Money for Movie: ಈ ಸಿನಿಮಾಗಳನ್ನು ನೋಡಿದ್ರೆ 95,000 ರೂಪಾಯಿ ಹಣ ಕೊಡ್ತಾರೆ, ದುಡ್ಡು ಮಾಡೋಕೆ ಸಖತ್ ಅವಕಾಶ!

Watch Horror Movies and Make Money: ಅವರೇ ನಿಮಗೆ 13 ಹಾರರ್ ಸಿನಿಮಾ ಲಿಸ್ಟ್ ಕೊಡ್ತಾರೆ. ಅದನ್ನು ನೋಡುವಾಗ ಫಿಟ್ ಬಿಟ್ ವಾಚ್ ಕಟ್ಟಿಕೊಂಡಿರಬೇಕು. ಸಿನಿಮಾಗಳನ್ನು ನೋಡುವಾಗ ನಿಮ್ಮ ಹೃದಯದ ಬಡಿತ ಹೇಗಿದೆ ಎಂದು ಅವರು ಟ್ರಾಕ್ ಮಾಡ್ತಾರೆ. ಎಲ್ಲಾ ಸಿನಿಮಾ ನೋಡಿ ಆದ ಕೂಡಲೇ ಹಣ ಕೊಡ್ತಾರೆ, ಸಿನಿಮಾ ಕೊಳ್ಳುವುದಕ್ಕೆ ಮತ್ತಷ್ಟು ಹಣ ಮೊದಲೇ ಕೊಡ್ತಾರೆ...ರೆಡಿನಾ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Bumper Offer: ನೀವು ಕೇವಲ 10 ದಿನಗಳಲ್ಲಿ 13 ಹಾರರ್ ಸಿನಿಮಾಗಳನ್ನು ನೋಡುತ್ತೀರಾ..? ಹಾಗಾದರೆ ನಿಮಗಿದೆ ಬಂಪರ್ ಆಫರ್. ಅಂದರೆ ಹಾರರ್ ಸಿನಿಮಾ (Horror Movie) ಇಷ್ಟಪಡುವವರಿಗೆ ಮತ್ತೊಮ್ಮೆ ಹಾರರ್ ಸಿನಿಮಾ ನೋಡಬಹುದು ಜೊತೆಗೆ ಹಣವನ್ನು ಸಂಪಾದಿಸಬಹುದು. ಮನರಂಜನೆ ಮತ್ತು ಸಂಪಾದನೆ (Earn Money) ಎರಡೂ ಒಟ್ಟಿಗೆ ಸಿಗುತ್ತದೆ. ಹಾರರ್ ಸನಿಮಾಗಳ ವೀಕ್ಷಣೆಯ ಮೂಲಕ ಚಲನಚಿತ್ರದ ಬಜೆಟ್ ವೀಕ್ಷಕರ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಪತ್ತೆಹಚ್ಚುವುದು ಇದರ ಉದ್ದೇಶವಾಗಿದೆ ಎಂದು ಸಿಎನ್‍ಎನ್ ವರದಿ ಮಾಡಿದೆ. "ಹಾರರ್ ಮೂವಿ ಹಾರ್ಟ್ ರೇಟ್ ಅನಲಿಸ್ಟ್" ಫೈನಾನ್ಸ್ ಒದಗಿಸಿದ ಫಿಟ್ ಬಿಟ್ ಬಳಸಿಕೊಂಡು ಹೆಚ್ಚಿನ ಬಜೆಟ್ ಮತ್ತು ಕಡಿಮೆ ಬಜೆಟ್ ಭಯಾನಕ ಚಿತ್ರಗಳ ಸಂಯೋಜನೆ ನೋಡುವಾಗ ಅವರ ಹೃದಯ ಬಡಿತ, ನಾಡಿ ಬಡಿತ ಯಾವ ರೀತಿಯಲ್ಲಿ ಇರುತ್ತದೆ ಎಂದು ಕಂಡುಕೊಳ್ಳಲು ಈ ವಿಧಾನ ಅನುಸರಿಸಿದೆ.

"ಮುಂಬರುವ ಸ್ಫೂಕಿ ಸೀಸನ್ ಅನುಸಾರವಾಗಿ, ಫೈನಾನ್ಸ್ ಬಜ್‍ನಲ್ಲಿ ಹೆಚ್ಚಿನ-ಬಜೆಟ್ ಭಯಾನಕ ಚಲನಚಿತ್ರಗಳು, ಕಡಿಮೆ-ಬಜೆಟ್‍ಗಳಿಗಿಂತ ಹೆಚ್ಚು ಹೆದರಿಕೆಯನ್ನು ನೀಡುತ್ತವೆಯೋ ಇಲ್ಲವೋ ಎಂದು ತಿಳಿಯಲು ಕಾತುರರಾಗಿದ್ದೇವೆ. ಚಲನಚಿತ್ರದ ಬಜೆಟ್ ಎಷ್ಟು ಭೀಕರವಾಗಿದೆಯೋ ಇಲ್ಲವೋ ಎಂಬುದನ್ನು ಕಂಡುಹಿಡಿಯಲು ನೀವು ನಮಗೆ ಸಹಾಯ ಮಾಡುತ್ತೀರಿ- ನೀವು 13 ಚಲನಚಿತ್ರಗಳನ್ನು ವೀಕ್ಷಿಸುವಾಗ ನಿಮ್ಮ ಹೃದಯ ಬಡಿತ ಮೇಲ್ವಿಚಾರಣೆ ಮಾಡಲು ಫಿಟ್‍ಬಿಟ್ ಧರಿಸುವ ಮೂಲಕ ಇದನ್ನು ಪ್ರಚೋದಿಸಬಹುದು" ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಏನಿದು ಆಫರ್?

ಚಲನಚಿತ್ರದ ಬಜೆಟ್ ಸಿನಿಮಾದ ಭೀಕರತೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಂಡುಕೊಳ್ಳಲು ಪಟ್ಟಿಯಲ್ಲಿರುವ 13 ಚಲನಚಿತ್ರಗಳನ್ನು ವೀಕ್ಷಿಸುವ ಮೂಲಕ ಸಹಾಯ ಮಾಡಬೇಕು. ಜೊತೆಗೆ ಫಿಟ್‍ಬಿಟ್ ಧರಿಸಿ ಚಲನಚಿತ್ರ ವೀಕ್ಷಿಸುವುದರಿಂದ ನಿಮ್ಮ ಹೃದಯ ಬಡಿತ ಮೇಲ್ವಿಚಾರಣೆ ಮಾಡಲು ಸಹಾಯಕವಾಗುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಯಾವುವು ಆ ಹಾರರ್ ಚಿತ್ರಗಳು?

ಆಯ್ಕೆಯಾದವರು ಅಕ್ಟೋಬರ್ 9ರಿಂದ 18 ದಿನಗಳೊಳಗೆ ಈ ಕೆಳಗೆ ನೀಡಿರುವ 13 ಹಾರರ್ ಸಿನಿಮಾಗಳನ್ನು ವೀಕ್ಷಿಸಬೇಕಾಗುತ್ತದೆ. ಅವುಗಳೆಂದರೆ, Saw, The Amityville Horror, A Quiet Place, A Quiet Place Part II, Candyman, Insidious, The Blair Witch Project, Sinister, Get Out, The Purge, Halloween (2018), Paranormal Activity, Annabelle.

ಹಣಕಾಸು ಕಂಪನಿಯು ಅಕ್ಟೋಬರ್‌ನಲ್ಲಿ 13 ಭಯಾನಕ ಚಲನಚಿತ್ರಗಳನ್ನು ವೀಕ್ಷಿಸಲು 1,300 ಅಮೆರಿಕಾ ಡಾಲರ್ (95,679 ರೂ.) ಹಾಗೂ ಚಿತ್ರಗಳ ಬಾಡಿಗೆ ವೆಚ್ಚಕ್ಕೆ ಪ್ರತ್ಯೇಕವಾಗಿ 50 ಅಮೆರಿಕ ಡಾಲರ್ (3,681) ಕೊಡುಗೆ ನೀಡುವುದಾಗಿ ಘೋಷಿಸಿದೆ.

ಅರ್ಜಿ ಸಲ್ಲಿಸೋಕೆ ಈ ನಿಯಮ ಪಾಲಿಸಿ

ಸೆಪ್ಟೆಂಬರ್ 26ರ ಭಾನುವಾರ ಮಧ್ಯರಾತ್ರಿವರೆಗೆ ಅರ್ಜಿ ಸಲ್ಲಿಸಬಹುದು. ಬಂದ ಅರ್ಜಿಗಳನ್ನು ಪರಿಶೀಲಿಸಿದ ನಂತರ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಅಕ್ಟೋಬರ್ 1 ಶುಕ್ರವಾರದೊಳಗೆ ಇಮೇಲ್ ಮೂಲಕ ಆಯ್ಕೆಯಾದವರನ್ನು ಸೂಚಿಸಲಾಗುತ್ತದೆ. ಮುಖ್ಯವಾಗಿ ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುವುದು ಕಡ್ಡಾಯವಾಗಿರುತ್ತದೆ.
Published by:Soumya KN
First published: