ತನ್ನ ಪ್ರತಿಮೆಗೆ ತಾನೇ ಪ್ರತಿನಿತ್ಯ ಪೂಜೆ ಮಾಡಿಕೊಳ್ಳುತ್ತಿರುವ ಅರ್ಚಕ

news18
Updated:August 20, 2018, 3:19 PM IST
ತನ್ನ ಪ್ರತಿಮೆಗೆ ತಾನೇ ಪ್ರತಿನಿತ್ಯ ಪೂಜೆ ಮಾಡಿಕೊಳ್ಳುತ್ತಿರುವ ಅರ್ಚಕ
news18
Updated: August 20, 2018, 3:19 PM IST
ನ್ಯೂಸ್​ 18 

ಕೊಲ್ಕತ್ತಾ (ಆ.20) : ತನಗೆ ಬಿದ್ದ ಕನಸಿನಿಂದ ಪ್ರೇರಿಪಿತಗೊಂಡ ಅರ್ಚಕನೊಬ್ಬ ತನ್ನ ಪ್ರತಿಮೆಯನ್ನು ತಾನೇ ಪ್ರತಿಷ್ಠಾಪಿಸಿ ಅದಕ್ಕೇ  ದಿನನಿತ್ಯ ಪೂಜೆ ಮಾಡುತ್ತಿರುವ ಅಪರೂಪದ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಕಂಡು ಬಂದಿದೆ

ಕೊಲ್ಕತ್ತಾದಿಂದ 125 ಕಿ. ಮೀ ದೂರ ಇರುವ ಬುರುದ್ವಾನ್​ ನಿಯಮಂಟಪುರ್​ನ ಶ್ರೀ ಶ್ರೀ ಸಿಂಗಾರಾಯ್​ ಬಾಬಾ ಧಾಮ್​ ಆದಿ ಶಕ್ತಿ ಶಿವ್​ ಮಂದಿರ್​ ದಲ್ಲಿ ಈ ರೀತಿ ವಿಲಕ್ಷಣ ಘಟನೆ ನಡೆದು ಕೊಂಡು ಬಂದಿದೆ.

ಸಿಂಗಾರಾಯ್​ ಎಂಬ ಸಾಧು ಕನಸಿನಲ್ಲಿ ಒಮ್ಮೆ ದೇವರು ಬಂದು  ತನ್ನನ್ನು ತಾನೇ ಪೂಜೆ ಮಾಡಿಕೊಳ್ಳುವಂತೆ ತಿಳಿಸಿದರಂತೆ. ಈ ಹಿನ್ನಲೆಯಲ್ಲಿ ಸಿಂಗಾರಾಯ್​ ತನ್ನ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದಾನೆ.

ದೇವರು ನಮ್ಮ ಒಳಗೆ ಇದ್ದಾನೆ. ನಾವು ನಮ್ಮ ಆತ್ಮ, ಯೋಚನೆಯನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬೇಕು. ನಾನು ನನ್ನ ಮೇಲೆ, ಸಮಾಜಕ್ಕ ನಾನು ನೀಡುತ್ತಿರುವ ಸೇವೆ ಬಗ್ಗೆ ನಂಬಿಕೆ  ಹೊಂದಿದ್ದೇನೆ. ನನ್ನನ್ನೇ ನಾನು ಆರಾಧನೆ ಮಾಡಿಕೊಳ್ಳುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಈ ಹಿನ್ನಲೆ ಹಲವರು ವರ್ಷಗಳಿಂದ ಸಿಂಗಾರಾಯ್​  ಬಾಬಾ ತನ್ನ ಪ್ರತಿಮೆಗೆ ಪೂಜೆ ಮಾಡುತ್ತಿದ್ದಾನೆ.

ಈ ದೇವಾಲಯದಲ್ಲಿ ಬಾಬಾ ಅವರ ಎರಡು ವಿವಿಧ ಅವಾಂತರದ ಪ್ರತಿಮೆಗಳಿದ್ದು, ಒಂದರಲ್ಲಿ ಗದೆ ಮತ್ತೊಂದರಲ್ಲಿ ತ್ರಿಶೂಲ ಹಿಡಿದಿದ್ದಾರೆ.
Loading...

ಈತನ ದೇವಾಲಯಕ್ಕೆ ಜಾರ್ಖಂಡ್​ ಮಾಜಿ ಮುಖ್ಯಮಂತ್ರಿ ಶಿಬೂ ಸೊರೆನ್​ ಕೂಡ ಭೇಟಿ ಮಾಡಿದ್ದಾರೆ.
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...