Mission Paani: ನೀರಿನ ಅರಿವು ಮೂಡಿಸಲು ಮಹಾರಾಷ್ಟ್ರದಲ್ಲಿ ಮಂಗಳಮುಖಿಯರಿಂದಲೇ ಜಲ ಘಟಕ

ಪುಣೆಯ ಮಂಗಳಮುಖಿ ಸಮುದಾಯವು ವಘೋಲಿ ಬಳಿ ಈ ಜಲ ಘಟಕವನ್ನು ತೆರೆದಿದ್ದಾರೆ. ಕುಡಿಯುವ ನೀರಿನ ಅವಶ್ಯಕತೆಯನ್ನು ಅರಿತ ಅವರು ಕೆಲವು ದಿನಗಳ ಹಿಂದೆ ಪುಣೆ-ಅಹ್ಮದ್​​ ನಗರ ರಸ್ತೆಯಲ್ಲಿ Kineer​ ಸರ್ವಿಸ್​​ ಅಡಿಯಲ್ಲಿ ಸ್ಥಾಪಿಸಲಾಗಿದೆ

ನೀರು

ನೀರು

  • Share this:
    ನೀರು ಮಾನವನ ಬಾಯಾರಿಕೆಯನ್ನು ನೀಗಿಸುತ್ತದೆ. ಹಾಗಾಗಿ ಮಾನವನ ಜೀವನದಲ್ಲಿ ನೀರು ತುಂಬಾ ಅವಶ್ಯಕವಾಗಿದೆ. ಸಾಕಷ್ಟು ಜನರು ನೀರಿಗಾಗಿ ಜಾಗೃತರಾಗಿ ಅದರ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಕುಡಿಯುವ ನೀರು ದೊರಕಬೇಕು ಎಂದು ಹೋರಾಡುತ್ತಿದ್ದಾರೆ. ಅದರಂತೆ ಮಹರಾಷ್ಟ್ರದ ವಘೋಲಿ ಬಳಿ ಕುಡಿಯುವ ಜಲ ಘಟಕವೊಂದನ್ನು ತೆರೆಯಲಾಗಿದೆ. ಅದರ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

    ಅಂದಹಾಗೆಯೇ ಪುಣೆಯ ಮಂಗಳಮುಖಿ ಸಮುದಾಯವು ವಘೋಲಿ ಬಳಿ ಜಲ ಘಟಕವನ್ನು ತೆರೆದಿದ್ದಾರೆ. ಕುಡಿಯುವ ನೀರಿನ ಅವಶ್ಯಕತೆಯನ್ನು ಅರಿತ ಅವರು ಕೆಲವು ದಿನಗಳ ಹಿಂದೆ ಪುಣೆ-ಅಹ್ಮದ್​​ ನಗರ ರಸ್ತೆಯಲ್ಲಿ Kineer​ ಸರ್ವಿಸ್​​ ಅಡಿಯಲ್ಲಿ ಸ್ಥಾಪಿಸಲಾಗಿದೆ.

    Kineer​ ಸರ್ವಿಸ್​ ಲಕ್ಷೀ ನಾರಾಯಣ್​ ಅವರ ಉಪಕ್ರವಾಗಿದ್ದು, ಇವರು ಮಂಗಳಮುಖಿ ಸಮುದಾಯದ ಕಾರ್ಯಕರ್ತರಾಗಿದ್ದಾರೆ. ಇನ್ನು ಈ ನೀರಿನ ಘಟಕವನ್ನು ಮುನ್ನಡೆಸಲು ಮಮತಾ, ರಣಿತೈ ಪಟೇಲ್​, ಶಕ್ತಿ ಮತ್ತು ಪ್ರೇರಣಾ ಎಂಬ ನಾಲ್ಕು ಮುಂಗಳಮುಖಿ ಮಹಿಳೆಯರನ್ನು ನೇಮಕ ಮಾಡಲಾಗಿದೆ.

    ಈ ಬಗ್ಗೆ ಮಾತನಾಡಿದ್ದ 33 ವರ್ಷ ಪ್ರಾಯದ ಮಮತಾ ಅವರು, ನಾನು ಈ ಘಟಕವನ್ನು ನೋಡಲು ನೇಮಕಗೊಂಡಿದ್ದೇನೆ. ಈ ಕೆಲಸದಿಂದಾಗಿ ನನ್ನ ಜೀವನ ಬದಲಾಗಿದೆ. ಅಗಸ್ಟ್​ ತಿಂಗಳವರೆಗೆ ನನ್ನ ಸಮುದಾಯ ದ ಜೊತೆಗೂಡಿ ಅಂಗಡಿಗಳಿಗೆ ಹೋಗಿ ಭಿಕ್ಷಾಟನೆ ಮಾಡಬೇಕಾಗಿತ್ತು. ಅಷ್ಟು ಮಾತ್ರವಲ್ಲದೆ, ವಿವಾಹ ಸಮಾರಂಭದಲ್ಲಿ ನೃತ್ಯ ಮಾಡಬೇಕಿತ್ತು. ಇದರಿಂದಾಗಿ ಅವಮಾನಗಳನ್ನು ಎದುರಿಸಬೇಕಾಗಿತ್ತು. ಆದರೀಗ ಅಂತಹ ಸಂಕಷ್ಟ ನನ್ನಿಂದ ದೂರವಾಗಿದೆ ಎಂದು ಹೇಳಿದರು.

    ಮಮತಾ ಘಟಕದಲ್ಲಿ ನೀರನ್ನು ಪ್ಯಾಕೇಜ್​ ಮಾಡುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಅದರ ಜೊತೆಗೆ ನೀರು ಪೂರೈಸುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ಭೇಟಿ ನೀಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ, ಮಾರ್ಕೆಂಟಿಗ್​ ಕ್ಷೇತ್ರದಲ್ಲಿ ಅಲ್ಪ ಸಮಯ ಕೆಲಸ ನಿರ್ವಹಿಸಿದ್ದಾರೆ.

    37 ವರ್ಷದ ರಣಿತೈ ವಾಣಿಜ್ಯ ಪದವಿಧರೆಯಾಗಿದ್ದು, ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಳು. ಆದರೀಗ ಈ ಕೆಲಸದಿಂದಾಗಿ ತನ್ನ 88 ವರ್ಷದ ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ.

    ಪ್ರತಿದಿನ ಈ ನೀರಿನ ಘಟಕದ ಮೂಲಕ 200 ಕ್ಯಾನ್​ ನೀರನ್ನು ಉತ್ಪಾದಿಸಲಾಗುತ್ತದೆ. ಇದನ್ನು ಪುಣೆ-ಅಹ್ಮದ್​ ನಗರ ರಸ್ತೆಯಲ್ಲಿನ ಬಹುರಾಷ್ಟ್ರೀಯ ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತಿದೆ.

    Kineer​ ಸೇವೆಯ ಸಂಯೋಜಕರಾದ ಮನೀಶ್​ ಜೈನ್​ ಈ ಬಗ್ಗೆ ಮಾತನಾಡಿದ್ದು, ಈ ಘಟಕವು ಸಂಪೂರ್ಣವಾಗಿ ಮಂಗಳಮುಖಿಯರೇ ನಡೆಸುತ್ತಿದ್ದಾರೆ. ಹಾಗಾಗಿ ಇದು ಟ್ರಾನ್ಸ್​ಜೆಂಡರ್​ಗಳಿಂದ ನಡೆಸಲ್ಪಡುತ್ತಿರುವ ಮೊದಲ ನೀರಿನ ಘಟಕ ಎಂದು ಹೇಳಿದರು.

    ನಂತರ ಮಾತು ಮುಂದುವರಿಸಿದ ಅವರು, ಸಮಾಜದಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಅದರಲ್ಲೂ ಸಮಾಜದಲ್ಲಿ ಬದುಕುತ್ತಿರುವವರು ಮುಂಗಳಮುಖಿಯರ ಬಗ್ಗೆ ಜಾಗೃತಿ ವಹಿಸಬೇಕು. ಸರಿಯಾದ ಉದ್ಯೋಗ ಸೃಷ್ಟಿಸಿಕೊಡಬೇಕು ಎಂದು ಹೇಳಿದರು.
    Published by:Harshith AS
    First published: