ಎರಡು ಆಲ್ಬಿನೋ ಬೇಬಿ ಆಲಿಗೇಟರ್ ಅಥವಾ ಮೊಸಳೆಗಳ ಹೃದಯಸ್ಪರ್ಶಿ ಚಿತ್ರಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅಮೆರಿಕದ ಫ್ಲೋರಿಡಾ ಮೂಲದ ಮೃಗಾಲಯದಲ್ಲಿ ಈ ಪುಟ್ಟ ಮೊಸಳೆ ಮರಿಗಳು ಜನಿಸಿವೆ. ಹೊಸ ಸದಸ್ಯರು ಜನ್ಮ ತಾಳಿರುವುದನ್ನು ವೈಲ್ಡ್ ಫ್ಲೋರಿಡಾದ 'ಗೇಟರ್ ಪಾರ್ಕ್' ಫ್ಲೋರಿಡಾದ ಕೆನಾನ್ಸಿವಲ್ಲೆಯಲ್ಲಿ ಘೋಷಣೆ ಮಾಡಿದೆ. ಹಲವು ತಿಂಗಳುಗಳ ಕಾಲ ಕಾವುಕೊಟ್ಟ ನಂತರ 18 ಮೊಟ್ಟೆಗಳಲ್ಲಿ ಎರಡು ಮರಿಗಳು ಬದುಕುಳಿದಿವೆ ಎಂಬ ಮಾಹಿತಿ ಲಭ್ಯವಾಗಿದೆ. ಆಲ್ಬಿನೋ ಮೊಸಳೆ ಮರಿಗಳ ಪೋಷಕರು ಸ್ನೋಫ್ಲೇಕ್ ಮತ್ತು ಬ್ಲಿಜ್ಜಾರ್ಡ್ ಎಂದು ತಿಳಿದುಬಂದಿದೆ. ಅಲ್ಲದೆ, ಈ ಪೋಷಕ ಆಲಿಗೇಟರ್ಗಳೂ ಆಲ್ಬಿನೋಗಳೇ. 2 ವರ್ಷಗಳಲ್ಲಿ ಅಲ್ಬಿನೋ ಆಲಿಗೇಟರ್ಗಳು ಮೊಟ್ಟೆಯೊಡೆದ ಎರಡನೇ ಘಟನೆ ಇದಾಗಿದೆ ಎಂದು ಮೃಗಾಲಯ ತಿಳಿಸಿದೆ.
ಮುದ್ದಾದ ಆಲ್ಬಿನೋ ಮೊಸಳೆಗಳನ್ನು ಈ ವಿಡಿಯೋದಲ್ಲಿ ನೀವೇ ನೋಡಿ..
"ನಮ್ಮ ಆಲ್ಬಿನೋ ಆಲಿಗೇಟರ್ ಪೋಷಕರಾದ ಸ್ನೋಫ್ಲೇಕ್ ಮತ್ತು ಬ್ಲಿಜ್ಜಾರ್ಡ್ ಹಾಗೂ ಈ ಮರಿಗಳು ಮೊಟ್ಟೆಯೊಡೆದು ಹೊರಗೆ ಬರಲು ಸಹಾಯ ಮಾಡಿದ ನಮ್ಮ ಕ್ರೋಕ್ ಸ್ಕ್ವಾಡ್ ತಂಡದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ನಮ್ಮ ಕ್ರೋಕ್ ಸ್ಕ್ವಾಡ್ ಈ ಮೊಟ್ಟೆಗಳ ಮೇಲ್ವಿಚಾರಣೆಯೊಂದಿಗೆ ಈ ಆಲ್ಬಿನೋ ಮೊಸಳೆ ಮರಿಗಳಿಂದ ಹೆಚ್ಚಿನ ಪ್ರವಾಸಿಗರು ಸಹಕಾರಿಯಾಗಿವೆ. ಸ್ಥಳೀಯರು ಮತ್ತು ಪ್ರವಾಸಿಗರನ್ನು ತಮ್ಮ ಪರಿಸರದೊಂದಿಗೆ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ'' ಎಂದು ವೈಲ್ಡ್ ಫ್ಲೋರಿಡಾದ ಸಹ ಮಾಲೀಕರು ಮತ್ತು ಸಹ-ಸಂಸ್ಥಾಪಕರಾದ ಸ್ಯಾಮ್ ಹಾಟ್ ಕ್ಲಿಕ್ ಒರ್ಲ್ಯಾಂಡೊಗೆ ಹೇಳಿದ್ದಾರೆ.
ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ಕೊಟ್ಟ ಬ್ಲ್ಯಾಕ್ ವಿಡೊ ಖ್ಯಾತಿಯ ನಟಿ ಸ್ಕಾರ್ಲೆಟ್ ಜೋಹಾನ್ಸನ್
ಇನ್ನು, ಆಲ್ಬಿನೋ ಅಂದರೆ ಏನು ಎಂಬ ಅನುಮಾನ ನಿಮಗಿದೆಯಾ..? ಲ್ಯೂಸಿಸಂನಿಂದಾಗಿ ಆಲ್ಬಿನೋ ಸಂಭವಿಸುತ್ತದೆ. ಲ್ಯೂಸಿಸಂ ಅಂದರೆ ಪಿಗ್ಮೆಂಟೇಶನ್ ಇಲ್ಲದ ಸ್ಥಿತಿಯಾಗಿದೆ. ವರ್ಣದ್ರವ್ಯದ ಜೀವಕೋಶಗಳು ವಿಭಿನ್ನತೆಯ ಸಮಯದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ, ಸರೀಸೃಪಗಳ ದೇಹವು ವರ್ಣದ್ರವ್ಯ ಅಥವಾ ಪಿಗ್ಮೆಂಟ್ ಮಾಡಲು ಸಾಧ್ಯವಾಗುವುದಿಲ್ಲ.
ಇನ್ನು, ಈ ಆಲ್ಬಿನೋ ಮೊಸಳೆ ಮರಿಗಳ ಪೋಷಕರಾದ 12 ವರ್ಷ ವಯಸ್ಸಿನ ಬ್ಲಿಜ್ಜಾರ್ಡ್ ಮತ್ತು 23 ವರ್ಷದ ಸ್ನೋಫ್ಲೇಕ್, 2017ರಿಂದಲೂ ವೈಲ್ಡ್ ಫ್ಲೋರಿಡಾದ 'ಗೇಟರ್ ಪಾರ್ಕ್' ನ ಭಾಗವಾಗಿವೆ. ಈ ನೂತನ ಪೋಷಕ ಆಲಿಗೇಟರ್ಗಳು ಅಪಾರದರ್ಶಕ ಅಥವಾ ಒಪೇಕ್ ಬಿಳಿ ಕಣ್ಣುಗಳನ್ನು ಹೊಂದಿವೆ. ಆದರೆ, ಸ್ನೋಫ್ಲೇಕ್ನ ಬಲಗಣ್ಣಿನಲ್ಲಿ ಹುಟ್ಟಿನಿಂದಲೂ ಸ್ವಲ್ಪ ಕೆಂಪು ಬಣ್ಣವಿದೆ. ಈ ಹಿಂದೆ, ಆಗಸ್ಟ್ 2020ರಲ್ಲಿ ಸ್ನೋಫ್ಲೇಕ್ ಮತ್ತು ಬ್ಲಿಜ್ಜಾರ್ಡ್ 4 ಆಲ್ಬಿನೋ ಆಲಿಗೇಟರ್ ಶಿಶುಗಳಿಗೆ ಜನ್ಮ ನೀಡಿದೆ.
ಇದನ್ನೂ ಓದಿ: BellBottom Review: ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಬೆಲ್ಬಾಟಮ್: ಲಾರಾ ದತ್ತಾ ಅಭಿನಯಕ್ಕೆ ಮನಸೋತ ವೀಕ್ಷಕರು..!
ಜಗತ್ತಿನಲ್ಲಿ ಕೇವಲ 100 ಆಲ್ಬಿನೋ ಆಲಿಗೇಟರ್ಗಳಿದ್ದು, ಈ ಪೈಕಿ ಒಟ್ಟು 12 ಮಾತ್ರ ಮಾನವ ಆರೈಕೆಯಲ್ಲಿದೆ. ಮಾನವ ಕಾಳಜಿಯಿಲ್ಲದಿದ್ದರೆ ಈ ಆಲಿಗೇಟರ್ಗಳ ಜೀವಿತಾವಧಿ 35ರಿಂದ 50 ವರ್ಷಗಳಾಗಿದ್ದು, ಇನ್ನೊಂದೆಡೆ ಮಾನವರು ಕಾಳಜಿ ವಹಿಸಿದರೆ ಈ ಆಲಿಗೇಟರ್ಗಳು 65 ರಿಂದ 75 ವರ್ಷಗಳವರೆಗೆ ಬದುಕಲು ನಿರ್ವಹಿಸುತ್ತವೆ. ಈ ಹಿನ್ನೆಲೆ ಮುದ್ದಾದ ಹಾಗೂ ಅಪರೂಪದ ಆಲ್ಬಿನೋ ಆಲಿಗೇಟರ್ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ