Viral News: 16ನೇ ವರ್ಷಕ್ಕೆ ಶಾಲೆ ಬಿಟ್ಟ, ಈಗ ಆತ ಕೋಟ್ಯಧಿಪತಿ... ಶ್ರೀಮಂತಿಕೆಯ ಗುಟ್ಟು ಬಿಚ್ಚಿಟ್ಟಿದ್ದಾನೆ!

Become Rich in Young Age: ಸಣ್ಣವಯಸ್ಸಿನಲ್ಲೇ ಈ ವ್ಯಕ್ತಿ ಮಿಲಿಯನೇರ್ ಆಗಿದ್ದು ಹೇಗೆ ಅನ್ನೋ ಕುತೂಹಲ ಎಲ್ಲರಲ್ಲಿತ್ತು. ತಾನು ಯಾವ ರೀತಿ ಪ್ಲಾನ್ ಮಾಡಿ ಶ್ರೀಮಂತ ಆದೆ ಅಂತ ಅವರೇ ವಿವರಿಸಿದ್ದಾರೆ ನೋಡಿ...

ಶ್ರೀಮಂತ ವ್ಯಕ್ತಿ

ಶ್ರೀಮಂತ ವ್ಯಕ್ತಿ

  • Share this:
ನಾವು ಹುಟ್ಟುವಾಗ ಶ್ರೀಮಂತರಾಗಿ (Rich) ಹುಟ್ಟುತ್ತೇವೋ ಅಥವಾ ಬಡವರಾಗಿ (Poor) ಹುಟ್ಟುತ್ತೇವೋ ಅದು ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ, ನಾವು ಸಾಯುವ ಮುನ್ನ ಶ್ರೀಮಂತರಾಗಿರುತ್ತೀವೋ ಅಥವಾ ಬಡವರಾಗೇ ಇರುತ್ತೀವೋ ಎಂಬುದು ನಮ್ಮ ಕೈಯಲ್ಲಿರುತ್ತದೆ ಎಂಬ ಮಾತನ್ನು ನೀವು ಕೇಳಿರಬಹುದು. ಅಲ್ಲದೆ, ಹೆಚ್ಚು ಓದಿದವರು ಮಾತ್ರ ಶ್ರೀಮಂತರಾಗ್ತಾರೆ, ಖ್ಯಾತ ವ್ಯಕ್ತಿಗಳಾಗ್ತಾರೆ (Famous People) ಎನ್ನುವುದು ಸಹ ತಪ್ಪು ಕಲ್ಪನೆ. ಶಾಲೆ,, ಕಾಲೇಜುಗಳನ್ನು ಅರ್ಧಕ್ಕೆ ಬಿಟ್ಟವರು ಶ್ರೀಮಂತರಾಗಿರುವ, ಮಹಾನ್‌ ಸಾಧನೆ ಮಾಡಿರುವ ಸಾಕಷ್ಟು ಉದಾಹರಣೆಗಳು (Example) ನಮ್ಮ ಕಣ್ಣ ಮುಂದೆ ಇದೆ. ನಾವು ಈಗ ಹೇಳಲು ಹೊರಟಿರುವ ಕತೆಯೂ ಅದೇ ರೀತಿ. 16ನೇ ವಯಸ್ಸಿನಲ್ಲಿ ಯಾವುದೇ ವಿದ್ಯಾರ್ಹತೆ ಇಲ್ಲದೆ ಶಾಲೆ ಬಿಟ್ಟ ವ್ಯಕ್ತಿ ಈಗ ಕೋಟ್ಯಧಿಪತಿಯಾಗಿದ್ದಾರೆ.

UKಯ ಯಾರ್ಕ್‌ಷೈರ್‌ನ ಸ್ಟೀವ್ ಪಾರ್ಕಿನ್ 1992ರಲ್ಲಿ ಶಾಲೆಯನ್ನು ತೊರೆದರು ಮತ್ತು ಭಾರಿ ಗೂಡ್ಸ್ ವಾಹನ (Heavy Goods Vehicle)(HGV) ಪರವಾನಗಿ ಪಡೆದು ಜೀವನೋಪಾಯಕ್ಕಾಗಿ ವಾಹನ ಚಲಾಯಿಸಲು ಪ್ರಾರಂಭಿಸಿದರು. ಹಡರ್ಸ್‌ಫೀಲ್ಡ್‌ನ ಬೊನ್ಮಾರ್ಚೆ ಬಟ್ಟೆ ಕಂಪನಿಯ ಚಾಲಕರಾಗಿ ಕೆಲಸ ಮಾಡುವುದು ಅವರ ಮೊದಲ ಉದ್ಯೋಗಗಳಲ್ಲಿ ಒಂದಾಗಿದೆ.

ಒಂದೇ ವರ್ಷಕ್ಕೆ 45 ಮಿಲಿಯನ್ ಪೌಂಡ್ ಹಣ:

ಇಂದು, ಅವರು ಕ್ಲಿಪ್ಪರ್ ಹೆಸರಿನ ಆನ್‌ಲೈನ್ ಲಾಜಿಸ್ಟಿಕ್ಸ್ ಕಂಪನಿಯನ್ನು ಹೊಂದಿದ್ದಾರೆ ಮತ್ತು ಕಳೆದ ವರ್ಷವೊಂದರಲ್ಲೇ £45 ಮಿಲಿಯನ್ (ಅಂದಾಜು 450 ಕೋಟಿ ರೂ.) ಆಸ್ತಿ ಹೊಂದಿದ್ದು ಶ್ರೀಮಂತರಾಗಿದ್ದಾರೆ. ಬ್ಯುಸಿನೆಸ್ ಇನ್‌ಸೈಡರ್ ಪ್ರಕಾರ, "ಮ್ಯಾನ್ ವಿಥ್ ಎ ವ್ಯಾನ್" ಆಗಿ ಪ್ರಾರಂಭಿಸಿದ ಪಾರ್ಕಿನ್ ಈಗ ಯಾರ್ಕ್‌ಷೈರ್‌ನ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Retire Rich: ನಿವೃತ್ತಿ ಆದಾಗ ನಿಮ್ಮ ಬಳಿ ಕೋಟಿ ಹಣ ಇರ್ಬೇಕು ಅಂದ್ರೆ ಈ ರೀತಿ ಉಳಿಸಬೇಕು, ಫುಲ್ ಪ್ಲಾನ್ ಇದೆ ನೋಡಿ

COVID-19 ಸಾಂಕ್ರಾಮಿಕವು ಪ್ರಪಂಚದಾದ್ಯಂತದ ಹೆಚ್ಚಿನ ವ್ಯವಹಾರಗಳ ಮೇಲೆ ಪರಿಣಾಮ ಬೀರಿದ್ದರೂ, ಕ್ಲಿಪ್ಪರ್ ಮನೆಯಲ್ಲಿ ಸಿಲುಕಿರುವ ಜನರಿಗೆ ವಸ್ತುಗಳನ್ನು ತಲುಪಿಸುವಂತೆ ಮಾಡುವ ಮೂಲಕ ಆಸ್ತಿಯ ಮೌಲ್ಯ ಹೆಚ್ಚಿಸುವಲ್ಲಿ ಯಶಸ್ವಿಯಾದರು.


ಬೇಸಿಗೆಯಲ್ಲಿ ಹೆಚ್ಚಾಯ್ತು ಆದಾಯ

ಈ ಹಿನ್ನೆಲೆ ಕಂಪನಿಯು ತನ್ನ ವಹಿವಾಟು ಈ ಬೇಸಿಗೆಯಲ್ಲಿ ಶೇಕಡಾ 39.1 ರಷ್ಟು ಏರಿಕೆಯಾಗಿದ್ದು, ಸುಮಾರು £ 700 ಮಿಲಿಯನ್ ರಷ್ಟಾಗಿದೆ ಎಂದು ವರದಿ ಮಾಡಿದೆ. ಅಲ್ಲದೆ, ಕಂಪನಿಯ ಕಾರ್ಯಪಡೆಯು 2,000ರಷ್ಟು ಹೆಚ್ಚಾಗಿದ್ದು, ಸದ್ಯ ಸಂಸ್ಥೆಯಲ್ಲಿನ ಒಟ್ಟು ಉದ್ಯೋಗಿಗಳು 10,000ಕ್ಕೆ ಏರಿಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.


ಹಾಗೂ, ಕಂಪನಿಯ ಶೇ. 10 ರಷ್ಟು ಆಸ್ತಿ ಮಾರಾಟ ಮಾಡಿದ ಪಾರ್ಕಿನ್ £2 ಮಿಲಿಯನ್ ಮೌಲ್ಯದ ಷೇರುಗಳನ್ನು ನಗದೀಕರಿಸಿದರು.


ಇದನ್ನೂ ಓದಿ: Lucky and Rich: ಗಂಡನನ್ನು ಬಿಟ್ಟಿದ್ದೇ ಅದೃಷ್ಟ ಖುಲಾಯಿಸಿತು, ಈಕೆ ಈಗ ಬ್ರಿಟನ್ ರಾಣಿಗಿಂತ ಶ್ರೀಮಂತೆ!

"ನಾನು ಕ್ಲಿಪ್ಪರ್‌ನ ಭವಿಷ್ಯದ ಬೆಳವಣಿಗೆಯ ನಿರೀಕ್ಷೆಗಳಲ್ಲಿ ಎಂದಿನಂತೆ ಆತ್ಮವಿಶ್ವಾಸ ಮತ್ತು ಗಮನವನ್ನು ಹೊಂದಿದ್ದೇನೆ. ಕಳೆದ ವರ್ಷದಲ್ಲಿ, ನಮ್ಮ ಗ್ರಾಹಕರಿಗೆ ಸಂಕೀರ್ಣ ಸವಾಲುಗಳನ್ನು ಪರಿಹರಿಸಲು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ನಮ್ಮ ಸಾಮರ್ಥ್ಯವನ್ನು ನಾವು ಪ್ರದರ್ಶಿಸಿದ್ದೇವೆ ಮತ್ತು ಈ ಅವಧಿಯಲ್ಲಿ ನಾವು ನೀಡಿದ ಬೆಳವಣಿಗೆಯು ಐಕಾಮರ್ಸ್ ಲಾಜಿಸ್ಟಿಕ್ಸ್ ಮಾರುಕಟ್ಟೆಯಲ್ಲಿ ಕ್ಲಿಪ್ಪರ್‌ನ ಪ್ರಮುಖ ಸ್ಥಾನಕ್ಕೆ ಸಾಕ್ಷಿಯಾಗಿದೆ" ಎಂದು ಅವರು ಜನವರಿಯಲ್ಲಿ ಹೇಳಿದ್ದರು.


ಈತ ಫುಟ್ಬಾಲ್ ಅಭಿಮಾನಿ ಕೂಡಾ

ಜತೆಗೆ, ಪಾರ್ಕಿನ್ ಲೀಡ್ಸ್ ಯುನೈಟೆಡ್ (Leeds United) ಫುಟ್ಬಾಲ್‌ ಕ್ಲಬ್ ಅಭಿಮಾನಿಯಾಗಿದ್ದು ಮತ್ತು ಈ ಹಿಂದೆ ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಕ್ಲಬ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಯೋಚಿಸಿರುವುದಾಗಿಯೂ ಹೇಳುತ್ತಾರೆ.


ಅವರು ಹಲವಾರು ಕುದುರೆಗಳನ್ನು ಹೊಂದಿದ್ದಾರೆ ಮತ್ತು ತೀವ್ರ ರೇಸಿಂಗ್ ಅಭಿಮಾನಿಯಾಗಿದ್ದಾರೆ. 2020ರಲ್ಲಿ, ಅವರ ಕುದುರೆ ಈಗಲ್ಸ್ ಬೈ ಡೇ (Eagles By Day)ಯಾರ್ಕ್‌ನಲ್ಲಿ ಜಾನ್ ಸ್ಮಿತ್ಸ್ ಕಪ್ ಅನ್ನು ಗೆದ್ದುಕೊಂಡಿತ್ತು.

Published by:Soumya KN
First published: