ಎನ್​ಕೌಂಟರ್ ಮಾಡುವ ಯೋಚನೆಯೇ ಸುಳಿದಿರಲಿಲ್ಲ: 2012ರ ನಿರ್ಭಯಾ ಪ್ರಕರಣ ನಿರ್ವಹಿಸಿದ ಪೊಲೀಸ್ ಅಧಿಕಾರಿ ನೀರಜ್ ಕುಮಾರ್ ಹೇಳಿಕೆ

ಹಸಿದ ಸಿಂಹಗಳಿಗೆ ಈ ರಕ್ಕಸರನ್ನು ಎಸೆಯಿರಿ ಎಂಬ ಸಂದೇಶಗಳು ನಮಗೆ ಬರುತ್ತಿದ್ದವು. ಆದರೆ ನಾವು ಅಂತಿಮವಾಗಿ ಕಾನೂನು ಪರಿಪಾಲನೆ ಮಾಡಿದೆವು ಎಂದು ನೀರಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ನೀರಜ್ ಕುಮಾರ್

ನೀರಜ್ ಕುಮಾರ್

 • News18
 • Last Updated :
 • Share this:
  ನವದೆಹಲಿ(ಡಿ. 06): ಹೈದರಾಬಾದ್​ನಲ್ಲಿ ನಾಲ್ವರು ಅತ್ಯಾಚಾರ ಆರೋಪಿಗಳನ್ನ ಪೊಲೀಸರು ಎನ್​ಕೌಂಟರ್ ಮಾಡಿ ಹೊಡೆದುರುಳಿಸಿದ ಘಟನೆ ದೇಶಾದ್ಯಂತ ಸದ್ದು ಮಾಡುತ್ತಿದೆ. 2012ರಲ್ಲಿ ಇದಕ್ಕಿಂತಲೂ ಕ್ರೂರವಾಗಿ ಯುವತಿ ಮೇಲೆ ಬರ್ಬರವಾಗಿ ಅತ್ಯಾಚಾರ ಎಸಗಿ ಸಾಯಿಸಿದ ಪ್ರಕರಣವನ್ನು ಬಹಳಷ್ಟು ಜನರು ಆಕ್ರೋಶದಿಂದ ಸ್ಮರಿಸುತ್ತಿದ್ದಾರೆ. ಆ ನಿರ್ಭಯಾ ಪ್ರಕರಣದ ಅತ್ಯಾಚಾರಿಗಳನ್ನು ಇದೇ ರೀತಿಯಾಗಿ ಎನ್​ಕೌಂಟರ್ ಮಾಡಿ ಸಾಯಿಸಬೇಕಿತ್ತು ಎಂಬ ಕೂಗು ಬರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ 2012ರ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ನಿರ್ವಹಿಸಿದ್ದ ಪೊಲೀಸ್ ಅಧಿಕಾರಿ ನೀರಜ್ ಕುಮಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

  ಅತ್ಯಾಚಾರ ಆರೋಪಿಗಳನ್ನು ಕೊಲ್ಲಬೇಕೆಂಬ ಆಲೋಚನೆಯೇ ತಮ್ಮ ಮನಸಿಗೆ ಸುಳಿಯಲಿಲ್ಲ ಎಂದು ಮಾಜಿ ದಿಲ್ಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ತಿಳಿಸಿದ್ಧಾರೆ.

  “ಆ ಸಮಯದಲ್ಲಿ ನಮ್ಮ ಮೇಲೆ ಬಹಳಷ್ಟು ಒತ್ತಡವಿತ್ತು. ಆದರೆ, ಆರೋಪಿಗಳನ್ನು ಕೊಲ್ಲಬೇಕೆಂಬ ಆಲೋಚನೆ ನಮಗೆ ಬರಲೇ ಇಲ್ಲ. ಹಸಿದ ಸಿಂಹಗಳಿಗೆ ಈ ರಕ್ಕಸರನ್ನು ಎಸೆಯಿರಿ ಎಂಬ ಸಂದೇಶಗಳು ನಮಗೆ ಬರುತ್ತಿದ್ದವು. ಆದರೆ ನಾವು ಕಾನೂನು ಪರಿಪಾಲನೆ ಮಾಡಿದೆವು” ಎಂದು ನೀರಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

  ಇದನ್ನೂ ಓದಿ: ನಿರ್ಭಯ ಕೇಸ್​​: ಕ್ಷಮೆ ಕೋರಿ ಅತ್ಯಾಚಾರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸುವಂತೆ ರಾಷ್ಟ್ರಪತಿಗೆ ಕೇಂದ್ರ ಗೃಹ ಇಲಾಖೆ ಶಿಫಾರಸು

  2012ರಲ್ಲಿ ನಡೆದ ಆ ಹೇಯ ಕೃತ್ಯದಲ್ಲಿ ಆರು ಜನರು ಅರೆವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆ ಯುವತಿ ಕೆಲ ದಿನಗಳ ಬಳಿಕ ಸಾವನ್ನಪ್ಪಿದ್ದರು. ಆ ಪ್ರಕರಣದಲ್ಲಿ ಎಲ್ಲರೂ ತಪ್ಪಿತಸ್ಥರು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಒಬ್ಬ ಆರೋಪಿ ಬಾಲಾಪರಾಧಿಯಾಗಿದ್ದು ಆತನಿಗೆ 3 ವರ್ಷ ಸಜೆಯಷ್ಟೇ ಸಿಕ್ಕಿದೆ. ಮತ್ತೊಬ್ಬ ಅಪರಾಧಿಯು ಜೈಲಿನಲ್ಲೇ ಅತ್ಮಹತ್ಯೆ ಮಾಡಿಕೊಂಡಿದ್ದ. ಉಳಿದ ನಾಲ್ವರು ಅಪರಾಧಿಗಳಿಗೆ 2017ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಆದರೆ ಈಗಲೂ ಅವರಿಗೆ ಗಲ್ಲು ಶಿಕ್ಷೆ ಜಾರಿಯಾಗಿಲ್ಲ.

  ತೆಲಂಗಾಣ ಎನ್​ಕೌಂಟರ್ ಪ್ರಕರಣವನ್ನು ಉಲ್ಲೇಖಿಸುತ್ತಾ 2012ರಲ್ಲಿ ಬಲಿಯಾದ ನಿರ್ಭಯಾಳ ಕುಟುಂಬದವರಿಗೆ ಇದೇ ಪ್ರಮುಖ ಅಸಮಾಧಾನಕ್ಕೆ ಕಾರಣವಾಗಿದೆ. ತಮ್ಮ ಮಗಳನ್ನು ಬಲಿತೆಗೆದುಕೊಂಡ ಪಾತಕಿಗಳು ಈಗಲೂ ಜೀವಂತವಾಗಿರುವುದು ನೋವು ತರುತ್ತಿದೆ. ಅವರನ್ನು ಆದಷ್ಟೂ ಬೇಗ ನೇಣಿಗೆ ಏರಿಸಿ ಎಂದು ಒತ್ತಾಯಿಸುತ್ತಿದ್ಧಾರೆ.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
  First published: