ಕ್ಷಮಿಸಿ ಈ ಸುದ್ದಿಗೆ ತಲೆಬರಹ ನೀಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ!


Updated:July 6, 2018, 3:07 PM IST
ಕ್ಷಮಿಸಿ ಈ ಸುದ್ದಿಗೆ ತಲೆಬರಹ ನೀಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ!

Updated: July 6, 2018, 3:07 PM IST
- ನ್ಯೂಸ್​ 18 ಕನ್ನಡ

ಬೆಂಗಳೂರು (ಜುಲೈ 6): ಒಂದೆಡೆ ಭೇಟಿ ಬಚಾವ್​, ಭೇಟಿ ಪಡಾವ್​ ಎನ್ನುವ ಭಾರೀಯ ಜನತಾ ಪಕ್ಷ, ಮತ್ತೊಂದೆಡೆ ಪದೇ ಪದೇ ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ, ಸಾಮೂಹಿಕ ಲೈಂಗಿಕ ಕಿರುಕುಳವನ್ನು ತಡೆಯುವಲ್ಲಿ ವಿಫಲವಾಗುತ್ತಿದೆ. ಉತ್ತರ ಪ್ರದೇಶದ ಉನ್ನಾವ್​ನಲ್ಲಿ ಮತ್ತೊಂದು ಮನಕಲಕುವ ರಾಕ್ಷಸೀಯ ಘಟನೆ ನಡೆದಿದೆ. ಮೂವರು ಯುವಕರು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡುವ ವಿಡಿಯೋ ವೈರಲ್​ ಆಗಿದ್ದು, ಉತ್ತರ ಪ್ರದೇಶ ಸರ್ಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆ ಸಾಮಾಜಿಕವಾಗಿ ಕೇಳಿ ಬಂದಿದೆ.ಸಂತ್ರಸ್ತೆ ಪರಿಪರಿಯಾಗಿ ಬೇಡಿಕೊಂಡರೂ ಪೈಶಾಚಿಕ ಕೃತ್ಯವನ್ನು ಮುಂದುವರೆಸಿದ ವಿಡಿಯೋ ಮಾನವೀಯ ಮೌಲ್ಯಗಳ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ಮೂವರು ಆರೋಪಿಗಳು ತಮ್ಮ ಮನೆಯಲ್ಲಿದ್ದ ಮಹಿಳೆಯೊಬ್ಬರನ್ನು ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಮಾಡಿದ್ದಾರೆ. ಜತೆಗೆ ಈ ಕೃತ್ಯವನ್ನು ವಿಡಿಯೋ ಮಾಡಲಾಗಿದೆ.

ನ್ಯೂಸ್​ 18 ಜತೆ ಮಾತನಾಡಿದ ಉತ್ತರ ಉನ್ನಾವ್​ ಎಸ್​ಪಿ ಅನೂಪ್​ ಸಿಂಗ್​, "ಮೂರು ಯುವಕರು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇದುವರೆಗೂ ನಮಗೆ ಸಂತ್ರಸ್ತೆಯಿಂದ ದೂರು ಬಂದಿಲ್ಲ, ಆದರೆ ಸ್ವ ಇಚ್ಚಾ ದೂರು ದಾಖಲಿಸಿ ತನಿಖೆ ಆರಂಭಿಸಿದ್ದೇವೆ. ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮವನ್ನು ಜರುಗಿಸಲಾಗುವುದು," ಎಂದು ಅನೂಪ್​ ಸಿಂಗ್​ ಪ್ರಿಕ್ರಿಯಿಸಿದ್ದಾರೆ.

ಗಂಗಾಘಾಟ್​ ಪೊಲೀಸರು ಪ್ರಕರಣ ಸಂಬಂಧ ಇಬ್ಬರು ಯುವಕರನ್ನು ಬಂಧಿಸಿದ್ದು ರಾಹುಲ್​ ಮತ್ತು ಆಕಾಶ್​ ಎಂಬುದಾಗಿ ಅವರನ್ನು ಗುರುತಿಸಲಾಗಿದೆ. ಆರೋಪಿಗಳ ಮಾಹಿತಿ ಪ್ರಕಾರ ಕೃತ್ಯದಲ್ಲಿ ಒಟ್ಟೂ ಆರು ಮಂದಿ ಭಾಗಿಯಾಗಿದ್ದಾರೆ. ಪವನ್​, ವಿಪಿನ್​, ವಿಮಲ್​, ರಿತಿಕ್​ ಇನ್ನುಳಿದ ಆರೋಪಿಗಳು. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು,  ಶೀಘ್ರದಲ್ಲೇ ಬಂಧಿಸುವ ಭರವಸೆ ನೀಡಿದ್ದಾರೆ.

ಮುಂದುವರೆದ ಅವರು, ವೈರಲ್​ ಆಗಿರುವ ವಿಡಿಯೋ ಎಷ್ಟು ಹಳೆಯದಾಗಿರಬಹುದು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಜತೆಗೆ ನ್ಯಾಯಾಧೀಶರ ಆದೇಶ ಕೋರಿ, ಸಂತ್ರಸ್ತೆಯ ಹೇಳಿಕೆಯನ್ನೂ ಪಡೆಯುವುದಾಗಿ ಅನೂಪ್​ ತಿಳಿಸಿದ್ದಾರೆ.
Loading...

ಕಳೆದ ತಿಂಗಳು 9 ವರ್ಷದ ಬಾಲಕಿಯ ಮೇಲೆ 25 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿದ ಘಟನೆ ಉನ್ನಾವ್​ನಲ್ಲಿ ನಡೆದಿತ್ತು. ಏಪ್ರಿಲ್​ ತಿಂಗಳಿನಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲ್​ದೀಪ್​ ಸಿಂಗ್​ ಸೇಂಗರ್​ 16 ವರ್ಷದ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆರೋಪಕ್ಕೆ ಗುರಿಯಾಗಿದ್ದರು. ಪ್ರಕರಣದ ತನಿಖೆಯನ್ನು ನ್ಯಾಯಾಲಯ ಸಿಬಿಐಗೆ ಕೊಡಲು ಮುಂದಾಗುವವರೆಗೂ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿರಲಿಲ್ಲ.

ಒಟ್ಟಿನಲ್ಲಿ ಯೋಗಿ ಆದಿತ್ಯನಾಥ್​ ಆಡಳಿತ ಚುಕ್ಕಾಣಿ ಹಿಡಿದ ನಂತರ, ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಅದರ ಜತೆಗೆ ಪೈಶಾಚಿಕ ಕೃತ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವಷ್ಟು ಭಂಡತನವನ್ನು ಸಮಾಜಘಾತುಕ ವ್ಯಕ್ತಿಗಳು ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಉತ್ತರ ಪ್ರದೇಶ ಸರ್ಕಾರ ಬ್ರೇಕ್​ ಹಾಕಲಿದೆಯಾ ಎಂಬುದನ್ನು ಕಾದು ನೋಡಬೇಕು.
First published:July 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...