News18 India World Cup 2019

SCO Summit | ಭಯೋತ್ಪಾದನೆ ವಿರುದ್ಧ ಯುದ್ಧ ಸಾರಲು ಜಾಗತಿಕ ಸಮ್ಮೇಳನ ಆಯೋಜನೆಗೆ ಪ್ರಧಾನಿ ಮೋದಿ ಕರೆ

ಎಸ್​ಸಿಒ ಸಮ್ಮೇಳನದಲ್ಲಿ ಭಾಗಿಯಾಗಿಲು ಪ್ರಧಾನಿ ಮೋದಿ ಅವರು ಗುರುವಾರ ಕಜಕಿಸ್ತಾನಕ್ಕೆ ತೆರಳಿದ್ದಾರೆ. ಚೀನಾ ನೇತೃತ್ವದ ಎಂಟು ದೇಶಗಳು ಈ ಸಮ್ಮೇಳನದಲ್ಲಿ ಭಾಗಿಯಾಗಿದ್ದು, ಭಾರತ ಮತ್ತು ಪಾಕಿಸ್ತಾನ ಕೂಡ ಭಾಗಿಯಾಗಿವೆ.

HR Ramesh | news18
Updated:June 14, 2019, 1:22 PM IST
SCO Summit | ಭಯೋತ್ಪಾದನೆ ವಿರುದ್ಧ ಯುದ್ಧ ಸಾರಲು ಜಾಗತಿಕ ಸಮ್ಮೇಳನ ಆಯೋಜನೆಗೆ ಪ್ರಧಾನಿ ಮೋದಿ ಕರೆ
ಪ್ರಧಾನಿ ಮೋದಿ
HR Ramesh | news18
Updated: June 14, 2019, 1:22 PM IST
ನವದೆಹಲಿ: ಕಜಕಿಸ್ತಾನದ ರಾಜಧಾನಿ ಬಿಷ್ಕೇಕ್​ನಲ್ಲಿ ನಡೆದ ಶಾಂಘೈ ಕೊಆಪರೇಷನ್​ ಆರ್ಗನೈಷನ್​ (ಎಸ್​ಸಿಒ) ಸಮ್ಮೇಳನದಲ್ಲಿ ಭಾಗಿಯಾಗಿರುವ ಪ್ರಧಾನಿ ಮೋದಿ, ಭಯೋತ್ಪಾದನೆ ವಿರುದ್ಧ ಪಾಕಿಸ್ತಾನಕ್ಕೆ ನೇರ ಸಂದೇಶ ರವಾನಿಸಿದ್ದಾರೆ. ಭಯೋತ್ಪಾದನೆಗೆ ಸಹಕರಿಸುವುದು, ನೆರವು ನೀಡುವುದು ಮತ್ತು ಹಣ ನೀಡುವುದು ಪ್ರತಿಯೊಂದಕ್ಕೂ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಭಯೋತ್ಪಾದನೆ ವಿರುದ್ಧ ಯುದ್ಧ ಸಾರಲು ಜಾಗತಿಕ ಸಮ್ಮೇಳನ ನಡೆಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಎಸ್​ಸಿಒ ಕೂಡ ಭಯೋತ್ಪಾದನೆ ವಿರುದ್ಧ ಹೋರಾಡಲು ಸಹಕರಿಸಬೇಕು ಎಂದು ಕರೆ ನೀಡಿದರು.

ಭಯೋತ್ಪಾದನೆ ಮುಕ್ತ ಸಮಾಜ ನಿರ್ಮಾಣಕ್ಕೆ ಭಾರತ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಮೋದಿ ಹೇಳಿದರು. ಯುದ್ಧ ಎಂದರೆ ಭಯೋತ್ಪಾದಕರ ವಿರುದ್ಧದ ಯುದ್ಧ. ಎಲ್ಲ ದೇಶಗಳು ಇದಕ್ಕೆ ಸಹಕರಿಸಿ, ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮೋದಿ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಉಪಸ್ಥಿತಿ ಇದ್ದ ಸಮ್ಮೇಳನದಲ್ಲಿ ಹೇಳಿದರು.

ಇದನ್ನು ಓದಿ: ಮಾಲ್ಡೀವ್ಸ್​ನಲ್ಲಿ ಪ್ರಧಾನಿ ಮೋದಿಯ ಕ್ರಿಕೆಟ್​ ರಾಜತಾಂತ್ರಿಕ ನಡೆ; ಮೆಚ್ಚುಗೆ ಸೂಚಿಸಿದ ದಂತಕಥೆ ಸಚಿನ್ ತೆಂಡೂಲ್ಕರ್

ಎಸ್​ಸಿಒ ಸದಸ್ಯ ರಾಷ್ಟ್ರಗಳು ಪ್ರಾದೇಶಿಕ ಭಯೋತ್ಪಾದಕ ವಿರೋಧಿ ರಚನೆ (ಆರ್​ಎಟಿಎಸ್)ಗೆ ಸಹಕರಿಸಬೇಕು. ಮತ್ತು ಎಸ್​ಸಿಒ ನಾಯಕರು ಭಯೋತ್ಪಾದನೆ ನಿಗ್ರಹಕ್ಕೆ ಜಾಗತಿಕ ಸಮ್ಮೇಳನ ಆಯೋಜನೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಎಸ್​ಸಿಒ ಸಮ್ಮೇಳನದಲ್ಲಿ ಭಾಗಿಯಾಗಿಲು ಪ್ರಧಾನಿ ಮೋದಿ ಅವರು ಗುರುವಾರ ಕಜಕಿಸ್ತಾನಕ್ಕೆ ತೆರಳಿದ್ದಾರೆ. ಚೀನಾ ನೇತೃತ್ವದ ಎಂಟು ದೇಶಗಳು ಈ ಸಮ್ಮೇಳನದಲ್ಲಿ ಭಾಗಿಯಾಗಿದ್ದು, ಭಾರತ ಮತ್ತು ಪಾಕಿಸ್ತಾನ ಕೂಡ ಭಾಗಿಯಾಗಿವೆ.
Loading...

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...