ಬಿಹಾರ: ಇತ್ತೀಚೆಗಷ್ಟೇ ಬಿಹಾರದ (Bihar) ಸರಣ್ ಜಿಲ್ಲೆಯ ಛಪ್ರಾ ಪ್ರದೇಶದಲ್ಲಿ ಅಕ್ರಮ ಮದ್ಯ ಸೇವಿಸಿ (Illegal Liquor) 38 ಮಂದಿ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ವಿಧಾನಸಭೆಯಲ್ಲಿ (Vidhana Sabha) ಮುಖ್ಯಮಂತ್ರಿ ನಿತೀಶ್ ಕುಮಾರ್ (CM Nitish Kumar) ವಿರುದ್ಧ ಪ್ರತಿ ಪಕ್ಷ ನಾಯಕರು ಪ್ರತಿಭಟನೆ ನಡೆಸಿದ್ದರು. ಇದಾದ ಒಂದು ದಿನದ ಬಳಿಕ ಇದೀಗ ನಿತೀಶ್ ಕುಮಾರ್ ಅವರು, ಮದ್ಯ ಸೇವಿಸುವವರು ಸಾಯುತ್ತಾರೆ ಎಂದು ಹೇಳಿದ್ದಾರೆ.
ಜನರು ಜಾಗರೂಕರಾಗಿರಬೇಕು, ಮದ್ಯ ಸೇವಿಸುವವರು ಸಾಯುತ್ತಾರೆ
ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ನಿತೀಶ್ ಕುಮಾರ್ ಅವರು, ಜನರು ಜಾಗರೂಕರಾಗಿರಬೇಕು. ಮದ್ಯ ಸೇವಿಸುವವರು ಸಾಯುತ್ತಾರೆ (ಲೋಗೋ ಕೋ ಸ್ಯಾಚೇತ್ ರೆಹನಾ ಚಾಹಿಯೇ, ಜೋ ಶರಬ್ ಪಿಯೇಗಾ ವೋ ಮರೇಗಾ) ಎಂದು ಹೇಳಿದ್ದಾರೆ.
ಏಪ್ರಿಲ್ 2016 ರಿಂದ ಬಿಹಾರದಲ್ಲಿ ಮದ್ಯ ಬ್ಯಾನ್
ಛಪ್ರಾ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಅಕ್ರಮ ಮದ್ಯ ಸೇವಿಸಿ ಸುಮಾರು 38 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಆರಂಭವಾಗಿದೆ. ಏಪ್ರಿಲ್ 2016 ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.
ಮದ್ಯದಿಂದ ಸಾವನ್ನಪ್ಪಿದ ಹಿಂದಿನ ನಿದರ್ಶನಗಳನ್ನು ನೆನಪಿಸಿಕೊಂಡು ಮಾತನಾಡಿದ ಜನತಾ ದಳ ಯುನೈಟೆಡ್ ಮುಖ್ಯಸ್ಥರು, ಕಳೆದ ಬಾರಿ, ಅಕ್ರಮ ಮದ್ಯ ಸೇವಿಸಿ ಜನ ಸಾವಪ್ಪಿದಾಗ, ಯಾರೋ ಒಬ್ಬರು ಅವರಿಗೆ ಪರಿಹಾರ ನೀಡಬೇಕು ಎಂದು ಹೇಳಿದ್ದ ಉದಾಹರಣೆಗಳು ನಮ್ಮ ಮುಂದೆ ಇದೆ. ಆದರೆ ಈಗ ಯಾರಾದರೂ ಮದ್ಯ ಸೇವಿಸಿದರೆ ಅವರು ಸಾಯುತ್ತಾರೆ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: Drinking Water: ಈ ಆಹಾರ ಸೇವಿಸಿದ ಬಳಿಕ ಅಪ್ಪಿತಪ್ಪಿಯೂ ನೀರು ಕುಡಿಯಬೇಡಿ!
ಬಿಜೆಪಿ ಸದಸ್ಯರನ್ನು 'ಕುಡುಕರು' ಎಂದ ನಿತೀಶ್ ಕುಮಾರ್
ಬಿಹಾರದಲ್ಲಿನ ಕಳ್ಳಬಟ್ಟಿ ದುರಂತದಲ್ಲಿನ ಸಾವಿನ ಪ್ರಕರಣಗಳ ಕುರಿತಂತೆ ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರನ್ನು 'ಕುಡುಕರು' ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆದಿದ್ದಾರೆ. 2016ರಿಂದಲೂ ಮದ್ಯ ನಿಷೇಧ ಮಾಡಿರುವ ರಾಜ್ಯದಲ್ಲಿ ಪದೇ ಪದೇ ಕಳ್ಳಬಟ್ಟಿ ದುರಂತ ಘಟನೆಗಳು ನಡೆಯುತ್ತಿದ್ದು, ಇದರ ಬಗ್ಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿತ್ತು.
ಮದ್ಯ ನಿಷೇಧಿಸಿದ್ದರೂ ರಾಜ್ಯದಲ್ಲಿ ಅಕ್ರಮ ಮದ್ಯ ದಂಧೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಶಾಸಕರು ಸದನದಲ್ಲಿ ಘೋಷಣೆಗಳನ್ನು ಕೂಗಿದರು. ಇದರಿಂದ ಕೆಲ ಕಾಲ ಸದನದಲ್ಲಿ ಗದ್ದಲ ಎಬ್ಬಿತ್ತು.
ನೀವು ಕುಡಿದು ಬಂದಿದ್ದೀರಾ ಬಿಜೆಪಿಗರ ಮೇಲೆ ನಿತೀನ್ ಆಕ್ರೋಶ
ಏನಾಗಿದೆ? ಸುಮ್ಮನಿರಿ. ಅವರನ್ನು ಸದನದಿಂದ ಹೊರಗೆ ಹಾಕಿ" ಎಂದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಗರ ಮೇಲೆ ನಿತೀಶ್ ಕುಮಾರ್ ಹರಿಹಾಯ್ದಿದರು. ನೀವು ಕುಡಿದು ಬಂದಿದ್ದೀರಾ ಎಂದು ಆಕ್ರೋಶ ಹೊರ ಹಾಕಿದರು.
ಇದನ್ನೂ ಓದಿ: Bihar Politics: ಬಿಜೆಪಿ ಸಂಪರ್ಕದಲ್ಲಿ ಸಿಎಂ ನಿತೀಶ್ ಕುಮಾರ್: ಬಾಂಬ್ ಸಿಡಿಸಿದ ಪ್ರಶಾಂತ್ ಕಿಶೋರ್
ಅಲ್ಲದೇ ವಿಧಾನಸಭೆಯ ಹೊರಗೆ ಪೋಸ್ಟರ್ ಹಿಡಿದು ಬಿಜೆಪಿ ಶಾಸಕರು, ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ನಿತೀಶ್ ಅವರಿಗೆ ಒತ್ತಾಯಿಸಿದರು. ಇದರಿಂದ ಕೋಪಗೊಂಡ ನಿತೀಶ್ ಕುಮಾರ್ ಅವರು ನೀವೆಲ್ಲಾ ಕುಡಿದು ಬಂದಿದ್ದೀರಾ. ನೀವೆಲ್ಲಾ ಕುಡುಕರು ಎಂದು ಹರಿಹಾಯ್ದರು. ಆದರೆ ಪೊಲೀಸರು ಇದು ಅಕ್ರಮ ಮದ್ಯದಿಂದ ಸಂಭಿವಿಸಿದ ಸಾವು ಎಂದು ಒಪ್ಪಿಕೊಂಡಿಲ್ಲ. ಈ ಸಾವುಗಳು 'ಅನುಮಾನಾಸ್ಪದ'ವಾಗಿವೆ ಮತ್ತು ಕಾರಣ ಸ್ಪಷ್ಟವಾಗಬೇಕಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ