ದೇಶ ಮೊದಲು, ಪಕ್ಷ ನಂತರ, ಬಿಜೆಪಿ ವಿರೋಧಿಗಳು ದೇಶದ್ರೋಹಿಗಳಲ್ಲ: ಎಲ್​​​.ಕೆ ಅಡ್ವಾಣಿ ಕಿವಿಮಾತು!

ಕೊನೆಗೆ ‘ದೇಶ ಮೊದಲು, ಪಕ್ಷ ನಂತರ, ನಾನೆಂಬುದು ಕಡೆಯದಾಗಿರಬೇಕು’ ಎಂಬ ಪಾಠವನ್ನು ಜೀವನ ಕಲಿಸಿದೆ. ಇದನ್ನೇ ನಾನು ಜೀವನದಲ್ಲಿ ಅನುಸರಿಸಿಕೊಂಡಿದ್ದೇನೆ, ನೀವು ಕೂಡ ಇದೇ ತತ್ವವನ್ನು ಅಳವಡಿಸಿಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ- ಎಲ್​​​.ಕೆ ಅಡ್ವಾನಿ

Ganesh Nachikethu | news18
Updated:April 5, 2019, 9:25 AM IST
ದೇಶ ಮೊದಲು, ಪಕ್ಷ ನಂತರ, ಬಿಜೆಪಿ ವಿರೋಧಿಗಳು ದೇಶದ್ರೋಹಿಗಳಲ್ಲ: ಎಲ್​​​.ಕೆ ಅಡ್ವಾಣಿ ಕಿವಿಮಾತು!
ಎಲ್​​​.ಕೆ ಅಡ್ವಾನಿ
  • News18
  • Last Updated: April 5, 2019, 9:25 AM IST
  • Share this:
ಬೆಂಗಳೂರು(ಏ.04): ಲೋಕಸಭೆ ಚುನಾವಣೆ ಹೊತ್ತಲ್ಲಿ ಬಿಜೆಪಿ ಹಿರಿಯ ನಾಯಕ ಎಲ್​​​.ಕೆ ಅಡ್ವಾಣಿ ತಮ್ಮ ಪಕ್ಷಕ್ಕೆ ಕಿವಿ ಮಾತು ಹೇಳಿದ್ದಾರೆ. ದೇಶ ಮೊದಲು, ಪಕ್ಷ ನಂತರ. ಅಲ್ಲದೇ ನಮ್ಮ ಸಿದ್ದಾಂತ ಒಪ್ಪದವರನ್ನು ಯಾವುದೇ ಕಾರಣಕ್ಕೆ ದೇಶದ್ರೋಹಿ ಎಂದು ಕರೆಯಬೇಡಿ ಎಂದು ಹೇಳಿದ್ದಾರೆ. ಈ ಮೂಲಕ ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯಕ್ಕೆ ಗೌರವ ನೀಡಿ ಎನ್ನುವ ಹಿತನುಡಿ ಬಿಜೆಪಿಗೆ ಹೇಳಿದ್ದಾರೆ.

ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿಯವರ ಭದ್ರಕೋಟೆ ಎಂದೇ ಕರೆಯಲ್ಪಡುವ ಗುಜರಾತಿನ ಗಾಂಧಿನಗರ ಲೋಕಸಭೆ ಕ್ಷೇತ್ರದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕಣಕ್ಕಿಳಿದಿದ್ದಾರೆ. ಎಲ್​.ಕೆ ಅಡ್ವಾಣಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ ತರಹದ ಧೀಮಂತ ನಾಯಕರೇ ಸ್ಪರ್ಧಿಸಿ ಗೆದ್ದು ಸಂಸದರಾದ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ದೊರೆತಿದ್ದಕ್ಕೆ ಅಮಿತ್​ ಶಾ ಸಂತಸ ವ್ಯಕ್ತಪಡಿಸಿದ್ದರು.

ಈ ಬೆನ್ನಲ್ಲೇ ಬಿಜೆಪಿ ಪಕ್ಷದ ಹಿರಿಯ ಮುತ್ಸದ್ದಿ ಎಲ್​​​.ಕೆ ಅಡ್ವಾಣಿ (91) ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಮ್ಮ ಬ್ಲಾಗ್​​ನಲ್ಲಿ ಬರೆದುಕೊಂಡಿರುವ ಅವರು, ಬಿಜೆಪಿ ಎಂದೂ ಸೈದ್ದಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿದ್ದವರನ್ನು ತನ್ನ ಶತ್ರು ಎಂದು ಭಾವಿಸಿರಲಿಲ್ಲ. ನಮ್ಮ ಭಾರತೀಯ ರಾಷ್ಟ್ರೀಯತಾವಾದದ ಪ್ರಕಾರ ನಮ್ಮ ಸಿದ್ದಾಂತ ಒಪ್ಪದ ಯಾರನ್ನು ದೇಶದ್ರೋಹಿ ಎಂದು ಕರೆಯುವ ಹಾಗಿಲ್ಲ. ಬಿಜೆಪಿ ವ್ಯಕ್ತಿ ಸ್ವಾತಂತ್ರದಲ್ಲಿ ನಂಬಿಕೆಯಿರಿಸಿತ್ತು. ಈ ತತ್ವಕ್ಕೆ ಬಿಜೆಪಿ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇಶಪ್ರೇಮಿಗಳು V/S ದೇಶದ್ರೋಹಿಗಳ ನಡುವಿನ ಧರ್ಮಯುದ್ಧ ಈ ಲೋಕಸಭಾ ಚುನಾವಣೆ: ಪ್ರಹ್ಲಾದ್​​ ಜೋಶಿ!

ಹಾಗೆಯೇ ತಮ್ಮನ್ನು 1991ರಿಂದ ಇಲ್ಲಿಯವರೆಗೂ ಆರು ಬಾರಿ ಸಂಸದರನ್ನಾಗಿ ಲೋಕಸಭೆಗೆ ಕಳಿಸಿದ ಗಾಂಧಿನಗರ ಜನತೆಗೆ ಎಲ್​​​.ಕೆ ಅಡ್ವಾಣಿಯವರು ಧನ್ಯವಾದ ತಿಳಿಸಿದ್ದಾರೆ. ನನ್ನನ್ನು ಆರು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದ ಗಾಂಧಿನಗರ ಜನತೆಗೆ ಧನ್ಯವಾದ. ನಿಮ್ಮ ಪ್ರೀತಿಗೆ ನಾನು ಎಂದೆಂದಿಗೂ ಆಭಾರಿಯಾಗಿದ್ದೇನೆ ಎಂದು ಬರೆದುಕೊಂಡಿದ್ಧಾರೆ.

1984ರ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 2 ಲೋಕಸಭಾ ಕ್ಷೇತ್ರ ಗೆದ್ದಿತ್ತು. ಈ ಸಂದರ್ಭದಲ್ಲಿ ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಳಿಕ ಮೊದಲ ಬಾರಿಗೆ 1991ರಲ್ಲಿ ಗೆದ್ದ ಎಲ್​​​.ಕೆ ಅಡ್ವಾಣಿ ನಂತರದಲ್ಲಿ ಸತತವಾಗಿ ಆರು ಬಾರಿ ಗೆದ್ದರು. ಗಾಂಧಿನಗರ ಕ್ಷೇತ್ರದಿಂದ ಗೆದ್ದು ಬಂದ ನಂತರದಲ್ಲಿ ಆಯೋಧ್ಯದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಒತ್ತಾಯಿಸಿ ದೇಶಾದ್ಯಂತ ಹಿಂದೂ ರಥ ಯಾತ್ರೆ ನಡೆಸಿದರು.

ಇದನ್ನೂ ಓದಿ: ಸಿಎಂ ಕುಮಾರಸ್ವಾಮಿ ಉಳಿದುಕೊಂಡಿದ್ದ ಹೋಟೆಲ್​​ ಮೇಲೆ ಐಟಿ ದಾಳಿ; ಅಧಿಕಾರಿಗಳಿಂದ ಸಿಸಿಟಿವಿ ತಪಾಸಣೆ!ಕೊನೆಗೆ ‘ದೇಶ ಮೊದಲು, ಪಕ್ಷ ನಂತರ, ನಾನೆಂಬುದು ಕಡೆಯದಾಗಿರಬೇಕು’ ಎಂಬ ಪಾಠವನ್ನು ಜೀವನ ಕಲಿಸಿದೆ. ಇದನ್ನೇ ನಾನು ಜೀವನದಲ್ಲಿ ಅನುಸರಿಸಿಕೊಂಡಿದ್ದೇನೆ, ನೀವು ಕೂಡ ಇದೇ ತತ್ವವನ್ನು ಅಳವಡಿಸಿಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ ಎಂದು ಪುನರುಚ್ಚರಿಸಿದ್ದಾರೆ.
--------------
First published:April 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ