Andhra Pradesh: "ಎಲ್ಲಾ ತೋಳಗಳ ವಿರುದ್ಧ ಸಮರ್ಥವಾಗಿ ಹೋರಾಡುತ್ತೆ ಈ ಸಿಂಹ": ಆಂಧ್ರ ಸಿಎಂ ಜಗನ್

ಆಂಧ್ರ ಸಿಎಂ ವೈಎಸ್​ ಜಗನ್ ಮೋಹನ್​

ಆಂಧ್ರ ಸಿಎಂ ವೈಎಸ್​ ಜಗನ್ ಮೋಹನ್​

ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ವಿರೋಧ ಪಕ್ಷಗಳನ್ನು "ತೋಳಗಳು" ಎಂದು ಕರೆದಿದ್ದಾರೆ.

  • Share this:

    ದೇಶಾದ್ಯಂತ ಚುನಾವಣೆಗಳ (Election Date) ದಿನಾಂಕಗಳು ಹತ್ತಿರ ಬರುತ್ತಿದ್ದಂತೆ, ಬಹುತೇಕ ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿರುವ ಪಕ್ಷಗಳ ವಿರುದ್ಧ ವಿರೋಧ ಪಕ್ಷಗಳ ನಾಯಕರು ಅನೇಕ ರೀತಿಯ ಹೇಳಿಕೆಗಳನ್ನು ನೀಡುವುದು ಮತ್ತು ಬೇರೆ ಬೇರೆ ಪಕ್ಷಗಳೊಂದಿಗೆ ಸೇರಿಕೊಂಡು ಸರ್ಕಾರ ನಡೆಸುತ್ತಿರುವ ಪಕ್ಷವನ್ನು ಹೇಗಾದರೂ ಮಾಡಿ ಸರ್ಕಾರದಿಂದ ಈ ಬಾರಿ ಕೆಳಗಿಳಿಸಬೇಕು ಅಂತ ರಣತಂತ್ರಗಳನ್ನು ಹೆಣೆಯುವುದು ಎಲ್ಲವೂ ಶುರುವಾಗಿರುತ್ತದೆ. ಹೀಗೆ ವಿರೋಧ ಪಕ್ಷಗಳು (Opposition Party) ಸರ್ಕಾರ ನಡೆಸುತ್ತಿರುವ ಪಕ್ಷದ ವಿರುದ್ಧ ಒಟ್ಟಾಗಿ ಹೋರಾಡಲು ಯೋಜಿಸುತ್ತಿರುವುದನ್ನು ಅರಿತ ಆಂಧ್ರಪ್ರದೇಶದ ಮುಖ್ಯಮಂತ್ರಿ (Andhra Pradesh CM) ಫುಲ್ ಗರಂ ಆಗಿ ಖಡಕ್ ಉತ್ತರವನ್ನು ನೀಡಿದ್ದಾರೆ ನೋಡಿ.


    ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ವಿರೋಧ ಪಕ್ಷಗಳನ್ನು "ತೋಳಗಳು" ಎಂದು ಕರೆದಿದ್ದಾರೆ.


    ವಿರೋಧ ಪಕ್ಷದವರನ್ನ ತೋಳಗಳು ಅಂತ ಹೇಳಿದ ಆಂಧ್ರ ಸಿಎಂ


    ಎಲ್ಲಾ ವಿರೋಧ ಪಕ್ಷಗಳು ತಮ್ಮ ವಿರುದ್ಧ ಹೋರಾಡಲು ಕೈ ಜೋಡಿಸುತ್ತಿವೆ ಅಂತ ತಿಳಿದ ಸಿಎಂ ಜಗನ್ ಎಲ್ಲಾ ತೋಳಗಳು ಕೈಜೋಡಿಸುತ್ತಿವೆ ಆದರೆ ಅವರು ಸಿಂಹದಂತೆ ಅವರೆಲ್ಲರೊಂದಿಗೆ ಎದೆಗುಂದದೆ ಹೋರಾಡುತ್ತೇನೆ ಅಂತ ಹೇಳಿದ್ದಾರೆ.




    "ಎಲ್ಲಾ ತೋಳಗಳು ಕೈಜೋಡಿಸುತ್ತಿವೆ, ಆದರೆ ನಾನು ಅವುಗಳಿಗೆಲ್ಲಾ ಹೆದರುವುದಿಲ್ಲ. ಏಕೆ ಎಂದು ನನ್ನನ್ನು ಕೇಳಿ? ಏಕೆಂದರೆ ನಿಮ್ಮ ಮಗ ನಿಮ್ಮನ್ನು (ಸಾರ್ವಜನಿಕರು) ಮತ್ತು ದೇವರನ್ನು ಮಾತ್ರ ನಂಬುತ್ತಾನೆ ಮತ್ತು ಸಿಂಹದಂತೆ ಧೈರ್ಯದಿಂದ ಮುಂದೆ ಸಾಗುತ್ತಾನೆ" ಎಂದು ಜಗನ್ ಪಲ್ನಾಡು ಜಿಲ್ಲೆಯ ವಿನುಕೊಂಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದರು.


    ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್‌ಸಿಪಿ) ಅಧ್ಯಕ್ಷರು ಜನಸೇನಾ ಪಕ್ಷ (ಜೆಎಸ್‌ಪಿ), ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಮೈತ್ರಿಕೂಟವನ್ನು ರಚಿಸುವ ಪ್ರಯತ್ನಗಳನ್ನು ಇಲ್ಲಿ ಜಗನ್ ಅವರು ಉಲ್ಲೇಖಿಸಿದ್ದಾರೆ.


    ವಿರೋಧ ಪಕ್ಷಗಳ ಪಿತೂರಿ ಬಗ್ಗೆ ಏನ್ ಹೇಳಿದ್ರು ಜಗನ್?


    ಬಿಜೆಪಿಯ ಮಿತ್ರಪಕ್ಷವಾಗಿರುವ ಜೆಎಸ್‌ಪಿ ನಾಯಕ ಮತ್ತು ನಟ ಪವನ್ ಕಲ್ಯಾಣ್ ಅವರು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್‌ಸಿಪಿ ವಿರೋಧಿ ಮತಗಳ ವಿಭಜನೆಯನ್ನು ತಪ್ಪಿಸಲು ಟಿಡಿಪಿಯನ್ನು ಕರೆತರಲು ಪ್ರಯತ್ನಿಸುತ್ತಿದ್ದಾರೆ.


    ಆಂಧ್ರ ಸಿಎಂ ವೈಎಸ್​ ಜಗನ್ ಮೋಹನ್​


    ಶ್ರೀಲಂಕಾದಲ್ಲಿ ನಡೆದಂತೆಯೇ ರಾಜ್ಯವು ಆರ್ಥಿಕ ಅವ್ಯವಸ್ಥೆಯಲ್ಲಿ ಮುಳುಗುತ್ತದೆ ಎಂಬ ಪ್ರತಿಪಕ್ಷಗಳ 'ಸುಳ್ಳು' ಪ್ರಚಾರಕ್ಕಾಗಿ ರೆಡ್ಡಿ ವಾಗ್ದಾಳಿ ನಡೆಸಿದರು.


    "ವೈಎಸ್ಆರ್‌ಸಿಪಿ ಅಡಿಯಲ್ಲಿ ಆಂಧ್ರಪ್ರದೇಶದಲ್ಲಿ ಆದಂತಹ ಬೆಳವಣಿಗೆಯ ಬಗ್ಗೆ ಅನೇಕರು ಅಸೂಯೆಪಟ್ಟಿದ್ದಾರೆ ಮತ್ತು ಸುಳ್ಳು ಪ್ರಚಾರವನ್ನು ಹರಡಲು ನಿರ್ಧರಿಸಿದ್ದಾರೆ.


    ಇಂದು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗುತ್ತಿದೆ. ಹಿಂದಿನ ಸರ್ಕಾರದ ಇಂತಹ ಪ್ರಯತ್ನ ನಿಮಗೆ ನೆನಪಿದೆಯೇ?


    ಹಿಂದಿನ ಆಡಳಿತವನ್ನು ಕಳ್ಳರ ಗುಂಪೊಂದು ನಡೆಸುತ್ತಿತ್ತು, ಅವರು ಸಾರ್ವಜನಿಕ ಕಲ್ಯಾಣಕ್ಕಾಗಿ ಮೀಸಲಾದ ಹಣವನ್ನು ಕಸಿದುಕೊಳ್ಳುತ್ತಿದ್ದರು. ಅಂತಹ ನಿಯಮ ನಿಮಗೆ ಬೇಕೇ?" ಎಂದು ಮುಖ್ಯಮಂತ್ರಿ ಜನರಿಗೆ ಪ್ರಶ್ನಿಸಿದರು.


    ಅಲ್ಪಸಂಖ್ಯಾತರ ಅಭಿವೃದ್ಧಿಯಲ್ಲಿ ಮಾತ್ರ ನನಗೆ ನಂಬಿಕೆ ಇದೆ ಎಂದ ಸಿಎಂ


    “ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಯಲ್ಲಿ ಮಾತ್ರ ನನಗೆ ನಂಬಿಕೆ ಇದೆ ಮತ್ತು ಪ್ರತಿಪಕ್ಷಗಳು ತಮ್ಮ ಮಾನಹಾನಿ ಮಾಡಲು ಕೈಜೋಡಿಸಿದರೆ ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ರೆಡ್ಡಿ ಹೇಳಿದರು. ಆಂಧ್ರಪ್ರದೇಶವು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದೆ ಎಂದು ಹೇಳಿದ ಅವರು, ರಾಜ್ಯವು ಶೇಕಡಾ 11.43 ರಷ್ಟು ಜಿಎಸ್‌ಡಿಪಿಯನ್ನು ಸಾಧಿಸುವ ಮೂಲಕ ಪ್ರಥಮ ಸ್ಥಾನವನ್ನು ಸಾಧಿಸಿದೆ ಎಂದು ಹೇಳಿದರು.


    ಇದನ್ನೂ ಓದಿ: ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ! ಜೈಲಿನಲ್ಲಿರುವ ಸ್ವಯಂ ಘೋಷಿತ ದೇವಮಾನವನಿಗೆ ಮತ್ತೊಂದು ಶಾಕ್!


    ಸತತ ಮೂರನೇ ವರ್ಷ ರಾಜ್ಯ ಸರ್ಕಾರವು ‘ಜಗನಣ್ಣ ಚೆಡ್ಡೊಡು’ ಯೋಜನೆಯ ಅಡಿಯಲ್ಲಿ ಬಟ್ಟೆ ಒಗೆಯುವವರು, ನಯೀ ಬ್ರಾಹ್ಮಣರು ಮತ್ತು ಟೈಲರ್ ಗಳಿಗೆ ಸಹಾಯವನ್ನು ವಿತರಿಸುತ್ತಿದೆ. ಸೋಮವಾರ 3,30,145 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 330.15 ಕೋಟಿ ರೂಪಾಯಿಗಳನ್ನ ಜಮೆ ಮಾಡಲಾಗಿದೆ. ಈ ಯೋಜನೆಯಡಿ, ಫಲಾನುಭವಿಗಳಿಗೆ ವರ್ಷಕ್ಕೆ ತಲಾ 10,000 ರೂಪಾಯಿ ದೊರೆಯುತ್ತದೆ.


    ಈ ಹಣದಿಂದ ಫಲಾನುಭವಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಉಪಕರಣಗಳು, ಸಲಕರಣೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಸಹಾಯವಾಗಿದೆ ಎಂದು ಅವರು ಹೇಳಿದರು.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು