Bihar Politics: ನಿತೀಶ್​ ಬಿಜೆಪಿಗೆ ಗುಡ್​​ಬೈ ಹೇಳಿದ್ದೇ ತಡ 5 ವರ್ಷ ಹಳೇ ಟ್ವೀಟ್​ ನೆನಪಿಸಿ ಮೋದಿಗೆ ತಿವಿದ RJD!

ಬಿಹಾರದಲ್ಲಿ ಅಧಿಕಾರ ಬದಲಾದ ನಂತರ ಬಿಜೆಪಿಯ ಪ್ರತಿಭಟನೆ ಶುರುವಾಗಿದೆ. ಬಿಜೆಪಿ ಮುಖಂಡರು ಪಕ್ಷದ ಕೇಂದ್ರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ನಿತೀಶ್ ಕುಮಾರ್ ವಿರುದ್ಧ ದ್ರೋಹವೆಸಗಿದ್ದಾರೆಂದು ಆರೋಪಿಸಿರುವ ಬಿಜೆಪಿ ಆಕ್ರಮಣಕಾರಿಯಾಗಿದೆ. ಆದರೆ, ಆರ್‌ಜೆಡಿ ಈ ಪ್ರತಿಭಟನೆಗೆ ತಿರುಗೇಟು ನೀಡಿ, ಪ್ರಧಾನಿ ಮೋದಿಯವರ ಐದು ವರ್ಷಗಳ ಹಿಂದಿನ ಟ್ವೀಟ್ ಅನ್ನು ಹೊರತೆಗೆದು ಪ್ರತಿಕ್ರಿಯಿಸಿದೆ.

ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ (ಸಂಗ್ರಹ ಚಿತ್ರ)

ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ (ಸಂಗ್ರಹ ಚಿತ್ರ)

  • Share this:
ಪಾಟ್ನಾ(ಆ.10): ರಾಜಧಾನಿ ಪಾಟ್ನಾದಲ್ಲಿ ಇಂದು ಭಾರತೀಯ ಜನತಾ ಪಕ್ಷವು ಜನತಾ ದಳ (ಯುನೈಟೆಡ್) ವಿರುದ್ಧ ಪ್ರತಿಭಟನೆ ನಡೆಸಿತು. ನಿತೀಶ್ ಕುಮಾರ್ (Nitish Kumar) ವಿರುದ್ಧ ಘೋಷಣೆಗಳನ್ನು ಕೂಗಿದ ಅವರು, ಇಂತಹ ಅಧಿಕಾರ ಬದಲಾವಣೆಯನ್ನು ತಪ್ಪೆಂದು ಕಿಡಿಕಾರಿದ್ದಾರೆ. ಬಿಜೆಪಿ ಮಾಜಿ ಸಚಿವ ರವಿಶಂಕರ್ ಪ್ರಸಾದ್ (Ravishankar Prasad) ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಈ ಪ್ರತಿಭಟನೆಗೆ ರಾಷ್ಟ್ರೀಯ ಜನತಾ ದಳ (RJD) ಸಣ್ಣ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದೆ.

ಆರ್‌ಜೆಡಿಯ ಸಾಮಾಜಿಕ ಮಾಧ್ಯಮ ತಂಡವು ಪ್ರಧಾನಿ ನರೇಂದ್ರ ಮೋದಿಯವರ ಹಳೆಯ ಟ್ವೀಟ್ ಅನ್ನು ಮತ್ತೆ ನೆನಪಿಸಿದೆ. ಈ ಟ್ವೀಟ್ ಜುಲೈ 26, 2017 ರಂದು ಮಾಡಲಾಗಿದ್ದು, ಇದರಲ್ಲಿ "ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಭ್ರಷ್ಟಾಚಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವುದು, ವಿಶೇಷವಾಗಿ ಬಿಹಾರದ ಉಜ್ವಲ ಭವಿಷ್ಯಕ್ಕಾಗಿ, ಇಂದು ದೇಶ ಹಾಗೂ ಸಮಯದ ದೃಷ್ಟಿಯಲ್ಲಿ ಅಗತ್ಯವಾಗಿದೆ" ಎಂದು ಹೇಳಿದ್ದರು.

ಇದನ್ನೂ ಓದಿ: ಇದನ್ನೂ ಓದಿ:  Bihar Politics: ನಿತೀಶ್ ಕುಮಾರ್ 2024ರಲ್ಲಿ ಪ್ರಧಾನಿ ಅಭ್ಯರ್ಥಿ ಆಗುವರೇ? ಪ್ರಶಾಂತ್ ಕಿಶೋರ್ ಹೀಗಂದ್ರು

ಇನ್ನು ಜುಲೈ 26, 2017 ರಂದು, ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಿದ್ದು, ಆರ್ಜೆಡಿ ಜೊತೆಗಿನ ಮೈತ್ರಿಯನ್ನು ಮುರಿಯುವುದಾಗಿ ಘೋಷಿಸಿದ್ದರು. ಇದೇ ರಾಜಕೀಯ ಘಟನೆಯ ಸಂದರ್ಭದಲ್ಲಿ ನಿತೀಶ್ ಅವರ ನಿರ್ಧಾರ ಬಿಹಾರದ ಹಿತಾಸಕ್ತಿಯಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

Bihar Politics Updates CM Nitish Kumar called crucial meeting for JDU with NDA alliance
ನಿತೀಶ್​ ಕುಮಾರ್​​


ಸದ್ಯ ಪ್ರಧಾನಿ ಮೋದಿಯವರ ಈ ಟ್ವೀಟ್‌ಗೆ ಆರ್‌ಜೆಡಿಯ ಸಾಮಾಜಿಕ ಮಾಧ್ಯಮ ತಂಡ ಪ್ರತಿಕ್ರಿಯಿಸಿದೆ. ಆರ್‌ಜೆಡಿ ತನ್ನ ಟ್ವೀಟ್‌ನಲ್ಲಿ, “ಸರ್, ಬಿಹಾರ ಮಾಡಿದ್ದು ಇದನ್ನೇ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸಚಿವರು ಗಬ್ಬು ಹಬ್ಬಿಸಿದ್ದರು. ವಾಸನೆ ಬಂರುತ್ತಿತ್ತು. ಸಂಘಿ ಗೂಂಡಾಗಳು ಬೆತ್ತಲೆಯಾಗಿ ಕೋಲು ಮತ್ತು ಕತ್ತಿಗಳನ್ನು ಬೀಸಲಾರಂಭಿಸಿದ್ದರು ಎಂದು ಗುಡುಗಿದೆ.

ಪ್ರಜಾಪ್ರಭುತ್ವದ ತಾಯಿ ಬಿಹಾರ ದೇಶದ ಉಜ್ವಲ ಭವಿಷ್ಯಕ್ಕಾಗಿ ವಿಶೇಷ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಇದು ಇಂದಿನ ದೇಶ ಮತ್ತು ಕಾಲದ ಬೇಡಿಕೆಯಾಗಿದೆ ಎಂದೂ ಬರೆದಿದೆ. ಇದರೊಂದಿಗೆ ಹ್ಯಾಷ್​ ಟ್ಯಾಗ್​ ಕಾಲಚಕ್ರವನ್ನೂ ಬಳಸಲಾಗಿದೆ.ಮತ್ತೊಂದು ಟ್ವೀಟ್‌ನಲ್ಲಿ ಆರ್‌ಜೆಡಿ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಹಾರದಲ್ಲಿ ಈ ಅಧಿಕಾರ ಬದಲಾವಣೆಯಿಂದ ಸರ್ವಾಧಿಕಾರ ದುರ್ಬಲಗೊಳ್ಳಲು ಆರಂಭವಾಗಲಿದೆ ಎಂದು ಆರ್ ಜೆಡಿ ಹೇಳಿಕೊಂಡಿದೆ. “ಭಾರತೀಯ ಪ್ರಜಾಪ್ರಭುತ್ವದ ಮೇಲೆ ಏರುತ್ತಿರುವ ಸರ್ವಾಧಿಕಾರದ ಪದರವು ಕೆಳಗಿಳಿಯಲು ಪ್ರಾರಂಭಿಸಿದೆ. ಮತ್ತೊಮ್ಮೆ ದೇಶಕ್ಕೆ ದಾರಿ ತೋರಿದ ಬಿಹಾರ!! ತೇಜಸ್ವಿ ಯಾದವ್ ಅವರಿಗೆ ಧನ್ಯವಾದಗಳು ಎಂದು ಆರ್​ಜೆಡಿ ಟ್ವೀಟ್​ ಮಾಡಿದೆ.

ಇದನ್ನೂ ಓದಿ:  ಇದನ್ನೂ ಓದಿ:  Bihar Politics: 8ನೇ ಬಾರಿಗೆ ಬಿಹಾರ ಸಿಎಂ ಆದ ನಿತೀಶ್ ಕುಮಾರ್; ತೇಜಸ್ವಿ ಯಾದವ್ ಉಪಮುಖ್ಯಮಂತ್ರಿ


ಆರ್​ಜೆಡಿಯ ಈ ಟ್ವೀಟ್​ಗೆ ಟ್ವಿಟರ್ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಉತ್ತಮ ಆರಂಭ ಎನ್ನುತ್ತಿದ್ದಾರೆ ಮತ್ತು ಕೆಲವರು ಜಂಗಲ್ ರಾಜ್ ರಿಟರ್ನ್ ಎಂದು ಕರೆಯುತ್ತಿದ್ದಾರೆ.
Published by:Precilla Olivia Dias
First published: