ಸಮುದ್ರ ತೀರದಲ್ಲೊಂದು ಮನಕಲುಕುವ ದೃಶ್ಯ; ಆಹಾರವೆಂದು ಭಾವಿಸಿ ತನ್ನ ಮರಿಗೆ ಸಿಗರೇಟ್​ ತುಂಡು ತಿನಿಸಿದ ತಾಯಿ ಪಕ್ಷಿ

ಬೀಚ್​ಗಳಿಗೆ ಬರುವ ಜನರು ಸಮುದ್ರ ತೀರದಲ್ಲಿ ಕುಳಿತು ಮೋಜು-ಮಸ್ತಿ ಮಾಡಿ, ಪ್ಲಾಸ್ಟಿಕ್​ ತ್ಯಾಜ್ಯ ಹಾಗೂ ಸಿಗರೇಟ್​ ತುಂಡುಗಳನ್ನು ಬಿಸಾಡಿ ಹೋಗುತ್ತಾರೆ. ಇಲ್ಲಿಗೆ ಆಹಾರ ಹರಸಿ ಬರುವ ಪ್ರಾಣಿ-ಪಕ್ಷಿಗಳು ಆ ತ್ಯಾಜ್ಯವನ್ನೇ ಆಹಾರ ಎಂದು ಭಾವಿಸಿ ತಿನ್ನುವ ದುಸ್ಥಿತಿ ಬಂದೊದಗಿದೆ.

Latha CG | news18
Updated:June 29, 2019, 5:48 PM IST
ಸಮುದ್ರ ತೀರದಲ್ಲೊಂದು ಮನಕಲುಕುವ ದೃಶ್ಯ; ಆಹಾರವೆಂದು ಭಾವಿಸಿ ತನ್ನ ಮರಿಗೆ ಸಿಗರೇಟ್​ ತುಂಡು ತಿನಿಸಿದ ತಾಯಿ ಪಕ್ಷಿ
ತನ್ನ ಮರಿಗೆ ಸಿಗರೇಟ್​ ತುಂಡನ್ನು ತಿನಿಸುತ್ತಿರುವ ತಾಯಿ ಪಕ್ಷಿ
  • News18
  • Last Updated: June 29, 2019, 5:48 PM IST
  • Share this:
ಫ್ಲೋರಿಡಾ,(ಜೂ.29): ಆಧುನಿಕತೆ ಬೆಳೆದಂತೆ ಮಾನವನ ದುರಾಸೆಗಳಿಗೆ ಕೊನೆಯಿಲ್ಲದಂತಾಗಿದೆ. ಈ ಮನುಷ್ಯನ ದುರಾಸೆಗಳಿಗೆ ಬಲಿಯಾಗುತ್ತಿರುವುದು ಮಾತ್ರ ಪ್ರಕೃತಿ ಮಾತೆ. ಹೌದು, ದಿನೇ ದಿನೇ ಮಾನವನ ಸ್ವಾರ್ಥಕ್ಕೆ ಪ್ರಕೃತಿ ನಾಶವಾಗುತ್ತಿದೆ. ಮನುಷ್ಯನ ದುರಾಸೆ ಇಡೀ ಜೀವ ಸಂಕುಲವನ್ನೇ ಸುಡುತ್ತಿದೆ. ಇದು ಎಷ್ಟರ ಮಟ್ಟಿಗೆ ಎಂದರೆ, ಪ್ಲೋರಿಡಾದ ಸಮುದ್ರ ತೀರದಲ್ಲಿ ತಾಯಿ ಪಕ್ಷಿಯೊಂದು ಆಹಾರ ಎಂದು ಭಾವಿಸಿ ಸಿಗರೇಟ್​ ತುಂಡನ್ನು ತನ್ನ ಮರಿಗೆ ತಿನಿಸುತ್ತಿದೆ. ಈ ಫೋಟೋ ಮನಕಲಕುವಂತಿದ್ದು, ಮಾನವನ ದುಷ್ಕೃತ್ಯಗಳಿಂದ ಮೂಕ ಪ್ರಾಣಿಗಳಿಗೆ ಬಂದೊಗಿರುವ ದುಸ್ಥಿತಿ ಇಲ್ಲಿ ಅರ್ಥವಾಗುತ್ತದೆ.

ಈ ಮನಕಲಕುವ ಫೋಟೋ ಕ್ಲಿಕ್ಕಿಸಿದ್ದು ನ್ಯಾಷನಲ್ ಆಡೊನಾನ್ ಸೊಸೈಟಿಯ ಸ್ವಯಂಸೇವಕ ಮತ್ತು ಛಾಯಾಗ್ರಾಹಕರಾಗಿರುವ ಕರೆನ್ ಮೇಸನ್. ಕೆಲವು ದಿನಗಳ ಹಿಂದೆ ಕರೆನ್​​ ಫ್ಲೋರಿಡಾದ ಸೆಂಟ್ ಪೆಟಿಸ್ ಬೀಚ್​ಗೆ ಹೋಗಿದ್ದಾಗ ಈ ಚಿತ್ರವನ್ನು ಸೆರೆಹಿಡಿದಿದ್ದರು. ಈ ದುಷ್ಟ ಮಾನವ ಭೂಮಿ ಮೇಲೆ ಬದುಕುವ ಜೀವಿಗಳ ಪಾಲಿಗೆ ಎಂತಹ ಅಪಾಯವನ್ನು ತಂದೊಡ್ಡಿದ್ದಾನೆ ಎನ್ನುವುದನ್ನು ಈ ಚಿತ್ರ ಸ್ಪಷ್ಟವಾಗಿ ತೋರಿಸುತ್ತದೆ.ಈ ಬಗ್ಗೆ ಮಾತನಾಡಿದ ಕರೆನ್, ಬೀಚ್‍ನಲ್ಲಿ ತಾಯಿ ಹಕ್ಕಿ ಮರಿಗೆ ಏನೋ ವಿಚಿತ್ರವಾದ ವಸ್ತುವನ್ನು ತಿನಿಸುತ್ತಿರುವುದು ನನ್ನ ಕಣ್ಣಿಗೆ ಬಿತ್ತು. ಹಕ್ಕಿ ಮೀನು ಅಥವಾ ಹುಳವನ್ನೋ ತಿನಿಸುತ್ತಿರಲಿಲ್ಲ, ಹೀಗಾಗಿ ನಾನು ಅದರ ಫೋಟೋ ತೆಗೆದೆ. ಆಗ ಹಕ್ಕಿ ಸಿಗರೇಟ್ ತಿನಿಸುತ್ತಿದೆ ಎನ್ನುವುದು ನನಗೆ ಗೊತ್ತಾಗಲಿಲ್ಲ. ಮನೆಗೆ ಬಂದ ಬಳಿಕ ಫೋಟೋಗಳನ್ನು ನೋಡಿದಾಗ ಹಕ್ಕಿ ಮರಿಗೆ ಸಿಗರೇಟ್ ತುಂಡನ್ನು ತಿನ್ನಿಸುತ್ತಿರುವುದನ್ನು ಕಂಡು ಅಚ್ಚರಿಯ ಜೊತೆಗೆ ಬೇಸರವೂ ಆಯಿತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಏರ್​ಪೋರ್ಟ್​ಗೆ ತೆರಳುತ್ತಿದ್ದ ಕಾರನ್ನು ಕೆಸರಿನ ಹೊಂಡದತ್ತ ದಾರಿತೋರಿಸಿದ ಗೂಗಲ್ ಮ್ಯಾಪ್!

ಬೀಚ್​ಗಳಿಗೆ ಬರುವ ಜನರು ಸಮುದ್ರ ತೀರದಲ್ಲಿ ಕುಳಿತು ಮೋಜು-ಮಸ್ತಿ ಮಾಡಿ, ಪ್ಲಾಸ್ಟಿಕ್​ ತ್ಯಾಜ್ಯ ಹಾಗೂ ಸಿಗರೇಟ್​ ತುಂಡುಗಳನ್ನು ಬಿಸಾಡಿ ಹೋಗುತ್ತಾರೆ. ಇಲ್ಲಿಗೆ ಆಹಾರ ಹರಸಿ ಬರುವ ಪ್ರಾಣಿ-ಪಕ್ಷಿಗಳು ಆ ತ್ಯಾಜ್ಯವನ್ನೇ ಆಹಾರ ಎಂದು ಭಾವಿಸಿ ತಿನ್ನುವ ದುಸ್ಥಿತಿ ಬಂದೊದಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್​ ಆಗಿದ್ದು, ಪ್ರಸ್ತುತ ಸಂದರ್ಭದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮನುಷ್ಯ ಆಧುನೀಕರಣದತ್ತ ಹೆಜ್ಜೆ ಹಾಕುತ್ತಾ, ಮೊದಲು ಕಾಡು ಕಡಿದು ಎಲ್ಲವು ತನ್ನ ಜಾಗ ಎಂದು ವಿಶಾಲ ಮಾಡಿಕೊಂಡ. ಬಳಿಕ ಪ್ರಕೃತಿಗೆ ಮಾರಕವಾದ ಪ್ಲಾಸ್ಟಿಕ್​ ಇನ್ನಿತರ ತ್ಯಾಜ್ಯ ಎಲ್ಲವನ್ನೂ ಪ್ರಕೃತಿಯ ಮಡಿಲಿಗೆ ಹಾಕುತ್ತಾ ಬಂದ. ಪ್ಲಾಸ್ಟಿಕ್ ತ್ಯಾಜ್ಯ ವಿಷಕಾರಿ. ಅದು ಇಡೀ ಪರಿಸರವನ್ನು ಕಲುಷಿತಗೊಳಿಸುತ್ತದೆ. ಮೋಜು-ಮಸ್ತಿ ಎಂದು ಮಜಾ ಮಾಡುವ ಮನುಷ್ಯ ಪರಿಸರದ ಸ್ವಚ್ಚತೆ ಹಾಗೂ ಜೀವ ಸಂಕುಲದ ಬಗ್ಗೆ ಯೋಚನೆಯೇ ಮಾಡುವುದಿಲ್ಲ.ಮನುಷ್ಯನ ದುಷ್ಕೃತ್ಯಗಳಿಗೆ ಬಲಿಯಾಗುತ್ತಿರುವುದು ಮೂಕ ಪ್ರಾಣಿ-ಪಕ್ಷಿಗಳು ಎಂಬುದು ಶೋಚನೀಯ ಸಂಗತಿ. ಈ ಮನುಷ್ಯನ ಆಸೆಗೆ ಕೊನೆಯೇ ಇಲ್ಲ. ಎಲ್ಲವೂ ತನ್ನದೇ ಎಂಬ ದುರಹಂಕಾರದಲ್ಲಿ ಇಡೀ ಜೀವಮಂಡಲವನ್ನೇ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು ನಾಶ ಮಾಡುತ್ತಿದ್ದಾನೆ. ಇದು ಕೊನೆಗೆ ಯಾವ ಮಟ್ಟಕ್ಕೆ ಹೋಗಿ ತಲುಪುತ್ತದೆ ಎಂಬ ಅರಿವೂ ಸಹ ಅವನಿಗಿಲ್ಲ. ಪ್ರಕೃತಿ ಇದ್ದರೆ ಮಾತ್ರ ನಾವು ಎಂಬುದನ್ನು ಮರೆತು, ಅಹಂಕಾರ ಮೆರೆಯುತ್ತಿದ್ದಾನೆ.

First published:June 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ