ಸಾವಿರಾರು ಯೋಧರು ಕೊರೋನಾ ಸೋಂಕಿಗೆ ತುತ್ತು, 100ಕ್ಕೂ ಹೆಚ್ಚು ಬಲಿ; ಸಂಸತ್ಗೆ ಮಾಹಿತಿ ನೀಡಿದ ಗೃಹ ಇಲಾಖೆ
ಪಾಕಿಸ್ತಾನ ಮತ್ತು ಚೀನಾ ಜೊತೆ ನಿರಂತರವಾಗಿ ಗಡಿ ಭಾಗದಲ್ಲಿ ಸಂಘರ್ಷ ಉಂಟಾಗುತ್ತಿರುವ ಇಂದಿನ ದಿನಗಳಲ್ಲಿ ಭಾರತೀಯ ಸೇನೆಯಲ್ಲೂ ಸಹ ಮಾರಣಾಂತಿಕ ಕೊರೋನಾ ವೈರಸ್ ಆಘಾತವನ್ನುಂಟು ಮಾಡಿದೆ, ಹಲವರ ಪ್ರಾಣಕ್ಕೆ ಕುತ್ತಾಗಿದೆ ಎಂಬ ಸುದ್ದಿ ನಿಜಕ್ಕೂ ಆಘಾತಕಾರಿ ಎನ್ನಲಾಗುತ್ತಿದೆ.
ನವ ದೆಹಲಿ (ಸೆಪ್ಟೆಂಬರ್ 15); ಕಳೆದ ಆರು ತಿಂಗಳಿನಿಂದ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸುತ್ತಿರುವ ಕೊರೋನಾ ವೈರಸ್ ಭಾರತದಲ್ಲೂ ಉಂಟು ಮಾಡಿರುವ ಆಘಾತ ಸಾಮಾನ್ಯದಲ್ಲ. ಈಗಾಗಲೇ ಭಾರತದಲ್ಲಿ 35 ಲಕ್ಷಕ್ಕೂ ಅಧಿಕ ಜನ ಈ ಸೋಂಕಿಗೆ ತುತ್ತಾಗಿದ್ದಾರೆ. ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಆದರೂ ಇದರ ಆರ್ಭಟ ಮಾತ್ರ ಈವರೆಗೆ ಕಡಿಮೆಯಾಗಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಾಗಲೇ ಕೊರೋನಾದಿಂದಾಗಿ ಭಾರತದ ಆರ್ಥಿಕತೆಯೂ ಪಾತಾಳಕ್ಕೆ ಕುಸಿದಿದೆ. ದೇಶದ ಜಿಡಿಪಿ ದಾಖಲೆಯ ಮಟ್ಟಕ್ಕೆ ಇಳಿದಿದೆ. ಪರಿಣಾಮ ಡಾಲರ್ ಎದುರಿನ ರೂಪಾಯಿ ಮೌಲ್ಯವೂ ಕುಸಿಯುತ್ತಲೇ ಇದೆ. ಈ ನಡುವೆ ಮತ್ತೊಂದು ಆಘಾತಕರಿ ಸುದ್ದಿ ಬಂದೆರಗಿದ್ದು, ಭಾರತದ ಸೇನೆಯನ್ನೂ ಕೊರೋನಾ ಆವರಿಸಿದೆ. ಸಾವಿರಾರು ಸೈನಿಕರು ಈ ಮಾರಣಾಂತಿಕ ಸೋಂಕಿಗೆ ತುತ್ತಾಗಿದ್ದಾರೆ ಎಂಬ ವರದಿ ಎಲ್ಲೆಡೆ ಇದೀಗ ಚಿಂತೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಇಂದಿನ ಮಾನ್ಸೂನ್ ಅಧಿವೇಶನದಲ್ಲಿ ಸಭೆಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಇಲಾಖೆ, "ಕೇಂದ್ರ ಅರೆಸೈನಿಕ ಪಡೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಸೈನಿಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಕೇಂದ್ರ ಭದ್ರತಾ ಪಡೆಗಳಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಈಗಾಗಲೇ ಕೊರೊನಾಗೆ ಬಲಿಯಾಗಿದ್ದಾರೆ. ಇದಲ್ಲದೆ, 8270 ಮಂದಿ ಸಿಆರ್ಪಿಎಫ್ ಹಾಗೂ 8083 ಮಂದಿ ಗಡಿ ಭದ್ರತಾ ಸೈನಿಕರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ" ಎಂದು ಮಾಹಿತಿ ನೀಡಿದ್ದು ಆಘಾತಕ್ಕೆ ಕಾರಣವಾಗಿದೆ.
ಭಾರತದಲ್ಲಿ ಕೊರೋನಾ ಈಗಾಗಲೇ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಲಕ್ಷಾಂತರ ಜನ ಈ ಸೋಂಕಿಗೆ ತುತ್ತಾಗಿದ್ದಾರೆ. ದೆಹಲಿ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಹಾಗೂ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ಅಕ್ಷರಶಃ ನಲುಗಿ ಹೋಗಿವೆ. ಕೊರೋನಾವನ್ನು ಎದುರಿಸಲೂ ಸಹ ರಾಜ್ಯ ಖಜಾನೆಯಲ್ಲಿ ಹಣವಿಲ್ಲದಂತಹ ಪರಿಸ್ಥಿತಿಗೆ ಹಲವಾರು ರಾಜ್ಯಗಳು ನೂಕಲ್ಪಟ್ಟಿವೆ.
ಇನ್ನೂ ಅಕ್ಟೋಬರ್ ವೇಳೆಗೆ ದೇಶದಲ್ಲಿ 1 ಕೋಟಿಗೂ ಅಧಿಕ ಜನರಿಗೆ ಕೊರೋನಾ ಸೋಂಕು ತಗಲುವ ಸಾಧ್ಯತೆ ಇದೆ ಎಂದೂ ಕೆಲವು ತಜ್ಞರು ಅಂದಾಜಿಸಿದ್ದಾರೆ. ಆದರೆ, ಕಳೆದ ಆರು ತಿಂಗಳ ಅವಧಿಯಲ್ಲಿ ಭಾರತೀಯ ಸೇನೆಯಲ್ಲಿ ಕೊರೋನಾ ಉಂಟು ಮಾಡಿರುವ ಆಘಾತದ ಕುರಿತು ಈ ವರೆಗೆ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ.
ಆದರೆ, ಇದೀಗ ಪಾಕಿಸ್ತಾನ ಮತ್ತು ಚೀನಾ ಜೊತೆ ನಿರಂತರವಾಗಿ ಗಡಿ ಭಾಗದಲ್ಲಿ ಸಂಘರ್ಷ ಉಂಟಾಗುತ್ತಿರುವ ಇಂದಿನ ದಿನಗಳಲ್ಲಿ ಭಾರತೀಯ ಸೇನೆಯಲ್ಲೂ ಸಹ ಮಾರಣಾಂತಿಕ ಕೊರೋನಾ ವೈರಸ್ ಆಘಾತವನ್ನುಂಟು ಮಾಡಿದೆ, ಹಲವರ ಪ್ರಾಣಕ್ಕೆ ಕುತ್ತಾಗಿದೆ ಎಂಬ ಸುದ್ದಿ ನಿಜಕ್ಕೂ ಆಘಾತಕಾರಿ ಎನ್ನಲಾಗುತ್ತಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ