಳಿದ್ದು, ಎರಡು ಮೇಕೆ, ಬೆಕ್ಕು ಇತ್ತು.
ಇದನ್ನೂ ಓದಿ: ಗರ್ಭ ಧರಿಸಿದ್ದ ಮೇಕೆಯನ್ನೂ ಬಿಡಲಿಲ್ಲ ಕಾಮುಕರು!: ಹರಿಯಾಣದಲ್ಲೊಂದು ಹೀನಕೃತ್ಯ
ಅವರು ಧಾವಿಸಿ ನೋಡಿದಾಗ, ಮೂವರು ಪುರುಷರು ಗೋಡೆ ಹಾರಿ ಪರಾರಿಯಾಗುವುದನ್ನು ನೋಡಿದರು. ಸೆಂಥಿಲ್ನನ್ನು ಹಿಡಿದರು.
ಆಡು ಸತ್ತಿರುವುದು ಕಂಡುಬಂದಿದ್ದು ಅದರ ಮೇಲೆ ಲೈಂಗಿಕ ದೌರ್ಜನ್ಯದ ಲಕ್ಷಣ ಕಂಡುಬಂದಿದೆ.
ತಮಿಳುನಾಡಿನಿಂದ ವ್ಯಕ್ತಿಯಿಂದ ಕೃತ್ಯ
ಹೊಸದುರ್ಗ ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದಿದ್ದಾರೆ. ತಮಿಳುನಾಡು ಮೂಲದ ಸೆಂಥಿಲ್ ಮೂರೂವರೆ ತಿಂಗಳ ಹಿಂದೆ ಕೆಲಸ ಅರಸಿ ಬಂದಿದ್ದ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಇದನ್ನೂ ಓದಿ:
Dog Rape: 20 ವರ್ಷದ ಯುವಕನಿಂದ ನಾಯಿಯ ಮೇಲೆ ಅತ್ಯಾಚಾರ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಾಮುಕನ ಕೃತ್ಯ
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377 ರ ಅಡಿಯಲ್ಲಿ ಅಸ್ವಾಭಾವಿಕ ಅಪರಾಧಗಳ ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧ ಸಾಬೀತಾದರೆ, ಅವರು ಜೀವಾವಧಿ ಅಥವಾ 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬಹುದು.
2018ರಲ್ಲೂ ನಡೆದಿತ್ತು ಇಂಥದ್ದೇ ಒಂದು ಘಟನೆ
ಗರ್ಭ ಧರಿಸಿದ್ದ ಮೇಕೆಯೊಂದರ ಮೇಲೆ 8 ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿದ ಕಾರಣ ಆ ಮೇಕೆ ಸಾವನ್ನಪ್ಪಿದ ಘಟನೆ ಹರಿಯಾಣದ ಮೇವತ್ ಜಿಲ್ಲೆಯಲ್ಲಿ ನಡೆದಿತ್ತು. ರಾತ್ರಿ ಮೇಕೆಯನ್ನು ಕದ್ದುಕೊಂಡು ಹೋಗಿದ್ದ ಸಾವ್ಕಾರ್, ಹರೂನ್, ಜಾಫರ್ ಮತ್ತು ಉಳಿದ ಐವರು ಆ ಮೇಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಇವರೆಲ್ಲರೂ ಡ್ರಗ್ ಅಡಿಕ್ಟ್ ಆಗಿದ್ದರು.
ನಾಯಿ ಮೇಲೆ ಅತ್ಯಾಚಾರ
ಈ ಕಾಮುಕರು ಮನುಷ್ಯರನ್ನು ಮಾತ್ರವಲ್ಲ, ಪ್ರಾಣಿಗಳನ್ನೂ ಬಿಟ್ಟಿಲ್ಲ ಎಂದರೆ ಆಘಾತವಾಗದಿರದು. ಬೀದಿ ನಾಯಿಗಳನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುವ ಕೆಲವು ಘಟನೆಗಳು ಈ ಹಿಂದೆ ಬೆಳಕಿಗೆ ಬಂದಿತ್ತು. 2021ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ನಾಯಿಯ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಹೆಣ್ಣು ನಾಯಿಯೊಂದರ ಮೇಲೆ 20 ವರ್ಷದ ಯುವಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದು, ಆತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಅನೈಸರ್ಗಿಕ ಲೈಂಗಿಕತೆ ನಡೆಸಿದ ಆತನ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ