ಬಡತನದ ಅಣಕ; ಹಸಿದವರ ಮುಂದೆ ನಕಲಿ ಆಹಾರ ಇಟ್ಟು ಛಾಯಾಗ್ರಾಹಕನ ಕುಹಕ


Updated:July 24, 2018, 7:58 PM IST
ಬಡತನದ ಅಣಕ; ಹಸಿದವರ ಮುಂದೆ ನಕಲಿ ಆಹಾರ ಇಟ್ಟು ಛಾಯಾಗ್ರಾಹಕನ ಕುಹಕ

Updated: July 24, 2018, 7:58 PM IST
- ರಾಕ ಮುಖರ್ಜಿ, ನ್ಯೂಸ್18

ನವದೆಹಲಿ(ಜು. 24): ಭಾರತದಲ್ಲಿರುವ ಹಸಿವು ಮತ್ತು ಬಡತನವನ್ನು ಫೋಟೋದಲ್ಲಿ ಸೆರೆ ಹಿಡಿಯುವ ಪ್ರಯತ್ನದಲ್ಲಿ ಛಾಯಾಗ್ರಾಹಕನೊಬ್ಬ ಪೇಚಿಗೆ ಸಿಲುಕಿದ್ಧಾನೆ. ಹಸಿದವರ ಮುಂದೆ ನಕಲಿ ಆಹಾರವಿರುವ ಟೇಬಲ್ ಇಟ್ಟು ಈತ ತೆಗೆದಿರುವ ಸರಣಿ ಫೋಟೋಗಳು ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿವೆ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಬಡತನವನ್ನು ಪ್ರತಿಬಿಂಬಿಸುವ ಸಲುವಾಗಿ ವರ್ಲ್ಡ್​​ಪ್ರೆಸ್ ಫೋಟೋದ ಇನ್ಸ್​ಟಾಗ್ರಾಂ ತಾಣದಲ್ಲಿ ಈ ಸರಣಿ ಫೋಟೋಗಳು ಪ್ರಕಟವಾಗಿವೆ. ಇಟಲಿ ದೇಶದ ಅಲೆಸ್ಸಿಯೋ ಮಾಮೋ ಎಂಬಾತನೇ ಆ ಫೋಟೋಗ್ರಾಫರ್. ಬಡವರು ತಿನ್ನಬೇಕೆಂದು ಕನಸು ಕಾಣುವ ಭೋಜನವನ್ನು ಜನರಿಗೆ ತೋರಿಸುವುದು, ಆ ಮೂಲಕ ಬಡವರ ಅಭಿಲಾಷೆಯನ್ನು ಬಿಂಬಿಸುವುದು ಈ ಛಾಯಾಗ್ರಾಹಕನ ಉದ್ದೇಶವಿದ್ದಂತಿದೆ. ಅದಕ್ಕಾಗಿ, ಈತ ಟೇಬಲ್ ಹಾಗೂ ವಿವಿಧ ತರಹದ ನಕಲಿ ಆಹಾರವನ್ನು ಸೃಷ್ಟಿಸಿದ್ದಾನೆ. ಆ ಬಡವರು ಆಸೆ ಪಡುವ ಆಹಾರವನ್ನು ನಕಲಿ ತಯಾರಿಸಿ ಟೇಬಲ್ ಮುಂದಿಟ್ಟು, ಆ ಬಡಮಕ್ಕಳು ಕಣ್ಮುಚ್ಚಿಕೊಂಡು ಕನಸು ಕಾಣುತ್ತಿರುವಂತೆ ಫೋಟೋಗಳನ್ನು ಕ್ಲಿಕ್ಕಿಸಿದ್ದಾನೆ.


Loading...

ಈತನ ಫೋಟೋಗಳಿಗೆ ವ್ಯಾಪಕ ಟೀಕೆಗಳು ಬಂದಿವೆ. ಇದು ಪಾಶ್ಚಿಮಾತ್ಯ ಚಿಂತನೆ ಮತ್ತು ಉದ್ಧಟತನದ ಪ್ರತಿಬಿಂಬವಾಗಿದೆ… ಇಂಥ ಕೆಟ್ಟ ಫೋಟೋಜರ್ನಲಿಸಮ್​ಗಿಂತ ನನ್ನ ಬಡ ರಾಷ್ಟ್ರವೇ ಎಷ್ಟೋ ವಾಸಿ… ಸ್ಥಳೀಯ ಜನರು ಮತ್ತು ವಾಸ್ತವ ಸ್ಥಿತಿಯನ್ನು ನಿಮ್ಮಂಥ ವಿದ್ಯಾವಂತ ಜನರೇ ಗೌರವಿಸದಿರುವುದು ನಿಜಕ್ಕೂ ದುರದೃಷ್ಟಕರ ಎಂದು ಹಲವರು ಬಯ್ದಿದ್ದಾರೆ.ಹಸಿವಿನಿಂದ ಬಳಲುತ್ತಿದ್ದವರ ಮುಂದೆ ನಕಲಿ ಆಹಾರ ಇಟ್ಟು ಫೋಟೋ ಕ್ಲಿಕ್ಕಿಸಿ ವಿಜೃಂಬಿಸುತ್ತಿರುವ ನಿಮಗೆ ಆ ಮಕ್ಕಳಿಗೆ ನೈಜ ಆಹಾರ ಕೊಟ್ಟು ಹಸಿವು ನೀಗಿಸಬೇಕೆಂದು ಅನಿಸಲಿಲ್ಲವೇ ಎಂದೊಬ್ಬರು ಪ್ರಶ್ನಿಸಿದ್ಧಾರೆ.

ಇದು ಹಸಿವನ್ನು ಪ್ರತಿಬಿಂಬಿಸುವುದಿಲ್ಲ. ಬದಲಾಗಿ ಹಸಿವನ್ನು ಅಣಗಿಸಿ, ಶೋಷಿಸಿ ಕುಹಕವಾಡುತ್ತದೆ ಎಂದು ಕೆಲವರು ವ್ಯಗ್ರರಾಗಿದ್ಧಾರೆ.
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...