Marriage: ಮದುವೆಗೂ ಮುನ್ನವೇ ಮೈಥುನಕ್ಕೆ ಅವಕಾಶ! ಭಾರತದಲ್ಲೂ ಇದೆ ಈ ವಿಚಿತ್ರ ಸಂಪ್ರದಾಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಾಶ್ಚಿಮಾತ್ಯ ದೇಶಗಳಲ್ಲಿ ಮದುವೆಗೆ ಮೊದಲು ದೈಹಿಕ ಸಂಬಂಧಗಳನ್ನು ಹೊಂದುವುದು ಸಾಮಾನ್ಯ ವಿಚಾರ. ಆದರೆ ಸಂಪ್ರದಾಯಗಳಿಗೆ (Tradition) ಬೆಲೆ ಕೊಡುವ ನಮ್ಮ ದೇಶದಲ್ಲಿ ಅನೇಕರು ಇಂತಹ ವಿಷಯಗಳನ್ನು ಒಪ್ಪಿಕೊಳ್ಳುವುದಿಲ್ಲ. ಕಾಸ್ಮೋಪಾಲಿಟನ್ ಸಂಸ್ಕೃತಿಗೆ (Cosmopolitan Culture) ಒಗ್ಗಿಕೊಂಡಿರುವ ಯುವಕರು ಮದುವೆಗೂ ಮುನ್ನ ಮಿಲನದಲ್ಲಿ ತೊಡುಗುವುದು ತಪ್ಪಲ್ಲ ಎನ್ನುತ್ತಾರೆ.

ಮುಂದೆ ಓದಿ ...
  • Share this:

ಛತ್ತಿಸ್​ಗಢ: ಮದುವೆಗೆ (Marriage)ಮುನ್ನ ದೈಹಿಕವಾಗಿ ಸಂಬಂಧವನ್ನು ಬೆಳಸುವುದನ್ನು (Physical Relationship)ಕೆಲವರು ಬೆಂಬಲಿಸುತ್ತಾರೆ. ಕೆಲವರು ಅದನ್ನು ವಿರೋಧಿಸುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮದುವೆಗೆ ಮೊದಲು ದೈಹಿಕ ಸಂಬಂಧಗಳನ್ನು ಹೊಂದುವುದು ಸಾಮಾನ್ಯ ವಿಚಾರ. ಆದರೆ ಸಂಪ್ರದಾಯಗಳಿಗೆ (Tradition) ಬೆಲೆ ಕೊಡುವ ನಮ್ಮ ದೇಶದಲ್ಲಿ ಅನೇಕರು ಇಂತಹ ವಿಷಯಗಳನ್ನು ಒಪ್ಪಿಕೊಳ್ಳುವುದಿಲ್ಲ. ಕಾಸ್ಮೋಪಾಲಿಟನ್ ಸಂಸ್ಕೃತಿಗೆ (Cosmopolitan Culture) ಒಗ್ಗಿಕೊಂಡಿರುವ ಯುವಕರು ಮದುವೆಗೂ ಮುನ್ನ ಮಿಲನದಲ್ಲಿ ತೊಡುಗುವುದು ತಪ್ಪಲ್ಲ ಎನ್ನುತ್ತಾರೆ. ಹಿಂದಿನ ಕಾಲಕ್ಕೆ ಹೋಗುವ ಅಗತ್ಯವಿಲ್ಲ ಎಂಬುದು ಅವರ ಅಭಿಪ್ರಾಯ. ಹಲವಾರು ಸಮೀಕ್ಷೆಗಳು ಮದುವೆಗೆ ಮುಂಚೆಯೇ ಅನೇಕ ಜನರು ಲೈಂಗಿಕತೆ ಸಂಪರ್ಕವನ್ನು ಹೊಂದಿದ್ದಾರೆ ಎಂದು ತೋರಿಸಿವೆ.


ಆದರೆ ನಗರಗಳಲ್ಲಿ ವಾಸಿಸುವ ಯುವ ಪೀಳಿಗೆ ಮಾತ್ರ ಈ ರೀತಿಯ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದ್ದಾರೆ ಎಂಬ ವಾದಗಳಿವೆ. ಆದರೆ ನಮ್ಮ ದೇಶದಲ್ಲೂ ಒಂದು ಪ್ರದೇಶಗಳಲ್ಲಿ ಇದೇ ರೀತಿಯ ಸಂಪ್ರದಾಯವಿದೆ ಎಂಬುದು ನಿಮಗೆ ತಿಳಿದಿದೆಯೇ? ಅಲ್ಲಿ ಯುವಕರು ಮದುವೆಗೂ ಮುನ್ನ ಲೈಂಗಿಕತೆಯನ್ನು ಹೊಂದಲು ಅವಕಾಶವಿದೆ.


ಬುಡಕಟ್ಟು ಸಂಪ್ರದಾಯದಲ್ಲಿ ವಿಚಿತ್ರ ಸಂಪ್ರದಾಯ


ನಕ್ಸಲ್ ಪೀಡಿತ ಪ್ರದೇಶವಾದ ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ವಾಸಿಸುವ ಗೊಂಡ್ (Gond) ಮತ್ತು ಮುರಿಯಾ (Muria) ಆದಿವಾಸಿಗಳ  ಸಂಸ್ಕೃತಿ ಮತ್ತು ಸಂಪ್ರದಾಯಗಳು ಸ್ವಲ್ಪ ವಿಭಿನ್ನವಾಗಿವೆ. ಭಾರತದ ಇತರ ಭಾಗಗಳ ಜನರಿಗೆ ಇವು ಬಹಳ ಆಶ್ಚರ್ಯವನ್ನುಂಟು ಮಾಡುತ್ತವೆ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ದೊಡ್ಡ ತಪ್ಪು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಬುಡಕಟ್ಟು ಸಮೂದಾಯದಲ್ಲಿ ಇದು ಸಾಮಾನ್ಯವಾಗಿದೆ. ಪ್ರೇಮಿಗಳು ಒಟ್ಟಿಗೆ ಸುತ್ತಾಡುವುದು, ವಿವಾಹಕ್ಕೂ ಮೊದಲೇ ದೈಹಿಕವಾಗಿ ಒಂದಾಗುವು ಇಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರ.


ಇದನ್ನೂ ಓದಿ:Heart Attack: ತಾಳಿ ಕಟ್ಟುವ ಮುನ್ನವೇ ವಧು ಸಾವು, ಅಂತ್ಯಸಂಸ್ಕಾರಕ್ಕೂ ಮುನ್ನ ಮೃತಳ ತಂಗಿ ಜೊತೆ ವರನ ಮದುವೆ!


ಘೋಟುಲ್ ಸಂಪ್ರದಾಯ


ಛತ್ತೀಸ್‌ಗಢದ ಈ ಬುಡಕಟ್ಟು ಜನಾಂಗದವರು ಘೋಟುಲ್ ಎಂಬ ಸಂಪ್ರದಾಯವನ್ನು ಅನುಸರಿಸುತ್ತಾರೆ. ಘೋಟುಲ್ ಎಂದರೆ ದೊಡ್ಡ ಬಿದಿರಿನ ಕಂಬಗಳಿಂದ ಮಾಡಿದ ಕಟ್ಟಡ. ಇವು ನಗರ ಪ್ರದೇಶಗಳಲ್ಲಿ ನೈಟ್ ಕ್ಲಬ್ ಗಳಿದ್ದಂತೆ ಇರುತ್ತವೆ. ಯುವಕ-ಯುವತಿಯರು ಪರಸ್ಪರ ತಿಳಿದುಕೊಳ್ಳಲು ಮತ್ತು ಮೋಜು ಮಾಡಲು ಇಲ್ಲಿಗೆ ಬರುತ್ತಾರೆ. 10 ವರ್ಷ ಮೇಲ್ಪಟ್ಟ ಯಾವುದೇ ಮಗು ಘೋಟುಲ್‌ಗೆ ಹೋಗಬಹುದು. ಅಂದಿನಿಂದಲೇ ಪೋಷಕರು ಅವರನ್ನು ಘೋಟುಲ್‌ಗೆ ಕಳುಹಿಸಲು ಪ್ರಾರಂಭಿಸುತ್ತಾರೆ. ಅವರು ಘೋಟುಲ್‌ಗೆ ಹೋಗಿ ಏನು ಬೇಕಾದರೂ ಮಾಡಲು ಸ್ವತಂತ್ರರು. ಘೋಟೂಲ್ ನಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ನಂತರ,ಯುವಕ ಯುವತಿಯರು ಮದುವೆಗೂ ಮುನ್ನವೇ ದೈಹಿಕ ಸಂಬಂಧ ಹೊಂದಬಹುದು. ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು. ಇಲ್ಲಿ ಅವರು ಯಾವುದೇ ಸಾಮಾಜಿಕ ಒತ್ತಡವಿಲ್ಲದೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.




ಸಂಗಾತಿ ಆಯ್ಕೆಗೆ ಸ್ವತಂತ್ರ


ಘೋಟುಲ್‌ನಲ್ಲಿ ಯುವಕರು ಮತ್ತು ಯುವತಿಯರು ಪರಸ್ಪರ ಹಾಡುಗಳನ್ನು ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಯುವಕರು ತಮ್ಮ ಆಯ್ಕೆಯ ಯುವತಿಯರಿಗೆ ವಿಶೇಷವಾಗಿ ಬಿದಿರಿನಿಂದ ಮಾಡಿದ ಬಾಚಣಿಗೆಗಳನ್ನು ನೀಡುತ್ತಾರೆ. ಆ ಬಾಚಣಿಗೆಗಳನ್ನು ಅವಳ ತಲೆಯಲ್ಲಿ ಇರಿಸಲಾಗುತ್ತದೆ. ಯುವತಿ ಇಷ್ಟಪಟ್ಟರೆ ಕೂದಲಲ್ಲಿ ಇಟ್ಟುಕೊಳ್ಳುತ್ತಾರೆ. ಇಲ್ಲದಿದ್ದರೆ ಅದನ್ನು ತೆಗೆದುಹಾಕಲಾಗುತ್ತದೆ. ಬಾಚಣಿಗೆಯನ್ನು ಕೂದಲಿಗೆ ಇಟ್ಟುಕೊಂಡರೆ ಯುವತಿಗೆ ಯುವಕನಿಗೆ ಇಷ್ಟವಾಗಿದೆ ಎಂದರ್ಥ.




ಒಟ್ಟಿಗೆ ವಾಸಿಸಸಲು ಅವಕಾಶ


ಯುವಕನನ್ನು ಒಪ್ಪಿಕೊಂಡರೆ ಅವರಿಬ್ಬರು ಅವರು ಒಟ್ಟಿಗೆ ವಾಸಿಸಬಹುದು. ಪರಸ್ಪರ ದೈಹಿಕ ಸಂಪರ್ಕ ಹೊಂದಬಹುದು. ಕೆಲವು ತಿಂಗಳುಗಳ ನಂತರವೂ ಇವರಿಬ್ಬರು ಒಬ್ಬರನ್ನೊಬ್ಬರು ಇಷ್ಟಪಟ್ಟರೆ ಎರಡೂ ಕುಟುಂಬದ ಹಿರಿಯರು ಮದುವೆ ಮಾಡುತ್ತಾರೆ. ಕೆಲವರಿಗೆ ಸಹಬಾಳ್ವೆಯ ನಂತರ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಗರ್ಭಾವಸ್ಥೆಯಲ್ಲಿ ಮದುವೆಯಾದ ಅನೇಕ ಜನರಿದ್ದಾರೆ. ಘೋಟುಲ್‌ನಲ್ಲಿ ವಯಸ್ಕರ ಶಿಕ್ಷಣದ ಮಾಹಿತಿಯನ್ನು ಒದಗಿಸುತ್ತದೆ. ಪ್ರಣಯದ ಕುರಿತ ಮಿಥ್ಯಗಳನ್ನು ಸಹ ತೆಗೆದುಹಾಕಲಾಗುತ್ತದೆ.


ಒಂದೇ ಒಂದು ಲೈಂಗಿಕ ದೌರ್ಜನ್ಯ ಪ್ರಕರಣವಿಲ್ಲ


ಬುಡಕಟ್ಟು ಸಂಪ್ರದಾಯದಿಂದಾಗಿ ಈ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಇದುವರೆಗೆ ಅಂತಹ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

Published by:Rajesha M B
First published: