ಬಾವಿಗೆ ಬಿದ್ದ ಮಗುವನ್ನು ನೋಡೋಕೆ ಹೋಗಿ ತಾವೂ ಬಾವಿ ಪಾಲಾದ 40 ಜನ! 3 ಸಾವು, 11 ಮಿಸ್ಸಿಂಗ್

Madhya Pradesh: 50 ಅಡಿ ಅಳವಿರುವ ಬಾವಿ ಇದಾಗಿದ್ದು, ಬಿದ್ದ 30 ಮಂದಿಯಲ್ಲಿ 4 ಮೃತ ದೇಹಗಳು ಸಿಕ್ಕಿವೆ. ಉಳಿದ 10 ಜನರು ನಾಪ್ತೆಯಾಗಿದ್ದಾರೆ. ನಾಪ್ತೆಯಾದ ಜನರಿಗಾಗಿ ಎನ್​ಡಿಆರ್​ಎಫ್​ ಸಿಬ್ಬಂಧಿ ಶೋಧ ಕಾರ್ಯ ಮಾಡುತ್ತಿದೆ.

ವಿದಿಶಾ ಗಂಜ್ ಬಸೌಡ ಪ್ರದೇಶದಲ್ಲಿರುವ ಬಾವಿ

ವಿದಿಶಾ ಗಂಜ್ ಬಸೌಡ ಪ್ರದೇಶದಲ್ಲಿರುವ ಬಾವಿ

 • Share this:
  ಬಾವಿಗೆ ಬಿದ್ದ ಮಗುವಿನ ರಕ್ಷಣಾ ಕಾರ್ಯ ವೀಕ್ಷಿಸುತ್ತಿದ್ದ  30ಕ್ಕೂ ಹೆಚ್ಚು ಜನರು ಅದೇ ಬಾವಿಗೆ ಬಿದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನೆಯ ಪರಿಣಾಮ ಮೂರು ಮಂದಿ ಸಾವನ್ನಪ್ಪಿದ್ದು, 10 ಮಂದಿ ನಾಪ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

  ಮಧ್ಯಪ್ರದೇಶದ ವಿದಿಶಾ ಗಂಜ್ ಬಸೌಡ ಪ್ರದೇಶದಲ್ಲಿರುವ ಬಾವಿಗೆ ಜುಲೈ 15ರಂದು 8 ವರ್ಷದ ಬಾಲಕಿ ಬೀಳುತ್ತಾಳೆ. ತಡರಾತ್ರಿ ಆಕೆಯನ್ನು ರಕ್ಷಿಸುವ ಸಮಯದಲ್ಲಿ, ವೀಕ್ಷಿಸಲೆಂದು ಬಂದ 30 ಮಂದಿ ಮಣ್ಣು ಕುಸಿದು ಬಾವಿಗೆ ಬಿದ್ದಿದ್ದಾರೆ.

  50 ಅಡಿ ಅಳವಿರುವ ಬಾವಿ ಇದಾಗಿದ್ದು, ಬಿದ್ದ 30 ಮಂದಿಯಲ್ಲಿ 4 ಮೃತ ದೇಹಗಳು ಸಿಕ್ಕಿವೆ. ಉಳಿದ 10 ಜನರು ನಾಪ್ತೆಯಾಗಿದ್ದಾರೆ. ನಾಪ್ತೆಯಾದ ಜನರಿಗಾಗಿ ಎನ್​ಡಿಆರ್​ಎಫ್​ ಸಿಬ್ಬಂಧಿ ಶೋಧ ಕಾರ್ಯ ಮಾಡುತ್ತಿದೆ.

  ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸರು, ಬಾವಿಗೆ ಬಿದ್ದ ಬಾಲಕಿ ರಕ್ಷಣಾ ಕಾರ್ಯ ವೀಕ್ಷಿಸಲು ಬಾವಿಯ ಸುತ್ತ ಅನೇಕರು ಗುಂಪುಕೂಡಿದ್ದರು. ಇದೇ ಸಮಯಲ್ಲಿ ಮಣ್ಣು ಕುಸಿದು 30ಕ್ಕೂ ಹೆಚ್ಚು ಜನರು ಬಾವಿಗೆ ಬಿದ್ದಿದ್ದಾರೆ. ತಕ್ಷಣವೇ 13 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಉಳಿದ 10 ಮಂದಿ ಮತ್ತು 8 ವರ್ಷದ ಮಗು ನಾಪತ್ತೆಯಾಗಿದೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: ಈ ಒಂಟಿ ಮಹಿಳೆಗೊಂದು ಸಲಾಂ​, ಮನೆಯಲ್ಲೇ ಕುಳಿತುಕೊಂಡು ತಿಂಗಳಿಗೆ ಎಣಿಸುತ್ತಾಳೆ 41 ಲಕ್ಷ!

  ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಈ ಬಗ್ಗೆ ಆಳವಾದ ತನಿಖೆಗೆ ಆದೇಶಿಸಿದ್ದಾರೆ.  ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್​ ಸಾರಂಗ್​ ಅವರು ಘಟನೆ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯ ಮುಂದುವರಿಸಿದ್ದು, ನಾಪತ್ತೆಯಾದವರನ್ನು ಹುಡುಕುವ ಪಯತ್ನ ನಡೆಯುತ್ತಿದೆ.

  ಇದನ್ನೂ ಓದಿ: WhatsApp| ಒಂದು ತಿಂಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಭಾರತೀಯರ ವಾಟ್ಸ್‌ಆ್ಯಪ್‌ ಅಕೌಂಟ್‌ಗಳು ಬ್ಯಾನ್!

  8 ವರ್ಷದ ಬಾಲಕಿ ಬಾವಿಯ ಬಳಿ ಆಟವಾಡುತ್ತಿದ್ದಳು ಈ ಸಮಯದಲ್ಲಿ ಆಯತಪ್ಪಿ ಬಿದ್ದಿದ್ದಾಳೆ. ಈ ವಿಚಾರ ಹರಿದಾಡುತ್ತಿದ್ದಂತೆ ಗ್ರಾಮದ ಅನೇಕ ಜನರು ಸೇರಿದ್ದಾರೆ. ಬಾವಿಯ ಸುತ್ತ ಜನ ಸೇರಿದ ಕಾರಣ ತಡೆಗೋಡೆಗೆ ಒತ್ತಡ ಹೆಚ್ಚಾಗಿ ಕುಸಿದಿದೆ. ಪರಿಣಾಮ ಈ ಅನಾಹುತ ಸಂಭವಿಸಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.
  Published by:Harshith AS
  First published: