ಸಾವಿರಾರು ಚೀನೀಯರಲ್ಲಿ ಪುರುಷತ್ವ ನಾಶಮಾಡಬಲ್ಲ ಬ್ಯಾಕ್ಟೀರಿಯಾ ಸೋಂಕು ಪತ್ತೆ

ಪಶುಗಳಿಗೆ ಚುಚ್ಚುಮದ್ದು ತಯಾರಿಸುವ ಚೀನೀ ಔಷಧ ಕಾರ್ಖಾನೆಯೊಂದರಿಂದ ಬ್ರುಸೆಲಾ ಬ್ಯಾಕ್ಟೀರಿಯಾ ಸಾವಿರಾರು ಜನರಿಗೆ ಹರಿಡಿದೆ. ಇದು ಪುರುಷರನ್ನು ನಿರ್ವೀರ್ಯಗೊಳಿಸುವಷ್ಟು ಅಪಾಯಕಾರಿಯಾಗಿದೆ ಎನ್ನಲಾಗಿದೆ.

news18
Updated:September 18, 2020, 7:29 PM IST
ಸಾವಿರಾರು ಚೀನೀಯರಲ್ಲಿ ಪುರುಷತ್ವ ನಾಶಮಾಡಬಲ್ಲ ಬ್ಯಾಕ್ಟೀರಿಯಾ ಸೋಂಕು ಪತ್ತೆ
ಬ್ಯಾಕ್ಟೀರಿಯಾ
  • News18
  • Last Updated: September 18, 2020, 7:29 PM IST
  • Share this:
ಬೀಜಿಂಗ್(ಸೆ. 18): ಕೊರೋನಾ ವೈರಸ್ ಸೋಂಕು ಮೊದಲು ಬೆಳಕಿಗೆ ಬಂದ ಚೀನಾದಲ್ಲಿ ಈಗ ಬ್ಯಾಕ್ಟೀರಿಯಾ ಸೋಂಕು ಹರಡುತ್ತಿದೆ. ಬ್ರುಸೆಲಾ ಎಂದು ಕರೆಯಲಾಗುವ ಬ್ಯಾಕ್ಟೀರಿಯಾದ ಸೋಂಕು ಹರಡಿರುವುದನ್ನು ಚೀನಾದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಚೀನಾ ವಾಯವ್ಯ ಭಾಗದ ಗಾನ್ಸು ಪ್ರಾಂತ್ಯದಲ್ಲಿ 3,245 ಮಂದಿಗೆ ಬ್ರುಸೆಲಾ ಸೋಂಕು ತಾಕಿದೆ ಎಂದು ಗಾನ್ಸು ಪ್ರಾಂತ್ಯದ ರಾಜಧಾನಿ ಲಾಂಝೌ ನಗರದ ಆರೋಗ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ. ಆದರೆ, ಚುಚ್ಚುಮದ್ದು ತಯಾರಿಸುವ ಫಾರ್ಮಾ ಕಂಪನಿಯ ಲ್ಯಾಬೊರೇಟರಿ ಮೂಲಕ ಸೋರಿಕೆಯಾಗಿರುವ ಬ್ಯಾಕ್ಟೀರಿಯಾದಿಂದ ಈ ಸೋಂಕು ಹರಡಿರುವುದು ತಿಳಿದುಬಂದಿದೆ.

ಬ್ರುಸೆಲಾ ಕಾಯಿಲೆಯನ್ನು ಮಾಲ್ಟಾ ಜ್ವರ ಅಥವಾ ಮೆಡಿಟೇರಿಯನ್ ಫೀವರ್ ಎಂದೂ ಕರೆಯಲಾಗುತ್ತದೆ. ತಲೆನೋವು, ಸ್ನಾಯುನೋವು, ಜ್ವರ, ಸುಸ್ತು ಇದರ ಪ್ರಮುಖ ರೋಗಲಕ್ಷಣಗಳು. ಕೆಲ ಸೋಂಕಿತರಿಗೆ ಆರ್ಥ್ರೈಟಿಸ್ ಇತ್ಯಾದಿ ಸಮಸ್ಯೆಗಳು ಕೊನೆಯವರೆಗೂ ಬಾಧಿಸಬಹುದು. ಕೆಲ ಪುರುಷರನ್ನು ನಿರ್ವೀರ್ಯರನ್ನಾಗಿಸಲೂ ಬಹುದು ಎನ್ನುತ್ತಾರೆ ಅಮೆರಿಕದ ವೈದ್ಯಕೀಯ ತಜ್ಞರು.

ಇದನ್ನೂ ಓದಿ: Agri Reforms - ಕೇಂದ್ರ ಸರ್ಕಾರದ ಕೃಷಿ ಸುಧಾರಣೆಯ ಮಸೂದೆಗಳು: ರೈತರ ಆತಂಕಕ್ಕೆ ಏನು ಕಾರಣ?

ಬ್ರುಸೆಲಾ ಬ್ಯಾಕ್ಟೀರಿಯಾ ಇರುವ ಪಶುಗಳ ಸಂಪರ್ಕದಿಂದ ಮನುಷ್ಯರಿಗೆ ಈ ರೋಗ ಹರಡುವುದು ಸಾಮಾನ್ಯ. ಆದರೆ, ಚೀನಾದಲ್ಲಿ ಇದು ಬ್ಯಾಕ್ಟೀರಿಯಾ ಸೋಂಕಿರುವ ಆಹಾರ ಸೇವಿಸುವ ಮೂಲಕ ರೋಗ ಹರಡಿದೆ. ಜೈವಿಕ ಔಷಧ ಕಾರ್ಖಾನೆಯೊಂದರಲ್ಲಿ ಪ್ರಾಣಿಗಳಿಗೆ ಬ್ರುಸೆಲಾ ಲಸಿಕೆ ತಯಾರಿಸಲಾಗಿತ್ತು. ಆದರೆ, ಅಂತಿಮವಾಗಿ ಲ್ಯಾಬನ್ನು ಅವಧಿಮೀರಿದ ಸೋಂಕುನಿವಾರಕ ಹಾಗೂ ಸ್ಯಾನಿಟೈಸ್ ಬಳಸಿ ಶುಚಿಗೊಳಿಸಲಾಯಿತು. ಆದರೆ, ತ್ಯಾಜ್ಯ ಅನಿಲದಲ್ಲಿದ್ದ ಬ್ಯಾಕ್ಟೀರಿಯಾ ನಾಶವಾಗದೇ ಹಾಗೇ ಉಳಿದಿತ್ತೆನ್ನಲಾಗಿದೆ. ಇದು ಲಾಂಝೌ ನಗರದಲ್ಲಿ ಜನರಿಗೆ ಸೋಂಕು ಹರಡಲು ಕಾರಣವಾಗಿದೆ. ಬೆರಳೆಣಿಕೆಯಷ್ಟು ಜನರಿಗೆ ಸೋಂಕು ಹರಡಿರಬಹುದು ಎಂಬ ಅಂದಾಜು ಇತ್ತಾದರೂ 21 ಸಾವಿರ ಮಂದಿಯನ್ನು ಪರೀಕ್ಷೆಗೊಳಪಡಿಸಿದಾಗ 3 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
Published by: Vijayasarthy SN
First published: September 18, 2020, 1:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading