ಬಿಹಾರ ವಿಧಾನಸಭೆಯ ಮೂರು ಮತ್ತು ಕೊನೇ ಹಂತದ ಚುನಾವಣೆ ವೇಳೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿ (ಯು) ಅಧ್ಯಕ್ಷ ನಿತೀಶ್ ಕುಮಾರ್ ಅವರು ಇದು ನನ್ನ ಕೊನೇ ಚುನಾವಣೆ ಎಂದು ಹೇಳಿದ್ದಾರೆ.
ಇದು ಕೊನೇ ದಿನ (ಕೊನೇ ಹಂತದ ವಿಧಾನಸಭೆ ಚುನಾವಣೆಯ ಪ್ರಚಾರ) ನಾಳಿದ್ದು ಮತದಾನ ನಡೆಯಲಿದೆ. ಇದು ನನ್ನ ಕೊನೆಯ ಚುನಾವಣೆ ಎಂದು ಪುರ್ನೆಯಾ ಜಿಲ್ಲೆಯ ರಾಜಕೀಯ ಸಮಾವೇಶದಲ್ಲಿ ಹೇಳಿದರು.
ನವೆಂಬರ್ 7 ರಂದು ನಡೆಯಲಿರುವ ಮೂರನೇ ಹಂತದ ಚುನಾವಣೆ ನಡೆಯಲಿದ್ದು, ನಿತೀಶ್ ಕುಮಾರ್ ನಾಲ್ಕನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನ ನಡೆಸಿದ್ದಾರೆ. ನವೆಂಬರ್ 10ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಪುರ್ನಿಯಾ ಸಮಾವೇಶದಲ್ಲಿ ನಿತೀಶ್ ಕುಮಾರ್ ಅವರು, ಎನ್ಡಿಎ ಮೈತ್ರಿಯನ್ನು ಮತ್ತೆ ರಾಜ್ಯದಲ್ಲಿ ಅಧಿಕಾರ ತರುವಂತೆ ಮತದಾರರಲ್ಲಿ ಮನವಿ ಮಾಡಿದರು.
ಇದನ್ನು ಓದಿ: ಸರಳ ದೀಪಾವಳಿ, ಪಟಾಕಿ ನಿಷೇಧಿಸಲು ಚಿಂತನೆ, ಸಿಎಂ ಜೊತೆ ಚರ್ಚಿಸಿ ನಿರ್ಧಾರ ಪ್ರಕಟ; ಸಚಿವ ಕೆ.ಸುಧಾಕರ್
ತೇಜಸ್ವಿ ಯಾದವ್ ಅವರ ನೇತೃತ್ವದ ಕಾಂಗ್ರೆಸ್ ಮತ್ತು ಸಿಪಿಐ (ಎಂಎಲ್) ಮಹಾಘಟ್ಬಂಧನ್ ಎದುರು ನಿತೀಶ್ ಕುಮಾರ್ ಅವರು ಎನ್ಡಿಎ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಚುನಾವಣೆ ವೇಳೆ ತೇಜಸ್ವಿ ಯಾದವ್ ಅವರು, ನಿತೀಶ್ ಕುಮಾರ್ ಅವರು 15 ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ ಸಾಕಷ್ಟು ದಣಿದಿದ್ದಾರೆ ಎಂದು ಛೇಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ