Kerala Lottery: ಕಾಯ್ದಿರಿಸಿದ್ದಷ್ಟೇ, ಖರೀದಿಯೇ ಮಾಡದ ಲಾಟರಿಗೆ ಸಿಕ್ತು 75 ಲಕ್ಷ! ಕೇರಳ ಮಹಿಳೆಗೆ ಬಂಪರ್

ಆಕೆ ಕಾಲ್ ಮಾಡಿ ನನಗಾಗಿ ಲಾಟರಿ ಟಿಕೆಟ್ಸ್ ತೆಗೆದಿಡಿ ಎಂದಷ್ಟೇ ಹೇಳಿದ್ದಳು. ಅದನ್ನು ನೋಡಿರಲಿಲ್ಲ, ಹಣವೂ ನೀಡಿರಲಿಲ್ಲ. ಆಕೆ ಕಾಯ್ದಿರಿಸಿದ ಟಿಕೆಟ್​ಗೆ ಬರೋಬ್ಬರಿ 75 ಲಕ್ಷ ಬಂಪರ್ ಬಹುಮಾನ ಸಿಕ್ಕಿದೆ.

ಟಿಕೆಟ್ ಗೆದ್ದ ಕೇರಳದ ನರ್ಸ್

ಟಿಕೆಟ್ ಗೆದ್ದ ಕೇರಳದ ನರ್ಸ್

  • Share this:
ತಿರುವನಂತಪುರಂ(ಜು.28): ಕೇರಳದಲ್ಲಿ ಲಾಟರಿ ಟಿಕೆಟ್​ಗಳಿಗೆ (Lottery Ticket) ಭರ್ಜರಿ ಡಿಮ್ಯಾಂಡ್ (Demand) ಇದೆ. ಕೆಲವು ನೂರು ರುಪಾಯಿಗಳ ಟಿಕೆಟ್ ಪಡೆದು ಲಕ್ಷಾಧಿಪತಿಗಳು, ಕೋಟ್ಯಾಧಿಪತಿಗಳಾದವರ ಸುದ್ದಿ ನಿತ್ಯ ಕಾಣುತ್ತೇವೆ. ಆದರೆ ಇಲ್ಲೊಬ್ಬರು ಮಹಿಳೆ (Woman) ಯಾವುದೇ ಟಿಕೆಟ್ ಖರೀದಿಸದೆಯೇ ಲಕ್ಷಗಳ ಮೊತ್ತ ಪಡೆದಿದ್ದಾರೆ. ಹೌದು. ಈ ಅದೃಷ್ಟಶಾಲಿ ಮಹಿಳೆ ಕೇರಳದ (Kerala) ತೋಡುಪುಳದ (Thodupuzha) ನರ್ಸ್. ಇವರ ಅದೃಷ್ಟ ಈಗ ಎಲ್ಲಾ ಕಡೆ ಸುದ್ದಿಯಾಗಿದೆ. ಇವರು ತಮ್ಮ ಟಿಕೆಟ್​ಗೆ ಬರೋಬ್ಬರಿ 75 ಲಕ್ಷ ರುಪಾಯಿಗಳನ್ನು ಗೆದ್ದುಕೊಂಡಿದ್ದಾರೆ.

ಅದೃಷ್ಟವು ನಿಮಗೆ ಯಾವಾಗ ಕರುಣೆ ತೋರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಅಂತಹ ಒಂದು ನಿದರ್ಶನದಲ್ಲಿ, ತಾನು ಖರೀದಿಸಿದ ಸ್ತ್ರೀ ಶಕ್ತಿ ಲಾಟರಿ ಟಿಕೆಟ್ ಅನ್ನು ಒಮ್ಮೆಯೂ ನೋಡದ ಮಹಿಳೆ, ಮರುದಿನ ಮೊದಲ ಬಹುಮಾನ 75 ಲಕ್ಷ ರೂ.  ಗೆದ್ದಿದ್ದಾರೆ.

ಫೋನ್​ ಕಾಲ್​ನಲ್ಲಿ ಟಿಕೆಟ್ ತೆಗೆದಿದ್ದ ಮಹಿಳೆ

ತೊಡುಪುಳ ಸಮೀಪದ ಕುಮಾರಮಂಗಲಂ ವಿಲೇಜ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ನಲ್ಲಿ ಆರೋಗ್ಯ ಶುಶ್ರೂಷಕಿ ಕೆ.ಜಿ.ಸಂಧ್ಯಾಮೋಳ್‌ಗೆ ಅದೃಷ್ಟ ಒಲಿದಿದೆ. ಚಿಲ್ಲರೆ ಏಜೆಂಟ್ ಸಾಜನ್ ಥಾಮಸ್ ಅವರಿಂದ ಫೋನ್ ಮೂಲಕ ಲಾಟರಿ ಟಿಕೆಟ್ ಅನ್ನು ಮುಂಗಡವಾಗಿ ಬುಕ್ ಮಾಡಿದ್ದರು.

ಗೆದ್ದ ಚೀಟಿ ಮಹಿಳೆಗೆ ಕೊಟ್ಟು ಪ್ರಾಮಾಣಿಕತೆ ಮೆರೆದ ಮಹಿಳೆ

ಆಕೆಯ ಗೆಲುವಿನ ಸುದ್ದಿ ತಿಳಿದ ಕ್ಷಣದಲ್ಲಿಯೇ ಗೆದ್ದ ಚೀಟಿಯನ್ನು ಮಾಲೀಕರಿಗೆ ಹಸ್ತಾಂತರಿಸಿದ ಲಾಟರಿ ಚಿಲ್ಲರೆ ಏಜೆಂಟರ ಪ್ರಾಮಾಣಿಕತೆ ಅವರ ವಿಜಯವೂ ಮುನ್ನೆಲೆಗೆ ತಂದಿತು.

ಲಾಟರಿ ಖರೀದಿಸುವ ಅಭ್ಯಾಸವೇ ಇರಲಿಲ್ಲ

ಸಂಧ್ಯಾ ಮೂರು ತಿಂಗಳ ಹಿಂದೆ ಮೂಪ್ಪಿಲ್ ಕಡವುನಲ್ಲಿರುವ ವೆಟ್ಟಿಕಾಡು ಲಕ್ಕಿ ಸೆಂಟರ್ ಎಂದು ಹೆಸರಿಸಲಾದ ಲಾಟರಿ ಕೇಂದ್ರಕ್ಕೆ ಬಂದಿದ್ದಾಗ ಸಾಜನ್ ಅವರನ್ನು ಭೇಟಿಯಾದರು. ಆಗ ಆಕೆಗೆ ಲಾಟರಿ ಟಿಕೆಟ್ ಖರೀದಿಸುವ ಅಭ್ಯಾಸ ಇರಲಿಲ್ಲ. ಆದರೆ ನಂತರ, ಅವಳು ಸಾಜನ್ ಅಂಗಡಿಯಿಂದ ಸಾಂದರ್ಭಿಕವಾಗಿ ಲಾಟರಿ ಟಿಕೆಟ್‌ಗಳನ್ನು ಖರೀದಿಸಲು ಪ್ರಾರಂಭಿಸಿದಳು.

ಇದನ್ನೂ ಓದಿ: Lottery: ಕೊನೆಗೂ ಸಿಕ್ಕೇಬಿಟ್ರು ಕೇರಳದ ಬಂಪರ್‌ ಲಾಟರಿಯ ಜಾಕ್‌ಪಾಟ್‌ ವಿನ್ನರ್! 10 ಕೋಟಿ ಕೈಗೆ ಸಿಕ್ಕಿದ್ದೇ ಪವಾಡ

ಫೋನ್ ಮೂಲಕ ಬುಕ್ ಮಾಡಿದ್ದ ಆಕೆಯ ಲಾಟರಿ ಟಿಕೆಟ್ ಗಳನ್ನು ಬೇರೆ ಬೇರೆಯಾಗಿ ಇಡುತ್ತಿದ್ದ. ನಂತರ ಹಣ ನೀಡುತ್ತಿದ್ದಳು. ಹಣ ಕೊಡುವಾಗ ಅವಳಿಗೆ ಬಹುಮಾನ ಬಂದಿತೋ ಇಲ್ಲವೋ ಎಂಬುದೇ ಮುಖ್ಯವಾಗಿರಲಿಲ್ಲ.ಈ ಬಾರಿಯೂ ತಾನು ಪ್ರಥಮ ಬಹುಮಾನ ಪಡೆದಿದ್ದನ್ನು ತಿಳಿಸಲು ಸಾಜನ್ ತನಗೆ ಕರೆ ಮಾಡುತ್ತಿದ್ದಾನೆಂದು ಅವಳು ಯೋಚಿಸಲೇ ಇಲ್ಲ. ಸಂಧ್ಯಾ ಅವರಿಗೆ ಮೊದಲ ಬಹುಮಾನ ಬಂದ ಲಾಟರಿ ಟಿಕೆಟ್‌ನ ಸಂಖ್ಯೆಯೂ ತಿಳಿದಿರಲಿಲ್ಲ.

ಇದನ್ನೂ ಓದಿ: Lottery: ದುಬೈನಲ್ಲಿ 44 ಕೋಟಿಯ ಲಾಟರಿ ಗೆದ್ದ ಭಾರತದ ಮಹಿಳೆ

ಸಗಟು ಲಾಟರಿ ಡೀಲರ್ ಮಂಜು ಲಕ್ಕಿ ಸೆಂಟರ್ ನಿಂದ ಸಜನ್ ಗೆ 75 ಲಕ್ಷ ಬಹುಮಾನ ಬಂದಿರುವುದು ಗೊತ್ತಾಗಿದೆ. ಕೊಟ್ಟಾಯಂ ಜಿಲ್ಲೆಯ ಮನ್ನಾನಂ ನಿವಾಸಿ ಕುರಿಯಾಟ್ಟೆಲ್ ಶಿವನ್ ನಾಥ್ ಸಂಧ್ಯಾ ಅವರ ಪತಿ.

ಕೇರಳದಲ್ಲಿ ಕುಟುಂಬವೊಂದು ಕಷ್ಟಗಳಿಂದ ನರಳುತ್ತಿತ್ತು. ಸಾಲದ ಶೂಲದಲ್ಲಿ ಸಿಕ್ಕಿಹಾಕಿಕೊಂಡ ಕುಟುಂಬ ಹೇಗಾದರೂ ಸರಿ ಸಾಲನ ಸುಳಿಯಿಂದ ತಪ್ಪಿಸಿಕೊಂಡು ಬದುಕಬೇಕೆಂದು ಸ್ವಂತ ಮನೆಯನ್ನೇ ಮಾರಾಟ ಮಾಡಲು ನಿರ್ಧಾರ ಮಾಡಿತ್ತು. ಆದರೆ ಅವರ ಪಾಲಿಗೆ ವಿಧಿ ಇನ್ನೂ ಚೆನ್ನಾಗಿರುವುದನ್ನೇ ಕಾಯ್ದಿರಿಸಿತ್ತು. ಪ್ರೀತಿಯ ಮನೆಯನ್ನು ಮಾರಾಟ ಮಾಡಿ ಅದು ಪರರ ಪಾಲಾಗಲು ಬರೀ 2 ಗಂಟೆ ಬಾಕಿ ಇತ್ತು. ಆದರೆ ಅಷ್ಟು ಹೊತ್ತಿಗೆ ಈ ಕುಟುಂಬಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿಯ ಲಾಟರಿ ಹೊಡೆದಿದೆ.

ಮನೆ ಮಾರಲಿದ್ದವರಿಗೆ ಸಿಕ್ತು 1 ಕೋಟಿ

ಇದು ಕೇಳುವುದಕ್ಕೆ ಅಚ್ಚರಿಯಾದರೂ ಕೇರಳದಲ್ಲಿ ನಡೆದ ನಿಜ ಘಟನೆ ಇದು. ಕೆಲವೊಮ್ಮೆ ದೇವರು ನಾವು ಬಯಸ್ಸಿದ್ದಂಕಿತಲೂ ಸ್ವಲ್ಪ ಉತ್ತಮವಾದುದನ್ನೇ ಕೊಡುತ್ತಾನೆ ಎಂದು ಹಿರಿಯರು ಹೇಳುವುದನ್ನು ಕೇಳಿರಬಹುದು. ಈ ಕುಟುಂಬದ ಪಾಲಿಗೆ ಈ ಮಾತು ಸತ್ಯವಾಗಿದೆ.
Published by:Divya D
First published: