ಇದುವೇ ದೇಶದ ಮೊದಲ ಗಾರ್ಬೇಜ್​ ಕೆಫೆ: ಪ್ಲಾಸ್ಟಿಕ್​ ತ್ಯಾಜ್ಯ ಕೊಟ್ಟರೆ ಊಟ ಉಚಿತ

ಸ್ವಚ್ಛತಾ ಅಭಿಯಾನದಲ್ಲಿ ಛತ್ತೀಸ್​ಗಢದ ಅಂಬಿಕಾನಗರ ಈಗ 2ನೇ ಸ್ಥಾನದಲ್ಲಿದೆ. ನಗರದಲ್ಲಿ ಪ್ಲಾಸ್ಟಿಕ್​ ಬಳಕೆಯನ್ನು ನಿಷೇಧ ಮಾಡಲಾಗಿದೆ. 

Latha CG | news18
Updated:July 24, 2019, 3:44 PM IST
ಇದುವೇ ದೇಶದ ಮೊದಲ ಗಾರ್ಬೇಜ್​ ಕೆಫೆ: ಪ್ಲಾಸ್ಟಿಕ್​ ತ್ಯಾಜ್ಯ ಕೊಟ್ಟರೆ ಊಟ ಉಚಿತ
ಸಾಂದರ್ಭಿಕ ಚಿತ್ರ
  • News18
  • Last Updated: July 24, 2019, 3:44 PM IST
  • Share this:
ಛತ್ತೀಸ್​ಗಢ,(ಜು.24): ಪ್ಲಾಸ್ಟಿಕ್​ ತ್ಯಾಜ್ಯ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿರುವ ದೊಡ್ಡ ವಿಷ.  ಪ್ಲಾಸ್ಟಿಕ್​ ಮುಕ್ತ ಪರಿಸರ ನಿರ್ಮಾಣ ಮಾಡಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ದಿನೇ ದಿನೇ ಪ್ಲಾಸ್ಟಿಕ್​ ಬಳಕೆ ಕಡಿಮೆಯಂತೂ ಆಗಿಲ್ಲ. ಇದರ ಮಧ್ಯೆ ಛತ್ತೀಸ್​ಗಢದ ಅಂಬಿಕಾಪುರ ಮಹಾನಗರ ಪಾಲಿಕೆ ಸ್ವಚ್ಛ ಭಾರತ ಅಭಿಯಾನದಡಿ ಹೊಸದೊಂದು ಪ್ರಯತ್ನ ಮಾಡಲು ಮುಂದಾಗಿದೆ.

ಪ್ಲಾಸ್ಟಿಕ್​ ಚಿಂದಿ ಆಯುವ ನಿರಾಶ್ರತರಿಗೆ 'ಗಾರ್ಬೇಜ್​ ಕೆಫೆ' ಎಂಬ ಹೋಟೆಲ್​ನ್ನು ತೆರೆಯಲು ನಿರ್ಧರಿಸಿದೆ. ಇದು ಬಡ ಜನರಿಗೂ ಅನುಕೂಲವಾಗಲಿದ್ದು, ಪ್ಲಾಸ್ಟಿಕ್​ ತ್ಯಾಜ್ಯ ಒಂದೆಡೆ ಸಂಗ್ರಹವಾಗಲಿದೆ. ಕಸ ಆಯುವವರು ಒಂದು ಕೆ.ಜಿ. ಪ್ಲಾಸ್ಟಿಕ್​ ತಂದುಕೊಟ್ಟರೆ ಊಟ, ಅರ್ಧ ಕೆ.ಜಿ. ಪ್ಲಾಸ್ಟಿಕ್​ ತಂದುಕೊಟ್ಟರೆ ಉಪಾಹಾರ ನೀಡಲಾಗುತ್ತದೆ. ಪ್ಲಾಸ್ಟಿಕ್​ ಮುಕ್ತ ಅಭಿಯಾನಕ್ಕೆ ಇದೊಂದು ವಿನೂತನ ಪ್ರಯತ್ನವಾಗಿದೆ. ದೇಶದಲ್ಲಿ ಗಾರ್ಬೆಜ್​​ ಕೆಫೆ ಓಪನ್​ ಆಗುತ್ತಿರುವುದು ಇದೇ ಮೊದಲ ಬಾರಿಗೆ.ಈ ಹೊಸ ಪ್ರಯತ್ನದ ಪ್ರಮುಖ ಉದ್ದೇಶ ಚಿಂದಿ ಆಯುವವರ ಹೊಟ್ಟೆ ತುಂಬಿಸುವುದು. ಪ್ಲಾಸ್ಟಿಕ್​ ತ್ಯಾಜ್ಯ ತಂದುಕೊಟ್ಟರೆ ಪಾಲಿಕೆ ವತಿಯಿಂದ ಉಚಿತ ಊಟ, ಉಪಾಹಾರ ನೀಡಲಾಗುತ್ತದೆ. ಕೆಫೆಯಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್​ ತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕೆ ಬಳಸಲು ಪಾಲಿಕೆ ಚಿಂತನೆ ನಡೆಸಿದೆ. ಈ 'ಗಾರ್ಬೇಜ್​ ಕೆಫೆ' ಯೋಜನೆಗಾಗಿ ವರ್ಷಕ್ಕೆ 5 ಲಕ್ಷ ರೂ.ಅನುದಾನ ಮೀಸಲಿಡಲಾಗಿದೆ. ಸ್ವಚ್ಛತಾ ಅಭಿಯಾನದಲ್ಲಿ ಛತ್ತೀಸ್​ಗಢದ ಅಂಬಿಕಾನಗರ ಈಗ 2ನೇ ಸ್ಥಾನದಲ್ಲಿದೆ. ನಗರದಲ್ಲಿ ಪ್ಲಾಸ್ಟಿಕ್​ ಬಳಕೆಯನ್ನು ನಿಷೇಧ ಮಾಡಲಾಗಿದೆ. 
Loading...

ಅಕ್ರಮ ಸಂಬಂಧ ಹೊಂದಿದ್ದ ನಾಯಿಯನ್ನು ಮನೆಯಿಂದ ಹೊರಗಟ್ಟಿದ ಮಾಲೀಕ!

First published:July 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...