ಫೇಕ್​ ಫೋಟೋಗಳು ಹರಿದಾಡಿದಾಗ ಆತ್ಮಹತ್ಯೆಗೆ ಮುಂದಾಗಿದ್ದರಂತೆ ಜಯಪ್ರದಾ!

ಅಮರ್​ ಸಿಂಗ್​ಗೆ  ಸಹೋದರತ್ವ ಸಾರುವ ರಾಖಿ ಕಟ್ಟಿದ್ದ ಹೊರತಾಗಿಯೂ ಜನರು ಅವರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರಂತೆ. ಈ ಬಗ್ಗೆ ಅನೇಕರು ಬೇರೆ ಬೇರೆ ರೀತಿ ಮಾತನಾಡಿಕೊಳ್ಳುತ್ತಿದ್ದರಂತೆ.

Rajesh Duggumane | news18
Updated:February 2, 2019, 3:48 PM IST
ಫೇಕ್​ ಫೋಟೋಗಳು ಹರಿದಾಡಿದಾಗ ಆತ್ಮಹತ್ಯೆಗೆ ಮುಂದಾಗಿದ್ದರಂತೆ ಜಯಪ್ರದಾ!
ಜಯ ಪ್ರದಾ
Rajesh Duggumane | news18
Updated: February 2, 2019, 3:48 PM IST
ಮುಂಬೈ (ಫೆ.2): ಅನೇಕ ನಟ-ನಟಿಯರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿಕೊಂಡಿದ್ದಾರೆ. ಖಿನ್ನತೆಗೆ ಒಳಗಾದ ಬಗ್ಗೆ ನಟಿ ದೀಪಿಕಾ ಪಡುಕೋಣೆ ಒಪ್ಪಿಕೊಂಡಿದ್ದರು. ಅದೇ ರೀತಿ, ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರು ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ!

"ಕೆಲ ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನನ್ನ ಫೇಕ್​ ಫೋಟೋಗಳು ಹರಿದಾಡಲು ಆರಂಭಿಸಿದ್ದವು. ಈ ವೇಳೆ ನಾನು ತುಂಬಾ ಅಪ್ಸೆಟ್​ ಆಗಿದ್ದೆ, ಅಳುತ್ತಿದ್ದೆ.  ನನ್ನ ಗಾಡ್​ ಫಾದರ್​ ಹಾಗೂ ರಾಜಕೀಯ ನಾಯಕ ಅಮರ್​ ಸಿಂಗ್​ ಆಸ್ಪತ್ರೆಯಲ್ಲಿದ್ದರು. ಯಾರೊಬ್ಬರೂ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಈ ವೇಳೆ ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದೆ," ಎಂದು ಜಯಪ್ರದಾ ಹೇಳಿಕೊಂಡಿದ್ದಾರೆ.

ಅಮರ್​ ಸಿಂಗ್​ಗೆ  ರಾಖಿ ಕಟ್ಟಿದ್ದ ಹೊರತಾಗಿಯೂ ಜನರು ಅವರ ಬಗ್ಗೆ ನಾನಾ ರೀತಿಯಲ್ಲಿ ಮಾತನಾಡುತ್ತಿದ್ದರಂತೆ. "ಅಮರ್​ ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ ಅವರು ನನ್ನ ಬೆಂಬಲಕ್ಕೆ ನಿಂತರು. ನನ್ನ ವಿಷಯದಲ್ಲಿ ಪ್ರತಿ ವಿಚಾರಕ್ಕೂ ಬೆಂಬಲ ನೀಡುತ್ತಿದ್ದ ಅವರನ್ನು ಗಾಡ್​ ಫಾದರ್​ ಎಂದು ತಿಳಿಯಬೇಕೇ ಅಥವಾ ಬೇರೇನಾದರೂ ಅಂದುಕೊಳ್ಳಬೇಕೇ? ನಾನು ಅವರಿಗೆ ರಾಖಿ ಕಟ್ಟಿದ ಹೊರತಾಗಿಯೂ ಜನರು ನಮ್ಮ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಬರ್ಟ್​ ವಾದ್ರಾಗೆ ಮಧ್ಯಂತರ ಜಾಮೀನು ಮಂಜೂರು; ತನಿಖೆಗೆ ಸಹಕರಿಸುವಂತೆ ಸೂಚನೆ

2010ರಲ್ಲಿ ಜಯಾರನ್ನು ಸಮಾಜವಾದಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಈ ವೇಳೆ ಅವರಿಗೆ ಸಾಕಷ್ಟು ಬೆದರಿಕೆಗಳು ಬಂದವಂತೆ. "ಆಜಂ ಖಾನ್​ ನನ್ನ ಮೇಲೆ ಆ್ಯಸಿಡ್​ ದಾಳಿಗೆ ಮುಂದಾಗಿದ್ದರು. ನಾನು ಪ್ರತಿ ಕ್ಷಣವನ್ನೂ ಭಯದಿಂದಲೇ ಬದುಕುತ್ತಿದ್ದೆ. ನಾನು ಜೀವಂತವಾಗಿ ಮನೆಗೆ ಬರದಿದ್ದರೂ ಆಶ್ಚರ್ಯಪಡಬೇಡ ಎಂದು ಅನೇಕ ಬಾರಿ ಅಮ್ಮನಿಗೆ ಹೇಳಿದ್ದಿದೆ," ಎಂದು ಹಳೆಯ ದಿನಗಳನ್ನು ಅವರು ನೆನಪಿಸಿಕೊಂಡರು.

First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626