• Home
  • »
  • News
  • »
  • national-international
  • »
  • COVID-19 Pills: ಶೀಘ್ರದಲ್ಲೇ ಬರ್ತಿದ್ಯಂತೆ ಕೋವಿಡ್‌ ಆಂಟಿವೈರಲ್ ಮಾತ್ರೆಗಳು; ವ್ಯಾಕ್ಸಿನ್ ಗೆ ಭಯ ಪಡೋರು ಮಾತ್ರೆ ತಗೊಳ್ಳಿ ಸಾಕು

COVID-19 Pills: ಶೀಘ್ರದಲ್ಲೇ ಬರ್ತಿದ್ಯಂತೆ ಕೋವಿಡ್‌ ಆಂಟಿವೈರಲ್ ಮಾತ್ರೆಗಳು; ವ್ಯಾಕ್ಸಿನ್ ಗೆ ಭಯ ಪಡೋರು ಮಾತ್ರೆ ತಗೊಳ್ಳಿ ಸಾಕು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಕೋವಿಡ್‌-19 ನಿಂದ ಉಂಟಾದ ಅನೇಕ ಸಾವು- ನೋವಿಗಳಿಂದ ಈ ಕಾಯಿಲೆಗೆ ಔಷಧಿ ಕಂಡು ಹಿಡಿಯಬೇಕೆಂದು ಅನೇಕ ಕಂಪನಿಗಳು ಪ್ರಯತ್ನ ಪಡುತ್ತಲೇ ಇವೆ. ಈ ಕಾಯಿಲೆಗೆ ಈಗಾಗಲೇ ಔಷಧಿ ಬಂದಿದ್ದರೂ ಸಹ ಮುಂದುವರಿದ ಭಾಗವಾಗಿ ಇನ್ನು ಹೊಸ-ಹೊಸ ಔಷಧಿಗಳು ತಯಾರಾಗುತ್ತಿವೆ. ಅಂತಹ ತಯಾರಿಕಾ ಔಷಧಾಲಯದಲ್ಲಿ ಒಂದಾದ ಜೆನಾರಾ ಫಾರ್ಮಾ ಎಂಬ ಔಷಧಾಲಯವು ತೆಲಂಗಾಣದ ರಾಜಧಾನಿ ಹೈದರಾಬಾದ್‌ ನಲ್ಲಿದೆ.

ಮುಂದೆ ಓದಿ ...
  • Share this:

ಕಳೆದ ಮೂರು ವರ್ಷಗಳಲ್ಲಿ ಎಲ್ಲ ಕಡೆ ಕೇಳುತ್ತಿರುವ ಸುದ್ದಿ ಎಂದರೆ ಅದು ಕೋವಿಡ್‌-19 (Covid-19) ಬಗ್ಗೆ ಎಂದ್ರೆ ತಪ್ಪಾಗಲಾರದು. ಈ ಕೋವಿಡ್‌-19 ನಿಂದ ಉಂಟಾದ ಅನೇಕ ಸಾವು- ನೋವಿಗಳಿಂದ ಈ ಕಾಯಿಲೆಗೆ ಔಷಧಿ (Medicine) ಕಂಡು ಹಿಡಿಯಬೇಕೆಂದು ಅನೇಕ ಕಂಪನಿಗಳು (Company) ಪ್ರಯತ್ನ ಪಡುತ್ತಲೇ ಇವೆ. ಈ ಕಾಯಿಲೆಗೆ ಈಗಾಗಲೇ ಔಷಧಿ ಬಂದಿದ್ದರೂ ಸಹ ಮುಂದುವರಿದ ಭಾಗವಾಗಿ ಇನ್ನು ಹೊಸ-ಹೊಸ ಔಷಧಿಗಳು ತಯಾರಾಗುತ್ತಿವೆ. ಅಂತಹ ತಯಾರಿಕಾ ಔಷಧಾಲಯದಲ್ಲಿ (Pharmacy) ಒಂದಾದ ಜೆನಾರಾ ಫಾರ್ಮಾ (Zenara Pharma) ಎಂಬ ಔಷಧಾಲಯವು ತೆಲಂಗಾಣದ ರಾಜಧಾನಿ ಹೈದರಾಬಾದ್‌ ನಲ್ಲಿದೆ (Hyderabad).


ಈ ಸಂಸ್ಥೆಗೆ ಕೋವಿಡ್-19 ಆಂಟಿವೈರಲ್ ಮಾತ್ರೆಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಕೇಂದ್ರೀಯ ಡ್ರಗ್ಸ್‌ ಪ್ರಮಾಣಿತ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಯು ಅನುಮತಿ ನೀಡಿದೆ. ಈ ಮಾತ್ರೆಗಳನ್ನು ಇನ್ನು 10 ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಈ ಜೆನೆರಾ ಸಂಸ್ಥೆ ಹೇಳಿದೆ.


ಭಾರತದಲ್ಲಿಯೇ ತಯಾರಿಸಲಾದ ಮಾತ್ರೆಗಳು ಮತ್ತು ಔಷಧೀಯ ಪದಾರ್ಥಗಳು
ಕೋವಿಡ್‌ -19 ಔಷಧ ತಯಾರಕರು ಇದರಲ್ಲಿ ನಿರ್ಮ್ಲಾಟ್ರೆಲ್ವಿರ್ ಮತ್ತು ರಿಟೊನಾವಿರ್ ಎಂಬ ಕಾಂಬಿ ಪ್ಯಾಕ್ ಅನ್ನು ಮೊದಲು ತಯಾರಿಸುತ್ತಾರೆ. ನಂತರ ಇವುಗಳ ಸಂಯೋಜನೆಯನ್ನು ಪ್ಯಾಕ್ಸ್ಲೋವಿಡ್ ಎಂದು ಕರೆಯಲಾಗುತ್ತದೆ. ಇದರ ಮಾತ್ರೆಯನ್ನು 'ಪಾಕ್ಸ್‌ಜೆನ್' ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿಯೇ ಈ ಮಾತ್ರೆಗಳು ಮತ್ತು ಔಷಧೀಯ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಪ್ಯಾಕ್ಸ್ಲೋವಿಡ್ ಒರಲ್‌ ಕೋವಿಡ್‌-19 ಆಂಟಿವೈರಲ್ ಔಷಧವಾಗಿದೆ. ಕೋವಿಡ್‌ -19 ನಿಂದ ಆಸ್ಪತ್ರೆಗೆ ದಾಖಲಾಗುವ ಹೆಚ್ಚು ಅಪಾಯದಲ್ಲಿರುವ ಮತ್ತು ಮಧ್ಯಮ ಕೋವಿಡ್‌-19 ರೋಗಿಗಳಿಗೆ ಇದನ್ನು ಶಿಫಾರಸು ಮಾಡಲಾಗಿದೆ.


ಇದನ್ನೂ ಓದಿ: Monkeypox: ಟ್ರಾವೆಲ್ ಹಿಸ್ಟರಿ ಇಲ್ಲದಿದ್ರೂ ದೆಹಲಿ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ತಗುಲಿದ್ದೇಗೆ?


ಈ ಮಾತ್ರೆಗಳ ಅಂದಾಜು ಬೆಲೆ ಎಷ್ಟು?
ಜೆನಾರಾ ಫಾರ್ಮಾ ಈ ಕೋವಿಡ್‌- 19 ಮಾತ್ರೆಯ ಬೆಲೆಯನ್ನು ಇನ್ನೂ ನಿಗದಿ ಮಾಡಿಲ್ಲ. ಇದೆಲ್ಲ ಕೆಲಸ ಅಂತಿಮವಾದ ಮೇಲೆ ಒಂದು ಕೋವಿಡ್‌-19 ಕೋರ್ಸ್‌ಗೆ ಅಂದಾಜು 4,000 ರೂ. ಬೆಲೆ ನಿಗದಿ ಮಾಡುವ ಸಾಧ್ಯತೆ ಇದೆ. ಇದರ ಮಧ್ಯೆ ಫಾರ್ಮಾಸ್ಯುಟಿಕಲ್ ಕಂಪನಿಯು ಭಾರತದ ಅನೇಕ ಔಷಧ ತಯಾರಕ ಸಂಸ್ಥೆಗಳು ಮತ್ತು ಹಲವಾರು ಆಸ್ಪತ್ರೆಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಇತರ ಪಾಲುದಾರರೊಂದಿಗೆ ಸಹ ಒಪ್ಪಂದ ಮಾಡಿಕೊಳ್ಳಬಹುದು. ಈ ಹಿಂದೆ, ವಿಶ್ವ ಆರೋಗ್ಯ ಸಂಸ್ಥೆ ಸಹ ಕೋವಿಡ್‌-19 ಚಿಕಿತ್ಸೆಗಾಗಿ ಮಾತ್ರೆಗಳನ್ನು ಶಿಫಾರಸು ಮಾಡಿತ್ತು.


ಈ ಮಾತ್ರೆ ಯಾರೆಲ್ಲ ತೆಗೆದುಕೊಳ್ಳಬಹುದು
"ಪಿಫೈಜರ್ ಒರಲ್‌ ಆಂಟಿವೈರಲ್ ಡ್ರಗ್ (ನಿರ್ಮಾಟ್ರೆಲ್ವಿರ್ ಮತ್ತು ರಿಟೊನಾವಿರ್ ಮಾತ್ರೆಗಳ ಸಂಯೋಜನೆ) ಮಾತ್ರೆಯಾಗಿದ್ದು ಇದನ್ನು ತೀವ್ರವಾದ ಅಪಾಯ ಇಲ್ಲದ ಕೋವಿಡ್‌-19 ರೋಗಿಗಳಿಗೆ ಬಲವಾಗಿ ಶಿಫಾರಸು ಮಾಡಲಾಗಿದೆ. ಈ ತರದ ರೋಗಿಗಳು ಅಪಾಯ ತರುವ ಕಾಯಿಲೆಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಮತ್ತು ಆಸ್ಪತ್ರೆಗೆ ದಾಖಲಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಇಂತಹವರಿಗೆ ಈ ಮಾತ್ರೆ ಅತ್ಯಂತ ಸೂಕ್ತ ಮತ್ತು ಸಹಾಯಕಕಾರಿ ಆಗಿದೆ. ಉದಾಹರಣೆ ಹೇಳಬೇಕಾದರೆ ಲಸಿಕೆ ಹಾಕದ, ವಯಸ್ಸಾದ ಅಥವಾ ರೋಗನಿರೋಧಕ ಶಕ್ತಿಹೀನ ರೋಗಿಗಳು ಇದರ ಪಟ್ಟಿಯಲ್ಲಿ ಬರುತ್ತಾರೆ” ಎಂದು ಮಾತ್ರೆ ಬಿಡುಗಡೆ ಮಾಡುವ ಸಂದರ್ಭದಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: Monkey Pox: ಮಂಕಿಪಾಕ್ಸ್​ನಿಂದ ಬಳಲುತ್ತಿದ್ದ ಗರ್ಭಿಣಿಗೆ ಆರೋಗ್ಯವಂತ ಮಗು ಜನನ 


ಡಿಸೆಂಬರ್ 2021 ರಲ್ಲಿ ಯುಎಸ್ ನ ಆಹಾರ ಮತ್ತು ಔಷಧ ಆಡಳಿತವು ಪ್ಯಾಕ್ಸ್‌ಲೋವಿಡ್ ಅನ್ನು ಮೊದಲು ಅನುಮೋದಿಸಿದೆ. ಪಿಫೈಜರ್ ಸಂಸ್ಥೆ ಅಥವಾ ಉಪ-ಪರವಾನಗಿದಾರರು ಇದನ್ನು ಇನ್ನೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿಲ್ಲ. ಇದಲ್ಲದೆ, ಜೆನಾರಾ ಫಾರ್ಮಾ, ಪಿಫೈಜರ್ ಸಂಸ್ಥೆಯೊಂದಿಗೆ ಯಾವುದೇ ಉಪ-ಪರವಾನಗಿ ಒಪ್ಪಂದವನ್ನು ಮಾಡಿಕೊಂಡಿಲ್ಲ. ಈ ಜೆನಾರಾ ಕಂಪನಿಯು ಕೇಂದ್ರೀಯ ಡ್ರಗ್ಸ್‌ ಪ್ರಮಾಣಿತ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ನೊಂದಿಗೆ ಸ್ವತಂತ್ರವಾಗಿ 48 ರೋಗಿಗಳ ಮೇಲೆ ಜೈವಿಕ ಅಧ್ಯಯನವನ್ನು ಕೈಗೊಂಡಿತು. ಇದರ ಆಧಾರದ ಮೇಲೆ ಕೇಂದ್ರೀಯ ಡ್ರಗ್ಸ್‌ ಪ್ರಮಾಣಿತ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಯು ಜೆನಾರಾ ಫಾರ್ಮಾಗೆ ಕೋವಿಡ್‌ -19 ಆಂಟಿ ವೈರಲ್‌ ಮಾತ್ರೆಗಳ ತಯಾರಿಕೆ ಮತ್ತು ಮಾರಾಟಕ್ಕೆ ಗ್ರೀನ್‌ ಸಿಗ್ನಲ್‌ ನೀಡಿ, ಹೊಸ ಅನ್ವೇಷಣೆಗಳಿಗೆ ಜೈ ಎಂದಿದೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು