Union Budget 2021: ಜನವರಿ ತಿಂಗಳಲ್ಲಿ 1.2 ಲಕ್ಷ ಕೋಟಿ ಜಿಎಸ್ಟಿ ಆದಾಯ; ಬಜೆಟ್ಗೂ ಮುನ್ನವೇ ದಾಖಲೆ ಬರೆದ ಕೇಂದ್ರ
2021 ರ ಜನವರಿಯ ಆದಾಯವು ಕಳೆದ ತಿಂಗಳಿಗಿಂತ ಶೇ.8 ರಷ್ಟು ಹೆಚ್ಚಾಗಿದೆ. ಈ ತಿಂಗಳಲ್ಲಿ ಸರಕುಗಳ ಆಮದಿನಿಂದ ಬರುವ ಆದಾಯವು ಸಹ ಶೇ.16 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನ ಆದಾಯ (ಸೇವೆಗಳ ಆಮದು ಸೇರಿದಂತೆ) ಕಳೆದ ತಿಂಗಳು ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇ.6 ರಷ್ಟು ಹೆಚ್ಚಾಗಿದೆ.
ನವ ದೆಹಲಿ: ಸರಕು ಮತ್ತು ಸೇವಾ ತೆರಿಗೆ ಅಥವಾ ಜನವರಿಯಲ್ಲಿ ಸಂಗ್ರಹಿಸಿದ ಜಿಎಸ್ಟಿ ಆದಾಯವು 1.19 ಲಕ್ಷ ಕೋಟಿ ಎಂದು ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ. ದೇಶದ ವಾರ್ಷಿಕ ಬಜೆಟ್ ಅನ್ನು ಸರ್ಕಾರ ಅನಾವರಣ ಗೊಳಿಸುವ ಒಂದು ದಿನ ಮೊದಲು ದಾಖಲೆ ಪ್ರಮಾಣದ ಜಿಎಸ್ಟಿ ಹಣವನ್ನು ಸಂಗ್ರಹಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ತಿಳಿಸಿದೆ. ದೇಶದಲ್ಲಿ ಜಿಎಸ್ಟಿ ತೆರಿಗೆ ಮಾದರಿಯನ್ನು ಪರಿಚಯಿಸಿದ ನಂತರ ಜನವರಿ 2021ರಲ್ಲಿ ಸಂಗ್ರಹಿಸಲಾಗಿರುವ ತೆರಿಗೆಯೇ ಅತ್ಯಧಿಕ ಎನ್ನಲಾಗುತ್ತಿದೆ. ಕಳೆದ ತಿಂಗಳ ಸಹ 1.15 ಲಕ್ಷ ಕೋಟಿಯನ್ನು ಸಂಗ್ರಹಿಸಲಾಗಿತ್ತು. ಆದರೆ, ಜನವರಿ ತಿಂಗಳ ಜಿಎಸ್ಟಿ ಹಣ ಸಂಗ್ರಹಣೆ ಎಲ್ಲಾ ದಾಖಲೆಗಳನ್ನು ಮುರಿದಿದೆ. ಹೀಗಾಗಿ ಸಾಮಾನ್ಯವಾಗಿಯೇ ಈ ವರ್ಷ ಕೇಂದ್ರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ.
ಕೋವಿಡ್ ಸಂಕಷ್ಟದ ಕಾಲದಲ್ಲಿ ಕಳೆದ ಒಂದು ವರ್ಷದಿಂದ ಜಿಎಸ್ಟಿ ರೂಪದ ತೆರಿಗೆ ಸಂಗ್ರಹಣೆಯಲ್ಲಿ ಸಾಕಷ್ಟು ಹಿನ್ನಡೆಯಾಗಿತ್ತು. ಆದರೆ, ಇದೀಗ ಕಳೆದ ನಾಲ್ಕು ತಿಂಗಳಿನಿಂದ ಸತತ 1 ಲಕ್ಷ ಕೋಟಿಗೂ ಅಧಿಕ ಹಣವನ್ನು ಟಿಎಸ್ಟಿ ರೂಪದಲ್ಲಿ ಸಂಗ್ರಹಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಇದು COVID-19 ಸಾಂಕ್ರಾಮಿಕ ರೋಗದ ನಂತರದ ತ್ವರಿತ ಆರ್ಥಿಕ ಚೇತರಿಕೆಯ ಸ್ಪಷ್ಟ ಸೂಚಕಗಳಾಗಿವೆ ಎಂದು ಹೇಳಲಾಗುತ್ತಿದೆ.
"ಜನವರಿ 2021 ರ ತಿಂಗಳಲ್ಲಿ 31.01.2021 ರಂದು ಸಂಜೆ 6 ಗಂಟೆಯವರೆಗೆ ಒಟ್ಟು ಜಿಎಸ್ಟಿ ಆದಾಯ 1,19,847 ಕೋಟಿ. ಇದರಲ್ಲಿ ಕೇಂದ್ರದ ಸಿಜಿಎಸ್ಟಿ 21,923 ಕೋಟಿ, ರಾಜ್ಯದ ಪಾಲಿನ ಎಸ್ಜಿಎಸ್ಟಿ 29,014 ಕೋಟಿ ಇನ್ನೂ ಐಜಿಎಸ್ಟಿ 60,288 ಕೋಟಿ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಸರಕುಗಳ ಆಮದಿನಿಂದಾಗಿ 27,424 ಕೋಟಿ ಹಣ ಸಂಗ್ರಹಿಸಲಾಗಿದೆ" ಎಂದು ಹಣಕಾಸು ಸಚಿವಾಲಯ ಹೇಳಿದೆ.
2021 ರ ಜನವರಿಯ ಆದಾಯವು ಕಳೆದ ತಿಂಗಳಿಗಿಂತ ಶೇ.8 ರಷ್ಟು ಹೆಚ್ಚಾಗಿದೆ. ಈ ತಿಂಗಳಲ್ಲಿ ಸರಕುಗಳ ಆಮದಿನಿಂದ ಬರುವ ಆದಾಯವು ಸಹ ಶೇ.16 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನ ಆದಾಯ (ಸೇವೆಗಳ ಆಮದು ಸೇರಿದಂತೆ) ಕಳೆದ ತಿಂಗಳು ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇ.6 ರಷ್ಟು ಹೆಚ್ಚಾಗಿದೆ.
"ನಕಲಿ-ಬಿಲ್ಲಿಂಗ್ ವಿರುದ್ಧ ನಿಕಟ ಮೇಲ್ವಿಚಾರಣೆ, ಜಿಎಸ್ಟಿ, ಆದಾಯ-ತೆರಿಗೆ ಮತ್ತು ಕಸ್ಟಮ್ಸ್ ಐಟಿ ವ್ಯವಸ್ಥೆಗಳು, ಪರಿಣಾಮಕಾರಿ ತೆರಿಗೆ ಆಡಳಿತ ಸೇರಿದಂತೆ ಅನೇಕ ಮೂಲಗಳಿಂದ ಬಳಸುವ ಆಳವಾದ ದತ್ತಾಂಶ ವಿಶ್ಲೇಷಣೆಗಳು ಕಳೆದ ಕೆಲವು ತಿಂಗಳುಗಳಲ್ಲಿ ತೆರಿಗೆ ಆದಾಯದಲ್ಲಿ ಸ್ಥಿರ ಹೆಚ್ಚಳಕ್ಕೆ ಕಾರಣವಾಗಿವೆ" ಎಂದು ಸರ್ಕಾರದ ಮೂಲಗಳು" ತಿಳಿಸಿವೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ