• Home
  • »
  • News
  • »
  • national-international
  • »
  • Red Okra: ಈ ರೈತ ಬೆಳೆದ ಬೆಂಡೆಕಾಯಿಗೆ 800 ರೂ/ಕೆಜಿ, ಯಾವುದು ಈ ವಿಶಿಷ್ಟ ತಳಿ? ಎಲ್ಲಾ ಕಡೆ ಬೆಳೆಯಬಹುದಾ? ಫುಲ್ ಡೀಟೆಲ್ಸ್

Red Okra: ಈ ರೈತ ಬೆಳೆದ ಬೆಂಡೆಕಾಯಿಗೆ 800 ರೂ/ಕೆಜಿ, ಯಾವುದು ಈ ವಿಶಿಷ್ಟ ತಳಿ? ಎಲ್ಲಾ ಕಡೆ ಬೆಳೆಯಬಹುದಾ? ಫುಲ್ ಡೀಟೆಲ್ಸ್

ಕೆಂಪು ಬೆಂಡೆಕಾಯಿ

ಕೆಂಪು ಬೆಂಡೆಕಾಯಿ

Red Lady's Finger: ರೈತ ಮಿಸ್ರಿಲಾಲ್ 1 ಕೆಜಿ ಬೀಜಗಳನ್ನು ಕೊಂಡು ತಂದಿದ್ದನಂತೆ. ಅದನ್ನು ಜುಲೈ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಮಾಡಿದ್ದ, ನಿಧಾನಕ್ಕೆ ಅಂದ್ರೆ 40 ದಿನಗಳಲ್ಲಿ ಗಿಡ ದೊಡ್ಡದಾಗಿ ಹೂವು-ಕಾಯಿ ಬಿಡಲು ಶುರುವಾಯಿತು ಎಂದಿದ್ದಾನೆ ರೈತ. ಇದು ಉತ್ತಮ ತಳಿ, ಅಷ್ಟು ಸುಲಭದಲ್ಲಿ ರೋಗ ಹಿಡಿಯುವಂಥದ್ದಲ್ಲ. ಹಾಗಾಗಿ ನಾನು ಕೂಡಾ ಯಾವುದೇ ರಾಸಾಯನಿಕ ಅಥವಾ ಹಾನಿಕಾರಕ ಔಷಧಗಳನ್ನು ಸಿಂಪಡಿಸಿಲ್ಲ.

ಮುಂದೆ ಓದಿ ...
  • Share this:

New Crop: ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು (Farmers Problem) ಕಂಗಾಲಾಗುವುದು ಹೊಸತೇನಲ್ಲ. ಆದರೆ ಎಲ್ಲರೂ ಬೆಳೆಯುವ ಬೆಳೆಯನ್ನೇ ತಾವೂ ಬೆಳೆಯುವ ಬದಲು ಏನಾದರೂ ವಿಶೇಷವಾದ ಬೆಳೆಯ (Special Crop) ಪ್ರಯೋಗ ಮಾಡುವುದು ಅವರಿಗೂ ಅನುಕೂಲಕರ. ಕೃಷಿ ವಿಶ್ವವಿದ್ಯಾಲಯಗಳು ಮತ್ತು ರೈತ ಸಹಾಯ ಸಂಘಗಳು ರೈತರಿಗೆ ಈ ಬಗ್ಗೆ ಮಾಹಿತಿ ನೀಡಿ ಪ್ರೋತ್ಸಾಹಿಸುತ್ತಿರುತ್ತವೆ. ಮಧ್ಯ ಪ್ರದೇಶದ ರೈತನೊಬ್ಬ ತಾನು ಸದಾ ಬೆಳೆಯುತ್ತಿದ್ದ ತರಕಾರಿಗಳ ಬದಲಿಗೆ ವಿಶಿಷ್ಟ ತರಕಾರಿಯ ಗಿಡಗಳನ್ನು ಪ್ರಾಯೋಗಿಕವಾಗಿ ನೆಟ್ಟಿದ್ದಾನೆ. ಇಳುವರಿ ಅದ್ಭುತವಾಗಿ ಬಂದಿದ್ದು ಆತನಿಗೆ ಈಗ ಲಾಟರಿಯೇ ಹೊಡೆದಂತಾಗಿದೆ. ಅಂದ್ಹಾಗೆ ಆತ ಬೆಳೆದಿದ್ದು ಕೆಂಪು ಬಣ್ಣದ ಬೆಂಡೆಕಾಯಿಯನ್ನು (Red Lady's Finger) ಮತ್ತು ಅದರ ಬೆಲೆ ಒಂದು ಕೆಜಿಗೆ ಬರೋಬ್ಬರಿ 800 ರೂಪಾಯಿಗಳು. ಈ ತಳಿಯ ಬಗ್ಗೆ ಆತನಿಗೆ ಇರುವ ಮಾಹಿತಿ ಮತ್ತು ಅದಕ್ಕೆ ಸದ್ಯ ಇರುವ ಬೇಡಿಕೆ ಹಾಗೂ ಮಾರುಕಟ್ಟೆ ಬಗ್ಗೆ ಆತನೇ ವಿವರವಾಗಿ ತಿಳಿಸಿದ್ದಾನೆ.


ಮಿಸ್ರಿಲಾಲ್ ರಾಜ್​ಪುತ್ ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯ ಖಜೂರಿ ಕಾಲನ್ ಎನ್ನುವ ಊರಿನವನು. ತನ್ನ ಹೊಲದಲ್ಲಿ ಕೆಂಪು ಬಣ್ಣದ ಬೆಂಡೆಕಾಯಿ ಬೆಳೆಯುತ್ತಿರುವ ಈತ ಈಗ ಆ ಊರಿನ ಕೇಂದ್ರಬಿಂದು. ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುವ ಹಸಿರು ಬಣ್ಣದ ಬೆಂಡೆಕಾಯಿ ಬದಲಿಗೆ ತಾನು ಕೆಂಪು ಬಣ್ಣದ ಬೆಂಡೆಕಾಯಿ (Red Okra) ಬೆಳೆಯುತ್ತೇನೆ, ಇದು ಕೇವಲ ವಿಭಿನ್ನ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಅತ್ಯಂತ ಉಪಯುಕ್ತ ಎಂದು ವಿವರಿಸುತ್ತಾನೆ. ಅದರಲ್ಲೂ ಹೆಚ್ಚು ಕೊಲೆಸ್ಟ್ರಾಲ್(Cholesterol) , ಮಧುಮೇಹ (Diabetes) ಹಾಗೂ ಹೃದೋಗದ ಜೊತೆ ಅಧಿಕ ರಕ್ತದೊತ್ತಡದಿಂದ ಬಳಲುವ ಎಲ್ಲರಿಗೂ ಇದು ಅತ್ಯಂತ ಪ್ರಯೋಜನಕಾರಿಯಂತೆ.


ವಾರಣಾಸಿಯಿಂದ ಬಂದ ತಳಿ


ಈ ರೈತ ವಾರಣಾಸಿಯ ಕೃಷಿ ಸಂಶೋಧನಾ ಸಂಸ್ಥೆಯಿಂದ 1 ಕೆಜಿ ಬೀಜಗಳನ್ನು ಕೊಂಡು ತಂದಿದ್ದನಂತೆ. ಅದನ್ನು ಜುಲೈ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಮಾಡಿದ್ದ, ನಿಧಾನಕ್ಕೆ ಅಂದ್ರೆ 40 ದಿನಗಳಲ್ಲಿ ಗಿಡ ದೊಡ್ಡದಾಗಿ ಹೂವು-ಕಾಯಿ ಬಿಡಲು ಶುರುವಾಯಿತು ಎಂದಿದ್ದಾನೆ ರೈತ. ಇದು ಉತ್ತಮ ತಳಿ, ಅಷ್ಟು ಸುಲಭದಲ್ಲಿ ರೋಗ ಹಿಡಿಯುವಂಥದ್ದಲ್ಲ. ಹಾಗಾಗಿ ನಾನು ಕೂಡಾ ಯಾವುದೇ ರಾಸಾಯನಿಕ ಅಥವಾ ಹಾನಿಕಾರಕ ಔಷಧಗಳನ್ನು ಸಿಂಪಡಿಸಿಲ್ಲ. ಇದನ್ನು ಸಂಪೂರ್ಣವಾಗಿ ಸಾವಯವ ಪದ್ಧತಿಯಲ್ಲೇ ಸುಲಭವಾಗಿ ಬೆಳೆದೆ ಎಂದಿದ್ದಾನೆ ಮಿಸ್ರಿಲಾಲ್.


ಇದನ್ನೂ ಓದಿ: Saguna Rice Technique: ಬೇಸಾಯವನ್ನೇ ಮಾಡದೇ ಫಸಲು ನೀಡುತ್ತದೆ ಈ ಹೊಸ ತಂತ್ರ- ಮಹಾರಾಷ್ಟ್ರ ರೈತರ ಹೊಸ ವಿಧಾನ..


ಈತನ ಲೆಕ್ಕಾಚಾರದ ಪ್ರಕಾರ ಒಂದು ಎಕರೆ ಭೂಮಿಯಲ್ಲಿ ಕನಿಷ್ಟ 40ರಿಂದ 50 ಕ್ವಿಂಟಾಲ್ ಮತ್ತು ಗರಿಷ್ಠ 70 ರಿಂದ 80 ಕ್ವಿಂಟಾಲ್ ಗಳಷ್ಟು ಕೆಂಪು ಬೆಂಡೆಕಾಯಿಯನ್ನು ಬೆಳೆಯಬಹುದಂತೆ. ಸಾಧಾರಣ ಬೆಂಡೆಕಾಯಿಗಿಂತ ಇದರ ಬೆಲೆ ಆರೇಳು ಪಟ್ಟು ಹೆಚ್ಚಿದೆ. ಹೋಲ್​ ಸೇಲ್​ನಲ್ಲಿ ಕನಿಷ್ಠ 75ರಿಂದ 80 ರೂಪಾಯಿ ಪ್ರತಿ ಕೆಜಿಗೆ ಕೇಳುತ್ತಾರೆ. ಆದರೆ ಮಾಲ್​ಗಳಲ್ಲಿ ಕಾಲು ಕೆಜಿ ಅಂದರೆ 250 ಗ್ರಾಂಗಳಿಗೇ 500 ರೂಪಾಯಿಗೆ ಮಾರುವವರೂ ಇದ್ದಾರೆ.


ನೇರವಾಗಿ ಮಾರಿದ್ರೆ ಲಾಭ ಜಾಸ್ತಿ


ಹಾಗಾಗಿ ಇದನ್ನು ಬೆಳೆದ ರೈತರು ದಲ್ಲಾಳಿಗಳ ಕೈಗೆ ಸಿಗದೆ ತಾವೇ ವ್ಯಾಪಾರಿಗಳಿಗೆ ನೇರವಾಗಿ ಮಾರಬೇಕು. ಆಗ ಪ್ರತಿ ಕೆಜಿ ಕೆಂಪು ಬೆಂಡೆಕಾಯಿಗೆ ಕನಿಷ್ಟ 800 ರೂಪಾಯಿಗಳಾದರೂ ಸಿಕ್ಕೇ ಸಿಗುತ್ತವೆ, ನನಗೇ ಅಷ್ಟು ಬೆಲೆ ಸಿಕ್ಕಿದೆ ಎಂದಿದ್ದಾನೆ. ಇದು ನೋಡೋಕೆ ಕೂಡಾ ವಿಭಿನ್ನ ಜೊತೆಗೆ ಆರೋಗ್ಯ ಪ್ರಯೋಜನಗಳು ಕೂಡಾ ಇರೋದ್ರಿಂದ ಇದರ ಬಗ್ಗೆ ತಿಳಿದಿರುವ ಜನ ಕೊಳ್ಳುತ್ತಾರೆ. ಇನ್ನು ಎಕ್ಸಾಟಿಕ್ ವೆರೈಟಿಯಲ್ಲಿ ಈ ತರಕಾರಿ ಬರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚು ಕಷ್ಟಪಡಬೇಕಾಗಿಲ್ಲ. ನೇರವಾಗಿ ದೊಡ್ಡ ಮಾಲ್​ಗಳಿಗೇ ಇವನ್ನು ಮಾರಬಹುದು ಎನ್ನುತ್ತಾರೆ ಈ ರೈತ.

Published by:Soumya KN
First published: