ಸೀರೆಯುಟ್ಟು ವೇಯ್ಟ್​ ಲಿಫ್ಟಿಂಗ್​ ಮಾಡಿದ 82ರ ಅಜ್ಜಿ; ವಿಡಿಯೋ ವೈರಲ್

ಅಜ್ಜಿಗೆ ಭಯವಿಲ್ಲದೇ ತನ್ನ ದೈನಂದಿನ ಚಟುವಟಿಕೆಗಳನ್ನು ಮಾಡಿಕೊಳ್ಳಲು ಈ ಟ್ರೈನಿಂಗ್ ನೀಡುತ್ತಿದ್ದೇನೆ. ಜೊತೆಗೆ ಅವರಿಗೆ ನಾನು ತುಂಬಾ ಶಕ್ತಳಾಗಿದ್ದೇನೆ ಎನಿಸಬೇಕು. ಅವರ ಕೆಲಸಗಳನ್ನು ಭಯವಿಲ್ಲದೇ ಅವರೇ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಬರಲಿ ಎಂದು ವರ್ಕ್​ಔಟ್ ಮಾಡಿಸುತ್ತಿದ್ದೇನೆ ಎಂದು ಮೊಮ್ಮಗ ಚಿರಾಗ್ ಹೇಳುತ್ತಾರೆ.

ವೇಯ್ಟ್​ ಲಿಫ್ಟಿಂಗ್ ಮಾಡುತ್ತಿರುವ ಅಜ್ಜಿ

ವೇಯ್ಟ್​ ಲಿಫ್ಟಿಂಗ್ ಮಾಡುತ್ತಿರುವ ಅಜ್ಜಿ

  • Share this:
ಇತ್ತೀಚಿನ ದಿನಗಳಲ್ಲಿ ಬಹುತೇಕರು ತಮ್ಮ ದೇಹದ ಫಿಟ್​ನೆಸ್​ ಕಾಪಾಡಿಕೊಳ್ಳುವಲ್ಲಿ ಸೋಮಾರಿತನ ತೋರಿಸುವುದೇ ಹೆಚ್ಚು. ಕೆಲಸದ ಒತ್ತಡ, ಜಂಜಾಟಗಳ ನಡುವೆ ತಿಂದು ಮಲಗಿದರೆ ಸಾಕಪ್ಪಾ ಎನ್ನುವವರೂ ಇರುತ್ತಾರೆ. ಆದರೆ ಇವರೆಲ್ಲರ ನಡುವೆ ಇಲ್ಲೊಬ್ಬ ಉತ್ಸಾಹ ಚಿಲುಮೆಯ ಅಜ್ಜಿ ಇಂದಿನ ಯುವ ಜನತೆಗೆ ಮಾದರಿಯಾಗಿದ್ದಾರೆ. ಸುಮಾರು 82 ವರ್ಷದ ಈ ಅಜ್ಜಿ ​ ಇಂದಿಗೂ ತಮ್ಮ ದೇಹದ ಫಿಟ್​ನೆಸ್​ ಕಾಪಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಅದು ಕೂಡ ಸೀರೆ ಉಟ್ಟುಕೊಂಡೇ ವೈಯ್ಟ್​ ಲಿಫ್ಟಿಂಗ್​ ಮಾಡುವ ಮೂಲಕ ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ. ಜಿಮ್ ತರಬೇತುದಾರ ಚಿರಾಗ್ ಚೋರ್ಡಿಯಾ ಇತ್ತೀಚೆಗೆ ತನ್ನ ಅಜ್ಜಿ ವೇಯ್ಟ್​ ಲಿಫ್ಟಿಂಗ್ ಮಾಡುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಚಿರಾಗ್ ಅವರ ಅಜ್ಜಿ ಚಿಕ್ಕಮಕ್ಕಳಂತೆ ತುಂಬಾ ಕ್ರಿಯಾಶೀಲ ಹಾಗೂ ಬಲಶಾಲಿ ಕೂಡ. ಇವರು ಮದುವೆಯಾದ ಬಳಿಕವೂ ಸದಾ ದೈಹಿಕ ಚಟುವಟಿಕೆಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದರು. ಆದರೆ ಒಮ್ಮೆ ಅಜ್ಜಿಯ ಮೊಣಕಾಲು ತಿರುಚಿದ್ದರಿಂದ ಅವರಿಗೆ ವ್ಯಾಯಾಮ ಮಾಡಲು ಸಾಧ್ಯವಾಗಿರಲಿಲ್ಲ. ಸುಮಾರು 3 ತಿಂಗಳ ಕಾಲ ಅವರಿಗೆ ನಡೆಯಲು ಸಾಧ್ಯವಾಗಿರಲಿಲ್ಲ. ಕಳೆದ 7 ತಿಂಗಳ ಹಿಂದೆ ಹಾಸಿಗೆಯನ್ನೂ ಹಿಡಿದಿದ್ದರು. ಬಳಿಕ ಅವರು ಬಗ್ಗಿ ನೆಲದಲ್ಲಿರುವ ವಸ್ತುಗಳನ್ನು ಎತ್ತಿಕೊಳ್ಳುವ ಟಾಸ್ಕ್​ನ್ನು ಪ್ರಾರಂಭಿಸಿದರು.

ತಮ್ಮ ನೋವಿನ ದಿನಗಳನ್ನು ನೆನಸಿಕೊಂಡು ಮಾತನಾಡಿರುವ ಅಜ್ಜಿ, ನಾನು ತುಂಬಾ ನೋವಿನಲ್ಲಿದ್ದೆ. ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಯಿತು. ನನ್ನ ಅಂತ್ಯ ಇನ್ನೇನು ಸಮೀಪಿಸುತ್ತಿದೆ ಎನಿಸಲು ಶುರುವಾಯಿತು. ಆಗ ಜಿಮ್​ ಟ್ರೈನರ್​ ಆಗಿರುವ ಅಜ್ಜಿಯ ಮೊಮ್ಮಗ ಚಿರಾಗ್, ತಾವು ವರ್ಕ್​ಔಟ್​ ಮಾಡುವ ಮೂಲಕ ತನ್ನ ಅಜ್ಜಿಗೂ ಟ್ರೈನಿಂಗ್ ಕೊಡಲು ಶುರು ಮಾಡಿದನು. ಕಳೆದ ಮೂರು ತಿಂಗಳಿಂದ ಮನೆಯಲ್ಲೇ ತನ್ನ ಅಜ್ಜಿಗೆ ಫಿಟ್​ನೆಸ್ ಮಂತ್ರ ಹೇಳಿಕೊಡುತ್ತಿದ್ದಾನೆ.

ಅಂತರ್ಜಾತಿ ಮದುವೆಯಾದ ಪ್ರೇಮಿಗಳಿಗೆ ಪೋಷಕರಿಂದ ಬೆದರಿಕೆ; ಪ್ರಾಣರಕ್ಷಣೆ ಕೋರಿ ಎಸ್ಪಿ ಕಚೇರಿ ಮೆಟ್ಟಿಲೇರಿದ ನವದಂಪತಿ

ತನ್ನ ಇನ್​​ಸ್ಟಾಗ್ರಾಂ ಪೋಸ್ಟ್​​ನಲ್ಲಿ ಅಜ್ಜಿಯ ಜೊತೆ ವರ್ಕ್​ಔಟ್ ಮಡುತ್ತಿರುವ ವಿಡಿಯೋವೊಂದನ್ನು ಚಿರಾಗ್ ಶೇರ್​ ಮಾಡಿಕೊಂಡಿದ್ದಾನೆ. ಜೊತೆಗೆ ತನ್ನ ಅಜ್ಜಿ ದೈಹಿಕವಾಗಿ ಸದೃಢವಾಗಲು ಹಾಗೂ ಸಾಮರ್ಥ್ಯ ಹೊಂದಲು ಈ ತರಬೇತಿ ನೀಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾನೆ.


ಮೊದಲಿಗೆ ಅಜ್ಜಿ ವಾಟರ್​ ಬಾಟಲ್​ಗಳನ್ನು ಎತ್ತುವ ಮೂಲಕ ವರ್ಕ್​ಔಟ್ ಪ್ರಾರಂಭಿಸಿದರು. ಕ್ರಮೇಣ ಆಕೆಯ ಪಾದಗಳು ಊದಿಕೊಳ್ಳುವುದು ಕಡಿಮೆ ಆಯಿತು. ಜೊತೆಗೆ ಅಜ್ಜಿಯ ತೋಳುಗಳಿಗೆ ಶಕ್ತಿ ಮರಳಿ ಬಂದಿತು.

ಮೊದಮೊದಲು ಅಜ್ಜಿ ಬಗ್ಗಿ ನೆಲದಲ್ಲಿರುವ ವಸ್ತುಗಳನ್ನು ಎತ್ತಿಕೊಳ್ಳಲು ಹಾಗೂ ಕೆಳಗೆ ಕೂರಲು ತುಂಬಾ ಹೆದರುತ್ತಿದ್ದರು. ಜೊತೆಗೆ ಅವರಿಗೆ ಕಷ್ಟವಾಗುತ್ತಿತ್ತು.ಅಜ್ಜಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಸಿದಿದ್ದರು.

ಅಜ್ಜಿಗೆ ಭಯವಿಲ್ಲದೇ ತನ್ನ ದೈನಂದಿನ ಚಟುವಟಿಕೆಗಳನ್ನು ಮಾಡಿಕೊಳ್ಳಲು ಈ ಟ್ರೈನಿಂಗ್ ನೀಡುತ್ತಿದ್ದೇನೆ. ಜೊತೆಗೆ ಅವರಿಗೆ ನಾನು ತುಂಬಾ ಶಕ್ತಳಾಗಿದ್ದೇನೆ ಎನಿಸಬೇಕು. ಅವರ ಕೆಲಸಗಳನ್ನು ಭಯವಿಲ್ಲದೇ ಅವರೇ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಬರಲಿ ಎಂದು ವರ್ಕ್​ಔಟ್ ಮಾಡಿಸುತ್ತಿದ್ದೇನೆ ಎಂದು ಮೊಮ್ಮಗ ಚಿರಾಗ್ ಹೇಳುತ್ತಾರೆ.

ಸತತ ಮೂರು ತಿಂಗಳ ಟ್ರೈನಿಂಗ್ ಬಳಿಕ ಅಜ್ಜಿಗೆ ತುಂಬಾ ಸರಾಗ ಅಥವಾ ಆರಾಮ ಎನಿಸತೊಡಗಿತು. ಇದೆಲ್ಲವೂ ನನ್ನ ಮೊಮ್ಮಗನಿಂದ ಸಾಧ್ಯವಾಯಿತು. ನಾನು ಯುವತಿಯಾಗಿದ್ದೇನೆ ಎನಿಸುತ್ತಿದೆ. ಕೆಲವು ಜನ 82 ವರ್ಷ ವಯಸ್ಸಾಗಿರುವ ನಾನು ಲಿಫ್ಟ್​ ಎತ್ತಲೇಬಾರದು ಎಂದು ಹೇಳಿದ್ದರು. ಆದರೆ ನನ್ನ ಮನಸು ಕೂಡ ಉಲ್ಲಾಸದಿಂದ ಕೂಡಿದೆ. ನಾನು ಇನ್ನೂ ಚಿರ ಯುವತಿ ಎನಿಸುತ್ತಿದೆ. 82 ಕೇವಲ ನನ್ನ ವಯಸ್ಸು. ಈ ಅಜ್ಜಿ ಲಿಫ್ಟ್ ಎತ್ತುತ್ತಾಳೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Published by:Latha CG
First published: