ಪಕ್ಕದ ರಾಜ್ಯ ಹೈದರಾಬಾದ್​ನಲ್ಲಿ ಪ್ಲಾಸ್ಟಿಕ್​ನಿಂದ ಪೆಟ್ರೋಲ್​ ಉತ್ಪಾದನೆ; ಲೀಟರ್​ ಬೆಲೆ ಕೇವಲ 40 ರೂಪಾಯಿ!

ದಿನನಿತ್ಯ 200 ಕೆಜಿ ತ್ಯಾಜ್ಯ ಪ್ಲಾಸ್ಟಿಕ್​ನಿಂದ 200 ಲೀಟರ್​ ಪೆಟ್ರೋಲ್​ ಉತ್ಪಾದಿಸುತ್ತಿದ್ದಾರೆ. ಇಲ್ಲಿ ಉತ್ಪಾದಿಸಲಾದ ಪೆಟ್ರೋಲ್​, ಡೀಸೆಲ್​ನ್ನು ಅಲ್ಲಿನ ಸ್ಥಳೀಯ ಜನರಿಗೆ ಪ್ರತಿ ಲೀಟರ್​ಗೆ 40 ಅಥವಾ 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

Latha CG | news18
Updated:June 25, 2019, 6:15 PM IST
ಪಕ್ಕದ ರಾಜ್ಯ ಹೈದರಾಬಾದ್​ನಲ್ಲಿ ಪ್ಲಾಸ್ಟಿಕ್​ನಿಂದ ಪೆಟ್ರೋಲ್​ ಉತ್ಪಾದನೆ; ಲೀಟರ್​ ಬೆಲೆ ಕೇವಲ 40 ರೂಪಾಯಿ!
ಪ್ರೊ. ಸತೀಶ್​ ಕುಮಾರ್
  • News18
  • Last Updated: June 25, 2019, 6:15 PM IST
  • Share this:
ಹೈದರಾಬಾದ್​ (ಜೂ.25): ಪೆಟ್ರೋಲ್​​, ಡೀಸೆಲ್ ಬೆಲೆ ಚಿನ್ನದ ದರದಂತೆ ದಿನೇ ದಿನೇ ಗಗನಕ್ಕೇರುತ್ತಿದೆ. ಸದ್ಯ ಒಂದು ಲೀಟರ್​ ಪೆಟ್ರೋಲ್​ ಬೆಲೆ 70 ರೂ.ಗಿಂತಲೂ ಹೆಚ್ಚಿದೆ. ಇದಕ್ಕೆ ಕಾರಣ ತೈಲದ ಅಭಾವ. ಈಗಾಗಲೇ ತೈಲದ ವಿಚಾರವಾಗಿಯೇ ಅಮೆರಿಕ ಮತ್ತು ಇರಾನ್ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ಏರ್ಪಟ್ಟಿದೆ. ​ತೈಲ ನಿಕ್ಷೇಪ ಭಾರತದಲ್ಲಿ ಎಲ್ಲಿಯೂ ಸಿಗದ ಕಾರಣ ಭಾರತ ದುಬಾರಿ ಬೆಲೆ ಕೊಟ್ಟು ಗಲ್ಫ್​ ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಭೂಮಿಯಲ್ಲಿ ನೈಸರ್ಗಿಕವಾಗಿ ದೊರೆಯುವ ಈ ಇಂಧನವನ್ನು ಕೃತಕವಾಗಿ ತಯಾರಿಸುವ ಪ್ರಯೋಗಗಳು ನಡೆಯುತ್ತಲೇ ಇವೆ. ಆದರೆ ಯಾವುವು ಕೂಡ ನಿರೀಕ್ಷಿತ ಫಲ ಕೊಟ್ಟಿಲ್ಲ. ಇದೀಗ ಭಾರತದ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಪ್ಲಾಸ್ಟಿಕ್​ ಮೂಲಕ ಪೆಟ್ರೋಲ್​ ತಯಾರಿಸುವ ಮೂಲಕ ಹೊಸ ತಂತ್ರಜ್ಞಾನವನ್ನು ಪರಿಚಯಿಸಿಕೊಟ್ಟಿದ್ದಾರೆ.

ವೃತ್ತಿಯಲ್ಲಿ ಮೆಕ್ಯಾನಿಕಲ್​ ಎಂಜಿನಿಯರ್​ ಆಗಿರುವ ಪ್ರೊ.ಸತೀಶ್​ ಕುಮಾರ್​​ ಈ ನೂತನ ಪ್ರಯೋಗದ ರೂವಾರಿಯಾಗಿದ್ದಾರೆ. ಸತೀಶ್​ ಕುಮಾರ್​ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉದ್ಯಮ ನಡೆಸುತ್ತಿದ್ದಾರೆ.

ಪ್ಲಾಸ್ಟಿಕ್​ ಅನ್ನು ಮೂರು ಹಂತಗಳ ಪ್ರಕ್ರಿಯೆಯಲ್ಲಿ ಪರಿವರ್ತಿಸುವ ಮೂಲಕ ಪೆಟ್ರೋಲ್​ ಪ್ಯಾರೊಲಿಸಿಸ್ ಅ​ನ್ನು ಉತ್ಪಾದಿಸಬಹುದಾಗಿದೆ ಎಂದು ಸತೀಶ್ ಹೇಳುತ್ತಾರೆ. ಈ ಪ್ರಕ್ರಿಯೆಯು ಪ್ಲಾಸ್ಟಿಕ್​ ಅನ್ನು ತೈಲ, ಡೀಸೆಲ್, ಪೆಟ್ರೋಲ್​ ಆಗಿ ಪರಿವರ್ತಿಸಿ ಬಳಕೆ ಮಾಡಲು ಸಹಕಾರಿಯಾಗಿದೆ. 500 ಕೆ.ಜಿ ಬಳಕೆ ಮಾಡಲಾಗದ ಪ್ಲಾಸ್ಟಿಕ್​ನಿಂದ 400 ಲೀಟರ್​ ಪೆಟ್ರೋಲ್​ ಅನ್ನು ಉತ್ಪಾದಿಸಬಹುದಾಗಿದೆ. ಇದು ಸರಳ ಪ್ರಕ್ರಿಯೆಯಾಗಿದ್ದು, ನೀರಿನ ಅವಶ್ಯಕತೆ ಇಲ್ಲ. ಕೊಳಚೆ ನೀರನ್ನು ಇದು ಬಿಡುಗಡೆ ಮಾಡುವುದಿಲ್ಲ. ಇದರಿಂದ ವಾಯುಮಾಲಿನ್ಯವಂತೂ ಮೊದಲೇ ಆಗಲ್ಲ ಎಂದು ಸತೀಶ್​ ನ್ಯೂಸ್​ 18ಗೆ ತಿಳಿಸಿದ್ದಾರೆ.

ಇದನ್ನು ಓದಿ: ಇನ್ಮುಂದೆ ಸೂಪರ್ ಮಾರ್ಕೆಟ್​ನಲ್ಲೂ ಸಿಗಲಿದೆ ಪೆಟ್ರೋಲ್, ಡೀಸೆಲ್?

2016 ರಿಂದ ಮರುಬಳಕೆ ಮಾಡಲಾಗದ 50 ಟನ್​ ಪ್ಲಾಸ್ಟಿಕ್​ ಅನ್ನು ಪೆಟ್ರೋಲ್​ ಆಗಿ ಪರಿವರ್ತನೆ ಮಾಡಲಾಗಿದೆ. ಪ್ರಸ್ತುತ ದಿನನಿತ್ಯ 200 ಕೆಜಿ ತ್ಯಾಜ್ಯ ಪ್ಲಾಸ್ಟಿಕ್​ನಿಂದ 200 ಲೀಟರ್​ ಪೆಟ್ರೋಲ್​ ಉತ್ಪಾದಿಸುತ್ತಿದ್ದಾರೆ. ಇಲ್ಲಿ ಉತ್ಪಾದಿಸಲಾದ ಪೆಟ್ರೋಲ್​, ಡೀಸೆಲ್​ನ್ನು ಅಲ್ಲಿನ ಸ್ಥಳೀಯ ಜನರಿಗೆ ಪ್ರತಿ ಲೀಟರ್​ಗೆ 40 ಅಥವಾ 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಈ ಪ್ರಯೋಗವನ್ನು ಆರಂಭಿಸಿದ್ದರ ಹಿಂದಿನ ಪ್ರಮುಖ ಉದ್ದೇಶ ಪರಿಸರವನ್ನು ಕಾಪಾಡುವುದು. ನಾವು ಇದರಿಂದ ವಾಣಿಜ್ಯ ಲಾಭವನ್ನು ಅಪೇಕ್ಷಿಸುತ್ತಿಲ್ಲ. ನಮ್ಮ ಮುಂದಿನ ಪೀಳಿಗೆ, ಭವಿಷ್ಯ ಸ್ವಚ್ಛವಾಗಿರಬೇಕು. ನಾವು ನಮ್ಮ ಈ ತಂತ್ರಜ್ಞಾನವನ್ನು ಯಾವುದೇ ಆಸಕ್ತ ಉದ್ಯಮದೊಂದಿಗೆ ಹಂಚಲು ಸಿದ್ದರಿದ್ದೇವೆ ಎಂದು ಸತೀಶ್​ ಹೇಳಿದ್ದಾರೆ.

First published:June 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ