• Home
  • »
  • News
  • »
  • national-international
  • »
  • Longest Nose: ಈ ವ್ಯಕ್ತಿಯದ್ದು ವಿಶ್ವದಲ್ಲೇ ಅತಿ ಉದ್ದದ ಮೂಗಂತೆ! ವೈರಲ್ ಆಗಿದೆ ಈ ಫೋಟೋ..

Longest Nose: ಈ ವ್ಯಕ್ತಿಯದ್ದು ವಿಶ್ವದಲ್ಲೇ ಅತಿ ಉದ್ದದ ಮೂಗಂತೆ! ವೈರಲ್ ಆಗಿದೆ ಈ ಫೋಟೋ..

ಅತಿ ಉದ್ದದ ಮೂಗು

ಅತಿ ಉದ್ದದ ಮೂಗು

ಈ ಸಾಮಾಜಿಕ ಮಾಧ್ಯಮಗಳು ಚಿತ್ರ-ವಿಚಿತ್ರ ವಿಷಯಗಳ ಭಂಡಾರವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸಾಮಾಜಿಕ ಮಾಧ್ಯಮ ಬಳಕೆದಾರರು ಉದ್ದನೆಯ ಮೂಗಿನ ವ್ಯಕ್ತಿಯ ಬಗ್ಗೆ ತಿಳಿದು ದಿಗ್ಭ್ರಮೆಗೊಂಡಿದ್ದಾರೆ.

  • Share this:

    ನಾವು ಸಾಮಾನ್ಯವಾಗಿ ಯಾರಾದರೂ ಒಬ್ಬ ವ್ಯಕ್ತಿಯ ಮೂಗು ಅಥವಾ ಬಾಯಿ ಸ್ವಲ್ಪ ಉದ್ದವಾಗಿದ್ದರೆ, ಅವರನ್ನು ನಾವು ಪದೇ ಪದೇ ತುಂಬಾನೇ ಆಶ್ಚರ್ಯಕರವಾಗಿ ನೋಡುತ್ತಿರುತ್ತೇವೆ. ಹೀಗೆ ಸರ್ಕಸ್ ನಲ್ಲಿ ಇರುವ ಜೋಕರ್ ಪಾತ್ರವನ್ನು ಮಾಡುವ ವ್ಯಕ್ತಿಯ ಮೂಗು (Nose) ಸಹ ಹೀಗೆ ತುಂಬಾನೇ ಉದ್ದವಾಗಿರುತ್ತದೆ ಅಂತ ಹೋಲಿಕೆ ಸಹ ಮಾಡಿರುತ್ತೇವೆ. ಅರೇ ಈಗೇಕೆ ಈ ಉದ್ದದ ಮೂಗಿನ ಬಗ್ಗೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ವಿಷಯ ಏನಪ್ಪಾ ಎಂದರೆ ಇಲ್ಲೊಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ (Viral News)  ಆಗಿದೆ ನೋಡಿ. ಅದನ್ನು ನೀವು ನೋಡಿದ ತಕ್ಷಣ ನಿಮ್ಮ ಕಣ್ಣುಗಳು ಆ ಫೋಟೋದಲ್ಲಿ ಇರುವ ವ್ಯಕ್ತಿಯ ಮೂಗಿನ (Longest Nose) ಮೇಲೆ ಹೋಗುತ್ತದೆ ಅಂತ ಹೇಳಬಹುದು.


    ಈ ಸಾಮಾಜಿಕ ಮಾಧ್ಯಮಗಳು ಚಿತ್ರ-ವಿಚಿತ್ರ ವಿಷಯಗಳ ಭಂಡಾರವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸಾಮಾಜಿಕ ಮಾಧ್ಯಮ ಬಳಕೆದಾರರು ಉದ್ದನೆಯ ಮೂಗಿನ ವ್ಯಕ್ತಿಯ ಬಗ್ಗೆ ತಿಳಿದು ದಿಗ್ಭ್ರಮೆಗೊಂಡಿದ್ದಾರೆ.


    ಯಾರಿದು ಉದ್ದನೆಯ ಮೂಗಿನ ವ್ಯಕ್ತಿ?
    ಥಾಮಸ್ ವೆಡ್ಡರ್ಸ್ ಅವರ ಕಥೆಯು ರಿಪ್ಲೇಸ್ ಅವರ ‘ಬಿಲೀವ್ ಇಟ್ ಆರ್ ನಾಟ್’ ಮ್ಯೂಸಿಯಂನಲ್ಲಿ ಇರಿಸಲಾದ ಅವರ ತಲೆಯ ಫೋಟೋವನ್ನು ಹಿಸ್ಟಾರಿಕಲ್ ವಿಡ್ಸ್ ಎಂಬ ಟ್ವಿಟರ್ ಪುಟವು ಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.


    ಇದನ್ನೂ ಓದಿ: Car Service Offer: ಪ್ರತಿಷ್ಠಿತ ಕಾರ್ ಕಂಪನಿಯಿಂದ ಬಂಪರ್ ಕೊಡುಗೆ; ನವೆಂಬರ್ 19ವರೆಗೆ ಮಾತ್ರ ಅವಕಾಶ


    ನವೆಂಬರ್ 12 ರಂದು ಟ್ವೀಟ್ ಮಾಡಿದ್ದ ಟ್ವಿಟರ್ ಹ್ಯಾಂಡಲ್, ಮಿಸ್ಟರ್ ವೆಡ್ಡರ್ಸ್ ಅವರ ಮೂಗು 7.5 ಇಂಚು ಉದ್ದವಿತ್ತು ಎಂದು ಹೇಳಿದೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ (ಜಿಡಬ್ಲ್ಯೂಆರ್) ವೆಬ್‌ಸೈಟ್ ಕೂಡ ಆ ವ್ಯಕ್ತಿಯ ಬಗ್ಗೆ ಒಂದು ಪುಟವನ್ನು ಹೊಂದಿದೆ, ಅದು ಅವರು "ಟ್ರಾವೆಲಿಂಗ್ ಫ್ರೀಕ್ ಸರ್ಕಸ್ ನ ಸದಸ್ಯ" ಎಂದು ಹೇಳುತ್ತದೆ.


    "ಥಾಮಸ್ 18ನೇ ಶತಮಾನದಲ್ಲಿ ವಾಸಿಸುತ್ತಿದ್ದ ಇಂಗ್ಲಿಷ್ ಸರ್ಕಸ್ ಪ್ರದರ್ಶಕರಾಗಿದ್ದರು. 7.5 ಇಂಚು (19 ಸೆಂ.ಮೀ) ಉದ್ದವಿರುವ ವಿಶ್ವದ ಅತಿ ಉದ್ದದ ಮೂಗನ್ನು ಹೊಂದಿದ್ದಕ್ಕಾಗಿ ಅವರು ಹೆಚ್ಚು ಪ್ರಸಿದ್ಧರಾಗಿದ್ದಾರೆ" ಎಂದು ಹಿಸ್ಟಾರಿಕಲ್ ವಿಡ್ಸ್ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.


    ತುಂಬಾನೇ ವೈರಲ್ ಆಗಿದೆ ಥಾಮಸ್ ಅವರ ಫೋಟೋ
    ಈ ಟ್ವೀಟ್ ಅನ್ನು ಸುಮಾರು 1.20 ಲಕ್ಷ ಬಳಕೆದಾರರು ಲೈಕ್ ಮಾಡಿದ್ದಾರೆ ಮತ್ತು 7,200 ಕ್ಕೂ ಹೆಚ್ಚು ಬಳಕೆದಾರರು ಮರು ಹಂಚಿಕೊಂಡಿದ್ದಾರೆ.


    "ಈ ರೀತಿಯ ಟ್ವೀಟ್ ಗಳು ಟ್ವಿಟರ್ ಅನ್ನು ಇನ್ನಷ್ಟು ಅದ್ಭುತಗೊಳಿಸುತ್ತದೆ. ಧನ್ಯವಾದಗಳು ಎಂದು ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್ ಗೆ ಕಾಮೆಂಟ್ ಮಾಡುವಾಗ ಹೇಳಿದರು. "ಅವರು ಎಂದಿಗೂ ಓಟದಲ್ಲಿ ಹಿಂದೆ ಬಿದ್ದಿಲ್ಲ ಅಂತ ತಿಳಿದುಬಂದಿದೆ" ಎಂದು ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ತಮಾಷೆ ಮಾಡಿದ್ದಾರೆ.


    ಇದನ್ನೂ ಓದಿ: Mohan Bhagwat: ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ 'ಹಿಂದೂ', ಯಾರೂ ಪೂಜಾ ವಿಧಾನ ಬದಲಾಯಿಸುವ ಅಗತ್ಯವಿಲ್ಲ: ಮೋಹನ್ ಭಾಗವತ್


    ಜಿಡಬ್ಲ್ಯೂಆರ್ ತನ್ನ ವೆಬ್‌ಸೈಟ್ ನಲ್ಲಿ ಥಾಮಸ್ ವೆಡ್ಡರ್ಸ್ ಅವರ ಸಾಧನೆಯನ್ನು ಸಹ ಒಪ್ಪಿಕೊಂಡಿದೆ, "1770 ರ ದಶಕದಲ್ಲಿ ಇಂಗ್ಲೆಂಡ್ ನಲ್ಲಿ ವಾಸಿಸುತ್ತಿದ್ದ ಮತ್ತು ಟ್ರಾವೆಲಿಂಗ್ ಫ್ರೀಕ್ ಸರ್ಕಸ್ ನ ಸದಸ್ಯರಾಗಿದ್ದ ಥಾಮಸ್ ಅವರು 19 ಸೆಂ.ಮೀ ಉದ್ದದ ಮೂಗನ್ನು ಹೊಂದಿದ್ದರು ಎಂಬ ಐತಿಹಾಸಿಕ ದಾಖಲೆಗಳಿವೆ” ಎಂದು ಬರೆದಿದೆ.


    ಜೀವಂತ ವ್ಯಕ್ತಿಯ ಅತಿ ಉದ್ದದ ಮೂಗಿನ ದಾಖಲೆಯು ಟರ್ಕಿಯ ವ್ಯಕ್ತಿಗೆ ಸೇರಿದೆ
    ಆದರೂ ಜೀವಂತ ವ್ಯಕ್ತಿಯ ಅತಿ ಉದ್ದದ ಮೂಗಿನ ದಾಖಲೆಯು ಟರ್ಕಿಯ ಮೆಹ್ಮೆಟ್ ಒಝುರೆಕ್ ಗೆ ಸೇರಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಜಿಡಬ್ಲ್ಯೂಆರ್ ಈ ದಾಖಲೆಯನ್ನು ದೃಢಪಡಿಸಿತ್ತು ಮತ್ತು ಇದು 3.46 ಇಂಚುಗಳಷ್ಟು ಅಳತೆ ಹೊಂದಿದೆ.

    Published by:ಗುರುಗಣೇಶ ಡಬ್ಗುಳಿ
    First published: