News18 India World Cup 2019

ಬಂಗಾಳಿ ಕಲಿಯಿರಿ, ಇಲ್ಲವಾದರೆ ಬಂಗಾಳ ತೊರೆಯಿರಿ: ಮಮತಾ ಬ್ಯಾನರ್ಜಿ ತಾಕೀತು

ಪ್ರತಿಭಟನಾನಿರತ ವೈದ್ಯರಿಗೆ ಪ್ರಚೋದನೆ ನೀಡುತ್ತಿರುವುದು ಹೊರಗಿನವರೇ ಎಂದು ಆಪಾದಿಸಿರುವ ಮಮತಾ ಬ್ಯಾನರ್ಜಿ, ಬಂಗಾಳಿ ಭಾಷೆ ಮಾತನಾಡಲು ಬರದವರು ರಾಜ್ಯದಿಂದ ಹೊರಹೋಗಬೇಕೆಂದು ಅಪ್ಪಣೆ ಮಾಡಿದ್ದಾರೆ.

Vijayasarthy SN | news18
Updated:June 14, 2019, 5:47 PM IST
ಬಂಗಾಳಿ ಕಲಿಯಿರಿ, ಇಲ್ಲವಾದರೆ ಬಂಗಾಳ ತೊರೆಯಿರಿ: ಮಮತಾ ಬ್ಯಾನರ್ಜಿ ತಾಕೀತು
ಮಮತಾ ಬ್ಯಾನರ್ಜಿ
Vijayasarthy SN | news18
Updated: June 14, 2019, 5:47 PM IST
ಕೋಲ್ಕತಾ(ಜೂನ್ 14): ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವೈದ್ಯರ ಉಗ್ರ ಪ್ರತಿಭಟನೆ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳಿ ಬಾಂಬ್ ಸಿಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿರುವವರು ಬಂಗಾಳಿ ಭಾಷೆ ಮಾತನಾಡಬೇಕು. ಭಾಷೆ ಕಲಿಯದವರು ಬಂಗಾಳದಲ್ಲಿರಬಾರದು ಎಂದು ಮಮತಾ ಬ್ಯಾನರ್ಜಿ ತಾಕೀತು ಮಾಡಿದ್ದಾರೆ. ವೈದ್ಯರ ಮುಷ್ಕರದ ಹಿಂದೆ ಬಂಗಾಳಿಯೇತರ ಜನರ ಕೈವಾಡ ಇದೆ ಎಂಬುದು ಮುಖ್ಯಮಂತ್ರಿಗಳ ಶಂಕೆಯಾಗಿದೆ. ಕಾಂಚರಪಾರಾ ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ದೀದಿ, ವೈದ್ಯರ ಪ್ರತಿಭಟನೆಯ ಕಿಡಿ ಹಚ್ಚಿದ್ದು ಹೊರಗಿನವರೇ ಎಂದು ಆರೋಪಿಸಿದ್ದಾರೆ.

“ವೈದ್ಯರಿಗೆ ಹೊರಗಿನವರು ಪ್ರಚೋದನೆ ನೀಡುತ್ತಿದ್ದಾರೆ. ನಿನ್ನೆಯ ಪ್ರತಿಭಟನೆಯಲ್ಲಿ ಹೊರಗಿನವರು ಪಾಲ್ಗೊಂಡಿದ್ದರೆಂದು ನಾನು ಹೇಳಿದ್ದುನಿಜ. ಎಸ್​ಎಸ್​ಕೆಎಂ ಆಸ್ಪತ್ರೆಯಲ್ಲಿ ಹೊರಗಿನವರು ಘೋಷಣೆಗಳನ್ನ ಕೂಗುತ್ತಿದ್ದುದನ್ನು ನಾನು ನೋಡಿದ್ದೆ” ಎಂದು ಟಿಎಂಸಿ ಪಕ್ಷದ ಮುಖ್ಯಸ್ಥೆಯೂ ಆದ ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೋಲ್ಕತಾ ವೈದ್ಯರ ಪ್ರತಿಭಟನೆ; ಬೆಂಗಳೂರು, ದೆಹಲಿ, ಹೈದರಾಬಾದ್ ಸೇರಿ ಹಲವೆಡೆ ಬೆಂಬಲ, ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ

“ಕಿಡಿಗೇಡಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಬಂಗಾಳದಲ್ಲಿ ಯಾರಾದರೂ ವಾಸಿಸುತ್ತಿದ್ದರೆ ಅವರು ಬಂಗಾಳಿ ಭಾಷೆಯನ್ನು ಕಲಿಯಬೇಕು” ಎಂದು ಮಮತಾ ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ, ಬಂಗಾಳದಲ್ಲಿ ಬಿಜೆಪಿಯು ಬಂಗಾಳಿ ಹಾಗೂ ಅಲ್ಪಸಂಖ್ಯಾತರನ್ನು ಗುರಿ ಮಾಡಿದೆ ಎಂದು ಟೀಕಿಸಿದ್ದಾರೆ.

ಇನ್ನು, ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬಗ್ಗೆ ಮಾತನಾಡಿದ ಬಂಗಾಳ ಮುಖ್ಯಮಂತ್ರಿಗಳು ಇವಿಎಂ ಮೆಷೀನ್​ನತ್ತ ಬೊಟ್ಟು ತೋರಿಸಿದ್ದಾರೆ.
Loading...

ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಬಿಜೆಪಿ-ಶಿವಸೇನೆ ಮೈತ್ರಿ; ಇವರೇ ಮುಂದಿನ ಸಿಎಂ ಅಭ್ಯರ್ಥಿ?

“ಇವಿಎಂ ಮೆಷೀನ್​ಗಳನ್ನ ಪ್ರೋಗ್ರಾಮಿಂಗ್ ಮಾಡಿ ಅವರು ಕೆಲ ಸೀಟುಗಳನ್ನು ಗೆದ್ದ ಮಾತ್ರಕ್ಕೆ ಬಂಗಾಳಿಗಳು ಹಾಗೂ ಅಲ್ಪಸಂಖ್ಯಾತರನ್ನು ಹೊಡೆಯುವುದು ಬಡಿಯುವುದು ಮಾಡುವುದು ಸರಿಯಲ್ಲ. ನಾವು ಇದನ್ನು ಸಹಿಸುವುದಿಲ್ಲ” ಎಂದು ದೀದಿ ಆರ್ಭಟಿಸಿದ್ದಾರೆ.

ಕೋಲ್ಕತಾದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೆಲ ಸಾರ್ವಜನಿಕರು ಚಿಕಿತ್ಸೆಯ ವಿಚಾರಕ್ಕೆ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ವೈದ್ಯ ಸಮೂಹ ರೊಚ್ಚಿಗೆದ್ದಿದೆ. ತಮಗೆ ಪೊಲೀಸ್ ಭದ್ರತೆ ನೀಡಿ ಎಂಬ ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡು ವೈದ್ಯರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಮುಂಬರುವ ಸೋಮವಾರದಂದು ರಾಷ್ಟ್ರಮಟ್ಟದಲ್ಲಿ ಭಾರೀ ದೊಡ್ಡ ಮುಷ್ಕರ ನಡೆಸಲು ಯೋಜಿಸಿದ್ದಾರೆ.

(ಪಿಟಿಐ ವರದಿ)
First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...