ಇದು ಆರಂಭ ಅಷ್ಟೇ, ಚುನಾವಣೆ ನಂತರದ ಬಜೆಟ್​ನಲ್ಲಿ ಇನ್ನೂ ಹೆಚ್ಚಿನ ಯೋಜನೆಗಳು ಬರಲಿವೆ; ಪ್ರಧಾನಿ ಮೋದಿ

ನಮ್ಮ ಬಜೆಟ್​ 3 ಕೋಟಿ ತೆರಿಗೆದಾರರಿಗೆ, 12 ಕೋಟಿ ರೈತರಿಗೆ ಮತ್ತು 40 ಕೋಟಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ ಎಂದು ಮೋದಿ ಹೇಳಿದರು.

HR Ramesh | news18
Updated:February 2, 2019, 3:09 PM IST
ಇದು ಆರಂಭ ಅಷ್ಟೇ, ಚುನಾವಣೆ ನಂತರದ ಬಜೆಟ್​ನಲ್ಲಿ ಇನ್ನೂ ಹೆಚ್ಚಿನ ಯೋಜನೆಗಳು ಬರಲಿವೆ; ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
HR Ramesh | news18
Updated: February 2, 2019, 3:09 PM ISTಥಾಕೂರ್​ನಗರ: ಇದು ಆರಂಭ ಅಷ್ಟೇ. ಮುಂದಿನ ಲೋಕಸಭಾ ಚುನಾವಣೆಯ ನಂತರ ಮಂಡನೆಯಾಗುವ ಮುಖ್ಯ ಬಜೆಟ್​ನಲ್ಲಿ ಯುವಕರಿಗೆ, ರೈತರು ಮತ್ತು ಸಮಾಜದ ಇತರ ವರ್ಗದವರಿಗೆ ಹೆಚ್ಚಿನ ಉಪಯೋಗವಾಗುವ ಯೋಜನೆಗಳನ್ನು ಮಂಡಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶನಿವಾರ ಆಯೋಜಿಸಿದ್ದ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮಬಂಗಾಳ ಸರ್ಕಾರ ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದರು. ಇಲ್ಲಿನ ಗ್ರಾಮೀಣ ಭಾಗದ ಜನರು ಮಮತಾ ಸರ್ಕಾರದ ದಬ್ಬಾಳಿಕೆಯಿಂದ ಬಳಲುತ್ತಿದ್ದಾರೆ. ಇಲ್ಲಿನ ಮುಖ್ಯಮಂತ್ರಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದು, ಜನರು ಭಯದಿಂದ ಬದುಕುತ್ತಿದ್ದಾರೆ ಎಂದು ಆರೋಪ ಮಾಡಿದರು.

 Loading...


ಶುಕ್ರವಾರ ಬಜೆಟ್​ ಮಂಡಿಸಿದ ಹಣಕಾಸು ಪಿಯೂಷ್​ ಗೋಯಲ್​ ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ 12 ಕೋಟಿ ಸಣ್ಣ ರೈತರ ಖಾತೆಗೆ ನೇರವಾಗಿ ವಾರ್ಷಿಕ 6 ಸಾವಿರ ನೀಡುವುದಾಗಿ ಘೋಷಿಸಿದ್ದಾರೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ, ನಮ್ಮ ಸರ್ಕಾರ ನೇರವಾಗಿ ರೈತರ ಖಾತೆಗೆ ಹಣ ಜಮೆ ಮಾಡಲಿದೆ. ಜನ್​-ಧನ್ ಖಾತೆ ಏಕೆ ಎಂದು ಕೇಳುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ ಎಂದು ಪ್ರಧಾನಿ ಮೋದಿ ಅವರು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮ ಬಜೆಟ್​ 3 ಕೋಟಿ ತೆರಿಗೆದಾರರಿಗೆ, 12 ಕೋಟಿ ರೈತರಿಗೆ ಮತ್ತು 40 ಕೋಟಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ ಎಂದು ಮೋದಿ ಹೇಳಿದರು.

 
First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ