ರಾಹುಲ್ ಗಾಂಧಿಯವರ ವಿಡಿಯೋದ ಹಿನ್ನೆಲೆಯಲ್ಲಿರುವ ಈ ಫೋಟೋ ತೆಗೆದವರು ಯಾರು ಗೊತ್ತಾ..?

ಟೀಕೆಗಿಂತ ವಿಡಿಯೋದ ಬ್ಯಾಕ್‌ಗ್ರೌಂಡ್‌ನಲ್ಲಿ ಕಾಣಿಸಿಕೊಂಡ ಫೋಟೋಗ್ರಾಫ್‌ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ನಲ್ಲಿ ಹೆಚ್ಚು ಜನರ ಗಮನ ಸೆಳೆದಿದೆ. ನೀಲಿ ಆಕಾಶದ ಜತೆಗೆ ಹಿಮದಿಂದ ಆವೃತವಾದ ಪರ್ವತ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

 • Share this:

  ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟ್ಟರ್‌, ಇನ್ಸ್ಟಾಗ್ರಾಮ್‌, ರೆಡ್ಡಿಟ್‌ ಇತ್ಯಾದಿಗಳಲ್ಲಿ ಪ್ರತಿದಿನ ಹಲವು ವಿಡಿಯೋಗಳೂ, ಫೋಟೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಅದು ರಾಜಕೀಯದ ವಿಚಾರವೇ ಆಗಲಿ, ಅಥವಾ ಕ್ರೀಡೆ, ಟ್ರೆಂಡಿಂಗ್ ಇತ್ಯಾದಿ ವಿಚಾರಗಳೇ ಆಗಲಿ ಟ್ರೆಂಡಿಂಗ್‌ ಅಥವಾ ವಿವಾದ ಆಗುತ್ತಲೇ ಇರುತ್ತದೆ. ಇದೇ ರೀತಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ವಿಡಿಯೋವೊಂದರಲ್ಲಿ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಸಾಂಕ್ರಾಮಿಕ ರೋಗವನ್ನು ನಿಭಾಯಿಸಿರುವ ಕ್ರಮವನ್ನು ಟೀಕಿಸಿದ್ದಾರೆ. 51 ವರ್ಷದ ಕಾಂಗ್ರೆಸ್‌ ನಾಯಕ ಕೋವಿಡ್ - 19 ಮೂರನೇ ಅಲೆಯನ್ನು ನಿಭಾಯಿಸಲು ಕೇಂದ್ರ ಸರ್ಕಾರಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಲಿಂಕ್ ಮೂಲಕ ಕಾಣಿಸಿಕೊಂಡರು. ಅಲ್ಲದೆ, ಶ್ವೇತಪತ್ರವನ್ನು ಬಿಡುಗಡೆ ಮಾಡಿದರು.

  ಆದರೆ, ಅವರ ಟೀಕೆಗಿಂತ ವಿಡಿಯೋದ ಬ್ಯಾಕ್‌ಗ್ರೌಂಡ್‌ನಲ್ಲಿ ಕಾಣಿಸಿಕೊಂಡ ಫೋಟೋಗ್ರಾಫ್‌ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ನಲ್ಲಿ ಹೆಚ್ಚು ಜನರ ಗಮನ ಸೆಳೆದಿದೆ. ನೀಲಿ ಆಕಾಶದ ಜತೆಗೆ ಹಿಮದಿಂದ ಆವೃತವಾದ ಪರ್ವತ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.


  ನಾನು ಹಿಂಭಾಗದಲ್ಲಿರುವ ಫೋಟೋಗ್ರಾಫ್‌ ಅನ್ನು ಇಷ್ಟಪಡುತ್ತೇನೆ! ಇದು ನಿಮ್ಮದೇ @raihanrvadra? ಎಂದು ವಾಸ್ತುಶಿಲ್ಪಿ ಸಿತು ಮಹಾಜನ್ ಕೊಹ್ಲಿ ರಾಹುಲ್‌ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ರಾಜೀವ್ ವಾದ್ರಾ ಅವರನ್ನು ಟ್ಯಾಗ್ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕ ಶ್ರೀನಿವಾಸ್‌ ಬಿ.ವಿ. ಮಾಡಿದ್ದ ಟ್ವೀಟ್‌ನಲ್ಲಿ ಈ ಪ್ರಶ್ನೆ ಕೇಳಿದ್ದರು ಸಿತು ಮಹಾಜನ್ ಕೊಹ್ಲಿ.


  ಇನ್ನು, ಈ ಪ್ರಶ್ನೆಗೆ ಉತ್ತರಿಸಿದ ರೈಹಾನ್ ವಾದ್ರಾ, ಹೌದು ತಾನೇ ಫೋಟೋಗ್ರಾಫ್‌ ಎಂದು ದೃಢಪಡಿಸಿದರು.


  ನಂತರ ಸಿತು ಮಹಾಜನ್ ಕೊಹ್ಲಿ, ಈ ಫೋಟೋ ಬೆರಗುಗೊಳಿಸುತ್ತದೆ ಎಂದು ಶ್ಲಾಘಿಸಿದರು. ನೀವು ಈಗಾಗಲೇ ನನ್ನ ಮೆಚ್ಚುಗೆಯ ಫೋಟೋಗ್ರಾಫರ್‌.. ನನ್ನ ಇಂಟೀರಿಯರ್‌ಗಳಿಗೆ ಅದು ಲೈಫ್‌ ಅನ್ನು ಸೇರಿಸುತ್ತದೆ! ನನಗೆ ಈ ಫೋಟೋದ ನಕಲು ಬೇಕು ಎಂದು ಆಕೆ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಬರೆದುಕೊಂಡಿದ್ದಾರೆ.


  ಇದನ್ನೂ ಓದಿ: Delta Plus Variant in India| ಮೈಸೂರಿನಲ್ಲೊಂದು ಡೆಲ್ಟಾ ಪ್ಲಸ್​ ಕೊರೋನಾ ಕೇಸ್​ ಪತ್ತೆ; ಸಚಿವ ಸುಧಾಕರ್ ಮಾಹಿತಿ

  ಇದಕ್ಕೆ ಪ್ರತಿಕ್ರಿಯೆ ನೀಡಿದ 20 ವರ್ಷ ಹರೆಯದ ರೈಹಾನ್ ವಾದ್ರಾ, ಸ್ಮೈಲಿ ಫೇಸಿ ಎಮೋಜಿಗಳೊಂದಿಗೆ ಧನ್ಯವಾದ ಹೇಳಿದರು. ಅಲ್ಲದೆ, ನಿಮಗೆ ನನ್ನ ವರ್ಕ್‌ ಇಷ್ಟವಾಗಿದ್ದಕ್ಕೆ ಸಂತೋಷವಾಗಿದೆ ಎಂದು ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

  ರೈಹಾನ್ ರಾಜೀವ್ ವಾದ್ರಾ, ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಪತಿ ರಾಬರ್ಟ್ ವಾದ್ರಾ ಅವರ ಪುತ್ರ. ಬಡ್ಡಿಂಗ್ ಫೋಟೋಗ್ರಾಫರ್‌ ಆಗಿರುವ ರೈಹಾನ್‌ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗ್ರಫಿ ಪೇಜ್‌ ಒಂದನ್ನು ನಡೆಸುತ್ತಾರೆ. ಅವರು ನಿಯಮಿತವಾಗಿ ತಾನು ತೆಗೆದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇವರ ಈ ಪೇಜ್‌ನಲ್ಲಿ 8 ಸಾವಿರಕ್ಕೂ ಹೆಚ್ಚು ಹಿಂಬಾಲಕರು ಸಹ ಇದ್ದಾರೆ.


  ಇದನ್ನೂ ಓದಿ: Bit Coin| ಬಿಟ್‌ ಕಾಯಿನ್ ಕುರಿತು ನೀವು ತಿಳಿದುಕೊಳ್ಳಬೇಕಾದ ಅಂಶಗಳೇನು..?

  ಇನ್ನು, ರಾಹುಲ್ ಗಾಂದಿ ವಿಡಿಯೋದ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ಫೋಟೋಗ್ರಾಫ್‌ ಫೆಬ್ರವರಿಯಲ್ಲಿ ರೈಹಾನ್‌ ವಾದ್ರಾ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಎವರೆಸ್ಟ್ ಪರ್ವತದ ಫೋಟೋ ಎಂದು ತೋರುತ್ತದೆ. ''ಆನ್‌ ಟಾಪ್‌ ಆಫ್‌ ದಿ ವರ್ಲ್ಡ್‌! ಆಕಾಶದಿಂದ ಮೌಂಟ್‌ ಎವರೆಸ್ಟ್!'' ಎಂದು ಅವರು ಈ ಫೋಟೋಗ್ರಾಫ್‌ಗೆ ಕ್ಯಾಪ್ಷನ್‌ ನೀಡಿದ್ದರು.
  ಕಳೆದ ವರ್ಷ, ರೈಹಾನ್‌ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸ ಹೋಗಿದ್ದ ಸಮಯದಲ್ಲಿ ತೆಗೆದ ಫೋಟೋಗ್ರಾಫ್‌ಗಳನ್ನು ಸಹ ಹಂಚಿಕೊಂಡಿದ್ದರು.

  First published: