Jignesh Mevani| ಕೊರೋನಾ ದುರಾಡಳಿತದ ಫಲವಾಗಿ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದಾರೆ; ಜಿಗ್ನೇಶ್ ಮೇವಾನಿ

ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಗುಜರಾತ್​ನಲ್ಲಿ ದುರಾಡಳಿತ ನೀಡಿದ್ದಕ್ಕಾಗಿ ರೂಪಾನಿ ರಾಜೀನಾಮೆ ನೀಡಿದ್ದರೆ ಗುಜರಾತಿನ ಜನರು ಮೆಚ್ಚುತ್ತಿದ್ದರು ಎಂದು ಜಿಗ್ನೇಶ್‌‌ ಮೇವಾನಿ ಹೇಳಿದ್ದಾರೆ.

ಜಿಗ್ನೇಶ್ ಮೇವಾನಿ.

ಜಿಗ್ನೇಶ್ ಮೇವಾನಿ.

 • Share this:
  ಗುಜರಾತ್ (ಸೆಪ್ಟೆಂಬರ್ 11); ದಿಢೀರ್ ಬೆಳವಣಿಗೆಯಲ್ಲಿ ಗುಜರಾತ್​ ಮುಖ್ಯಮಂತ್ರಿ (Gujarath Chief Minister) ವಿಜಯ್​ ರೂಪಾಣಿ (Vijay Rupani) ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ರಾಷ್ಟ್ರೀಯ ಮಟ್ಟದಲ್ಲೂ ಸಂಚಲನ ಮೂಡಿಸಿದೆ. ಇದ್ದಕ್ಕಿದ್ದಂತೆ ವಿಜಯ್ ರೂಪಾಣಿ ರಾಜೀನಾಮೆ ನೀಡಿದ್ದೇಕೆ? ಇದರ ಹಿಂದಿನ ಲೆಕ್ಕಾಚಾರ ಏನು ಎಂಬಿತ್ಯಾದಿ ಕುತೂಹಲ ಮೂಡಿವೆ. ಗುಜರಾತ್​ನಲ್ಲಿ ಚುನಾವಣೆ ನಡೆಯಲು ಇನ್ನೂ ಒಂದು ವರ್ಷ ಬಾಕಿಯಿರುವಾಗ ಈ ಧಿಡೀರ್‌ ರಾಜೀನಾಮೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. "ಹೊಸ ಶಕ್ತಿಯೊಂದಿಗೆ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು, ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ" ಎಂದು ನಿರ್ಗಮಿತ ಸಿಎಂ ವಿಜಯ್ ರೂಪಾನಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

  ಆದರೆ, ಊನಾ ಚಳವಳಿಯ ನಾಯಕ, ಗುಜರಾತ್‌ ಶಾಸಕ ಜಿಗ್ನೇಶ್ ಮೇವಾನಿ ಅವರು ಮುಖ್ಯಮಂತ್ರಿಯ ಕೋವಿಡ್ ದುರಾಡಳಿತವನ್ನು ಟೀಕಿಸಿದ್ದಾರೆ. ಅಲ್ಲದೆ, "ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಗುಜರಾತ್​ನಲ್ಲಿ ದುರಾಡಳಿತ ನೀಡಿದ್ದಕ್ಕಾಗಿ ರೂಪಾನಿ ರಾಜೀನಾಮೆ ನೀಡಿದ್ದರೆ ಗುಜರಾತಿನ ಜನರು ಮೆಚ್ಚುತ್ತಿದ್ದರು" ಎಂದು ಜಿಗ್ನೇಶ್‌‌ ಹೇಳಿದ್ದಾರೆ.  ಈ ಬಗ್ಗೆ ತಮ್ಮ ಖಾಸಗಿ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, "ಗುಜರಾತ್ ಸಿಎಂ ವಿಜಯ್ ರೂಪಾನಿ ರಾಜೀನಾಮೆ. ಕೋವಿಡ್ ಬಿಕ್ಕಟ್ಟಿನ ನಿರ್ವಹಣೆಗಾಗಿ ರೂಪಾನಿ ರಾಜೀನಾಮೆ ನೀಡಿದ್ದರೆ ಗುಜರಾತಿನ ಜನರು ಮೆಚ್ಚುತ್ತಿದ್ದರು. 2022 ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಲೆಕ್ಕಾಚಾರಕ್ಕಾಗಿ ಈ ರಾಜೀನಾಮೆ ನೀಡಲಾಗಿದೆ" ಎಂದು ಅವರು ಹೇಳಿದ್ದಾರೆ.

  ಬಿಜೆಪಿ ಕೇಂದ್ರ ನಾಯಕತ್ವವು ಮುಖ್ಯಮಂತ್ರಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಂತರ ರೂಪಾನಿ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

  ಇದನ್ನೂ ಓದಿ: Gujarat Development| ಬಿಜೆಪಿ ಹೈಕಮಾಂಡ್ ಗುಜರಾತ್ ಸಿಎಂ ರೂಪಾಣಿ ರಾಜೀನಾಮೆ ಪಡೆದದ್ದೇಕೆ?

  ಬಿಜೆಪಿಯು ರಾಜ್ಯದ ನಾಯಕತ್ವವನ್ನು ಬದಲಾಯಿಸುತ್ತಿರುವುದು ಇದುವೆ ಮೊದಲೇನಲ್ಲ. ಇತ್ತೀಚೆಗೆ ಉತ್ತರಾಖಂಡ ಮತ್ತು ಕರ್ನಾಟಕದಲ್ಲಿ ಮುಖ್ಯಮಂತ್ರಿಯನ್ನು ಬಿಜೆಪಿ ಬದಲಿಸಿತ್ತು. ರಾಜ್ಯದ ಮುಖ್ಯಮಂತ್ರಿಯನ್ನು ಬದಲಾಯಿಸಿದ್ದಕ್ಕಾಗಿ ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಇನ್ನೂ ಪ್ರತಿಕ್ರಿಯಿಸಿಲ್ಲ.
  Published by:MAshok Kumar
  First published: