• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Prince Harry: ಪ್ಯಾಪ್ಸ್​ಗಳಿಂದ ತಪ್ಪಿಸಿಕೊಂಡ ಪ್ರಿನ್ಸ್ ಹ್ಯಾರಿ, ಮೇಘನ್​: ಸಹಾಯ ಮಾಡಿದ್ದು ಈ ಭಾರತೀಯ ಡ್ರೈವರ್

Prince Harry: ಪ್ಯಾಪ್ಸ್​ಗಳಿಂದ ತಪ್ಪಿಸಿಕೊಂಡ ಪ್ರಿನ್ಸ್ ಹ್ಯಾರಿ, ಮೇಘನ್​: ಸಹಾಯ ಮಾಡಿದ್ದು ಈ ಭಾರತೀಯ ಡ್ರೈವರ್

ಪ್ರಿನ್ಸ್ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಹಾಗೂ ಕ್ಯಾಬ್​ ಡ್ರೈವರ್ ಸುಖಚರ್ನ್ ಸಿಂಗ್

ಪ್ರಿನ್ಸ್ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಹಾಗೂ ಕ್ಯಾಬ್​ ಡ್ರೈವರ್ ಸುಖಚರ್ನ್ ಸಿಂಗ್

ಪ್ರಿನ್ಸ್ ಹ್ಯಾರಿ ಹಾಗೂ ಅವರ ಪತ್ನಿ ಮೇಘನ್ ನ್ಯೂಯಾರ್ಕ್ ನಗರದ ಚಾರಿಟಿ ಕಾರ್ಯಕ್ರಮವನ್ನು ಮುಗಿಸಿ ಹಿಂತಿರುಗುತ್ತಿದ್ದ ಸಮಯದಲ್ಲಿ ಹವ್ಯಾಸಿ ಛಾಯಾಗ್ರಾಹಕರು ದಂಪತಿಗಳನ್ನು ಹಿಂಬಾಲಿಸಿದ್ದು ಭಾರತೀಯ ಮೂಲದ ಟ್ಯಾಕ್ಸಿ ಚಾಲಕರಾದ ಸುಖ್ಚರಣ್ ಸಿಂಗ್ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್‌ರನ್ನು ರಕ್ಷಿಸಿದ್ದಾರೆ.

ಮುಂದೆ ಓದಿ ...
  • Share this:

ಸೆಲೆಬ್ರಿಟಿಗಳು (Celebrity), ರಾಜ ವಂಶಸ್ಥರು, ಉದ್ಯಮಿಗಳು ಹೀಗೆ ಸಮಾಜದ ಗೌರವಾನ್ವಿತ ವ್ಯಕ್ತಿಗಳನ್ನು ಹೆಚ್ಚಿನ ಸುದ್ದಿಗಾಗಿ ಛಾಯಾಗ್ರಾಹಕರು (Cameraman), ಪತ್ರಿಕೋದ್ಯಮಿಗಳು ಎಡೆಬಿಡದೆ ಒಮ್ಮೊಮ್ಮೆ ಹಿಂಬಾಲಿಸುತ್ತಿರುತ್ತಾರೆ. ಅವರು ಎಲ್ಲಿ ಹೋದರೂ ಅವರನ್ನು ಚೇಸಿಂಗ್ (Chasing) ಮಾಡುವುದು, ಅವರ ಬಗ್ಗೆ ಸುದ್ದಿ ಬಿತ್ತರಿಸುವುದು, ಪ್ರಶ್ನೆಗಳನ್ನು ಕೇಳುವುದು ಹೀಗೆ ಅವರಿಗೆ ಇರಿಸು ಮುರಿಸನ್ನುಂಟು ಮಾಡುವ ಕಾರ್ಯಗಳು ನಡೆಯುತ್ತಲೇ ಇರುತ್ತವೆ.


ರಾಜಮನೆತನದ ದಂಪತಿಗಳನ್ನು ರಕ್ಷಿಸಿದ ಭಾರತೀಯ ಮೂಲಕ ಟ್ಯಾಕ್ಸಿ ಚಾಲಕ


ಇದೀಗ ಪ್ರಿನ್ಸ್ ಹ್ಯಾರಿ ಹಾಗೂ ಅವರ ಪತ್ನಿ ಮೇಘನ್ ನ್ಯೂಯಾರ್ಕ್ ನಗರದ ಚಾರಿಟಿ ಕಾರ್ಯಕ್ರಮವನ್ನು ಮುಗಿಸಿ ಹಿಂತಿರುಗುತ್ತಿದ್ದ ಸಮಯದಲ್ಲಿ ಹವ್ಯಾಸಿ ಛಾಯಾಗ್ರಾಹಕರು ದಂಪತಿಗಳನ್ನು ಹಿಂಬಾಲಿಸಿದ್ದು ಭಾರತೀಯ ಮೂಲದ ಟ್ಯಾಕ್ಸಿ ಚಾಲಕರಾದ ಸುಖ್ಚರಣ್ ಸಿಂಗ್ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್‌ರನ್ನು ರಕ್ಷಿಸಿದ್ದು, ನಂತರ ದಂಪತಿಗಳು ಪೊಲೀಸ್ ಸ್ಟೇಶನ್‌ನಲ್ಲಿ ಆಶ್ರಯಪಡೆದ ಮಾಹಿತಿ ದೊರಕಿದೆ.


ರಾಜಕುಟುಂಬದವರನ್ನು ಆಗಾಗ್ಗೆ ಹಿಂಬಾಲಿಸುವ ಹಾಗೂ ಅವರನ್ನು ಕುರಿತ ಸುದ್ದಿಗಳನ್ನು ಬಿತ್ತರಿಸುವ ಮಾಧ್ಯಮ ಕ್ಷೇತ್ರದ ಅನ್ವೇಷಣೆಯ ವಿಧಾನ ಪ್ಯಾರಿಸ್ ಮೂಲಕ 1997 ರ ಕಾರ್ ಚೇಸ್‌ನ ನೆನಪುಗಳನ್ನು ನೆನಪಿಸಿದ್ದು ಸುಳ್ಳಲ್ಲ. ಇಂತಹ ವಿದ್ಯಮಾನಗಳಿಂದ ಪ್ರಾಣ ಕಳೆದುಕೊಳ್ಳುವ ಸನ್ನಿವೇಶಗಳು ಇರುತ್ತವೆ ಇದಕ್ಕೆ ಉದಾಹರಣೆಯೆಂದರೆ ಪ್ರಿನ್ಸ್ ಹ್ಯಾರಿಯವರ ತಾಯಿ ರಾಜಕುಮಾರಿ ಡಯಾನಾ.


ಇದನ್ನೂ ಓದಿ: 2 ಸಾವಿರದ ನೋಟ್​ ಬ್ಯಾನ್ ಬೆನ್ನಲ್ಲೇ ವಿನಿಮಯ ಮಾಡಲು ಅವಕಾಶ! ಬ್ಯಾಂಕ್​ ಎಕ್ಸ್​ಚೇಂಜ್ ಮಾಡದಿದ್ದರೆ ಏನು ಮಾಡ್ಬೇಕು?


ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಪೊಲೀಸ್ ವರದಿ


ಪ್ರಸ್ತುತ ಪ್ರಿನ್ಸ್ ಹ್ಯಾರಿ ಪ್ರಕರಣದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಮ್ಯಾನ್‌ಹಟ್ಟನ್‌ನ ಬೀದಿಗಳಲ್ಲಿ ಹವ್ಯಾಸಿ ಛಾಯಾಗ್ರಾಹಕರು ಪ್ರಿನ್ಸ್ ಹಾಗೂ ಅವರ ಪತ್ನಿ ಮೇಘನ್ ಅವರನ್ನು ಅಪಾಯಕಾರಿಯಾಗಿ ಹಿಂಬಾಲಿಸಿದ್ದಾರೆ ಎಂಬುದಾಗಿ ದಂಪತಿಗಳು ಹೇಳಿಕೆ ನೀಡಿರುವುದನ್ನು ಅಧಿಕೃತ ವಲಯ ಖಾತ್ರಿಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಹವ್ಯಾಸಿ ಛಾಯಾಗ್ರಾಹಕರನ್ನು ಅಜಾಗರೂಕ ಎಂದು ಬೇಜಾವಾಬ್ದಾರಿಯುತ ವರ್ತನೆ ಎಂದು ಖಂಡಿಸಿದ್ದಾರೆ.


ಪ್ರಿನ್ಸ್ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಹಾಗೂ ಕ್ಯಾಬ್​ ಡ್ರೈವರ್ ಸುಖಚರ್ನ್ ಸಿಂಗ್


ಪ್ರಕರಣದಲ್ಲಿ ಯಾರೂ ಗಾಯಗೊಂಡಿಲ್ಲವಾದ್ದರಿಂದ ತನಿಖೆಯನ್ನು ಸ್ಥೂಲವಾಗಿ ನಡೆಸಿಲ್ಲ ಎಂದು ಪೊಲೀಸ್ ವಿಭಾಗ ತಿಳಿಸಿದ್ದು, ಈ ಸಂಬಂಧಿತವಾಗಿ ಯಾರನ್ನು ಬಂಧಿಸಿಲ್ಲ ಹಾಗೂ ಹೆಚ್ಚಿನ ತನಿಖೆಯನ್ನು ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಅದಾಗ್ಯೂ ರಾಜಮನೆತನದ ದಂಪತಿಗಳಿಗಿರುವ ಭದ್ರತಾ ವ್ಯವಸ್ಥೆಗಳ ಬಗ್ಗೆ ಕಳವಳವನ್ನುಂಟು ಮಾಡಿದ್ದು, ಹ್ಯಾರಿ ತಮ್ಮ 12 ರ ಹರೆಯದಲ್ಲಿ ಕಳೆದುಕೊಂಡಿದ್ದ ಅವರ ತಾಯಿ ಡಯಾನಾ ಅಪಘಾತದ ನೆನಪನ್ನು ಮರುಕಳಿಸುವಂತೆ ಮಾಡಿದೆ.


ದಂಪತಿಗಳನ್ನು ರಕ್ಷಿಸಿದ ಭಾರತೀಯ ಮೂಲದ ಕ್ಯಾಬ್ ಡ್ರೈವರ್


ದಂಪತಿಗಳನ್ನು ಸಂರಕ್ಷಣೆಗಾಗಿ ಠಾಣೆಗೆ ಕರೆದುಕೊಂಡು ಬಂದಿದ್ದ ಟ್ಯಾಕ್ಸಿ ಕ್ಯಾಬ್ ಡ್ರೈವರ್ ಸುಖ್ಚರಣ್ ಸಿಂಗ್ ನಮ್ಮನ್ನು ಫೋಟೋಗ್ರಾಫರ್‌ಗಳು ಹಿಂಬಾಲಿಸಿದ್ದು ನಿಜ ಎಂದು ತಿಳಿಸಿದ್ದಾರೆ. ಆದರೆ ಇದನ್ನು ಚೇಸಿಂಗ್ ಎಂದು ಸಿಂಗ್ ಖಾತ್ರಿಪಡಿಸಿಲ್ಲ. ಆದರೆ ಅವರು ರಾಜಮನೆತನದ ದಂಪತಿಗಳನ್ನು ಚೇಸಿಂಗ್ ಮಾಡುವ ಉದ್ದೇಶವನ್ನು ಹೊಂದಿದ್ದರು ಎಂದು ಸಿಂಗ್ ತಿಳಿಸಿದ್ದಾರೆ. ಒಮ್ಮೆಲೆ ಹವ್ಯಾಸಿ ಛಾಯಾಗ್ರಾಹಕರು ನಮ್ಮ ಮೇಲೆ ಮುಗಿಬಿದ್ದರು ಹಾಗೂ ಫೋಟೋಗಳನ್ನು ತೆಗೆಯತೊಡಗಿದರು ಎಂದು ಸಿಂಗ್ ಘಟನೆಯನ್ನು ಬಣ್ಣಿಸಿದ್ದಾರೆ.


ಹ್ಯಾರಿ ಹಾಗೂ ಮೇಘನ್ ನಿವೇಶನದ ಸಮೀಪ ಅನುಮಾನಸ್ಪದ ವ್ಯಕ್ತಿಯ ಬಂಧನ


ಪ್ರಿನ್ಸ್ ಹ್ಯಾರಿ, ಮೇಘನ್ ಹಾಗೂ ಮೇಘನ್ ತಾಯಿ ಅವರನ್ನೂ ಒಳಗೊಂಡ ಘಟನೆಯನ್ನು ದೃಢೀಕರಿಸುವ ಸಣ್ಣ ಹೇಳಿಕೆಯನ್ನು ಪೊಲೀಸರು ನೀಡಿದ್ದಾರೆ. ಮಾಂಟೆಸಿಟೊದಲ್ಲಿರುವ ದಂಪತಿಗಳ ನಿವೇಶನದ ಬಳಿ ಅನುಮಾನಸ್ಪದ ವ್ಯಕ್ತಿಯೊಬ್ಬ ಸಂಚರಿಸುತ್ತಿರುವ ಹಿನ್ನಲೆಯಲ್ಲಿ ಕ್ಯಾಲಿಫೋರ್ನಿಯಾದ ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿದ್ದು ನಂತರ ಆತನನ್ನು $ 2,500 ದಂಡ ವಿಧಿಸುವ ಮೂಲಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂಬ ಮಾಹಿತಿ ದೊರಕಿದೆ.
ದಂಪತಿಗಳಿಗೆ ಸಮಸ್ಯೆಯಾಗಿರುವ ಭದ್ರತೆ


ನ್ಯೂಯಾರ್ಕ್ ಪ್ರೆಸ್ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಬ್ರೂಸ್ ಕಾಟ್ಲರ್, ಈ ಘಟನೆಯನ್ನು ಖಂಡಿಸಿದ್ದು, ಛಾಯಾಗ್ರಾಹಕರು ಪತ್ರಿಕಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದ್ದಾರೆ.


ಹ್ಯಾರಿ ಹಾಗೂ ಮೇಘನ್ 2020 ರಲ್ಲಿ ಕ್ಯಾಲಿಫೋರ್ನಿಯಾಗೆ ತೆರಳಿದ ನಂತರ ಬ್ರಿಟಿಷ್ ಸರಕಾರವು ಅವರಿಗಿದ್ದ ರಕ್ಷಣೆಯನ್ನು ತೆಗೆದುಹಾಕಿದ ನಂತರ ಭದ್ರತೆ ದಂಪತಿಗಳಿಗೆ ಸಮಸ್ಯೆಯಾಗಿದೆ.

First published: