ಚೆನ್ನೈನ ಡಂಪಿಂಗ್ ಯಾರ್ಡ್‌ ಅನ್ನು ಸೊಂಪಾದ ಅರಣ್ಯವನ್ನಾಗಿ ಬದಲಾಯಿಸಿದ ಐಎಎಸ್‌ ಅಧಿಕಾರಿ..!

ಕೊಟ್ಟೂರುಪುರಂ ಕಸದ ಡಂಪಿಂಗ್ ಯಾರ್ಡ್‌ ಅನ್ನು ಹಚ್ಚ ಹಸಿರಿನ ಅರಣ್ಯ ಭೂಮಿಯಾಗಿ ಬದಲಾಯಿಸಿದ್ದಕ್ಕೆ ಚೆನ್ನೈ ನಿವಾಸಿಗಳು ನಿಜಕ್ಕೂ ಸಂತೋಷ ಪಡುತ್ತಿದ್ದಾರೆ.

ಐಎಎಸ್ ಅಧಿಕಾರಿ ಡಾ. ಆಲ್ಬಿ ಜಾನ್

ಐಎಎಸ್ ಅಧಿಕಾರಿ ಡಾ. ಆಲ್ಬಿ ಜಾನ್

 • Share this:
  ಇಡೀ ಜಗತ್ತಿನಾದ್ಯಂತ ಈಗ ಅರಣ್ಯ ನಾಶವಾಗುತ್ತಿರುವ ನಡುವೆ ಕಸದ ಡಂಪಿಂಗ್‌ ಯಾರ್ಡ್‌ ಅನ್ನೇ ಅರಣ್ಯವನ್ನಾಗಿ ಪರಿವರ್ತಿಸಿರುವ ಈ ಐಎಎಸ್‌ ಅಧಿಕಾರಿಯ ರೋಚಕ ಕಥೆ ಇದು. ತಮಿಳುನಾಡಿನ ಚೆನ್ನೈ ಮೂಲದ ಐಎಎಸ್ ಅಧಿಕಾರಿ ಡಾ. ಆಲ್ಬಿ ಜಾನ್ ಅವರು ಮಹಾನಗರದ ಹೃದಯಭಾಗದಲ್ಲಿರುವ ಡಂಪಿಂಗ್ ಯಾರ್ಡ್‌ ಅನ್ನು ಹಚ್ಚ ಹಸಿರಿನ ಕಾಡನ್ನಾಗಿ ಪರಿವರ್ತಿಸಿದ್ದಾರೆ. ಗ್ರೇಟರ್ ಚೆನ್ನೈ ಕಾರ್ಪೊರೇಶನ್‌ನಲ್ಲಿ ಪ್ರಾದೇಶಿಕ ದಕ್ಷಿಣ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ನಂತರ, 2013 ರ ಬ್ಯಾಚ್ ಅಧಿಕಾರಿ ಈಗಾಗಲೇ ಐದು ಮಿಯಾವಾಕಿ ಕಾಡುಗಳನ್ನು (ಮೈಕ್ರೋ ಫಾರೆಸ್ಟ್‌) ಅನ್ನು ಸೃಷ್ಟಿಸಿದ್ದಾರೆ. ಕಾಂಕ್ರೀಟ್ ಪ್ರದೇಶಗಳಾಗಿದ್ದ ಆ ಜಾಗವನ್ನು ಹಸಿರಿನ ಸೊಂಪಾದ ವಲಯಗಳಾಗಿ ಪರಿವರ್ತಿಸಿದ್ದಾರೆ.

  ಮಿಯಾವಾಕಿ ಅರಣ್ಯ ಎಂದರೆ ಏನು..?
  ಮಿಯಾವಾಕಿ ಕಾಡುಗಳ ಟ್ರೆಂಡ್‌ ಅನ್ನು ಮೊದಲು ಹುಟ್ಟುಹಾಕಿ, ಜನಪ್ರಿಯಗೊಳಿಸಿದ್ದು, 93 ವರ್ಷದ ಜಪಾನಿನ ಸಸ್ಯವಿಜ್ಞಾನಿ ಅಕಿರಾ ಮಿಯಾವಾಕಿ. ಯಾವುದೇ ಜಾಗವನ್ನು ಬಿಡದೆ ಸಸ್ಯಗಳನ್ನು ಬೆಳೆಸುವುದು ಇದರ ಮುಖ್ಯ ಅಂಶವಾಗಿದೆ. ಈ ಮೂಲಕ ಭೂಮಿಯ ಸಣ್ಣ ಪ್ರದೇಶಗಳಲ್ಲಿ ಸಹ ಹಚ್ಚ ಹಸಿರಿನ ಕಾಡುಗಳು ರೂಪುಗೊಳ್ಳುತ್ತವೆ ಹಾಗೂ ಸಸ್ಯಗಳು ನೇರವಾಗಿ ಬೆಳೆಯುವುದರಿಂದ, ಇತರೆ ಗಿಡಗಳನ್ನು ನೆಡಲು ಜಾಗ ಲಭ್ಯವಾಗುತ್ತದೆ ಎಂಬುದು ಅವರ ಆಲೋಚನೆಯಾಗಿತ್ತು.

  ಅಷ್ಟೇ ಅಲ್ಲ, ಕೇವಲ 0.5 ಸೆಂಟ್ಸ್ ಜಮೀನಿನಿಂದ 20 ಸೆಂಟ್ಸ್ ಜಮೀನಿನಲ್ಲಿ ಈ ರೀತಿ ಮೈಕ್ರೋ ಅರಣ್ಯವನ್ನೇ ಸೃಷ್ಟಿಸಬಹುದು ಎನ್ನಲಾಗಿದೆ. ಜತೆಗೆ, ಕಳೆದ ಹಲವಾರು ವರ್ಷಗಳಿಂದ ಕೇರಳದಲ್ಲಿ ಇದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ. ಇನ್ನು, ಐಎಎಸ್‌ ಅಧಿಕಾರಿ ಡಾ. ಅಲ್ಬಿ ಜಾನ್ ಅವರ ಕನಸಿನ ಕೂಸಾದ ಮತ್ತು ಸೃಷ್ಟಿಸಿದ ಮೊದಲ ಮಿಯಾವಾಕಿ ಅರಣ್ಯವು ತಮಿಳುನಾಡಿನ ಅಡ್ಯಾರ್‌ ನದಿಯ ದಡದಲ್ಲಿರುವ 23,000 ಚದರ ಅಡಿ ವಿಸ್ತೀರ್ಣದ ಡಂಪಿಂಗ್ ಯಾರ್ಡ್ ಆಗಿದ್ದ ಕೊಟ್ಟೂರುಪುರಂನಲ್ಲಿತ್ತು. ಈ ಅರಣ್ಯದಲ್ಲೀಗ ಹಲವಾರು ಪಕ್ಷಿಗಳು, ಕೀಟಗಳು ಮತ್ತು ಚಿಟ್ಟೆಗಳು ಗೂಡುಕಟ್ಟುತ್ತಿದ್ದು, ಸ್ವಚ್ಛಂದವಾಗಿ ವಿಹರಿಸುತ್ತಿವೆ. ಅಲ್ಲದೆ, ಈ ಜಾಗ ಈಗ
  ಹಚ್ಚ ಹಸಿರಿನ ಕಾಡು.

  ''ನಾವು ಈ ಕಲ್ಪನೆಯನ್ನು ಮೊದಲು ಮಾಡಿದೆವು. ನಂತರ ಅದನ್ನು ಯಶಸ್ವಿಗೊಳಿಸಲಾಯಿತು. ಈಗ ವ್ಯಕ್ತಿಗಳು, ವ್ಯಾಪಾರ ಸಂಸ್ಥೆಗಳು ಮತ್ತು ಕಾರ್ಪೊರೇಟ್‌ಗಳು ಸೇರಿದಂತೆ ಹಲವಾರು ಜನರು ಮಿಯಾವಾಕಿ ಅರಣ್ಯಕ್ಕೆ ಬರುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ. ನಗರದ ಜನರಲ್ಲಿ ಇಂತಹ ಆಸಕ್ತಿಯನ್ನು ತಂದಿದ್ದಕ್ಕೆ ನನಗೆ ಸಂತೋಷವಾಗಿದೆ.'' ಎಂದು ವೈದ್ಯರೂ ಆಗಿರುವ ಐಎಎಸ್‌ ಅಧಿಕಾರಿ ಹರ್ಷ ವ್ಯಕ್ತಪಡಿಸಿದ್ದಾರೆ.

  ಕೊಟ್ಟೂರುಪುರಂ ಕಸದ ಡಂಪಿಂಗ್ ಯಾರ್ಡ್‌ ಅನ್ನು ಹಚ್ಚ ಹಸಿರಿನ ಅರಣ್ಯ ಭೂಮಿಯಾಗಿ ಬದಲಾಯಿಸಿದ್ದಕ್ಕೆ ಚೆನ್ನೈ ನಿವಾಸಿಗಳು ನಿಜಕ್ಕೂ ಸಂತೋಷ ಪಡುತ್ತಿದ್ದಾರೆ. ''ನಾನು 50 ವರ್ಷಗಳಿಗೂ ಹೆಚ್ಚು ಕಾಲ ಚೆನ್ನೈ ನಗರದಲ್ಲಿ ವಾಸಿಸುತ್ತಿದ್ದೇನೆ ಮತ್ತು ಇಂತಹ ಮಹತ್ವದ ಬದಲಾವಣೆಯನ್ನು ನಾನು ನೋಡುತ್ತಿರುವುದು ಇದೇ ಮೊದಲು. ಈ ರೀತಿ ಅರಣ್ಯ ಸಮಾಜಕ್ಕೆ ಮತ್ತು ಪರಿಸರಕ್ಕೆ ಒಳ್ಳೆಯದು. ಯುವ ಐಎಎಸ್ ಅಧಿಕಾರಿ ಮತ್ತು ಅವರ ತಂಡಕ್ಕೆ ಈ ಕ್ರೆಡಿಟ್‌ ಸಲ್ಲುತ್ತದೆ. ಅವರು 'ಮನಸ್ಸಿದ್ದಲ್ಲಿ ಮಾರ್ಗ' ಎಂಬ ಧ್ಯೇಯವಾಕ್ಯಕ್ಕೆ ತಕ್ಕಂತೆ ಜೀವಿಸುತ್ತಿದ್ದಾರೆ'' ಎಂದು ನಿವೃತ್ತ ಎಂಜಿನಿಯರ್ ವಿ.ಪಿ. ಹೇಮಚಂದ್ರನ್ ಐಎಎನ್‌ಎಸ್‌ಗೆ ಹೇಳಿದರು.

  ಇದನ್ನು ಓದಿ: ಜೆ ಕೆ ಸಿಮೆಂಟ್ ಕಾರ್ಖಾನೆ ಗಣಿಗಾರಿಕೆಗೆ ರೈತರ ವಿರೋಧ, ಆಕ್ರೋಶ!

  ಇನ್ನು, ''ಸಮಾಜವು ಈ ರೀತಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು. ಮತ್ತು ಅದಕ್ಕಾಗಿ ಒಬ್ಬರು ರೋಲ್‌ ಮಾಡೆಲ್‌ನ ಅಗತ್ಯವಿತ್ತು. ಅದನ್ನು ನಾವು ಮಾಡಿದ್ದೇವೆ. ಈಗ ಸಾರ್ವಜನಿಕರು, ಒಬ್ಬರೇ ಅಥವಾ ಗುಂಪುಗಳು ಮುಂದೆ ಬಂದು ಇದನ್ನು ಸಂಸ್ಕೃತಿಯನ್ನಾಗಿ ಮಾಡಿಕೊಳ್ಳಿ. ಇದರಿಂದ ನಗರವು ನಿಧಾನವಾಗಿಯಾದರೂ ಹಸಿರು ಬಣ್ಣಕ್ಕೆ ತಿರುಗುತ್ತದೆ. ” ಎಂದು ಡಾ. ಆಲ್ಬಿ ಜಾನ್ ಹೇಳಿದರು.

  ಹಲವಾರು ಸಾಮಾಜಿಕ ಸಂಸ್ಥೆಗಳು ಈಗ ಈ ಯೋಜನೆಯಿಂದ ಪ್ರಭಾವಿಯಾಗಿದ್ದು, ಮತ್ತಷ್ಟು ಮಿಯಾವಾಕಿ ಅರಣ್ಯ ಸೃಷ್ಟಿಸಲು ಹೊರಟಿದ್ದಾರೆ ಎಂದು ತಿಳಿದುಬಂದಿದೆ.

  “ನಾವು ಪರಿಸರದ ಅವನತಿ ಮತ್ತು ಕಾರ್ಬನ್‌ ಫೂಟ್‌ ಪ್ರಿಂಟ್‌ ಕುರಿತು ಆಳವಾದ ಅಧ್ಯಯನಗಳನ್ನು ನಡೆಸುತ್ತೇವೆ. ಮಿಯಾವಾಕಿ ಅರಣ್ಯವನ್ನು ಉತ್ತೇಜಿಸುವುದು ಚೆನ್ನೈನಂತಹ ನಗರಕ್ಕೆ ಈ ಸಮಯದ ಅವಶ್ಯಕತೆಯಾಗಿದೆ ಎಂದು ನಾನು ಕಂಡುಕೊಂಡಿದ್ದೇನೆ. ಮಿಯಾವಾಕಿ ಸಂಸ್ಕೃತಿಯನ್ನು ಉತ್ತೇಜಿಸಲು ನಾವು ಕಾರ್ಪೊರೇಟ್ ಮನೆಗಳು ಮತ್ತು ಇತರ ಸಮಾನ ಮನಸ್ಕ ಗುಂಪುಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ'' ಎಂದು ಚೆನ್ನೈ ಮೂಲದ ಥಿಂಕ್ ಟ್ಯಾಂಕ್‌ನ ನೀತಿ ಮತ್ತು ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕ ಸಿ. ರಾಜೀವ್ ಹೇಳಿದರು.
  Published by:Seema R
  First published: