ಜಪಾನ್​​​ ಉದ್ಯಮಿಯ ಟ್ವೀಟ್​ ರಿಟ್ವೀಟ್​ ಮಾಡಿದರೆ ಸಿಗಲಿದೆ 6.5 ಲಕ್ಷ ರೂ.

ಯುಸಾಕು ಜಪಾನಿನ ಜನರಿಗೆ ಆದಾಯದ ಮಹತ್ವ ಮತ್ತು ಮೂಲ ಆದಾಯದ ಅಗತ್ಯತೆಯನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. 

news18-kannada
Updated:January 10, 2020, 11:12 AM IST
ಜಪಾನ್​​​ ಉದ್ಯಮಿಯ ಟ್ವೀಟ್​ ರಿಟ್ವೀಟ್​ ಮಾಡಿದರೆ ಸಿಗಲಿದೆ 6.5 ಲಕ್ಷ ರೂ.
ಜಪಾನಿನ​ ಫ್ಯಾಶನ್​ ಉದ್ಯಮಿ ಯುಸಾಕು ಮೇಜಾವಾ
  • Share this:
ಜಪಾನಿನ​ ಫ್ಯಾಶನ್​ ಉದ್ಯಮಿ ಯುಸಾಕು ಮೇಜಾವಾ ತನ್ನ ಟ್ವಿಟರ್ ಖಾತೆ ಫಾಲೋ ಮಾಡುವವರಿಗೆ 65 ಕೋಟಿ ಹಣ ನೀಡುವುದಾಗಿ ಘೋಷಿಸಿದ್ದಾರೆ. ತನ್ನ ಈ ಸಾಮಾಜಿಕ ಪ್ರಯೋಗವು ಜನರ ಖುಷಿ ಹೆಚ್ಚಿಸುತ್ತದೆಯೇ ಎಂದು ನೋಡಲು ಯುಸಾಕು ಹೊಸ ಹೆಜ್ಜೆ ಇಟ್ಟಿದ್ದಾರೆ.

ಸಾರ್ವಜನಿಕರು ಯುಸಾಕು ಅವರ ಟ್ಟಿಟ್ಟರ್​ ಖಾತೆಯನ್ನು ಅನುಸರಿಸಿ ಅವರು ಜನವರಿ 1ರಂದು  ಟ್ವೀಟ್ ಮಾಡಿರುವ​ ಪೋಸ್ಟ್​​ನ್ನು ಅತಿ ಹೆಚ್ಚು ರಿಟ್ವೀಟ್​ ಮಾಡಬೇಕು. ಅವರಲ್ಲಿ ಒಂದು ಸಾವಿರ ಮಂದಿ ಅದೃಷ್ಟಶಾಲಿಗಳಿಗೆ ಯುಸಾಕು ಸುಮಾರು 65 ಕೋಟಿ ರೂ ನೀಡಲಿದ್ದಾರೆ. ಈ ಮೊತ್ತ ಜಪಾನಿನ ಡಾಲರ್ 920 ಸಾವಿರ ಯೆನ್​ ಆಗಿದೆ.ಯುಸಾಕು ಮೇಜಾವಾ ಜಪಾನ್ ನ ಅತಿದೊಡ್ಡ ಆನ್​​ಲೈನ್ ಫ್ಯಾಶನ್ ಮಾಲ್​​​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಇವರು 3 ಶತಕೋಟಿ ಡಾಲರ್​​​​ನ ಒಡೆಯರಾಗಿದ್ದಾರೆ. ಜೊತೆಗೆ ಜಪಾನ್ ನ 18ನೇ ಅತಿ ಶ್ರೀಮಂತ ವ್ಯಕ್ತಿ ಎಂದು ಫೋರ್ಬ್ಸ್ ಮ್ಯಾಗಜೀನ್ ತಿಳಿಸಿದೆ.ಡಿಕೆಶಿಗೆ ಹೈಕಮಾಂಡ್​​ ಶಾಕ್​​​; ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಂ.ಬಿ. ಪಾಟೀಲ್ ಅಥವಾ ಈಶ್ವರ್ ಖಂಡ್ರೆಗೆ ನೀಡುವ ಸಾಧ್ಯತೆ

ಅಮೆರಿಕಾದ ಅಧ್ಯಕ್ಷೀಯ ಅಭ್ಯರ್ಥಿ ಆಂಡ್ರ್ಯೂ ಯಾಂಗ್ ಅವರು ಈ ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ. ಅವರು ಯುಎಸ್​ ಅಧ್ಯಕ್ಷರಾಗಿ ಆಯ್ಕೆಯಾದರೆ, 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಅಮೆರಿಕಾನ್ನರಿಗೆ ತಿಂಗಳಿಗೆ 1 ಸಾವಿರ ಡಾಲರ್​ ಹಣ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಯುಸಾಕು ಜಪಾನಿನ ಜನರಿಗೆ ಆದಾಯದ ಮಹತ್ವ ಮತ್ತು ಮೂಲ ಆದಾಯದ ಅಗತ್ಯತೆಯನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಮೇಜಾವಾ 2023ರ ವೇಳೆಗೆ ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್‌ನಲ್ಲಿ ಚಂದ್ರನ ಸುತ್ತ ಹಾರಾಟ ನಡೆಸಲಿರುವ ಮೊದಲ ಖಾಸಗಿ ಪ್ರಯಾಣಿಕ ಎಂದು ಹೇಳಲಾಗುತ್ತಿದೆ.

ಹೋಂವರ್ಕ್ ಮಾಡದ ವಿದ್ಯಾರ್ಥಿನಿಗೆ ಗುಂಡುಪಿನ್​ನಿಂದ 40 ಬಾರಿ ಚುಚ್ಚಿದ ರಾಯಚೂರು ಶಿಕ್ಷಕಿ

 

 
First published:January 10, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ