ಪ್ರೀತಿ ಕುರುಡು, ಪ್ರೀತಿ ಜಾತಿಯನ್ನು ಮೀರಿದ ಪವಿತ್ರ ಅನುಬಂಧ. ಈ ಪ್ರೀತಿ ಅನುರಾಗ ನಮಗೆ ತಿಳಿಯದಂತೆ ನಮ್ಮೊಳಗೆ ಚಿಗುರೊಡೆಯುತ್ತದೆ. ಒಂದು ಹುಂಬ ಧೈರ್ಯವನ್ನು ಉಂಟುಮಾಡುತ್ತದೆ. ಮಾನಸಿಕವಾಗಿ ಹುಟ್ಟಿಕೊಳ್ಳುವ ಪ್ರೀತಿ ದೈಹಿಕ ಪ್ರೀತಿಗಿಂತ ಇನ್ನಷ್ಟು ಗಟ್ಟಿಯಾಗಿರುತ್ತದೆ. ಪ್ರೀತಿಸಿ ತಮ್ಮ ಸಮುದಾಯದಿಂದ ಬಹಿಷ್ಕರಿಸಲ್ಪಟ್ಟ ದಂಪತಿಗಳು ಅರಣ್ಯದಲ್ಲೇ ತಮ್ಮ ಬದುಕು ಕಟ್ಟಿಕೊಂಡಿರುವ ಕಥೆಯನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ಈ ಕಥೆ ಚೆಲ್ಲಪ್ಪ ಮತ್ತು ಯಶೋಧಾ ದಂಪತಿಗಳಾದ್ದಾಗಿದೆ. ತಮ್ಮ ಇಬ್ಬರು ಪುಟ್ಟ ಮಕ್ಕಳೊಂದಿಗೆ ದಟ್ಟ ಅರಣ್ಯದಲ್ಲಿ ಕಳೆದ 20 ವರ್ಷಗಳಿಂದ ಇವರುಗಳು ಶೆಡ್ನಲ್ಲಿ ವಾಸ ಮಾಡುತ್ತಿದ್ದಾರೆ. ಪರಸ್ಪರ ಇಷ್ಟಪಟ್ಟು ಪ್ರೀತಿಸಿ ವಿವಾಹವಾದ ಕಾರಣ ಮುತುವನ್ ಸಮುದಾಯದಿಂದ ಅವರನ್ನು ಬಹಿಷ್ಕರಿಸಲಾಗಿದೆ. ನಾಡಿಗೆ ಬರಲು ಇವರಿಗೆ ಅನುಮತಿ ಇಲ್ಲ. ಪ್ರೀತಿಸಿ ವಿವಾಹವಾದರು ಎಂಬ ಕಾರಣಕ್ಕೆ ಇವರಿಗೆ ಮೂಲ ಸೌಕರ್ಯಗಳನ್ನು ತಲುಪದಂತೆ ಮಾಡಲಾಗಿದೆ. ಈ ಸುದ್ದಿ ಜಗತ್ತಿಗೆ ಗೊತ್ತಾಗಿರುವುದು ಕೇರಳ ಆದಿವಾಸಿ ಐಕ್ಯವಾದಿ ತಂಡದ ಪ್ರತಿನಿಧಿಗಳಿಂದ. ಈ ಪ್ರತಿನಿಧಿಗಳು ಅರಣ್ಯಕ್ಕೆ ಈ ಕುಟುಂಬವನ್ನು ಭೇಟಿ ಮಾಡಲು ಹೋಗಿದ್ದರು. ಈ ಸಮುದಾಯದ ಅಭಿವೃದ್ಧಿಗೆ ಈ ತಂಡವು ಶ್ರಮಿಸುತ್ತದೆ.
ತ್ರಿಶೂರ್ ಜಿಲ್ಲೆಯ ಸರಹದ್ದಿಗೆ ಬರುವ ಇಡಮಲಯಾರ್ ಅರಣ್ಯ ಪ್ರದೇಶದಲ್ಲಿರುವ ಅಡಿಚಲ್ ತೋಟಿ ಸಮುದಾಯಕ್ಕೆ ಸೇರಿರುವ ಇವರು ಅರಣ್ಯದಲ್ಲೇ ವಾಸವಾಗಿದ್ದಾರೆ. ಇವರು ಸಹೋದರ ಸಂಬಂಧಿಗಳಾಗಿದ್ದು ಪರಸ್ಪರ ಇಷ್ಟಪಟ್ಟು ವಿವಾಹವಾಗಿದ್ದರು. ಸಮುದಾಯದ ಕಟ್ಟುಪಾಡುಗಳಿಗೆ ಅನುಗುಣವಾಗಿ ಸೋದರ ಸಂಬಂಧಿಗಳು ವಿವಾಹವಾಗುವಂತಿಲ್ಲ. ಹಾಗಾಗಿ ಇವರು ವಿವಾಹವನ್ನು ಕುಟುಂಬದವರು ಮಾನ್ಯಮಾಡಿಲ್ಲ ಮತ್ತು ಸಮುದಾಯದಲ್ಲಿ ಇರಲು ಬಹಿಷ್ಕರಿಸಿದರು ಹೀಗಾಗಿ ಹಲವಾರು ವರ್ಷಗಳಿಂದ ಇವರ ಬದುಕು ಅರಣ್ಯದಲ್ಲಿ ಕಳೆಯುವಂತಾಗಿದೆ. ಆದಿವಾಸಿ ಐಕ್ಯವಾದಿ ತಂಡದ ಪ್ರತಿನಿಧಿಗಳಿಂದ ಇವರ ಸುದ್ದಿ ಹೊರಜಗತ್ತಿಗೆ ತಿಳಿದಿದೆ.
ಅರಣ್ಯದಲ್ಲಿದ್ದರೂ ಇವರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪ್ರಾಣಿಗಳ ದಾಳಿ ಯಾವಾಗ ನಡೆಯುತ್ತದೆಯೋ ಎಂದು ಪ್ರಾಣ ಕೈಯಲ್ಲಿ ಹಿಡಿದು ಜೀವನ ನಡೆಸುತ್ತಿದ್ದಾರೆ. ಇನ್ನು ಈ ದಂಪತಿಗಳಿಗೆ ಹೊರ ಜಗತ್ತಿನೊಂದಿಗೆ ಯಾವುದೇ ಸಂಪರ್ಕವಿಲ್ಲ. ಇನ್ನು ದಿನಿತ್ಯದ ಆಹಾರ ಸಾಮಾಗ್ರಿಗಳ ಖರೀದಿಗೆ ಫೋನ್ ಸಂಪರ್ಕ ನಡೆಸಲು ಇವರುಗಳು ನಿತ್ಯವೂ 8 ಗಂಟೆಗಳ ಕಾಲ ಪ್ರಯಾಣ ಮಾಡುವ ಅಗತ್ಯವಿದೆ. ಕೇರಳ ಆದಿವಾಸಿ ಐಕ್ಯವಾದಿ ತಂಡದ ಕಾರ್ಯದರ್ಶಿಯಾಗಿರುವ ಪ್ರಕಾಶ್ ಪಿ.ಕೆ ಇವರ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರನ್ನು ತಲುಪಲಾಗಲಿಲ್ಲವಂತೆ.
ಇದನ್ನೂ ಓದಿ: ಮಡದಿ ರೇವತಿ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್ ಮಾಡಿದ ನಿಖಿಲ್ ಕುಮಾರಸ್ವಾಮಿ
ದಟ್ಟ ಅರಣ್ಯದಲ್ಲಿ ವಾಸಿಸುತ್ತಿರುವ ಈ ದಂಪತಿಗಳು ನಿತ್ಯವೂ ಆಳವಾದ ನದಿಯನ್ನು ದಾಟಿ ಎಂಟು ಗಂಟೆ ಪ್ರಯಾಣಿಸಿ ಅಗತ್ಯ ವಸ್ತುಗಳ ಖರೀದಿ, ಆಸ್ಪತ್ರೆಗೆ ಭೇಟಿಯನ್ನು ಕೊಡುತ್ತಾರೆ. ಈ ಅರಣ್ಯದಲ್ಲಿ ನಡೆದಾಡುವುದು, ಗಂಟೆಗಟ್ಟಲೆ ಪ್ರಯಾಣಿಸುವುದು ನಿಜಕ್ಕೂ ಇದು ಅಪಾಯಕಾರಿಯಾಗಿದೆ. ಇವರುಗಳು ನಿತ್ಯವೂ ಹೀಗೆಯೇ ಪ್ರಯಾಣಿಸಿಯೇ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ನೆನೆಸಿಕೊಂಡರೆ ಭಯವಾಗುತ್ತದೆ ಎಂದು ಪ್ರಕಾಶ್ ಹೇಳುತ್ತಾರೆ.
ಈ ಕುರಿತು ಆದಿವಾಸಿ ಐಕ್ಯ ತಂಡದವರು ವಿಡಿಯೋ ಕ್ಲಿಪ್ಗಳನ್ನು ಪ್ರಸಾರ ಮಾಡಿಸಿದ್ದು ದೃಶ್ಯಗಳು ಮೈ ಜುಮ್ ಎನ್ನುವಂತಿದೆ. ಇವರು ವಾಸಿಸುವ ಸ್ಥಳವನ್ನು ನೋಡಿಯೇ ಎದೆ ಝಲ್ ಎನ್ನುತ್ತದೆ. ತಾವು ವಾಸಿಸುವ ಮನೆಯನ್ನು ಇವರು ಬಿದಿರು ಮತ್ತು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಿ ನಿರ್ಮಿಸಿದ್ದಾರೆ ಮತ್ತು ಕಾಡು ಪ್ರಾಣಿಗಳ ದಾಳಿಯನ್ನು ತಡೆಗಟ್ಟಲು ಮನೆಯನ್ನು ಬೃಹತ್ ಬಂಡೆಯ ಮೇಲೆ ನಿರ್ಮಿಸಿದ್ದಾರೆ. ಈ ಬಂಡೆಯ ಮೇಲ್ಭಾಗ ಮತ್ತು ಅವರ ಮನೆಯ ತಲುಪಲು ಬಿದಿರಿನಿಂದ ಮಾಡಿದ ಏಣಿಯೊಂದನ್ನು ಹತ್ತಬೇಕು.
ಇದನ್ನೂ ಓದಿ: Kannada Bigg Boss 8: ಬುಧವಾರದಿಂದ ಬಿಗ್ ಬಾಸ್ 8ರ 2ನೇ ಇನ್ನಿಂಗ್ಸ್ ಆರಂಭ: ಕಾರ್ಯಕ್ರಮದಲ್ಲಿ ಹೊಸ ಟ್ವಿಸ್ಟ್..!
ಕೋವಿಡ್ ಪರಿಸ್ಥಿತಿಗಳು ನಿಯಂತ್ರಣಕ್ಕೆ ಬಂದ ನಂತರ ಇವರಿಗೆ ನಿವೇಶನ ವ್ಯವಸ್ಥೆಮಾಡಿಕೊಡಲು ಆದಿವಾಸಿ ಐಕ್ಯವೇದಿ ತಂಡದ ಅಧ್ಯಕ್ಷರಾದ ಚೈತ್ರ ನಂಬಿಯಾರ್ ತ್ರಿಶ್ಶೂರ್ ಜಿಲ್ಲಾ ಆಡಳಿತವನ್ನು ಸಂಪರ್ಕಿಸಿದ್ದಾರೆ. ಕಲೆಕ್ಟರ್ ಅನ್ನು ಭೇಟಿಯಾಗುವ ಇರಾದೆಯನ್ನು ವ್ಯಕ್ತಪಡಿಸಿದ್ದು, ಚೈತ್ರ ದಂಪತಿಗಳಿಗೆ ಭೂಮಿ ಮತ್ತು ನಿವೇಶನವನ್ನು ದೊರಕಿಸಿಕೊಡುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ