Rishi Sunak: ರಿಷಿ ಸುನಕ್ ಪ್ರಧಾನಿಯಾದರೆ ಮೊದಲು ಮಾಡುವ ಕೆಲಸ ಇದೇ ಅಂತೆ!

ಬ್ರಿಟನ್‌ನ ಪ್ರಧಾನಿ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ರಿಷಿ ಸುನಕ್ ಪ್ರಧಾನಿಯಾದರೆ ಅವರು ಮಾಡುವ ಮೊದಲ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಹೌದು ಅದು ಅಂತಿಂತಹ ಕೆಲಸವಲ್ಲ, ದೈತ್ಯ ರಾಷ್ಟ್ರ ಚೀನಾಗೆ ಸೆಡ್ಡು ಹೊಡೆಯುವಂತದ್ದು. ಮಾಧ್ಯಮಗಳ ಜೊತೆ ಮಾತನಾಡಿದ ಸುನಕ್ ಚೀನಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ತಮ್ಮ ಕಾರ್ಯ ವೈಖರಿ ಬಗ್ಗೆ ಮಾತನಾಡಿದ್ದಾರೆ.

ರಿಷಿ ಸುನಕ್

ರಿಷಿ ಸುನಕ್

  • Share this:
ಲಂಡನ್(ಜು.29): ಬ್ರಿಟನ್‌ನ (Britain) ಪ್ರಧಾನಿ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ರಿಷಿ ಸುನಕ್ (Rishi Sunak) ಪ್ರಧಾನಿಯಾದರೆ ಅವರು ಮಾಡುವ ಮೊದಲ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಹೌದು ಅದು ಅಂತಿಂತಹ ಕೆಲಸವಲ್ಲ, ದೈತ್ಯ ರಾಷ್ಟ್ರ ಚೀನಾಗೆ (China) ಸೆಡ್ಡು ಹೊಡೆಯುವಂತದ್ದು. ಮಾಧ್ಯಮಗಳ ಜೊತೆ ಮಾತನಾಡಿದ ಸುನಕ್ ಚೀನಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ತಮ್ಮ ಕಾರ್ಯ ವೈಖರಿ ಬಗ್ಗೆ ಮಾತನಾಡಿದ್ದಾರೆ. ‘ಏಷ್ಯಾದ ಮಹಾಶಕ್ತಿ ದೇಶೀಯ ಮತ್ತು ಜಾಗತಿಕ ಭದ್ರತೆಗೆ (Global Security) ಚೀನಾ ನಂಬರ್ ಒನ್ ಬೆದರಿಕೆಯಾಗಿದೆ. ನಾನು ಪ್ರಧಾನಿ ಸ್ಥಾನವನ್ನು ಏರುತ್ತಿದ್ದಂತೆ ಮಾಡುವ ಮೊದಲ ಕೆಲಸವೆಂದರೆ ಕಮ್ಯೂನಿಸ್ಟ್ ಸರ್ಕಾರದ (Communist Government) ವಿರುದ್ಧ ಕ್ರಮ ತೆಗೆದುಕೊಳ್ಳುವುದು’ ಎಂದಿದ್ದಾರೆ.

ಬ್ರಿಟನ್ನಿನ ಆಡಳಿತಾರೂಢ ಕನ್ಸರ್ವೇಟೀವ್ ಪಕ್ಷದಲ್ಲಿರುವ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗುವ ರೇಸಿನಲ್ಲಿದ್ದು, ಲಿಜ್ ಟ್ರುಸ್ ವಿರುದ್ಧ ಪ್ರಬಲ ಪ್ರತಿಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಬ್ರಿಟನ್ನಿನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ವಿರುದ್ಧ ಇತ್ತೀಚೆಗೆ ಲಿಜ್ ಟ್ರುಸ್, ರಿಷಿ ಚೀನಾ ಹಾಗೂ ರಷ್ಯಾದ ವಿರುದ್ಧ ದುರ್ಬಲರಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಸುನಕ್ ಈ ರೀತಿ ಹೇಳಿಕೆ ನೀಡುವ ಮೂಲಕ ಚೀನಾದ ವಿರುದ್ಧ ಗುಡುಗಿದ್ದಾರೆ.

ಚೀನಾದ ಸರ್ಕಾರಿ ಗ್ಲೋಬಲ್ ಟೈಮ್ಸ್ ಈ ಹಿಂದೆ ಸುನಕ್ ಅವರು "ಯುಕೆ-ಚೀನಾ ಸಂಬಂಧಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ಪಷ್ಟ ಮತ್ತು ಪ್ರಾಯೋಗಿಕ ದೃಷ್ಟಿಕೋನ ಹೊಂದಿರುವ ಏಕೈಕ ಅಭ್ಯರ್ಥಿ” ಎಂದು ವರದಿ ಮಾಡಿತ್ತು.

ಚೀನೀ ಸಂಸ್ಕೃತಿಯ ಪ್ರಭಾವ ತಡೆಗೆ ರಿಷಿ ಸುನಕ್ ಕ್ರಮ
ಬ್ರಿಟನ್‌ನಲ್ಲಿರುವ ಎಲ್ಲಾ 30 ಕನ್ಫ್ಯೂಷಿಯಸ್ ಸಂಸ್ಥೆಗಳನ್ನು ಮುಚ್ಚುವ ಬಗ್ಗೆ ಒಲವು ಹೊಂದಿರುವ ಸುನಕ್ ಇದರ ಮೂಲಕ ಸಂಸ್ಕೃತಿ ಮತ್ತು ಭಾಷಾ ಕಾರ್ಯಕ್ರಮಗಳ ಮೂಲಕ ಚೀನೀ ಪ್ರಭಾವವನ್ನು ತಡೆಯುವ ಉದ್ದೇಶ ಹೊಂದಿದ್ದಾರೆ. ಅಲ್ಲದೇ ಈ ಪ್ರಸ್ತಾಪದ ಬಗ್ಗೆ ಮಾತನಾಡಿದ ರಿಷಿ ಸುನಕ್ £50,000 ($60,000) ಗಿಂತ ಹೆಚ್ಚಿನ ವಿದೇಶಿ ನಿಧಿಯನ್ನು ಬಹಿರಂಗಪಡಿಸಲು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒತ್ತಾಯಿಸುವ ಮೂಲಕ ಮತ್ತು ಸಂಶೋಧನಾ ಪಾಲುದಾರಿಕೆಗಳನ್ನು ಪರಿಶೀಲಿಸುವ ಮೂಲಕ ಚೀನೀ ಕಮ್ಯುನಿಸ್ಟ್ ಪಕ್ಷವನ್ನು ಬ್ರಿಟನ್ ವಿಶ್ವವಿದ್ಯಾಲಯಗಳಿಂದ ಹೊರಹಾಕುವುದಾಗಿ ಭರವಸೆ ನೀಡಿದರು.

“ನಮ್ಮ ತಂತ್ರಜ್ಞಾನವನ್ನು ಚೀನಾದವರು ಕದಿಯುತ್ತಿದ್ದಾರೆ”
ಬ್ರಿಟನ್‌ನ ದೇಶೀಯ ಬೇಹುಗಾರಿಕೆ ಸಂಸ್ಥೆ MI5, ಚೀನೀ ಬೇಹುಗಾರಿಕೆಯನ್ನು ಎದುರಿಸಲು ಸಹಾಯ ಮಾಡುತ್ತದೆ ಸೈಬರ್ಸ್ಪೇಸಿನಲ್ಲಿ ಚೀನಾ ವಿರುದ್ಧದ ಆತಂಕಗಳನ್ನು ನಿಭಾಯಿಸಲು "NATO-ಶೈಲಿಯ" ಅಂತಾರಾಷ್ಟ್ರೀಯ ಸಹಕಾರವನ್ನು ನಿರ್ಮಿಸುವುದಾಗಿಯೂ ರಿಷಿ ಸುನಕ್ ಪ್ರಧಾನಿ ನಂತರದ ತಮ್ಮ ಕಾರ್ಯವೈಖರಿ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ:  Nirmala Sitharaman: ಭಾರತೀಯರು ಸ್ವಿಸ್ ಬ್ಯಾಂಕ್​ಗಳಲ್ಲಿ ಇಟ್ಟಿರುವ ಹಣದ ಬಗ್ಗೆ ಮಾಹಿತಿಯಿಲ್ಲ; ನಿರ್ಮಲಾ ಸೀತಾರಾಮನ್

ಅಲ್ಲದೆ, ಆಯಕಟ್ಟಿನ ಸೂಕ್ಷ್ಮ ತಂತ್ರಜ್ಞಾನ ಸಂಸ್ಥೆಗಳು ಸೇರಿದಂತೆ ಪ್ರಮುಖ ಬ್ರಿಟಿಷ್ ಸ್ವತ್ತುಗಳ ಚೀನೀ ಸ್ವಾಧೀನವನ್ನು ನಿಷೇಧಿಸುವ ಪ್ರಕರಣವನ್ನು ಅಧ್ಯಯನ ಮಾಡುವುದಾಗಿಯೂ ಹೇಳಿದ್ದಾರೆ. ಚೀನಾ "ನಮ್ಮ ತಂತ್ರಜ್ಞಾನವನ್ನು ಕದಿಯುತ್ತಿದೆ ಮತ್ತು ನಮ್ಮ ವಿಶ್ವವಿದ್ಯಾನಿಲಯಗಳಿಗೆ ನುಸುಳುತ್ತಿದೆ ಮತ್ತು ರಷ್ಯಾದ ತೈಲವನ್ನು ಖರೀದಿಸುವ ಮೂಲಕ ರಷ್ಯಾಕ್ಕೆ ನೆರವು ನೀಡುತ್ತಿದೆ ಮತ್ತು ತೈವಾನ್ ಸೇರಿದಂತೆ ನೆರೆಹೊರೆಯವರನ್ನು ಬೆದರಿಸಲು ಪ್ರಯತ್ನಿಸುತ್ತಿದೆ" ಎಂದು ಸುನಕ್ ಹೇಳಿದ್ದಾರೆ.

ಚೀನಾದ ಕೆಲವು ಯೋಜನಗಳ ಬಗ್ಗೆ ಟೀಕೆ
ರಿಷಿ ಸುನಕ್, ಚೀನಾದ ಕೆಲವು ಯೋಜನಗಳ ಬಗ್ಗೆಯೂ ಟೀಕೆ ಮಾಡಿದ್ದಾರೆ. ಚೀನಾದ ಬೆಲ್ಟ್ ಅಂಡ್ ರೋಡ್ ಯೋಜನೆ ಬಗ್ಗೆ ಮಾತನಾಡಿದ ರಿಷಿ ಸುನಕ್ "ಅವರು ತಮ್ಮ ಮಾನವ ಹಕ್ಕುಗಳಿಗೆ ವಿರುದ್ಧವಾಗಿ ಕ್ಸಿನ್‌ಜಿಯಾಂಗ್ ಮತ್ತು ಹಾಂಗ್ ಕಾಂಗ್ ಸೇರಿದಂತೆ ಅವರ ಪ್ರಜೆಗಳನ್ನೇ ಹಿಂಸಿಸುತ್ತಾರೆ ಮತ್ತು ಬಂಧಿಸುತ್ತಾರೆ. ಇದು ನಿಜಕ್ಕೂ ಕ್ರೂರ ವರ್ತನೆಯಾಗಿದೆ" ಎಂದು ಕಿಡಿಕಾಡಿದ್ದಾರೆ ರಿಷಿ ಸುನಕ್. ತಮ್ಮ ಕರೆನ್ಸಿಯನ್ನು ನಿಗ್ರಹಿಸುವ ಮೂಲಕ ಜಾಗತಿಕ ಆರ್ಥಿಕತೆಯನ್ನು ತಮ್ಮ ಪರವಾಗಿ ನಿರಂತರವಾಗಿ ಸಜ್ಜುಗೊಳಿಸುತ್ತಿದ್ದಾರೆ ಎಂದೂ ಮಾಜಿ ಹಣಕಾಸು ಸಚಿವರು ಹೇಳಿದ್ದಾರೆ.

ಈ ಎಲ್ಲಾ ಕಟ್ಟುಪಾಡುಗಳು ಇಲ್ಲಿಗೆ ಕೊನೆಯಾಗಬೇಕು, ಬ್ರಿಟನ್ ಮತ್ತು ಪಶ್ಚಿಮದಾದ್ಯಂತ ರಾಜಕಾರಣಿಗಳು ಬಹಳ ಸಮಯದಿಂದ ಚೀನಾಕ್ಕೆ ರೆಡ್ ಕಾರ್ಪೆಟ್ ಹಾಕಿ ಅವರು ಮಾಡುವ ಕೆಲಸಗಳನ್ನು ನೋಡಿ ಕಣ್ಮುಚ್ಚಿಕೊಂಡಿದ್ದು ಸಾಕು, ನಾನು ಇದನ್ನು ಬ್ರಿಟನ್ ಪ್ರಧಾನಿಯಾದ ಮೊದಲನೇ ದಿನದಂದೇ ಬದಲಾಯಿಸುತ್ತೇನೆ ಎಂದು ಬ್ರಿಟನ್ ಮುಂದಿನ ಪ್ರಧಾನಿಯಾಗುವ ರೇಸಿನಲ್ಲಿರುವ ರಿಷಿ ಸುನಕ್ ಹೇಳಿದ್ದಾರೆ

ಚೀನಾದ ವಿರುದ್ಧ ಕೆಲ ಕ್ರಮಗಳನ್ನು ತೆಗದುಕೊಂಡ ಬ್ರಿಟನ್
ಈ ಹಿಂದೆ ಜಾನ್ಸನ್ ಅವರ ಕ್ಯಾಬಿನೆಟ್‌ನಲ್ಲಿದ್ದಾಗ ಸುನಕ್ ಮತ್ತು ಟ್ರಸ್ ಇಬ್ಬರೂ ಬ್ರಿಟಿಷ್ ಸರ್ಕಾರದ ನೀತಿಯು ಚೀನಾದ ಬಗ್ಗೆ ಮೊದಲೇ ಎಚ್ಚರಿಸಿದ್ದರು. ಆದಾಗ್ಯೂ ಕಳೆದ ವರ್ಷ ಮಾರ್ಚ್‌ನಲ್ಲಿ, ಭದ್ರತೆ, ರಕ್ಷಣೆ ಮತ್ತು ವಿದೇಶಾಂಗ ನೀತಿಯ ಸಮಗ್ರ ವಿಮರ್ಶೆ ಚೀನಾವನ್ನು "ಯುಕೆಯ ಆರ್ಥಿಕ ಭದ್ರತೆಗೆ ಅತಿದೊಡ್ಡ ರಾಜ್ಯ ಆಧಾರಿತ ಬೆದರಿಕೆ" ಎಂದು ಕರೆದಿದೆ.

ಇದನ್ನೂ ಓದಿ:  National Herald Case: ಇಂದು ಮತ್ತೆ ಸೋನಿಯಾ ಗಾಂಧಿ ವಿಚಾರಣೆ, ಇಂದಿಗೆ ಮುಗಿಯುತ್ತಾ?

ಈ ಹಿನ್ನೆಲೆ ಈಗಾಗ್ಲೇ ಬ್ರಿಟನ್ ಚೀನಾದ ವಿರುದ್ಧ ಕೆಲ ಕ್ರಮಗಳನ್ನು ತೆಗದುಕೊಂಡಿದೆ. ವಿದೇಶಿ ಸಂಸ್ಥೆಗಳಿಗೆ ರಕ್ಷಣೆ, ಇಂಧನ ಮತ್ತು ಸಾರಿಗೆಯಂತಹ ಸೂಕ್ಷ್ಮ ವಲಯಗಳಲ್ಲಿ ಬ್ರಿಟಿಷ್ ವ್ಯವಹಾರಗಳನ್ನು ಖರೀದಿಸಲು ಕಷ್ಟವಾಗುವಂತೆ ಚೀನಾಕ್ಕೆ ಕಾನೂನುಗಳನ್ನು ಬಿಗಿಗೊಳಿಸಲಾಗಿದೆ.
Published by:Ashwini Prabhu
First published: