ಹೈದರಾಬಾದ್​ನಲ್ಲಿ ಅನಾಥ ವೃದ್ಧೆಗೆ ಕೈಯಾರೆ ಪೂರಿ ತಿನ್ನಿಸಿ ಮಾನವಿಯತೆ ಮೆರೆದ ಟ್ರಾಫಿಕ್ ಪೊಲೀಸ್ ಪೇದೆ

 • News18
 • Last Updated :
 • Share this:
  ಅನುರಾಗ್ ವರ್ಮಾ , ಸಿಎನ್​ಎಸ್​ ನ್ಯೂಸ್18

  ಹೈದರಾಬಾದ್ (ಏ.03) : ಪೊಲೀಸ್ ಟ್ರಾಫಿಕ್​ ಪೊಲೀಸ್ ಪೇದೆಯೊಬ್ಬ ರಸ್ತೆಯಲ್ಲೆ ಅನಾಥ ವೃದ್ಧೆಯೊಬ್ಬರಿಗೆ ತನ್ನ ಕೈಯಾರೆ ಪೂರಿ ತಿನ್ನಿಸಿ ಎಲ್ಲರ ಮೆಚ್ಚುಗೆ ಪಾತ್ರರಾಗಿರುವ ಘಟನೆ ಹೈದರಾಬಾದ್​ ನಲ್ಲಿ ನಡೆದಿದೆ.

  ಇಲ್ಲಿಯ ಕುಕಟ್ಪಳ್ಳಿಯ ಟ್ರಾಫಿಕ್ ಪೇದೆ ಬಿ.ಗೋಪಾಲ್, ಅನಾಥ ವೃದ್ಧೆಗೆ ಊಟ ಮಾಡಿಸಿ ಮಾನವಿಯತೆ ಮೆರೆದಿದ್ದಾರೆ. ಕುಕಟ್ಪಳ್ಳಿಯ ಜೆಎನ್​ಟಿಯು ಬಳಿ ಸೇವೆ ಸಲ್ಲಿಸುತ್ತಿರುವ ವೇಳೆ ಪಕ್ಕದ ರಸ್ತೆ ಬಳಿ ವೃದ್ಧೆ ಕೂತುಕೊಂಡಿರೋದು ಕಂಡಿದೆ.

  ಕೂಡಲೇ ಅಲ್ಲಿಗೆ ಹೋಗಿ ವೃದ್ಧೆಯನ್ನು ವಿಚಾರಿಸಿದ್ದಾರೆ. ವೃದ್ಧೆ ಹಸಿವಿನಿಂದ ಬಳಲುತ್ತಿರೋದು ಗೊತ್ತಾಗಿದೆ. ಕೂಡಲೇ ಹೋಟೆಲ್​​ನಿಂದ ಪೂರಿ ತಂದು ತಮ್ಮ ಕೈಯಾರೆ ತಿನ್ನಿಸಿ ಮಾನವಿಯತೆ ಮೆರೆದಿದ್ದಾರೆ.

  ಅನಾಥ ವೃದ್ಧೆಗೆ ಪೂರಿ ತಿನ್ನಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ರಾಫಿಕ್ ಪೇದೆ ಗೋಪಾಲ್​​ಗೆ ರಾಜ್ಯಾಧ್ಯಂತ ಪ್ರಶಂಸೆಗಳ ಸುರಿಮಳೆ ಹರಿದು ಬರುತ್ತಿವೆ.  ಇನ್ನೂ ಹೈದರಾಬಾದ್ ಪೊಲೀಸ್ ಆಯುಕ್ತರ  ಪೊಲೀಸ್ ಪೇದೆಯ ಈ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

  This is called change, not only friendly police , also called social responsibility 🙏🙏

  — Satya (@SatyaRajulapudi) April 1, 2018   
  First published: