ಬ್ರಿಟನ್(ಸೆ.06): ಬ್ರಿಟನ್ ಪ್ರಧಾನಿ ರೇಸ್ನಲ್ಲಿ (Britain PM Race) ಪ್ರಮುಖ ಸ್ಪರ್ಧಿಯಾಗಿದ್ದ ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಸೋಮವಾರ ಕನ್ಸರ್ವೇಟಿವ್ ಪಕ್ಷದ ಸದಸ್ಯರಿಗೆ ಹೊಸದಾಗಿ ನೇಮಕಗೊಂಡ ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ (Liz Truss) ಅವರಿಗೆ ಒಗ್ಗಟ್ಟಿನಿಂದ ದೇಶವನ್ನು ಕಷ್ಟದ ಸಮಯದಲ್ಲಿ ಮುಂದಕ್ಕೆ ಕೊಂಡೊಯ್ಯುವಂತೆ ಕೇಳಿಕೊಂಡರು. ತಮ್ಮ ಸೋಲಿನ ನಂತರ, ಟ್ವೀಟ್ ಮಾಡಿದ 42 ವರ್ಷದ ಸುನಕ್ ತನಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಬ್ರಿಟಿಷ್ ವಿದೇಶಾಂಗ ಸಚಿವ ಲಿಜ್ ಟ್ರಸ್ ಅವರು ಮಾಜಿ ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಕ್ ಅವರನ್ನು ಸೋಲಿಸಿದರು. ಈ ಮೂಲಕ ಅವರು ಪ್ರಧಾನಿ ಸ್ಥಾನವನ್ನು ಅಲಂಕರಿಸಲಿದ್ದು, ಬೋರಿಸ್ ಜಾನ್ಸನ್ ಅವರ ಸ್ಥಾನ ವಹಿಸಿಕೊಳ್ಳಲಿದ್ದಾರೆ.
ಬ್ರಿಟಿಷ್ ಇಂಡಿಯನ್ ಮಾಜಿ ಚಾನ್ಸೆಲರ್ ಟ್ವೀಟ್ ಮಾಡಿ, ಕನ್ಸರ್ವೇಟಿವ್ ಒಂದೇ ಕುಟುಂಬ ಎಂದು ನಾನು ಎಲ್ಲಾ ಸಮಯದಲ್ಲೂ ಹೇಳಿದ್ದೇನೆ. ನಾವು ಈಗ ಹೊಸ ಪಿಎಂ ಲಿಜ್ ಟ್ರಸ್ ಅವರೊಂದಿಗೆ ಒಂದಾಗಿ, ಕಷ್ಟದ ಪರಿಸ್ಥಿತಿಯಲ್ಲಿರುವ ದೇಶವನ್ನು ಮುನ್ನಡೆಸಬೇಕಿದೆ ಎಂದು ಹೇಳಿದ್ದಾರೆ.
Thank you to everyone who voted for me in this campaign.
I’ve said throughout that the Conservatives are one family.
It’s right we now unite behind the new PM, Liz Truss, as she steers the country through difficult times.
— Rishi Sunak (@RishiSunak) September 5, 2022
ಇದನ್ನೂ ಓದಿ: Rishi Sunak: ದಾಂಪತ್ಯ ಜೀವನದ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ರಿಷಿ ಸುನಕ್!
47 ವರ್ಷದ ಲಿಜ್ ಟ್ರಸ್ ಅವರು ಮಾರ್ಗರೇಟ್ ಥ್ಯಾಚರ್ ಮತ್ತು ತೆರೇಸಾ ಮೇ ಬಳಿಕ ಬ್ರಿಟನ್‌ನ ಮೂರನೇ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ. ಭಾನುವಾರವಷ್ಟೇ, ಸುನಕ್ ತಾನು ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಸೋತರೆ, ಮುಂದಿನ ಸರ್ಕಾರವನ್ನು ಬೆಂಬಲಿಸುವುದು ತನ್ನ ಕೆಲಸ ಎಂದು ಹೇಳಿದ್ದರು.
ಫಲಿತಾಂಶಗಳನ್ನು ಪ್ರಕಟಿಸುವ ಮೊದಲು BBC ಯೊಂದಿಗಿನ ಅವರ ಕೊನೆಯ ಸಂದರ್ಶನದಲ್ಲಿ, ರಿಷಿ ಸುನಕ್ ಅವರು ಸ್ಪರ್ಧೆಯಲ್ಲಿ ಟ್ರಸ್‌ಗೆ ಸೋತರೆ ಮತ್ತು ಯಾರ್ಕ್‌ಷೈರ್‌ನ ರಿಚ್‌ಮಂಡ್‌ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸುತ್ತಾ ಸಂಸತ್ ಸದಸ್ಯರಾಗಿ ಮುಂದುವರೆಯುವ ಯೋಚನೆ ಇದೆ ಎಂದು ಹೇಳಿದರು.
ಆರಂಭಿಕ ಹಂತದಲ್ಲಿ ಮುಂಚೂನಿಯಲ್ಲಿದ್ದ ಸುನಕ್
ಹಿರಿಯ ಕ್ಯಾಬಿನೆಟ್ ಮಂತ್ರಿ ಟ್ರಸ್ ವಿರುದ್ಧದ ಸ್ಪರ್ಧೆಯಲ್ಲಿ ಪಕ್ಷದ ಸದಸ್ಯರು ಚಲಾಯಿಸಿದ 170,000 ಆನ್‌ಲೈನ್ ಮತ್ತು ಅಂಚೆ ಮತಗಳಲ್ಲಿ ಹೆಚ್ಚಿನ ಮತ ಗಳಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿತ್ತು. ಟ್ರಸ್ ಅವರು ಬ್ರಿಟನ್‌ನ ಮೂರನೇ ಮಹಿಳಾ ಪ್ರಧಾನಿಯಾಗಲಿದ್ದಾರೆ. ಇದರೊಂದಿಗೆ, 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಅಗ್ರ ಸ್ಥಾನವನ್ನು ಪಡೆಯುವ ಸುನಕ್ ಅವರ ಐತಿಹಾಸಿಕ ಅಭಿಯಾನವು ಕೊನೆಗೊಂಡಿದೆ.
ಗೆಲುವಿನ ಬಳಿಕ ಮಾತನಾಡಿದ ಟ್ರಸ್, ನಾವು ಭರವಸೆಗಳನ್ನು ಈಡೇರಿಸುತ್ತೇವೆ, ನಾನು ಸಮಸ್ಯೆಗಳನ್ನು ಸಹ ಪರಿಶೀಲಿಸುತ್ತೇನೆ ಎಂದು ಭಾಷಣದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Rishi Sunak: ಕೃಷ್ಣ ಜನ್ಮಾಷ್ಟಮಿ, ಪತ್ನಿ ಜೊತೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿದ ಸುನಕ್, ಭಾರೀ ವಿವಾದ!
ಬೋರಿಸ್ಗೆ ಉತ್ತಮ ಕಾರ್ಯ ಮಾಡಿದ್ದಾರೆ
ಟ್ರಸ್ ಅವರು ಸುನಕ್ ಜೊತೆಗೂಡಿ ಪ್ರಸ್ತುತ ಪ್ರಧಾನ ಮಂತ್ರಿ ಜಾನ್ಸನ್ ಅವರಿಗೆ ಧನ್ಯವಾದ ಅರ್ಪಿಸಿದರು. ಈ ವೇಳೆ ಮಾತನಾಡಿದ ಟ್ರಸ್ "ಬೋರಿಸ್, ನೀವು ಬ್ರೆಕ್ಸಿಟ್ ಪಡೆದಿದ್ದೀರಿ, ನೀವು (ವಿರೋಧ ಪಕ್ಷದ ನಾಯಕ) ಜರ್ಮಿ ಕಾರ್ಬಿನ್ ಅವರನ್ನು ಸೋಲಿಸಿದ್ದೀರಿ, ನೀವು ಲಸಿಕೆಯನ್ನು ಪರಿಚಯಿಸಿದ್ದೀರಿ, ನೀವು ವ್ಲಾಡಿಮಿರ್ ಪುಟಿನ್ ಮುಂದೆ ದೃಢವಾಗಿ ನಿಂತಿದ್ದೀರಿ. ನೀವು ಕೈವ್‌ನಿಂದ ಕಾರ್ಲಿಸ್ಲೆವರೆಗೆ ಮೆಚ್ಚುಗೆ ಪಡೆದಿದ್ದೀರಿ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೋರಿಸ್ ಜಾನ್ಸನ್ ಟ್ವೀಟ್
ಇನ್ನು ಬೋರಿಸ್ ಜಾನ್ಸನ್ ಕೂಡಾ ಟ್ವೀಟ್ ಮಾಡಿ "ನಿರ್ಣಾಯಕ ವಿಜಯಕ್ಕಾಗಿ" ಟ್ರಸ್ ಅವರನ್ನು ಅಭಿನಂದಿಸಿದರು ಮತ್ತು ಟ್ರಸ್‌ನ ನಾಯಕತ್ವದಲ್ಲಿ ಪಕ್ಷವು ಒಗ್ಗಟ್ಟಿನಿಂದ ಉಳಿಯಲು ಕರೆ ನೀಡಿದರು. ಅಲ್ಲದೇ "ನಮ್ಮ ಪಕ್ಷ ಮತ್ತು ನಮ್ಮ ದೇಶವನ್ನು ಒಗ್ಗೂಡಿಸುವ ಮಹತ್ತರವಾದ ಕೆಲಸವನ್ನು ಮುಂದುವರಿಸಲು ಅವರು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರಿಯಾದ ಯೋಜನೆಯನ್ನು ಹೊಂದಿದ್ದಾರೆಂದು ನನಗೆ ತಿಳಿದಿದೆ" ಎಂದು ಜಾನ್ಸನ್ ಹೇಳಿದರು. ಪಕ್ಷದ ಎಲ್ಲಾ ಸದಸ್ಯರು ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವ ಸಮಯ ಇದೀಗ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ