ಮುಂಬೈನ ಪ್ರಖ್ಯಾತ ಕಿಂಗ್ಫಿಶರ್ ಏರ್ಲೈನ್ಸ್ ಲಿಮಿಟೆಡ್ನ ಹಿಂದಿನ ಪ್ರಧಾನ ಕಚೇರಿಯಾದ ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಕಿಂಗ್ಫಿಶರ್ ಹೌಸ್ ಕೊನೆಗೂ ಹರಾಜಿನಲ್ಲಿ ಮಾರಾಟವಾಗಿದೆ. ದೇಶದಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ಪಲಾಯನವಾಗಿರುವ ಮಲ್ಯಗೆ ಸೇರಿದ ಕಿಂಗ್ಫಿಶರ್ ಹೌಸ್ ಅಂತಿಮವಾಗಿ ಖರೀದಿದಾರರನ್ನು ಕಂಡುಕೊಂಡಿದೆ. ಒಂದು ಕಾಲದಲ್ಲಿ ಸ್ಥಳದ ಹೆಮ್ಮೆಯೆಂದು ಪರಿಗಣಿಸಲ್ಪಟ್ಟ ಈ ಆಸ್ತಿ ಕೇವಲ ರೂ. 52.25 ಕೋಟಿಗಳಿಗೆ ಮಾರಾಟವಾಗಿದ್ದು, ಇದು 135 ಕೋಟಿ ರೂ.ಗಳ ಮೀಸಲು ಬೆಲೆಯ ಮೂರನೇ ಒಂದು ಭಾಗವಾಗಿದೆ. ಹೈದರಾಬಾದ್ ಮೂಲದ ಸ್ಯಾಟರ್ನ್ ರಿಯಾಲ್ಟರ್ಸ್ ಈ ಐಷಾರಾಮಿ ಮನೆಯನ್ನು ಕೊಂಡುಕೊಂಡಿದ್ದಾರೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಈ ಮನೆಯನ್ನು ಕಳೆದ 8 ಬಾರಿ ಹರಾಜಿನಲ್ಲಿ ಕೊಂಡುಕೊಳ್ಳಲು ಯಾರೂ ಮುಂದಾಗಿರಲಿಲ್ಲ. ಈ ಆಸ್ತಿಯ ಮೌಲ್ಯ 150 ಕೋಟಿ ಎಂದು ಆರಂಭದಲ್ಲಿ ಹೇಳಲಾಗಿತ್ತು. ನಂತರ ಸಾಲ ಮರುಪಡೆಯುವಿಕೆ ನ್ಯಾಯಾಧಿಕರಣ ಇದನ್ನು ಹರಾಜಿಗಿಡಲು ಒಪ್ಪಿಗೆ ನೀಡಿತ್ತು. ಆದರೆ ಇತ್ತೀಚೆಗೆ ಮಾರಾಟವಾದ ಕೆಲವು ವಸ್ತುಗಳು ಹರಾಜಾಗುವುದನ್ನು ಹೋಲಿಸಿದರೆ, ಕಿಂಗ್ಫಿಶರ್ ಹೌಸ್ ಪ್ರಕರಣದಲ್ಲಿ ವಿಚಿತ್ರವಾದ ಅಂಶಗಳನ್ನು ಕಾಣಬಹುದು ಎಂದು ಸಿಎನ್ಬಿಸಿ ಟಿವಿ 18 ತನ್ನ ವರದಿಯಲ್ಲಿ ತಿಳಿಸಿದೆ.
ಇದೇ ರೀತಿಯ ಮತ್ತೊಂದು ಉದಾಹರಣೆ ಟ್ವಿಟ್ಟರ್ ಸಂಸ್ಥಾಪಕ ಜ್ಯಾಕ್ ಡಾರ್ಸಿ ಅವರ ಮೊದಲ ಟ್ವೀಟ್ ಅನ್ನು ಮಲೇಷ್ಯಾದ ಉದ್ಯಮಿಯೊಬ್ಬರಿಗೆ 2.9 ಮಿಲಿಯನ್ ಡಾಲರ್ ( 2.1 ಮಿಲಿಯನ್ ಪೌಂಡ್) ಗೆ ಮಾರಾಟ ಮಾಡಲಾಗಿತ್ತು. “just setting up my twttr'' ಎಂದು ಹೇಳಲಾದ ಟ್ವೀಟ್ ಅನ್ನು ಮಾರ್ಚ್ 21 ರಂದು 2006ರಲ್ಲಿ ಪೋಸ್ಟ್ ಮಾಡಲಾಗಿತ್ತು. ಇದರಿಂದ ಬಂದ ಆದಾಯವನ್ನು ದಾನ ಮಾಡಲಾಯಿತು.
ಇಂತಹ ಇನ್ನೊಂದು ಉದಾಹರಣೆ ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್ ಪುಸ್ತಕದ ಮೊದಲ ಆವೃತ್ತಿಯಾಗಿದ್ದು, ಯುಕೆ ನಾರ್ತ್ ಯಾರ್ಕ್ಶೈರ್ ನಲ್ಲಿ ನಡೆದ ಹರಾಜಿನಲ್ಲಿ ಅದರ ಅಂದಾಜು ಬೆಲೆಯ ನಾಲ್ಕು ಪಟ್ಟು ಹೆಚ್ಚು ಅಂದರೆ 80,000 ಪೌಂಡ್ ಅಥವಾ 82 ಲಕ್ಷ ರೂ. ಗಿಂತ ಅಧಿಕ ಬೆಲೆಗೆ ಮಾರಾಟ ಮಾಡಲಾಗಿತ್ತು.
ಹೆಚ್ಚಿನ ಸಂದರ್ಭಗಳಲ್ಲಿ ವ್ಯವಹಾರಗಳನ್ನು ಸ್ವಾಧೀನಪಡಿಸಿಕೊಳ್ಳುವ ವಿಷಯಗಳಿಗೆ ಸಂಬಂಧಿಸಿದಂತೆ ಬಿಡ್ಡರ್ಗಳು ಕಠಿಣವಾದ ಮಾರ್ಗವನ್ನು ತೆಗೆದುಕೊಳ್ಳುತ್ತಾರೆ, ಆದರೆ ಭಾವನಾತ್ಮಕ ಮತ್ತು ಒಲವಿನ ವಸ್ತುಗಳ ವಿಷಯಕ್ಕೆ ಬಂದರೆ, ಸಾಧನೆಯ ಪ್ರಜ್ಞೆ ಅಥವಾ ಭಾವನಾತ್ಮಕ ಮೌಲ್ಯಕ್ಕಾಗಿ ಬಿಡ್ಡರ್ಗಳು ದೊಡ್ಡ ಮೊತ್ತವನ್ನು ನೀಡಲು ಸಿದ್ಧರಾಗಿದ್ದಾರೆ.
ಕಿಂಗ್ಫಿಶರ್ ಹೌಸ್ ಮಲ್ಯರ ದೊಡ್ಡ ಇಮೇಜ್ ಅನ್ನು ಬಿಂಬಿಸುತ್ತದೆ. ಬ್ಯಾಂಕುಗಳು ಸುಮಾರು 9,000 ಕೋಟಿ ರೂಪಾಯಿ ಸಾಲ ಮರುಪಡೆಯಲು ನೋಡುತ್ತಿರುವಾಗ ವ್ಯಾಪಾರ ಮಾಲೀಕರು/ಬಿಡ್ಡರ್ಗಳು ಸಾಲದಲ್ಲಿ ಮುಳುಗಿರುವ ಈ ವ್ಯವಹಾರಗಳ ಬಗ್ಗೆ ಸಾಕಷ್ಟು ಸಂಶಯ ಹೊಂದಿದಂತಿದೆ ಮತ್ತು ಮಲ್ಯ ಮಾಜಿ ಏರ್ಲೈನ್ಸ್ ಪ್ರಧಾನ ಕಚೇರಿಯಾದ ಕಿಂಗ್ಫಿಶರ್ ಹೌಸ್ ಕೊಂಡುಕೊಳ್ಳಲೂ ಸಹ ಅನುಮಾನ ಹೊಂದಿದ್ದರು ಎಂದು ತಿಳಿದುಬಂದಿದೆ.
2005ರಲ್ಲಿ ಕಾರ್ಯಾಚರಣೆ ಆರಂಭಿಸಿದ ಕಿಂಗ್ಫಿಶರ್ ಏರ್ಲೈನ್ಸ್, ಸಾಲದ ಹೊರೆಯಿಂದಾಗಿ ವಿಮಾನಯಾನ ಕಾರ್ಯಾಚರಣೆಯನ್ನು ಮುಂದುವರಿಸಲು ಕಷ್ಟವಾದ ಕಾರಣ 2012ರಲ್ಲಿ ಸ್ಥಗಿತಗೊಳ್ಳಬೇಕಾಯಿತು. ಇನ್ನು,
ವಿಮಾನಯಾನ ಸಂಸ್ಥೆಯು ಅಕ್ರಮ ಹಣ ವರ್ಗಾವಣೆ ಮತ್ತು ಹಣಕಾಸಿನ ಉಲ್ಲಂಘನೆ ಆರೋಪಕ್ಕೊಳಗಾಗಿದ್ದು, ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ