Viral Video: ಹಾರಾಡುತ್ತಲೇ ಬಿದ್ದು ಪ್ರಾಣಬಿಟ್ಟವು ಸಾವಿರಾರು ಪಕ್ಷಿಗಳು! ಮುಂದಿದೆಯಾ ಮಹಾವಿಪತ್ತು?

ಆಕಾಶದಿಂದ ಕಪ್ಪು ಹಕ್ಕಿಗಳ ರಾಶಿ ಸುರುಳಿ ಸುತ್ತುತ್ತಾ ಮನೆಗಳು, ರಸ್ತೆಗಳ ಮೇಲೆ ಬೀಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಹೀಗೆ ಕೆಳಕ್ಕೆ ಬಿದ್ದ ಕೆಲವು ಹಕ್ಕಿಗಳು ಪುನಃ ಚೇತರಿಸಿಕೊಂಡು ಮತ್ತೆ ಹಾರುವಲ್ಲಿ ಯಶಸ್ವಿಯಾಗಿವೆ. ಆದರೆ ನೂರಾರು ಹಕ್ಕಿಗಳು ಬಿದ್ದಲ್ಲೇ ಅಸುನೀಗಿವೆ. ಬೀದಿಗಳಲ್ಲಿ ಹಕ್ಕಿಗಳು ಶವವಾಗಿ ಬಿದ್ದಿರುವ ದೃಶ್ಯ ವಿಡಿಯೋಗಳಲ್ಲಿ ಕಾಣಿಸಿದೆ.

ಸತ್ತು ಬಿದ್ದಿರುವ ಪಕ್ಷಿಗಳು

ಸತ್ತು ಬಿದ್ದಿರುವ ಪಕ್ಷಿಗಳು

  • Share this:
ಮೆಕ್ಸಿಕೋ: ಒಂದೆರಡು ದಿನಗಳ ಹಿಂದೆ ಮೆಕ್ಸಿಕೋದಲ್ಲಿ (Mexico) ನಡೆದ ಈ ಘಟನೆ (Incident) ಬರೀ ಮೆಕ್ಸಿಕೋದ ಜನರನ್ನಷ್ಟೇ ಅಲ್ಲ, ಇಡೀ ಜಗತ್ತಿನ ಜನರನ್ನು ಆತಂಕಕ್ಕೆ ತಳ್ಳಿದೆ. ಅದರಲ್ಲೂ ಪಕ್ಷಿ ಪ್ರೇಮಿಗಳು (Bird Lovers), ಪಕ್ಷಿ ಶಾಸ್ತ್ರಜ್ಞರು (Ornithologists), ವಿಜ್ಞಾನಿಗಳು (Scientist) ಆತಂಕಗೊಂಡಿದ್ದಾರೆ. ಇದು ಮಹಾವಿಪತ್ತಿನ (The Great Disaster) ಮುನ್ಸೂಚನೆಯಾ ಅಂತ ತಲೆ ಕೆಡಿಸಿಕೊಂಡಿದ್ದಾರೆ. ಹಾಗಾದರೆ ಕಳೆದ ಎರಡು ದಿನಗಳ ಹಿಂದೆ ಮೆಕ್ಸಿಕೋ ಸಿಟಿಯಲ್ಲಿ (Mexico City) ನಡೆದಿದ್ದಾದರೂ ಏನು? ಅದು ಏನೆಂದರೆ ಸಾವಿರಾರು ಪಕ್ಷಿಗಳ (Birds) ನಿಗೂಢ ಸಾವು (mysterious death) ! ಆಕಾಶದಲ್ಲಿ ಹಾರಾಡುತ್ತಿದ್ದ ಸಾವಿರಾರು ಹಕ್ಕಿಗಳ ಗುಂಪು ಏಕಾಏಕಿ ನೆಲಕ್ಕೆ ಬಿದ್ದಿದೆ. ಕಟ್ಟಡ (Building), ರಸ್ತೆಯ (Road) ಮೇಲೆಲ್ಲಾ ಬಿದ್ದು ಪ್ರಾಣ ಕಳೆದುಕೊಂಡಿವೆ. ಈ ವಿಡಿಯೋ (Video) ವೈರಲ್ (Viral) ಆಗಿದ್ದು, ಜಗತ್ತಿನ ಜನರೆಲ್ಲರ ಆತಂಕಕ್ಕೆ ಕಾರಣವಾಗಿದೆ. 

ಏಕಾಏಕಿ ಆಕಾಶದಿಂದ ಕೆಳಕ್ಕೆ ಬಿದ್ದ ಹಕ್ಕಿಗಳು

ಫೆಬ್ರವರಿ 7ರಂದು ಮೆಕ್ಸಿಕೋ ಸಿಟಿಯ ಚಿಹೌಹುವಾ ಎಂಬ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ನೂರಾರು ಹಕ್ಕಿಗಳು ಇದ್ದಕ್ಕಿದ್ದಂತೆ ಕಟ್ಟಡಗಳು,  ಪಾದಚಾರಿ ಮಾರ್ಗದ ಮೇಲೆ ಬಿದ್ದು ಸಾವನ್ನಪ್ಪಿವೆ. ಹಳದಿ ತಲೆಯ ಕಪ್ಪು ಹಕ್ಕಿಗಳ ಹಿಂಡು ಏಕಾಏಕಿ ಕುಸಿದು ಆಕಾಶದಿಂದ ನೆಲಕ್ಕೆ ಕುಸಿದು ಬಿದ್ದ ವಿಚಿತ್ರ ಘಟನೆಯ ವಿಡಿಯೋಗಳು ವೈರಲ್ ಆಗಿವೆ.

5ಜಿ ತಂತ್ರಜ್ಞಾನವೇ ಮಾರಕವಾಯ್ತಾ?

ಸುಮಾರು ಪಕ್ಷಿಗಳ ಮೃತದೇಹ ದೊರಕಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 5ಜಿ ತಂತ್ರಜ್ಞಾನವೇ ಈ ರೀತಿ ಪಕ್ಷಿಗಳ ಮಾರಣಹೋಮ ನಡೆಯಲು ಕಾರಣ ಎಂದು  ಹಲವರು ದೂರಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ವಿಜ್ಞಾನಿಗಳು ಪಕ್ಷಿಗಳ ಸಾವಿಗೆ ಕಾರಣ ಹುಡುಕುತ್ತಿದ್ದಾರೆ. ಈ ಕುರಿತು ರಾಯಿಟರ್ಸ್​ ಸುದ್ದಿ ಸಂಸ್ಥೆ ವಿಡಿಯೋವನ್ನು ಹಂಚಿಕೊಂಡಿದೆ.

ಇದನ್ನೂ ಓದಿ: Australian Experts: ಜೀವ ಸಂಕಟದಲ್ಲಿ ಸಮುದ್ರ ಜೀವಿಗಳು, ಅಳಿವಿನ ಅಂಚಿನಲ್ಲಿ 45,000 ಪ್ರಭೇದಗಳು!

ಕಪ್ಪು ಮೋಡಗಳಂತೆ ಧರೆಗುರುಳಿದ ಪಕ್ಷಿಗಳ ಹಿಂಡು

ಆಕಾಶದಿಂದ ಕಪ್ಪು ಹಕ್ಕಿಗಳ ರಾಶಿ ಸುರುಳಿ ಸುತ್ತುತ್ತಾ ಮನೆಗಳು, ರಸ್ತೆಗಳ ಮೇಲೆ ಬೀಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಹೀಗೆ ಕೆಳಕ್ಕೆ ಬಿದ್ದ ಕೆಲವು ಹಕ್ಕಿಗಳು ಪುನಃ ಚೇತರಿಸಿಕೊಂಡು ಮತ್ತೆ ಹಾರುವಲ್ಲಿ ಯಶಸ್ವಿಯಾಗಿವೆ. ಆದರೆ ನೂರಾರು ಹಕ್ಕಿಗಳು ಬಿದ್ದಲ್ಲೇ ಅಸುನೀಗಿವೆ. ಬೀದಿಗಳಲ್ಲಿ ಹಕ್ಕಿಗಳು ಶವವಾಗಿ ಬಿದ್ದಿರುವ ದೃಶ್ಯ ವಿಡಿಯೋಗಳಲ್ಲಿ ಕಾಣಿಸಿದೆ. ಹಕ್ಕಿಗಳ ಹಿಂಡು ಬಿರುಗಾಳಿಯಂತೆ ನೆಲಕ್ಕೆ ಅಪ್ಪಳಿಸಿದೆ. ಇವುಗಳಲ್ಲಿ ಬಹುತೇಕ ಹಕ್ಕಿಗಳು ತಕ್ಷಣ ಮೇಲೆ ಹಾರಿವೆ.

ಪರಿಸರ ಶಾಸ್ತ್ರಜ್ಞರು ಹೇಳುವುದು ಏನು?

ಪಕ್ಷಿಗಳು ಧರೆಗುರುಳಿದ ಭಯಾನಕ ಘಟನೆ ಕುರಿತಂತೆ ಹಲವು ಪಕ್ಷಿ ಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮೆಕ್ಸಿಕೋದ ಪರಿಸರಶಾಸ್ತ್ರಜ್ಞ ಡಾ. ರಿಚರ್ಡ್​ ಮಾತನಾಡಿ, ಗಿಡುಗದಂತಹ ದೈತ್ಯ ಪಕ್ಷಿ ಈ ಹಕ್ಕಿಗಳ ಹಿಂಡನ್ನು ಅಟ್ಟಿಸಿಕೊಂಡು ಬಂದ ಕಾರಣ ಈ ರೀತಿ ಆಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Brazilನಲ್ಲಿ ಭಾರೀ ಮಳೆ, ದಿಢೀರ್ ಪ್ರವಾಹ! ಸತ್ತವರು 78 ಮಂದಿ, ಸಿಗುತ್ತಿಲ್ಲ ಕಾಣೆಯಾದವರ ಲೆಕ್ಕ

ಘಟನೆ ಬಗ್ಗೆ ಜನರಲ್ಲಿ ಆತಂಕ

ಹೀಟರ್‌ನಿಂದ ಬಂದ ಅನಿಲ ಅಥವಾ ವಿದ್ಯುತ್‌ ಲೈನ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಉಂಟಾಗಿರಬಹುದು. 5ಜಿ ತಂತ್ರಜ್ಞಾನದ ತರಂಗಾಂತರಗಳು ಈ ನಿಗೂಢ ಸಾವುಗಳಿಗೆ ಕಾರಣ ಇರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇದು ಮುಂದಿನ ಮಹಾವಿಪತ್ತಿನ ಮುನ್ಸೂಚನೆ ಅಂತಲೂ ಜಗತ್ತಿನಾದ್ಯಂತ ಜನ ಮಾತನಾಡುತ್ತಿದ್ದಾರೆ.

ವಿಡಿಯೋ ನೋಡಿ: 




ಮೆಕ್ಸಿಕೋದ ಈ ಘಟನೆ ಫೆಬ್ರವರಿ 7ರಂದು ನಡೆದಿದೆ. ಪಾದಚಾರಿ ಮಾರ್ಗದಲ್ಲಿ ನೂರಾರು ಹಕ್ಕಿಗಳು ಸತ್ತು ಬಿದ್ದಿರುವುದನ್ನು ಕಂಡು ಆಘಾತಕ್ಕೆ ಒಳಗಾದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಸ್ಥಳೀಯ ಸುದ್ದಿಸಂಸ್ಥೆ ವರದಿ ಮಾಡಿದೆ.
Published by:Annappa Achari
First published: