• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • RIL AGM 2020: ಇದು ನಮಗೆ ಕೇವಲ ವ್ಯವಹಾರವಲ್ಲ, ನಮ್ಮ ಕರ್ತವ್ಯ, ನಮ್ಮ ಧರ್ಮ, ದೇಶಕ್ಕೆ ಸಲ್ಲಿಸುವ ಸೇವೆ; ನೀತಾ ಅಂಬಾನಿ

RIL AGM 2020: ಇದು ನಮಗೆ ಕೇವಲ ವ್ಯವಹಾರವಲ್ಲ, ನಮ್ಮ ಕರ್ತವ್ಯ, ನಮ್ಮ ಧರ್ಮ, ದೇಶಕ್ಕೆ ಸಲ್ಲಿಸುವ ಸೇವೆ; ನೀತಾ ಅಂಬಾನಿ

ನೀತಾ ಅಂಬಾನಿ

ನೀತಾ ಅಂಬಾನಿ

ಶಿಕ್ಷಣ ಮತ್ತು ಕ್ರೀಡೆಯ ಮೂಲಕ ರಿಲಯನ್ಸ್ ಫೌಂಡೇಶನ್ 21.5 ದಶಲಕ್ಷಕ್ಕೂ ಹೆಚ್ಚಿನ ಮಕ್ಕಳನ್ನು ತಲುಪಿದೆ. ತಳಮಟ್ಟದಿಂದಲೇ ದೇಶದಲ್ಲಿ ಕ್ರೀಡಾ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸಲು ನಾವು ದಣಿವರಿಯದ ರೀತಿ ಕೆಲಸ ಮಾಡುತ್ತಿದ್ದೇವೆ ಎಂದು ನೀತಾ ಅಂಬಾನಿ ಹೇಳಿದರು.

  • Share this:

ಮುಂಬೈ; ಕೋವಿಡ್​ನಂತಹ ಬಿಕ್ಕಟ್ಟಿನ ಸಮಯದಲ್ಲಿ ನಾವು  ಪ್ರತಿದಿನ ಒಂದು ಲಕ್ಷ ಪಿಪಿಇ ಕಿಟ್​ಗಳನ್ನು ಹಾಗೂ ಮಾಸ್ಕ್​ಗಳನ್ನು ಉತ್ಪಾದಿಸುತ್ತಿದ್ದೇವೆ. ಅದು ಆಮದು ಮಾಡಿಕೊಂಡ ಬೆಲೆಯ ಮೂರನೆ ಒಂದು ಭಾಗದಷ್ಟು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಅಧ್ಯಕ್ಷೆ ಹಾಗೂ ಸಂಸ್ಥಾಪಕರಾದ ನೀತಾ ಅಂಬಾನಿ ಹೇಳಿದರು.


ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ 43ನೇ ವಾರ್ಷಿಕ ಸಭೆಯಲ್ಲಿ ನೀತಾ ಅಂಬಾನಿ ಅವರು ರಿಲಯನ್ಸ್ ಸಂಸ್ಥೆಯ ಲೋಕೋಪಯೋಗಿ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು.


ಅನ್ನ ಸೇವಾ ಯೋಜನೆಯಡಿ ನಾವು ಪ್ರತಿದಿನ ದೇಶಾದ್ಯಂತ 5 ಕೋಟಿ ಕಾರ್ಮಿಕರು, ದಿನಗೂಲಿ ನೌಕರರಿಗೆ ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.


ಜಿಯೋ ದೇಶದ 40 ಕೋಟಿ ಜನರಿಗೆ ಡಿಜಿಟಲ್ ಸಂಪರ್ಕ ಒದಗಿಸಿದೆ. 30,000 ಸಂಸ್ಥೆಗಳ ಸಿಬ್ಬಂದಿ ಮನೆಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಮತ್ತು ಲಕ್ಷಾಂತರ ವಿದ್ಯಾರ್ಥಿಗಳು ಮನೆಯಿಂದ ಕಲಿಯಲು ಅವಕಾಶ ನೀಡಿದೆ. ರಿಲಯನ್ಸ್ ದೇಶಾದ್ಯಂತ ತುರ್ತು ಸೇವಾ ವಾಹನಗಳಿಗೆ ಉಚಿತ ಇಂಧನ ಒದಗಿಸುತ್ತಿದೆ. ಇದು ನಮಗೆ ಕೇವಲ ವ್ಯವಹಾರವಲ್ಲ, ಇದು ನಮ್ಮ ಕರ್ತವ್ಯ, ನಮ್ಮ ಧರ್ಮ, ರಾಷ್ಟ್ರಕ್ಕೆ ನಮ್ಮ ಸೇವೆ ಎಂದು ನೀತಾ ಅಂಬಾನಿ ಹೇಳಿದರು.


ನಾವು ನಮ್ಮ ಡಿಜಿಟಲ್ ವಿತರಣೆ ಮತ್ತು ಪೂರೈಕೆ ಸೇವೆಯನ್ನು ಬಳಸಿಕೊಂಡು ಮಾರಕ ಕೊರೋನಾ ವೈರಸ್​ಗೆ ಲಸಿಕೆ ಲಭ್ಯವಾದ ತಕ್ಷಣ, ಆ ಲಸಿಕೆಯನ್ನು ಸ್ವಯಂಸೇವಕರಾಗಿ ದೇಶದ ಮೂಲೆ- ಮೂಲೆ  ತಲುಪಿಸುವ ಭರವಸೆ ನೀಡುತ್ತೇವೆ ಎಂದು ಹೇಳಿದರು.


ಇದನ್ನು ಓದಿ: RIL AGM 2020: Jioದಲ್ಲಿ Google 33,000 ಕೋಟಿ ರೂ. ಹೂಡಿಕೆ; ಮುಕೇಶ್ ಅಂಬಾನಿ ಘೋಷಣೆ
ಶಿಕ್ಷಣ ಮತ್ತು ಕ್ರೀಡೆಯ ಮೂಲಕ ರಿಲಯನ್ಸ್ ಫೌಂಡೇಶನ್ 21.5 ದಶಲಕ್ಷಕ್ಕೂ ಹೆಚ್ಚಿನ ಮಕ್ಕಳನ್ನು ತಲುಪಿದೆ. ತಳಮಟ್ಟದಿಂದಲೇ ದೇಶದಲ್ಲಿ ಕ್ರೀಡಾ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸಲು ನಾವು ದಣಿವರಿಯದ ರೀತಿ ಕೆಲಸ ಮಾಡುತ್ತಿದ್ದೇವೆ ಎಂದು ನೀತಾ ಅಂಬಾನಿ ಹೇಳಿದರು.

top videos
    First published: