Mushrooms: ಅಣಬೆ ತಿಂದು ಮಗು ಸೇರಿ 3 ಮಂದಿ ದಾರುಣ ಸಾವು, ಐವರು ಅಸ್ವಸ್ಥ! ಮಶ್ರೂಮ್ ಪ್ರಿಯರೇ ಎಚ್ಚರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಶ್ರೂಮ್ ಸೇವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಗುರುವಾರ 23ವರ್ಷದ ಮಹಿಳೆ ತರಲಿ ಬರ್ಮನ್ ಹಾಗೂ ಆಕೆಯ ಪತಿ ಪ್ರಫುಲ್ಲ ಬರ್ಮನ್ (24) ಸಾವನ್ನಪ್ಪಿದ್ದಾರೆ. ದಂಪತಿಯ ಪುತ್ರ​ 2 ವರ್ಷದ ಹೇಮಂತ ಬರ್ಮನ್ ಶುಕ್ರವಾರ ನಿಧನವಾಗಿದ್ದಾನೆ.

  • News18 Kannada
  • 4-MIN READ
  • Last Updated :
  • Assam, India
  • Share this:

ಅಸ್ಸಾಂ: ಮಶ್ರೂಮ್ (Mushrooms)​ ಅತ್ಯುತ್ತಮ ಪೋಷಕಾಂಶವುಳ್ಳ (Nutrition) ಆಹಾರ (Food) ಎನ್ನಲಾಗುತ್ತದೆ. ಅದರಲ್ಲೂ ಮಾಂಸಹಾರ (Non Vegetarian) ಸೇವನೆ ಮಾಡದವರಿಗೆ ಅಷ್ಟೇ ಪೋಷಕಾಂಶವನ್ನು ಈ ಮಶ್ರೂಮ್ ತಿನ್ನುವುದರಿಂದ ಸಿಗುತ್ತದೆ ಎನ್ನಲಾಗುತ್ತದೆ. ಆದರೆ ಅಸ್ಸಾಂನ (Assam) ಗೋಲಾಘಾಟ್ ಜಿಲ್ಲೆಯಲ್ಲಿ ವಿಷಕಾರಿ ಅಣಬೆ ಸೇವಿಸಿ ಎರಡು ವರ್ಷದ ಮಗು ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಈ ದುರ್ಘಟನೆ ಮೆರಪಾನಿ ಪ್ರದೇಶದಲ್ಲಿ ನಡೆದಿದ್ದು, ಒಟ್ಟು ಐದು ಕುಟುಂಬಗಳ ಸದಸ್ಯರು ಏಪ್ರಿಲ್ 2 ರಂದು ಅಣಬೆಯನ್ನು ಸೇವಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.


ಗಂಡ-ಹೆಂಡತಿ ಮಗು ಸಾವು


" ಮಶ್ರೂಮ್ ಸೇವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಗುರುವಾರ 23 ವರ್ಷದ ಮಹಿಳೆ ತರಲಿ ಬರ್ಮನ್ ಹಾಗೂ ಆಕೆಯ ಪತಿ ಪ್ರಫುಲ್ಲ ಬರ್ಮನ್ (24) ಸಾವನ್ನಪ್ಪಿದ್ದಾರೆ. ದಂಪತಿಯ ಪುತ್ರ​ 2 ವರ್ಷದ ಹೇಮಂತ ಬರ್ಮನ್ ಶುಕ್ರವಾರ ನಿಧನವಾಗಿದ್ದಾನೆ. ಈ ಮೂವರು ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (JMCH) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.


ಇದನ್ನೂ ಓದಿ:  Mushroom Store Tips: ಮಶ್ರೂಮ್ಸ್‌ ಹಾಳಾಗದಂತೆ ಸಂಗ್ರಹಿಸಿ ಇಡಬೇಕಾ? ಗೃಹಿಣಿಯರಿಗೆ ಇಲ್ಲಿದೆ ಟಿಪ್ಸ್


13 ಮಂದಿಗೆ ಆರೋಗ್ಯ ಸಮಸ್ಯೆ


ವಿಷಪೂರಿತ ಅಣಬೆಯನ್ನು ಸೇವಿಸಿದ ಐದು ಕುಟುಂಬಗಳ ಒಟ್ಟು 13 ಜನರಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದು ಆಸ್ಪತ್ರೆಗೆ ಧಾವಿಸಿದ್ದರು ಎಂದು ಮೇರಪಾಣಿ ಸಮುದಾಯ ಆರೋಗ್ಯ ಕೇಂದ್ರದ ಉಪ ಅಧೀಕ್ಷಕ ಡಾ.ಚಂದ್ರ ಶ್ಯಾಮ್ ಅವರು ಹೇಳಿದ್ದು, ಮೂವರನ್ನು ಬಿಟ್ಟು ಉಳಿದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಶ್ಯಾಮ್ ತಿಳಿಸಿದ್ದಾರೆ.




ಕಳೆದ ವರ್ಷವೂ 13 ಜನ ಸಾವನ್ನಪ್ಪಿದ್ದರು


ವಿಷಪೂರಿತ ಕಾಡು ಅಣಬೆಗಳನ್ನು ಸೇವಿಸಿ ಕಳೆದ ಕಳೆದ ವರ್ಷ ಅಪ್ಪರ್ ಅಸ್ಸಾಂನ ಜಿಲ್ಲೆಗಳಲ್ಲಿ ಸುಮಾರು 13 ಜನರು ಸಾವನ್ನಪ್ಪಿದ್ದರು. ಎಲ್ಲಾ ಸಾವುಗಳು ಡಿಬ್ರುಗಢ್‌ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವರದಿಯಾಗಿದ್ದವು. ಅಲ್ಲಿ ಸಂತ್ರಸ್ತರು ಮತ್ತು ಇತರರು ಅಣಬೆಗಳನ್ನು ತಿಂದ ನಂತರ ತೀವ್ರ ಆನಾರೋಗ್ಯಕ್ಕೀಡಾಗಿದ್ದರು.


ಕಾಡು ಮತ್ತು ವಿಷಕಾರಿ ಅಣಬೆಗಳನ್ನು ತಿಂದು ವಿವಿಧ ಕಾಯಿಲೆಗಳಿಗೆ ಬಳಲುತ್ತಿದ್ದು, 39 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರು, ಅದರಲ್ಲಿ ಒಂದು ಮಗು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ಈ ಎಲ್ಲಾ ಸಾವುಗಳು ಕರುಳು ಮತ್ತು ಮೂತ್ರಪಿಂಡ ವೈಫಲ್ಯದಿಂದ ಸಂಭವಿಸಿದ್ದವು.


ಇದನ್ನೂ ಓದಿ: Mushrooms: ಈ ಅಣಬೆ ತಿಂದ್ರೆ ನಿಮಗೆ ಚಿಕನ್-ಮಟನ್ ನೆನಪೇ ಆಗೋದಿಲ್ಲ! ಯಾವುದಪ್ಪಾ ವಿಶೇಷ ಮಶ್ರೂಮ್?


ತ್ರಿಪುರಾದಲ್ಲಿ ಒಂದೇ ಕುಟುಂಬದ ಐವರು ಅಸ್ವಸ್ಥ


ಇದೇ ರೀತಿ ಪ್ರಕರಣ ತ್ರಿಪುರಾದಲ್ಲಿ ನಡೆದಿದೆ. ವಿಷಕಾರಿ ಅಣಬೆಗಳನ್ನು ತಿಂದು ಬುಡಕಟ್ಟು ಸಮುದಾಯದ ಒಂದೇ ಕುಟುಂಬದ ಐವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿನ್ನೆ ರಾತ್ರಿ ಕುಟುಂಬಸ್ಥರು ಕಾಡು ಅಣಬೆಯನ್ನು ಅಡುಗೆ ಮಾಡಿ ತಿಂದಿದ್ದಾರೆ. ಈ ಅಣಬೆ ಪದಾರ್ಥವನ್ನು ಸೇವಿಸಿದ ಬೆನ್ನಲ್ಲೆ ವಾಂತಿ ಕಾಣಿಸಿಕೊಂಡಿದೆ, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ಐವರ ಸ್ಥಿತಿ ಗಂಭೀರವಾಗಿದ್ದು, ಸೆಪಹಿಜಾಲಾ ಆಸ್ಪತ್ರೆ ಜಿಲ್ಲೆಯ ಬಿಶ್ರಾಮ್​ಗಂಜ್​ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

top videos
    First published: