• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Syria Earthquake: ಅವಶೇಷಗಳ ಅಡಿಯಲ್ಲೇ ಜನಿಸಿದ ಮಿರಾಕಲ್ ಬೇಬಿ, 'ಅಯಾ' ದತ್ತು ಪಡೆಯಲು 'ಹೃದಯವಂತ'ರ ಕ್ಯೂ!

Syria Earthquake: ಅವಶೇಷಗಳ ಅಡಿಯಲ್ಲೇ ಜನಿಸಿದ ಮಿರಾಕಲ್ ಬೇಬಿ, 'ಅಯಾ' ದತ್ತು ಪಡೆಯಲು 'ಹೃದಯವಂತ'ರ ಕ್ಯೂ!

ಮಿರಾಕಲ್ ಬೇಬಿ ಅಯಾ (Photo: Twitter)

ಮಿರಾಕಲ್ ಬೇಬಿ ಅಯಾ (Photo: Twitter)

ಭೂಕಂಪದಿಂದ ಹಲವಾರು ಕಟ್ಟಡಗಳು ಕುಸಿದಿವೆ, ಶೋಧ ಕಾರ್ಯಾಚರಣೆ ವೇಳೆ ಕಟ್ಟಡದ ಅವಶೇಷಗಳಡಿಯಲ್ಲಿ ಆಗ ತಾನೆ ಜನಿಸಿರುವ ನವಜಾತ ಶಿಶು ಪತ್ತೆಯಾಗಿತ್ತು. ಆ ಮಗು ಪತ್ತೆಯಾದಾಗ ಅದರ ಹೊಕ್ಕಳ ಬಳ್ಳಿ ಕೂಡ ತಾಯಿಯಿಂದ ಬೇರ್ಪಟ್ಟಿರಲಿಲ್ಲ. ಹಾಗಾಗಿ ಭೂಕಂಪದ ಅವಶೇಷಗಳಲ್ಲಿ ರಕ್ಷಿಸಲ್ಪಟ್ಟ ಈ ಮಗುವಿಗೆ ಅಯಾ ಎಂದು ಹೆಸರು ಇಡಲಾಗಿದೆ. ಅಯಾ ಎಂದರೆ ಅರೇಬಿಕ್ ಭಾಷೆಯಲ್ಲಿ ಪವಾಡ ಎಂದರ್ಥ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • New Delhi, India
  • Share this:

ಸಿರಿಯಾ: ಕಳೆದ ಸೋಮವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ (Earthquake) ಟರ್ಕಿಯಲ್ಲಿ(Turkey) ಸುಮಾರು 25 ಸಾವಿರ ಹಾಗೂ ಸಿರಿಯಾದಲ್ಲಿ (Syria) 4500 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ನೂರಾರು ಕಟ್ಟಡಗಳು ಕುಸಿದಿದ್ದು ರಕ್ಷಣಾ ಕಾರ್ಯ ವಾರದಿಂದಲೂ ಸಾಗುತ್ತಲೇ ಇದೆ. ಈ ಮಧ್ಯೆ ರಕ್ಷಣಾ ಕಾರ್ಯಾಚರಣೆ ವೇಳೆ ಪವಾಡ ಎಂಬಂತೆ ಅವಶೇಷಗಳ ಅಡಿಯಲ್ಲಿ ಪುಟ್ಟ ಮಕ್ಕಳನ್ನು ಜೀವಂತವಾಗಿ ಹೊರ ತೆಗೆದಿರುವ ಘಟನೆಗಳು ವರದಿಯಾಗುತ್ತಿವೆ. ವಾಯುವ್ಯ ಸಿರಿಯಾದಲ್ಲಿ ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಆಗತಾನೆ ಜನಿಸಿದ ಹೆಣ್ಣು ಮಗುವನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ. ಈ ವಿಷಯ ಇಡೀ ಜಗತ್ತಿಗೆ ಅಚ್ಚರಿ ತರಿಸಿದೆ. ತಂದೆ ತಾಯಿ (Parents), ಒಡಹುಟ್ಟಿದವರನ್ನು ಕಣ್ಣು ಬಿಡುವ ಮೊದಲೇ ಕಳೆದುಕೊಂಡಿರುವ ಈ ಮಗುವನ್ನು ದತ್ತು ತೆಗೆದುಕೊಳ್ಳಲು ಜಗತ್ತಿನಾದ್ಯಂತ ಸಾವಿರಾರು ಮಂದಿ ಮುಂದಾಗಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.


ಮಿರಾಕಲ್ ಬೇಬಿಗೆ ಅಯಾ ಎಂಬ ಹೆಸರು


ಕಾರ್ಯಾಚರಣೆ ವೇಳೆ ಕಟ್ಟಡದ ಅವಶೇಷಗಳಡಿಯಲ್ಲಿ ಈ ನವಜಾತ ಶಿಶು ಪತ್ತೆಯಾಗಿತ್ತು. ಆ ಮಗು ಪತ್ತೆಯಾದಾಗ ಅದರ ಹೊಕ್ಕಳ ಬಳ್ಳಿ ಕೂಡ ತಾಯಿಯಿಂದ ಬೇರ್ಪಟ್ಟಿರಲಿಲ್ಲ. ಹಾಗಾಗಿ ಭೂಕಂಪದ ಅವಶೇಷಗಳಲ್ಲಿ ರಕ್ಷಿಸಲ್ಪಟ್ಟ ಈ ಮಗುವಿಗೆ ಅಯಾ ಎಂದು ಹೆಸರು ಇಡಲಾಗಿದೆ. ಅಯಾ ಎಂದರೆ ಅರೇಬಿಕ್ ಭಾಷೆಯಲ್ಲಿ ಪವಾಡ ಎಂದರ್ಥ.


ಕಣ್ಣು ಬಿಡುವ ಮೊದಲೇ ತನ್ನವರನ್ನೆಲ್ಲಾ ಕಳೆದುಕೊಂಡ ಕಂದಮ್ಮ


ಸಿರಿಯಾದ ಜಿಂದಾಯ್ರಿಸ್ ಪಟ್ಟಣದಲ್ಲಿ ಭೂಕಂಪದ ನಂತರ ಮಗು ಆಕೆಯ ತಾಯಿ, ತಂದೆ ಮತ್ತು ಆಕೆಯ ನಾಲ್ವರು ಒಡಹುಟ್ಟಿದವರನ್ನು ಕಳೆದುಕೊಂಡಿದೆ. ಅಲ್ಲದೆ ಸೋಮವಾರ ಪತ್ತೆ ಕಾರ್ಯದ ವೇಳೆ ಆ ಮಗು ಸಿಕ್ಕಾಗ ಹಲವು ಮೂಗೇಟುಗಳಾಗಿವೆ. ಅವಳ ಕಣ್ಣಿನ ಹುಬ್ಬುಗಳಿಗೆ ಗಾಯಗಳಾಗಿದ್ದವು, ಚಳಿಗೆ ಅವಳ ದೇಹ ಸಂಪೂರ್ಣ ತಣ್ಣಗಾಗಿತ್ತು, ಆದರೆ ಉಸಿರಾಡುತ್ತಿದ್ದಳು. ಪ್ರಸ್ತುತ ಅಯಾ ಆರೋಗ್ಯ ಸ್ಥಿರವಾಗಿದೆ ಎಂದು ಅವಳನ್ನು ನೋಡಿಕೊಳ್ಳುವ ಮಕ್ಕಳ ವೈದ್ಯ ಹನಿ ಮಾರೂಫ್ ಹೇಳಿದ್ದಾರೆ.


ಇದನ್ನೂ ಓದಿ: Turkey Earthquake: ಇದು ನಿಜಕ್ಕೂ ಪವಾಡ, 128 ಗಂಟೆ ಭೂಕಂಪದ ಅವಶೇಷಗಳಡಿ ಸಿಲುಕಿದರೂ ಜೀವ ಉಳಿಸಿ ಕೊಂಡಿದೆ ಈ 2 ತಿಂಗಳ ಮಗು!


ಮಿರಾಕಲ್ ಬೇಬಿ ದತ್ತು ತೆಗೆದುಕೊಳ್ಳಲು ಸಾವಿರಾರು ಮಂದಿ ಕ್ಯೂ


ಅಯಾಳ ರಕ್ಷಣೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಕಟ್ಟಡವೊಂದರ ಕುಸಿದ ಅವಶೇಷಗಳಿಂದ ವ್ಯಕ್ತಿಯೊಬ್ಬರು ಧೂಳಿನಿಂದ ಆವೃತವಾದ ಮಗುವನ್ನು ಹಿಡಿದುಕೊಂಡು ಓಡುತ್ತಿದ್ದರು. ಮಗುವಿನ ಕುಟುಂಬದ ದೂರದ ಸಂಬಂಧಿ ಖಲೀಲ್ ಅಲ್-ಸುವಾದಿ ಎಂಬುವವರು ನವಜಾತ ಶಿಶುವನ್ನು ತೆಗೆದುಕೊಂಡು ಸಿರಿಯಾದ ಆಫ್ರಿನ್‌ನಲ್ಲಿರುವ ಡಾ ಮರೂಫ್‌ಗೆ ಆಸ್ಪತ್ರೆಗೆ ದಾಖಲಿಸಿದ್ದರು.


ನಂತರ ಆಸ್ಪತ್ರೆಯಲ್ಲಿ ಅನಾಥ ಮಗುವನ್ನು ನೋಡಿಕೊಳ್ಳುತ್ತಿರುವ ವೈದ್ಯರು ಕಣ್ಣು ಬಿಡುವ ಮುನ್ನವೇ ತನ್ನವರನ್ನೆಲ್ಲಾ ಕಳೆದುಕೊಂಡ ಅಯಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಸ್ಟ್​ಗೆ ಸಾವಿರಾರು ಜನ ಕಮೆಂಟ್​ ಮಾಡಿದ್ದು, ಆಕೆಯನ್ನು ದತ್ತು ತೆಗೆದುಕೊಳ್ಳಲು ಬಯಸುವುದಾಗಿ ಹೇಳಿ ವಿವರಗಳನ್ನು ಕೇಳುತ್ತಿದ್ದಾರೆ. ಆದರೆ ವರದಿಯ ಪ್ರಕಾರ ಆ ಮಗುವಿನ ದೊಡ್ಡಪ್ಪನೇ ದತ್ತು ತೆಗೆದುಕೊಳ್ಳಲು ಬಯಸಿದ್ದಾರೆ ಎಂದು ತಿಳಿದುಬಂದಿದೆ.




ಉತ್ತಮ ಜೀವನ ರೂಪಿಸಿಕೊಡುವೆ ಎಂದ ಟಿವಿ ಆ್ಯಂಕರ್


ಮಿರಾಕಲ್​ ಬೇಬಿ ಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿರುವ ವ್ಯಕ್ತಿಯೊಬ್ಬರು, " ನಾನು ಅಯಾಳನ್ನು ದತ್ತು ತೆಗೆದುಕೊಂಡು ಅವಳಿಗೆ ಯೋಗ್ಯವಾದ ಜೀವನವನ್ನು ನೀಡಲು ಬಯಸುತ್ತೇನೆ " ಎಂದು ಹೇಳಿದ್ದಾರೆ. ಕುವೈತ್ ಟಿವಿ ನಿರೂಪಕರೊಬ್ಬರು, " ಕಾನೂನು ಪ್ರಕ್ರಿಯೆಗಳು ನನಗೆ ಅನುಮತಿಸಿದರೆ ಈ ಮಗುವನ್ನು ನೋಡಿಕೊಳ್ಳಲು ಮತ್ತು ದತ್ತು ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ " ಎಂದು ಕಮೆಂಟ್ ಮಾಡಿದ್ದಾರೆ.


ಮಗುವಿಗೆ ಹಾಲುಣಿಸುತ್ತಿರುವ ವೈದ್ಯರ ಪತ್ನಿ


ಮಗು ಅಯಾವನ್ನು ದತ್ತು ಪಡೆಯಲು ಪ್ರಪಂಚದಾದ್ಯಂತದ ಹಲವು ಜನರಿಂದ ಡಜನ್‌ಗಟ್ಟಲೆ ಕರೆಗಳು ಬಂದಿವೆ. ಆದರೆ ಈಗ ಅವಳನ್ನು ದತ್ತು ತೆಗೆದುಕೊಳ್ಳಲು ನಾನು ಯಾರಿಗೂ ಅವಕಾಶ ನೀಡುವುದಿಲ್ಲ. ಅವಳ ಹತ್ತಿರದ ಕುಟುಂಬ ಹಿಂದಿರುಗುವವರೆಗೆ, ನಾನು ಅವಳನ್ನು ನನ್ನ ಮಗಳಂತೆ ನೋಡಿಕೊಳ್ಳುತ್ತೇನೆ ಎಂದು ಅಯಾ ದಾಖಲಾಗಿರುವ ಆಸ್ಪತ್ರೆಯ ಮ್ಯಾನೇಜರ್ ಖಾಲಿದ್ ಅತ್ತಿಯಾ ಹೇಳಿದ್ದಾರೆ.


ವೈದ್ಯ ಖಾಲೀದ್​ 4 ತಿಂಗಳ ಮಗುವನ್ನು ಹೊಂದಿದ್ದಾರೆ, ಸದ್ಯಕ್ಕೆ ಅವರ ಪತ್ನಿ ಅಯಾಗೂ ತನ್ನ ಸ್ವಂತ ಮಗಳೊಂದಿಗೆ ಹಾಲುಣಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.


ಅಯಾ ಮಗುವಿನ ತವರು ಪಟ್ಟಣವಾದ ಜಿಂದಾಯ್ರಿಸ್‌ನಲ್ಲಿ, ಹಲವಾರು ಕಟ್ಟಡಗಳು ಕುಸಿದಿವೆ. ಅಲ್ಲಿನ ಜನರು ಪ್ರೀತಿಪಾತ್ರರಿಗಾಗಿ ಕುಸಿದ ಕಟ್ಟಡಗಳ ಅವಶೇಷಗಳಲ್ಲಿ ಹುಡುಕಾಡುತ್ತಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನೂ ಅನೇಕ ಜನರಿದ್ದಾರೆ. ಪಟ್ಟಣದ ಶೇ.90ರಷ್ಟು ನಾಶವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Published by:Rajesha M B
First published: