ಸಾವಿನ ಬಳಿಕ ಅಂಗಾಂಗಳನ್ನು ದಾನ (Donate Organs) ಮಾಡುವುದು ಒಬ್ಬರ ಬದುಕಲ್ಲಿ ಹೇಗೆ ಬೆಳಕಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಜೀವಂತ ಸಾಕ್ಷಿ ನೋಡಿ. ಹೃದಯ ಸಂಬಂಧಿ ಕಾಯಿಲೆ (Cardiovascular disease) ಇಂದ ಬಳಲುತ್ತಿದ್ದ ಒಂದು ಹುಡುಗಿಗೆ ಒಬ್ಬ ದಾನಿಯ ಹೃದಯ (Heart) ಇನ್ನೂ ಅವಳ ಹೃದಯ ಬಡಿದುಕೊಳ್ಳುವಂತೆ ಮಾಡಿದೆ. ಇದಕ್ಕೆ ಕೃತಜ್ಞಾತ ಭಾವವಾಗಿ ಇಲ್ಲೊಂದು ಹುಡುಗಿ ತನ್ನ ಪಿಯುಸಿ ಫಲಿತಾಂಶ ಬರುತ್ತಿದ್ದಂತೆ ಆ ಕುಟುಂಬವನ್ನು ಭೇಟಿ ಮಾಡಿ ಸಿಹಿ ನೀಡಿದ್ದಾಳೆ. ಕೇರಳದ (Kerala) ಫಿನು ಶೇರಿನ್ ಎಂಬ ಬಾಲಕಿ ಮಂಗಳವಾರ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಬಳಿಕ ಈಕೆಗೆ ಹೃದಯ ಕಸಿಗೆ ಹೃದಯ ದಾನ ಮಾಡಿದ ಕೋಝಿಕೋಡ್ ನ ಮಾಯಾನಾಡ್ ನಲ್ಲಿರುವ ದಿವಂಗತ ವಿಷ್ಣು ಅವರ ಕುಟುಂಬವನ್ನು ಭೇಟಿ ಮಾಡಿದ್ದಾಳೆ.
ವಿಷ್ಣು ಕುಟುಂಬಕ್ಕೆ ಧನ್ಯವಾದ ಅರ್ಪಿಸಲು ಹೋದ ವಿದ್ಯಾರ್ಥಿನಿ
ಫಿನು ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಬಂದಾಗಲೂ ಸಹ ಇದನ್ನೇ ಮಾಡಿದ್ದಳು. ಹೌದು.. ಅವಳ ಹೃದಯ ಬಡಿತವನ್ನು ಹಾಗೆಯೇ ಉಳಿಸಿಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ ವಿಷ್ಣು ಕುಟುಂಬಕ್ಕೆ ಧನ್ಯವಾದ ಅರ್ಪಿಸಲು ಹೋಗಿದ್ದಾಳೆ. 19 ವರ್ಷದ ಯುವತಿ ಕಳೆದ ನಾಲ್ಕು ವರ್ಷಗಳಿಂದ ವಿಷ್ಣುವಿನ ಹೃದಯದ ಸಹಾಯದಿಂದ ಜೀವಿಸುತ್ತಿದ್ದಾಳೆ.
ಫಿನು ಸೇರಿದಂತೆ ಆರು ಜೀವಗಳನ್ನು ಉಳಿಸಲು ಸಹಾಯ
ಚಕ್ಕಲಕ್ಕಲ್ ನಿವಾಸಿಯಾದ ಫಿನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಸಾಯನಶಾಸ್ತ್ರವನ್ನು ಹೊರತುಪಡಿಸಿ ಎಲ್ಲಾ ವಿಷಯಗಳಲ್ಲಿ ಎ+ ಅನ್ನು ಗಳಿಸಿದ್ದಾಳೆ. ವಿಷ್ಣುವಿನ ತಂದೆ ಸುನಿಲ್, ತಾಯಿ ಬೀನಾ ಮತ್ತು ಸಹೋದರಿ ಲಕ್ಷ್ಮಿ ಅವರು ಫಿನುವನ್ನು ಮನೆಗೆ ಬರಮಾಡಿಕೊಳ್ಳಲು ತುಂಬಾನೇ ಸಂತೋಷಪಟ್ಟರು. 2018ರಲ್ಲಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ವಿಷ್ಣು, ನಿಯಮಿತ ರಕ್ತದಾನಿಯಾಗಿದ್ದರು ಮತ್ತು ಅವರ ಅಂಗಾಂಗಗಳನ್ನು ದಾನ ಮಾಡುವ ಅವರ ಕುಟುಂಬದ ನಿರ್ಧಾರವು ಫಿನು ಸೇರಿದಂತೆ ಆರು ಜೀವಗಳನ್ನು ಉಳಿಸಲು ಸಹಾಯ ಮಾಡಿತು.
ಇದನ್ನೂ ಓದಿ: GSAT-24 ಸಂವಹನ ಉಪಗ್ರಹ ಉಡಾವಣೆ ಮಾಡಿದ ಭಾರತ- ಇದರಿಂದಾಗುವ ಪರಿಣಾಮಗಳೇನು? ಇಲ್ಲಿದೆ ವಿವರ
ಫಿನು 9ನೇ ತರಗತಿಯಲ್ಲಿ ಓದುತ್ತಿದ್ದಾಗ ಶಾಲೆಯಲ್ಲಿ ಒಂದು ದಿನ ಅವಳು ತುಂಬಾ ದಣಿದಿದ್ದಳು ಮತ್ತು ನಂತರ ಅವಳಿಗೆ ಹೃದಯದ ಕಾಯಿಲೆ ಇದೆ ಎಂದು ಕಂಡು ಬಂದಿತು. ಆಕೆಯನ್ನು ಕೋಝಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಹೃದ್ರೋಗ ತಜ್ಞರು ಆರಂಭದಲ್ಲಿ ಪೇಸ್ ಮೇಕರ್ ಅಳವಡಿಸಲು ಸೂಚಿಸಿದರು. ಆದರೆ ಅದು ನಿರರ್ಥಕವೆಂದು ಸಾಬೀತಾಯಿತು. ಫಿನುವಿನ ಹೃದಯವು ಸರಿಪಡಿಸಲಾಗದಷ್ಟು ಹಾನಿಗೊಳಗಾಗಿದೆ ಮತ್ತು ಅವಳಿಗೆ ಹೃದಯ ಕಸಿಯ ಅಗತ್ಯವಿದೆ ಎಂದು ವೈದ್ಯರು ಕಂಡು ಕೊಂಡರು.
ಚಕ್ಕಲಕ್ಕಲ್ ನ ಜನರಿಂದ ಸಹಾಯ
ಈ ಕಾರ್ಯವಿಧಾನಕ್ಕಾಗಿ ಫಿನುವಿಗೆ 56 ಲಕ್ಷ ರೂಪಾಯಿಗಳ ಅಗತ್ಯವಿತ್ತು. ತದ ನಂತರ, ಚಕ್ಕಲಕ್ಕಲ್ ನ ಜನರು ಒಗ್ಗೂಡಿ, ಸಮಾಜ ಸೇವಕ ಸಲೀಂ ಮದವೂರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಒಂದು ಸಮಿತಿಯನ್ನು ರಚಿಸಿದರು. ಅವರ ಶಾಲೆ, ಚಕ್ಕಲಕ್ಕಲ್ ಎಚ್ಎಸ್ಎಸ್ ಅವರು 13 ಲಕ್ಷ ರೂಪಾಯಿಗಳನ್ನು ಫಿನು ಅವರ ಪೋಷಕರಿಗೆ ನೀಡಿದರು.
"ಫಿನುವಿನ ತಂದೆ ಒಬ್ಬ ಆಟೋರಿಕ್ಷಾ ಚಾಲಕ, ಕೆ.ಪಿ.ಸಿದ್ದೀಕ್ ಅವರು ತಮ್ಮ ಈ ಸಂಕಷ್ಟವನ್ನು ನನ್ನ ಬಳಿಗೆ ಬಂದು ಹೇಳಿದಾಗ, ನಾವು ಫಿನುವಿಗೆ ಸಹಾಯ ಮಾಡಲು ನಿರ್ಧರಿಸಿದೆವು ಮತ್ತು ಇಡೀ ಸಮುದಾಯವು ಸಹಾಯ ಮಾಡಲು ಮುಂದೆ ಬಂದಿತು. ಬೆಂಗಳೂರಿನ ನಾರಾಯಣ ಹೃದಯಾಲಯ ಮತ್ತು ಕೋಝಿಕೋಡ್ ನ ಮೆಟ್ರೋಮೆಡ್ ಇಂಟರ್ನ್ಯಾಷನಲ್ ಕಾರ್ಡಿಯಾಕ್ ಸೆಂಟರ್ ನಲ್ಲಿ ಸುದೀರ್ಘ ಕಾಯುವಿಕೆಯ ನಂತರ, ಫಿನು ಅಂತಿಮವಾಗಿ 23 ವರ್ಷದ ವಿಷ್ಣು ಎಂಬ ದಾನಿಯನ್ನು ಪಡೆದಳು" ಎಂದು ಸಲೀಂ ಹೇಳಿದರು.
ಯಶಸ್ವಿಯಾಗಿ ಹೃದಯ ಕಸಿ ಮಾಡಿದ ಮೆಟ್ರೋಮೆಡ್ ಆಸ್ಪತ್ರೆ
ಮೆಟ್ರೋಮೆಡ್ ಆಸ್ಪತ್ರೆಯಲ್ಲಿ ಹೃದಯ ಕಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮಾಡಲಾಯಿತು. ಫಿನು ಎರಡು ವರ್ಷಗಳ ಶಾಲೆಯನ್ನು ತಪ್ಪಿಸಿಕೊಂಡಳು. "ರಸಾಯನಶಾಸ್ತ್ರದಲ್ಲಿ ಕೇವಲ ಒಂದು ಅಂಕದಿಂದ ಎ+ ಗ್ರೇಡ್ ಅನ್ನು ಕಳೆದುಕೊಂಡಿದ್ದಕ್ಕಾಗಿ ನನಗೆ ನಿರಾಶೆಯಾಗಿದೆ" ಎಂದು ಖುದ್ದು ಫಿನು ಸುದ್ದಿ ಮಾಧ್ಯಮಕ್ಕೆ ಹೇಳಿದಳು.
ಇದನ್ನೂ ಓದಿ: Sexual Assault on Dog: ಪ್ರಾಣಿಗಳನ್ನೂ ಬಿಡದ ಕಾಮಾಂಧರು; ನಾಯಿಯ ಮೇಲೆ ವ್ಯಕ್ತಿಯಿಂದ ಅತ್ಯಾಚಾರ
ತನ್ನ ಮುಂದಿನ ಗುರಿಯ ಬಗ್ಗೆ ಅವಳಿಗೆ ಕೇಳಿದಾಗ “ನನ್ನ ಜೀವನದ ಹೆಚ್ಚಿನ ಸಮಯವನ್ನು ಆಸ್ಪತ್ರೆಗಳಲ್ಲಿ ಕಳೆದ ನಂತರ, ವೈದ್ಯರು ಮತ್ತು ದಾದಿಯರು ನನ್ನನ್ನು ವೈದ್ಯಕೀಯ ವೃತ್ತಿಯನ್ನು ತೆಗೆದುಕೊಳ್ಳಲು ಪ್ರೇರೇಪಿಸಿದ್ದಾರೆ. ನಾನು ಇತರರಿಗೆ ಸಹಾಯ ಮಾಡಲು ಬಯಸುತ್ತೇನೆ" ಎಂದು ಫಿನು ಹೇಳಿದಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ