Uttarakhand Result: ಕಾಂಗ್ರೆಸ್ ಸೋಲಿಗೆ ಐದು ಕಾರಣಗಳಿವು...

ಕಾಂಗ್ರೆಸ್‌ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ವಿರುದ್ಧ ನಾನಾ ಆರೋಪಗಳನ್ನು ಹೊರಿಸಿದರೂ, ಸಾಕಷ್ಟು ಪ್ರಚಾರ ಮಾಡಿದರೂ, ಹೆಚ್ಚು ಗೆಲುವು ಸಿಗದೆ ನಿರಾಸೆ ಅನುಭವಿಸುವಂತಾಗಿದೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ಪಂಚ ರಾಜ್ಯ ಚುನಾವಣೆಗಳ (Five State Election Result) ಫಲಿತಾಂಶ ಸ್ಪಷ್ಟವಾಗಿ ಹೊರಹೊಮ್ಮಿದೆ, ಈ ಪೈಕಿ ಐದೂ ರಾಜ್ಯಗಳಲ್ಲಿ ದೇಶದ ಅತಿ ಹಿರಿಯ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್‌ (Congress) ಪಕ್ಷ ಹೀನಾಯವಾಗಿ ಸೋತಿದೆ. ಈ ಪೈಕಿ ಉತ್ತರಾಖಂಡದಲ್ಲೂ (Uttarakhand) ಸಹ ಕೈ ಪಕ್ಷ ಮತ್ತೆ ಸೋಲಿನ ರುಚಿಯನ್ನು ಕಂಡಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಉತ್ತರಾಖಂಡದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 

ಉತ್ತರಾಖಂಡದಲ್ಲಿ ಸತತ ಎರಡನೇ ಅವಧಿಗೆ ಆಡಳಿತಾರೂಢ ಪಕ್ಷ ಅಧಿಕಾರಕ್ಕೆ ಮರಳುತ್ತಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎಂಬಂತಾಗಿದೆ.

ಕಾಂಗ್ರೆಸ್‌ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿ ವಿರುದ್ಧ ನಾನಾ ಆರೋಪಗಳನ್ನು ಹೊರಿಸಿದರೂ, ಸಾಕಷ್ಟು ಪ್ರಚಾರ ಮಾಡಿದರೂ, ಹೆಚ್ಚು ಗೆಲುವು ಸಿಗದೆ ನಿರಾಸೆ ಅನುಭವಿಸುವಂತಾಗಿದೆ. ಆದರೆ, ಈ ಸೋಲಿಗೆ ಕಾರಣಗಳೇನು ಎನ್ನುವುದನ್ನು ಹುಡುಕಿದರೆ ಪ್ರಮುಖವಾಗಿ ಐ ಐದು ಕಾರಣಗಳು ಹೀಗಿವೆ ನೋಡಿ..

ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಐದು ಕಾರಣಗಳು ಇಲ್ಲಿವೆ.

1) ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 500 ರೂ.ಗಿಂತ ಕಡಿಮೆಗೆ ನೀಡುವ ಬಗ್ಗೆ, ಉದ್ಯೋಗಗಳು, ಐದು ಲಕ್ಷ ಕುಟುಂಬಗಳಿಗೆ ವಿತ್ತೀಯ ಭತ್ಯೆ, ಉತ್ತಮ ಆರೋಗ್ಯ ಸೌಲಭ್ಯಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡ 40 ರಷ್ಟು ಮೀಸಲಾತಿ ನೀಡುವುದಾಗಿ ಭರವಸೆ ನೀಡಿತ್ತು. ಆದರೂ ಸಹ, ಜನರು ರಾಷ್ಟ್ರೀಯ ಭದ್ರತೆ, ಸೇನಾ ಕಲ್ಯಾಣ ಮತ್ತು ಧಾರ್ಮಿಕ ಪ್ರವಾಸೋದ್ಯಮದ ವಿಷಯಗಳ ಮೇಲೆ ಮತ ಚಲಾಯಿಸಿದರು ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: UPಯಲ್ಲಿ ಇತಿಹಾಸ ಸೃಷ್ಟಿಸಿದ Yogi; ಆದಿತ್ಯನಾಥ್ ಗೆಲುವಿಗೆ ಮುಲಾಯಂ ಯಾದವ್​ ಸೊಸೆ ಸಂಭ್ರಮ​

2) ದೇಶದ ಅತಿ ಹಳೆಯ ರಾಷ್ಟ್ರೀಯ ಪಕ್ಷದೊಳಗಿನ ಆಂತರಿಕ ಕಲಹ ಮತ್ತು ಚುನಾವಣಾ ಭರವಸೆಗಳನ್ನು ನಿರ್ವಹಿಸುವ ವಿಷಯದಲ್ಲಿ ಪಕ್ಷ ಸಾಕಷ್ಟು ಪ್ರಯತ್ನ ಪಟ್ಟಿದೆ ಎಂದು ತೋರುತ್ತದೆ. ಆದರೆ ಕಾಂಗ್ರೆಸ್‌ನ ರಾಷ್ಟ್ರೀಯ ಚಿತ್ರಣವು ಉತ್ತರಾಖಂಡ ರಾಜ್ಯದಲ್ಲಿ ಗೆಲ್ಲುವ ಸಾಧ್ಯತೆಗಳನ್ನು ದುರ್ಬಲಗೊಳಿಸಿದೆ.

3) ಬಿಜೆಪಿ ಪ್ರಚಾರಕರ ಸ್ಟಾರ್ ಪಟ್ಟಿಯನ್ನು ಹೊಂದಿತ್ತು. ಪ್ರಧಾನಿ ನರೇಂದ್ರ ಮೋದಿ ಕನಿಷ್ಠ ಮೂರು ದಿನಗಳ ಕಾಲ ರಾಜ್ಯದಲ್ಲಿದ್ದರು, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಚುನಾವಣೆಗೆ ಮುನ್ನ ರಾಜ್ಯದಲ್ಲಿ ಹಲವಾರು ರ‍್ಯಾಲಿಗಳನ್ನು ನಡೆಸಿದರು. ಆದರೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬಿಜೆಪಿಗೆ ಹೋಲಿಸಿದರೆ ಕಡಿಮೆ ರ‍್ಯಾಲಿಗಳನ್ನು ನಡೆಸಿದರು.

ಇದನ್ನು ಓದಿ: ಚನ್ನಿ, ಅಮರಿಂದರ್​ ಸಿಂಗ್​, ಸೋನು ಸೂದ್​ ಸಹೋದರಿ ಸೇರಿದಂತೆ Punjab​ನಲ್ಲಿ ಅನೇಕ ರಾಜಕೀಯ ದಿಗ್ಗಜರ ಸೋಲು

4) ಹಿಂದಿನ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್‌ ಸರ್ಕಾರ ತುಷ್ಟೀಕರಣದ ರಾಜಕಾರಣ ಮಾಡುತ್ತಿತ್ತು ಎಂದು ಬಿಜೆಪಿ ಆರೋಪಿಸಿತ್ತು. ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ, ನಮಾಜ್‌ಗಾಗಿ ಹೆದ್ದಾರಿಗಳನ್ನು ಮುಚ್ಚಲು ಅವಕಾಶ ಮಾಡಿಕೊಟ್ಟಿತು ಮತ್ತು ರಾಜ್ಯದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯದ ಭರವಸೆ ನೀಡಿತ್ತು ಎಂದು ಕಳೆದ ವರ್ಷದ ಚುನಾವಣಾ ರ‍್ಯಾಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಕೈ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಷಯಗಳ ಮೇಲೆ ಬಿಜೆಪಿ ಮತಗಳನ್ನು ಪಡೆಯಲು ಸಾಧ್ಯವಾಯಿತು ಎಂದು ತೋರುತ್ತದೆ.

5) ಬಿಜೆಪಿಯು ಸೇನೆಯ ಪರವಾಗಿರುವ ಪಕ್ಷ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಬಲ್ಲ ಪಕ್ಷ ಎಂಬ ಚಿತ್ರಣವು ಭಾರತೀಯ ಸೇನೆಯಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಕಂಡಿರುವ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಅವಲಂಬಿಸಿರುವ ರಾಜ್ಯದಲ್ಲಿ ಅದರ ಪರವಾಗಿ ಕೆಲಸ ಮಾಡುತ್ತಿದೆ ಎಂದೂ ಹೇಳಲಾಗುತ್ತಿದೆ.
Published by:Seema R
First published: