HOME » NEWS » National-international » THIS IS WHAT MAYOR ARYA RAJENDRAN REPLIED AFTER BEING CALLED LKG STUDENT MAK

ದೇಶದ ಅತ್ಯಂತ ಕಿರಿಯ ಮೇಯರ್​ ಆರ್ಯ ರಾಜೇಂದ್ರನ್ ತಮ್ಮನ್ನು ಎಲ್​ಕೆಜಿ ಮಗು ಎಂದವರಿಗೆ ಕೊಟ್ಟ ಉತ್ತರವೇನು ಗೊತ್ತಾ?

ಯಾರು ಫೇಸ್‌ಬುಕ್ ಮತ್ತು ವಾಟ್ಸಪ್‌ನಲ್ಲಿ ಅಪ ಪ್ರಚಾರದ ಕಾಮೆಂಟ್‌ಗಳನ್ನು ಮಾಡುತ್ತಾರೆಯೊ ಆಗ ಈ ಮೇಯರ್‌ ಕೂಡಾ ತಮ್ಮ ಮನೆಯಲ್ಲಿರುವ ಸಹೋದರಿಯರು ಮತ್ತು ತಾಯಂದಿರಂತೆಯೆ ಎಂದು ನೆನಪಿರಲಿ ಎಂದು ಆರ್ಯ ರಾಜೇಂದ್ರನ್ ತಿಳಿಸಿದ್ದಾರೆ.

news18-kannada
Updated:June 19, 2021, 7:02 PM IST
ದೇಶದ ಅತ್ಯಂತ ಕಿರಿಯ ಮೇಯರ್​ ಆರ್ಯ ರಾಜೇಂದ್ರನ್ ತಮ್ಮನ್ನು ಎಲ್​ಕೆಜಿ ಮಗು ಎಂದವರಿಗೆ ಕೊಟ್ಟ ಉತ್ತರವೇನು ಗೊತ್ತಾ?
ಆರ್ಯ ರಾಜೇಂದ್ರನ್.
  • Share this:
ತಿರುವನಂತಪುರಂ (ಜೂನ್ 19); ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆಗೆ 21 ವರ್ಷದ ಯುವತಿ ಆರ್ಯರಾಜೇಂದ್ರನ್ ಇತ್ತೀಚೆಗೆ ಮೇಯರ್​ ಆಗಿ ಆಯ್ಕೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದ್ದರು. ಇಡೀ ದೇಶದಲ್ಲೇ ಮೇಯರ್​ ಸ್ಥಾನಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆಗೂ ಅವರು ಪಾತ್ರರಾಗಿದ್ದರು. ಆದರೆ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಹಲವರು ಟೀಕಾಪ್ರಹಾರವನ್ನೂ ನಡೆಸಿದ್ದಾರೆ. "ಎಲ್‌ಕೆಜಿ ಮಕ್ಕಳನ್ನು ಮೇಯರ್‌ ಮಾಡಲಾಗಿದೆ" ಎಂದು ತಿರುತಪುರಂ ಬಿಜೆಪಿ ಕೌನ್ಸಿಲರ್‌ ಕಾಲೆಳೆದಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಸಹ ಮಾಡಲಾಗಿತ್ತು. ಆದರೆ, ಈ ಎಲ್ಲಾ ವಿರೋಧಗಳಿಗೆ ದೇಶದ ಅತ್ಯಂತ ಕಿರಿಯ ಮೇಯರ್‌‌ ಆರ್ಯ ರಾಜೇಂದ್ರನ್ ತಕ್ಕುದಾದ ತಿರುಗೇಟು ನೀಡಿದ್ದಾರೆ. ಪ್ರಸ್ತುತ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಹಲವಾರು ಜನರು ‘ಆರ್ಯ’ ಅವರನ್ನು ಅಭಿನಂದಿಸಿದ್ದಾರೆ.ಅವರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, "ನಾನು ಈ ವಯಸ್ಸಿನಲ್ಲಿ ಮೇಯರ್ ಆಗಿದ್ದರೆ, ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ನನಗೆ ಗೊತ್ತು. ನನ್ನ ಪಕ್ವತೆಯನ್ನು ಅಳೆಯಲು ಬರಬೇಡಿ. ಅಂತಹ ಒಂದು ವ್ಯವಸ್ಥೆಯಲ್ಲೇ ನಾನು ಬೆಳೆದು ಬಂದಿದ್ದೇನೆ, ಅದರ ಬಗ್ಗೆ ನನಗೆ ಹೆಮ್ಮೆಯಿದೆ" ಎಂದು ಆರ್ಯ ರಾಜೇಂದ್ರನ್ ಖಾರವಾಗಿ ಹೇಳಿದ್ದಾರೆ.

ತನ್ನ 21ನೇ ವಯಸ್ಸಿನಲ್ಲಿ ತಿರುವನಂತಪುರಂ ಮೇಯರ್ ಆಗಿ ದೇಶದ ಅತ್ಯಂತ ಕಿರಿಯ ಮೇಯರ್‌ ಎಂಬ ಕೀರ್ತಿಗೆ ಪಾತ್ರರಾಗಿದ್ದ ಆರ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಬೆಂಬಲಿಗರು ನಿರಂತರವಾಗಿ ಅಪಹಾಸ್ಯ ಮಾಡುತ್ತಲೆ ಬಂದಿದ್ದಾರೆ. ಇತ್ತೀಚೆಗೆ ಬಿಜೆಪಿ ಕೌನ್ಸಿಲರ್ ಕರಮನ ಅಜಿತ್ ಅವರು ಕೂಡಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇದೆ ರೀತಿ ಬರೆದಿದ್ದರು.

ಅವರು ತನ್ನ ಫೇಸ್‌‌ಬುಕ್‌ನಲ್ಲಿ, "ಜನರ ತೆರಿಗೆ ಹಣವನ್ನು ಬಳಸಿಕೊಂಡು ಖರೀದಿಸುವ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಮೇಯರ್‌ ಕುರ್ಚಿಯಲ್ಲಿ ಕುಳಿತು ಆಟವಾಡುತ್ತಾ ‘ಎಕೆಜಿ ಕೇಂದ್ರದ ಎಲ್‌ಕೆಜಿ ಮಕ್ಕಳು’ ನಾಶಪಡಿಸಬಾರದು" ಎಂದು ಹೇಳಿದ್ದರು."ಎಕೆಜಿ ಕೇಂದ್ರ’ ಎಂದರೆ ಮಾಕ್ರ್ಸ್‌ವಾದಿ ಕಮ್ಯುನಿಸ್ಟ್ ಪಾರ್ಟಿ‌ ಆಫ್ ಇಂಡಿಯಾದ ಕೇರಳದ ಪ್ರಧಾನ ಕಚೇರಿಯಾಗಿದೆ. ಅಷ್ಟಕ್ಕೆ ನಿಲ್ಲಿಸದ ಕೌನ್ಸಿಲರ್, “ಕಾರ್ಪೊರೇಷನ್ ಮಕ್ಕಳ ಉದ್ಯಾನವನವಲ್ಲ. ಇದು ಜನರ ಹಣವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾದ ಸ್ಥಳವಾಗಿದೆ ಎಂದು ನಾನು ವಿನಮ್ರವಾಗಿ ನೆನಪಿಸುತ್ತೇನೆ" ಎಂದು ಅವರು ಹೇಳಿದ್ದರು.

ಇದಕ್ಕೆ ಕೌನ್ಸಿಲ್ ಸಭೆಯ ಸಂದರ್ಭದಲ್ಲಿ ಉತ್ತರಿಸಿದ ಮೇಯರ್ ಆರ್ಯ ರಾಜೇಂದ್ರನ್, “ನಾನು ನಿಮಗೆ ಒಂದು ವಿಷಯ ಹೇಳುತ್ತೇನೆ. ಕಳೆದ ಆರು ತಿಂಗಳಿನಿಂದ ಅನೇಕ ಟೀಕೆಗಳು ಬಂದಿವೆ. ಈ ಸಭೆಯಲ್ಲಿ ಸಮರ್ಥನೀಯವಾದ ಯಾವ ವಿಷಯವನ್ನಾದರೂ ಹೇಳಬಹುದು. ಆದರೆ ನೀವೆಲ್ಲರೂ ನನ್ನ ವಯಸ್ಸಿನ ಬಗ್ಗೆ, ಪ್ರಭುದ್ದತೆಯ ಬಗ್ಗೆ ಅನೇಕ ಬಾರಿ ವೈಯಕ್ತಿಕವಾಗಿ ಟೀಕಿಸಿದ್ದೀರಿ. ನಾನು ಕೂಡಾ ಇಷ್ಟು ದಿನ ಅದಕ್ಕೆ ಉತ್ತರಿಸಿರಲಿಲ್ಲ, ಆದರೆ ಈಗ ಅದಕ್ಕೆ ಪ್ರತ್ಯುತ್ತರ ನೀಡಲೆ ಬೇಕಾದ ಕಾಲ ಬಂದಿದೆ.

ಇದನ್ನೂ ಓದಿ: Swiss Bank: ಸ್ವಿಸ್ ಬ್ಯಾಂಕ್​ನಲ್ಲಿನ ಭಾರತೀಯರ ಠೇವಣಿ 20,700 ಕೋಟಿಗೆ ಏರಿಕೆ; ಕಳೆದ 13 ವರ್ಷದಲ್ಲೇ ಅತಿ ಹೆಚ್ಚು!

ಇಲ್ಲಿನ ಕೆಲವು ಸದಸ್ಯರು ಇಂತಹ ಟೀಕೆಗಳನ್ನು ಮಾಡಿದ್ದಾರೆ. ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ, ನಾನು ಈ ವಯಸ್ಸಿನಲ್ಲಿ ಮೇಯರ್ ಆಗಿದ್ದರೆ, ಅದಕ್ಕೆ ತಕ್ಕಂತೆ ಹೇಗೆ ಕೆಲಸ ಮಾಡಬೇಕೆಂದು ನನಗೆ ತಿಳಿದಿದೆ. ಅಂತಹ ವ್ಯವಸ್ಥೆಯ ಮೂಲಕ ನಾನು ಬೆಳೆದಿದ್ದೇನೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ” ಎಂದು ಅವರು ತಿಳಿಸಿದ್ದಾರೆ.

ರಾಜಕೀಯ ಚರ್ಚೆಯಗಳ ಬಗ್ಗೆ ಮೇಯರ್ ರಾಜೇಂದ್ರನ್ ಮಾತನಾಡುತ್ತಿರುವಾಗ, ಎದುರಾಳಿ ಪಕ್ಷದ ಸದಸ್ಯರು ಬೊಬ್ಬೆ ಹಾಕುತ್ತಲೆ ಇದ್ದರು. ಆದರೆ ಆರ್ಯ ಅವರು ತಮ್ಮ ಮಾತನ್ನು ನಿಲ್ಲಿಸದೆ ಮಾತನಾಡಿದ್ದಾರೆ. ಕೌನ್ಸಿಲರ್‌‌ ಅಜಿತ್‌ ಅವರ ಫೇಸ್ಬುಕ್‌ ಪೋಸ್ಟ್‌ಗೆ ಬಂದ ಆಕ್ಷೇಪಾರ್ಹ‌ ಕಾಮೆಂಟ್‌‌‌ಗಳನ್ನು ಕೂಡಾ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: AAP Government| ಕರ್ತವ್ಯದ ವೇಳೆ ಕೊಲ್ಲಲ್ಪಟ್ಟ 6 ರಕ್ಷಣಾ ಸಿಬ್ಬಂದಿಗಳ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಿದ ದೆಹಲಿ ಸರ್ಕಾರ

"ಯಾರು ಫೇಸ್‌ಬುಕ್ ಮತ್ತು ವಾಟ್ಸಪ್‌ನಲ್ಲಿ ಅಪ ಪ್ರಚಾರದ ಕಾಮೆಂಟ್‌ಗಳನ್ನು ಮಾಡುತ್ತಾರೆಯೊ ಆಗ ಈ ಮೇಯರ್‌ ಕೂಡಾ ತಮ್ಮ ಮನೆಯಲ್ಲಿರುವ ಸಹೋದರಿಯರು ಮತ್ತು ತಾಯಂದಿರಂತೆಯೆ ಎಂದು ನೆನಪಿರಲಿ" ಎಂದು ತಿಳಿಸಿದ್ದಾರೆ.
Youtube Video

ಮೇಯರ್ ಆರ್ಯ ರಾಜೇಂದ್ರನ್ ತನ್ನ ಮಾತಿನ ಕೊನೆಯಲ್ಲಿ, “ಯಾರು ಮಹಿಳೆಯನ್ನು ಅವಮಾನಿಸುತ್ತಾರೋ ಅದು ತುಂಬಾ ಕೆಟ್ಟ ವಿಷಯ. ಅದು ಯಾವ ಪಕ್ಷವಾದರೂ ಸರಿ. ನೀವು ಯಾವುದನ್ನು ಕೊಡುತ್ತೀರೊ ಅದನ್ನೆ ಮರಳಿ ಪಡೆಯುತ್ತೀರಿ ಎಂಬುವುದನ್ನು ನೀವು ಮೊದಲು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ. ಆರ್ಯ ರಾಜೇಂದ್ರನ್ ಅವರ ದಿಟ್ಟ ಪ್ರತ್ಯುತ್ತರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದ್ದು, ಪ್ರಸ್ತುತ ವೈರಲ್‌ ಆಗಿದೆ.
Published by: MAshok Kumar
First published: June 19, 2021, 7:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories